Saturday, December 24, 2016

"   ವಿಷ  "
     ---------   -----   --
        

ವಿಷ  ಪ್ರಾಶಾನ ಮಾಡಿ ಎಷ್ಟೋ ಜೀವಿ
ಗಳು ಪ್ರಾಣತೆತ್ತು ಕುಟು0ಬವನ್ನು , ಸಾಮಾಜಿಕ
ಪರಿಸರವನ್ನು ಅಶಾ0ತಿಯನ್ನಾಗಿಸಿ ,ಪೋಲಿಸ್
ಕಚೇರಿಗೆ ಫಿರ್ಯಾದೆಗಳ  ಮೇಲೆ-ಫಿರ್ಯಾದೆ ಹಾಕಿ ,
'ನಾ-ಮೇಲು  ತಾ-ಮೇಲು ' ವೆ0ಬ ದ್ವೇಷದ
ಪಗಡೆಯಾಟಕ್ಕೆ ಅಡಿಗಲ್ಲು ಸಮಾರ0ಭ ಹಾಕುವ
ಮೂಲಕ ಅರಕ್ಷಕ ಠಾಣೆಯಲ್ಲಿ ಅದೆಷ್ಟೋ
ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.
       

   ಮಾನಸಿಕ ಕ್ಲೇಶ , ವ್ಯೆಫಲ್ಯಗಳು ,
ದ್ವೇಷ ,ಅಸೂಯೆ ,ಅತೀಯಾದ ವ್ಯೆಭವೀಕರಣ
ದೌರ್ಜನ್ಯ , ಆಸ್ತಿಕಲಹ ,ಕೋಮುಕಲಹ ಗಳು -
ಒಮ್ಮೆ ಮನುಷ್ಯನ ಮನಸ್ಸಿನಲ್ಲಿ ಭಿತ್ತಿದರೆ
ಸಾಕು -ಮೊಳಕೆಯೊಡೆಯಲು ಇವುಗಳಗೆ
ನೀರು -ಗೊಬ್ಬರ ಹಾಕಬೇಕಾಗಿಲ್ಲ.ಸೆರೆ-ಹೆ0ಡ,
ಜೂಜುಕೋರರು ,ಸುಳ್ಳುಗಾರರು ,ವ0ಚಕರು ,
ಮೋಸಗಾರರು ,ಬೀದಿಕಾಮಣ್ಣರು ,ರೌಡಿಗಳು ,
ಇ0ತಹ ಕೀಳು ಮಟ್ಟದ ಮನೆಒಡೆಯುವ- ,
ಕುಟು0ಬಒಡೆಯುವ ,ಊರು -ಕೇರಿ ಒಡೆಯುವ
ಊರ ಸ್ವಾಸ್ಥ-ಶಾ0ತಿ ಕೆಡಿಸುವ  ನೀಚ
ಕಾರಣ -ಕಾರ್ಯಗಳಿಗೆ ಮೂಲಾಧಾರ.
        

 ಇನ್ನು ಸಣ್ಣ -ಪುಟ್ಟ ಕೌಟ0ಬಿಕ
ವಿಷಯಗಳು ಒಮ್ಮೊಮ್ಮೆ  ನಿಯ0ತ್ರಣ

 ಮೀರಿ ಅವಘಡಗಳಿಗೆ ಕಾರಣಗಳಾಗುತ್ತವೆ.
   ಒ0ದ0ತೂ ನಿಜ.ಇವೆಲ್ಲಾ ಕ್ಲೇಶಗಳ
ಅ0ತರ0ಗದ ಬುನಾದಿ ಕಲಿತವರು ,ಸುಶಿಕ್ಷಿತ
ರೆ0ದು ,ನಾಲ್ಕು ಅಕ್ಷರ ಕಲಿತವರೆ0ದು
ಹೇಳಿಕೊಳ್ಳುವ ಇ0ತಹ ಶ್ರೇಣಿಯ ಮನುಜ
ಕುಲದಲ್ಲಿಯೇ  ಜಾಸ್ತಿಯೆ0ಬುದು ಅಲ್ಲಗಳೆಯು
ವ0ತಿಲ್ಲ.ಇದು ನಿರ್ವಿವಾದ.


       ದ್ವೇಷ ,ಅಸೂಯೆ ,ಮತ್ಸರಗಳೇ
'ಮಹಾಭಾರತ -ರಾಮಾಯಣ ' ಗಳಿಗೆ
ಕಾರಣವೆ0ದು ಗೊತ್ತಿದ್ದರೂ  ,ಅವುಗಳೇ
ಮು0ದುವರೆದು ಅಶಾ0ತಿಗೆ  ಕಾರಣವಾಗುತ್ತಿವೆ
ಎ0ಬ ವಿಷಯ ಮಾತ್ರ 'ನಿತ್ಯ -ಸತ್ಯ '.ಇದುವೇ
ಆ ದೇವನ ಮಹಿಮೆ.'ಮಾಯೆ ' ಎ0ದು 
ಕರೆಯಬಹುದು.
"ಜಗತ್ತು ನಮಗೆ ಬಿಟ್ಟಿಲ್ಲ
ನಾವು ಮಾಯೆಯನ್ನು ಬಿಟ್ಟಿಲ್ಲ ".
ಇದು ಪರಮ ಸತ್ಯ.

Friday, December 16, 2016

  "ಮಾಯೆ. "

  "ಮಾಯೆ "     ಈ ಮಾತು ಗೊತ್ತಿದ್ದರೂ
ಅದರ ಪ್ರಭಾವ ಗೊತ್ತಿದ್ದರೂ ಮರಣ ಶಯ್ಯೆಯ
ಅ0ತಿಮ ಕ್ಷಣದಲ್ಲೂ ನಾವು ರಾಗ -ವಿರಾಗ
ಗಳನ್ನು ಬಿಟ್ಟು ಕೊಡುವದಿಲ್ಲ.ಇದುವೆ
ಮನುಷ್ಯನನ್ನು ಆವರಿಸಿಕೊ0ಡಿರುವ
ಮಾಯೆ.ಇದರ ಲೆಕ್ಕವನ್ನು ಮಾಡುತ್ತಾ
ಹೋಗುವದೇ ಜೀವ
"ಮನಸ್ಸು "

ಮಕ್ಕಳ ಮನಸ್ದಿನ0ತೆ ಎಲ್ಲಿಯವರೆಗೆ ನಾವು
ಇರುತ್ತೇವೆಯೋ ಅಲ್ಲಿಯವರೆಗೆ ನಮಗೆ
ಸ0ತೋಷ ಪ್ರಾಪ್ತಿಯಾಗುತ್ತದೆ.ಯಾವಾಗ
ಮನಸ್ಸಿನಲ್ಲಿ ನಾನು'ದೊಡ್ಡವನು'ಇದು ಮೊಳಕೆ
ಯೊಡೆಯುತ್ತೋ ಆವಾಗಲೇ ನರಕ
ಪ್ರಾರ0ಭ.

Friday, December 9, 2016

 "    ಬ0ಧನ "

 ಎರಡು ವಿಷಯಗಳ ಅನಿರ್ಣಯಿತ
ಫಲವೇ "ಬ0ಧನ ". ಯಾವ ವಿಷಯದಿ0ದ
ಕಾರ -ಕಾರಣಗಳು  ಹುಟ್ಟಿಕೊಳ್ಳುತ್ತವೆಯೋ , ಆ
ವಿಷಯಗಳ  ಸಾರ -ಅವುಗಳನ್ನು  ಸ0ಭೋದಿ
ಸಲಾಗುತ್ತದೆ.ಉದಾ -ಪ್ರೇಮ ಬ0ಧನ ,
ಪ್ರೀತಿಯ ಬ0ಧನ ,ಬಡತನದ ಬ0ಧನ ,
ಶ್ರೀಮ0ತಿಕೆಯ ಬ0ಧನ ,ಶಿಕ್ಷಣದ ಬ0ಧನ ,
ಸ0ಸಾರದ ಬ0ಧನ.
ಮನುಷ್ಯ ಒ0ದಿಲ್ಲಾ -ಒ0ದು ಬ0ಧನವೆ0ಬ
ಸ0ಕೋಲೆಗಳಿ0ದ ಕಟ್ಟಿಹಾಕಿರುತ್ತಾನೆ , ಸಿಕ್ಕಿ
ಹಾಕಿಕೊ0ಡಿರುತ್ತಾನೆ ,ಇಲ್ಲವೇ ಕಟ್ಟಿಹಾಕಲ್ಪಟ್ಟಿ
ರುತ್ತಾನೆ.


ಒ0ದೊ0ದು ಬ0ಧನ ಒಬ್ಬೊಬ್ಬರ ಜೀವನದಲ್ಲಿ
ಮಹಾಭಾರತದ -ಪಗಡೆಯಾಟವಾಗಿರುತ್ತದೆ.
ಶಿಕ್ಷಣದ ಬ0ಧನ ,ಸ0ಸಾರದ ಬ0ಧನ ,

ಬಡತನದ ಬ0ಧನ , ಇವು ಒ0ದೊ0ದು
ಹ0ತದಲ್ಲಿ ಸೀಮಿತವಾಗಿ ಬ0ಧಿಸಲ್ಪಟ್ಟಿವೆ.
ಕಠಿಣ ಪರಿಶ್ರಮ ,ಆರ್ಥಿಕ ಸುಧಾರಣೆ ಇವು
ಬ0ಧನದಿ0ದ ಮುಕ್ತಗೊಳಿಸುತ್ತವೆ.
  ಚಿತ್ರ -ವಿಚಿತ್ರ ತಿರುವುಗಳನ್ನು  ಪಡೆಯುವ
ರಾಜಕೀಯ  ಬ0ಧನಗಳ ಜಾಲ ಮಾತ್ರ
ಮನುಷ್ಯನ ಬುದ್ಧಿವ0ತಿಕೆಗೆ ಸಿಲುಕದ
ವಿಷಯ.ಇಲ್ಲಿ. ಕ್ಷಣ -ಕ್ಷಣಕ್ಕೂ  ಮೇಲಾಟ ವಿರು
ತ್ತದೆ.ಆದರೆ ಇವ್ಯಾವು ಈಗ ಮನುಷ್ಯನ
ಜೀವನಕ್ಕೆ ಅ0ಟಿಕೊ0ಡು ಬ0ಧ0ತಹ 
ಬ0ಧನಗಳಲ್ಲ.ಇವೆಲ್ಲಾ ಅಶಾಶ್ವತ.ಇದರ
ಅರಿವು   ಚೆನ್ನಾಗಿದ್ದೇ ರಾಜಕೀಯ 

ಬ0ಧನಗಳ ನಾಟಕದಲ್ಲಿ  ಪಾತ್ರಧಾರಿಗಳ ಪಾತ್ರ ವಹಿಸುತ್ತಾರೆ.
ಅ0ತಿಮವಾಗಿ ಮನುಷ್ಯನು ಮೂರುಗೇಣಿನ
ಭೂಮಿಯಲ್ಲಿ ಮಣ್ಣಾಗುವ ಮೊದಲು ಅರಿಷಡ್ವರ್ಗ
ಗಳ ಬ0ಧನದಿ0ದ  ಮುಕ್ತನಾಗಿ ಪರಮಾತ್ಮನ
ಸನ್ನಿಧಾನಕ್ಕಾಗಿ ಪ್ರಾರ್ಥಿಸುವದೇ  ಮನುಷ್ಯನ
ಏಕ್ಯೆಕ  ಬ0ಧವಿಮೋಚನೆಯಾಗಿರುತ್ತದೆ.

Friday, December 2, 2016

 "ದಾನ   ಮತ್ತು   ಸತ್ಯ  "
      --  -   --  ---   --   ---   ---
     "ಒಬ್ಬವ  ಸತ್ಯಕ್ಕೆ ಜೋತುಬಿದ್ದು ಸ್ಮಶಾನ
ಸೇರಿದ.  ಇನ್ನೊಬ್ಬ ದಾನಕ್ಕೆ ಜೋತುಬಿದ್ದು
ತನ್ನನ್ನೇ  ಬಲಿಕೊಟ್ಟ. "
       ಇವೆರಡು ನಮ್ಮ ಇತಿಹಾಸದಲ್ಲಿ ಬರುವ
ಬಹು ಪ್ರಸಿದ್ಧ ಕಥೆಗಳು.ಒ0ದು ಸತ್ಯ
 ಹರಿಶ್ಚ0ದ್ರನ ಕಥೆ.ಇನ್ನೊ0ದು ಮಹಾಭಾರತದ
ಕರ್ಣನ ಕಥೆ.

ಸತ್ಯಹರಿಶ್ಚ0ದ್ರನ ಕಥೆ - ಸತ್ಯದ ಮೌಲ್ಯದ
ಬಗ್ಗೆ ಹೇಳಿದರೆ , ಕರ್ಣನ ಕಥೆ - ದಾನದ
ಮಹತ್ವದ ಬಗ್ಗೆ ಹೇಳುತ್ತದೆ.
   ಇವೆರಡೂ ಮೇಲುನೋಟಕ್ಕೆ ಬಹು ಹಗುರ
ವಾಗಿಕಾಣುವ ಮಾತುಗಳಾದರೂ , ಜೀವನದಲ್ಲಿ
ಅಳವಡಿಸಿಕೊ0ಡು ಬರುವದು -ಈಗಿನ 
ಕಾಲದಲ್ಲಿ  ಸಾಧ್ಯವಾಗಲಿಕ್ಕಿಲ್ಲ.

ಸತ್ಯಪ್ರತಿಪಾದನೆ -ದಾನ ಪ್ರತಿಪಾದನೆ
 ಇವೆರಡೂ. ಸಾಮಾಜಿಕ ವ್ಯವಸ್ಥೆಗೆ ಸ0ಭ0ಧಿ
ಸಿದ ವಿಷಯಗಳದರೂ ಪರಿಣಾಮಗಳು ಊಹಿ
ಸಲಾದ್ಯವುಗಳು.ಮಹಾಸಾಗರಗಳು.ಇವುಗಳ
ಪರಿಣಾಮಗಳೇ ಕಥೆ -ಉಪಕಥೆ -ಪುರಾಣಗ
ಳಾಗಿವೆ.ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ
ಇವೆಲ್ಲಾ ಸ್ಪಷ್ಟ ವಾಗುತ್ತಾ ಹೋಗುತ್ತವೆ.
   ಸತ್ಯ ಹಾಗು ದಾನ ಇವೆರಡೂ ಅದ್ಭುತ
ಮೌಲ್ಯಗಳು.ಇವು ಮನುಷ್ಯನನ್ನು ವಜ್ರದ0ತೆ
ಕಟೆ -ಕಟೆದು ವಜ್ರ ಶಿಲೆಯನ್ನಾಗಿ 
ಮಾಡುತ್ತವೆ.ಆದರೆ ಬದಲಾದ  ಜೀವನದಲ್ಲಿ
ಅದು ಯಾವುದೇ ರ0ಗದಲ್ಲಿರಲಿ ,  ಈ ಮೌಲ್ಯ
ಗಳನ್ನು ಕಟ್ಟಿಕೊ0ಡು  ಜೀವಿಸಲಿಕ್ಕೆ ಆಗುವದಿಲ್ಲ.
ಅ0ತಾ ಖಡಾ -ಖ0ಡಿತವಾಗಿ ಹೇಳುವ0ತಹ
ಕಾಲವಿದು.ಅದು ತಪ್ಪಲ್ಲ.ಕಾಲದ ಮಹಿಮೆಯೇ
ಆಗಿದೆ.

ಈಗ ಕಾಲ ಸ್ವಲ್ಪಉಲ್ಟಾ -ಪಲ್ಟಾ.ಮೌಲ್ಯಗಳು
ವಿಜ್ರ0ಭಿಸುವ ಕಾಲ ಮರೆಯಾಗುತ್ತಿದೆ.ಇದಕ್ಕೆ
ಮಾನವನ ಆಧುನಿಕರಣದ ಜೀವನ ಶ್ಯೆಲಿಯೇ
ಕಾರಣ.ಆದರೂ ಒ0ದ0ತೂ ನಿಜ.ನಾವು
ಯಾವ ರೀತಿಯ ಜೀವನ ಸಾಗಿಸುತ್ತಿರಲಿ ,
ಮೌಲ್ಯಗಳು ಈಗಲೂ ರನ್ನಗಳೇ.ಕೊನೆಗೆ
 ನಾವು ಯಾವುದೇ ದಾರಿಯಲ್ಲಿ ಹೋದರೂ
 ಆ ದಾರಿಯ ಕೊನೆಯ ಅ0ತಿಮ ಪಾದ  ಮೌಲ್ಯವೇ
ಆಗಿರುತ್ತದೆ.ಈ ಮೌಲ್ಯಗಳನ್ನು ಅಲ್ಲಗಳೆಯಲಾಗುವದಿಲ್ಲ
.ಮೌಲ್ಯಗಳಿ0ದಲೇ ನಮ್ಮ ಜೀವನ ಇರುವಿಕೆಗೊ0ದು ಬೆಲೆ
ಅ0ದರೆ ಮಾನವೀಯತೆಗೊ0ದು ಬೆಲೆ.ಆ
ಮೌಲ್ಯಗಳನ್ನು ಸಾದಾ ಪೋಷಿಸಿಕೊ0ಡು
ಬರುವದು ಮಾನವನು -ಮಾನವನಿಗಾಗಿ-
ಮಾನವೀಯತೆಗಾಗಿ ಮಾಡುವ ಮಹಾನ್
ಕಾರ್ಯ.

ಮೌಲ್ಯಗಳು -ಚಿರ0ಜೀವಿಯಾಗಲಿ
ಶಾ0ತಿ,ಸಹನೆ,ಸೌಹಾರ್ಧತೆ ಎಲ್ಲೆಲ್ಲೂ ಮರೆಯಲಿ.