Thursday, February 25, 2016

"ಪಕ್ವತೆ  "

ಪಕ್ವತೆ ---- ಪರಿಪಕ್ವತೆ - ಜಾನಪದದಲ್ಲಿ
ಪಕ್ವ ಅ0ದರೆ ಹಣ್ಣಾಗಿದೆಅ0ತ ಅರ್ಥ.
ಪಕ್ವ ಆಧ್ಯಾತ್ಮಿಕದ ಅರ್ಥದಲ್ಲಿ ನಿಪುಣತೆ ,
ಆಳ ,. ಇದರ ಮು0ದಿನ ಭಾಗವೇ ಅನುಭವ.
ಅನುಭವವೇ -ಅನುಭಾವಿ  ಕಲ್ಯಾಣ ಮ0ಟಪ
ಅ0ತಲೂ ಕರೆಯಬಹುದು.ಲೋಕ ಕಲ್ಯಾಣಕಾಗಿ
ಅನುಭಾವಿಗಳು ಸೇರುವ ತಾಣವೇ ಕಲ್ಯಾಣ 
ಮ0ಟಪ.

ಮನುಷ್ಯ ಬುದ್ಧಿಜೀವಿ.ಕಲ್ಪನಾಜೀವಿ.ಪ0ಚೇ0
ದ್ರಿಯಗಳ ಜೊತೆಗೆ ಈ ಕಲ್ಪನಾ ಶಕ್ತಿಯನ್ನು
ಮೇಳ್ಯೆಸಿ ಗುರುತಿಸುವ ಆಲೌಕಿಕ ಶಕ್ತಿ 
ಮನುಷ್ಯನಲ್ಲಿ ಮಾತ್ರ ಇದೆ. ಪಶು ಪ್ರಾಣಿಗಳಲ್ಲಿ 
ಪಕ್ವತೆಯ ಗ್ರಹಣ ಶಕ್ತಿ ಕಡಿಮೆ.
ಮನುಷ್ಯ ಜೀವಿಗಳಲ್ಲಿ ವ್ಯಕ್ತಿಯಿ0ದ ವ್ಯಕ್ತಿಗೆ
ಈ ಪಕ್ವತೆ ಭಿನ್ನವಾಗುತ್ತ ಹೋಗುತ್ತದೆ. ಇದು
ಅವರವರ ಕಾಯಕದಲ್ಲಿ ತೊಡಗಿಸಿಕೊ0ಡ 
ಆಳ,ಧ್ಯಾನ ,ಅರ್ಪಿತಗಳ ಮೇಲೆ ಅವಲ0ಬಿತ
ವಾಗಿರುತ್ತದೆ. ಇದರಲ್ಲಿ ಗ0ಡು -ಹೆಣ್ಣು ಭೇದ 
ಇಲ್ಲ.

ಆಕಸ್ಮಾತ್ ಮನೆಯಲ್ಲಿ ಏಕಾಏಕಿ ಕರೆ0ಟ್
ಹೋಗುತ್ತೆ. ಆಗ ಬೆ0ಕಿ ಪೊಟ್ಟಣ ಎಲ್ಲಿ 
ಇಟ್ಟಿದ್ದೀವಿ ಅನ್ನೋ ಸ0ಜ್ನೆ ,ಆ  
 ಜ್ನಾನ ತರ0ಗಗಳಿಗೆ ರವಾನಿಸುತ್ತದೆ.ಆಗ ನಾವು
ಬೆ0ಕಿ ಪಟ್ಟಣಿದ್ದ
ಜಾಗಕ್ಕೆಯಾವುದೇ ಬೆಳಕಿನ ಸಹಾಯವಿಲ್ಲದೇ 
ಪಡೆಯುತ್ತೇವೆ. ಇದು ಅಭ್ಯಾಸ
ಬಲ.ಇದನ್ನು ನಾವು ಒ0ದು ರೀತಿಯಲ್ಲಿ
"ಪಕ್ವತೆ "ಅ0ತಾ ಕರೆಯುತ್ತೇವೆ.ಈ ಅಭ್ಯಾಸ 
ಬಲ ಎಷ್ಟೋ0ದು ಆಳದಲ್ಲಿ ಇರುತ್ತದೆ ಅ0ದರೆ
ಯಾವ ವ್ಯಕ್ತಿಯು ಯಾವುದರಲ್ಲಿ  ನಿಪುಣನಾಗಿರು
ತ್ತನೋ ಆತನು ಸದಾ ಅದರಲ್ಲಿಯೇ ಇರುತ್ತಾನೆ.
ಅಪ್ಪಿ ತಪ್ಪಿ ಆತನ ಕ್ಯೆ ಚಳಕ ತಪ್ಪುವದಿಲ್ಲ.
ಇದೇ ಮು0ದೆ ಶಾಸ್ತ್ರ ಆಗುತ್ತೆ. ಕಲೆ ಆಗುತ್ತೆ.ಯಾವ 
ಕಲೆಯೇ ಆಗಲಿ ಅದರಲ್ಲಿ ನಿಪುಣತೆ ಇರಬೇಕು.
ಅನುಭವ ಇರಬೇಕು. ಅರ್ಪಿತ ಮನೋಭಾವ
ಇರಬೇಕು.

"ಪಕ್ವತೆ ಅರಳಿದ0ತೆಲ್ಲಾ ಕಲೆಯು ಅರಳುತ್ತದೆ
ಜೀವನ ಮಾಗುತ್ತದೆ.ವ್ಯಕ್ತಿ ನಾಡು ಬೆಳಗುತ್ತದೆ.

No comments: