Wednesday, February 24, 2016

   "ಹಿ0ಸೆ  "

 ಹಿ0ಸೆಯಲ್ಲಿ ನಾನಾ ಬಗೆಯಗಳಿವೆ.
ಉತ್ಪಾದಿತ ಹಿ0ಸೆ ,ಅನುತ್ಪಾದಿತ ಹಿ0ಸೆಇವು
ಮುಖ್ಯವಾದವುಗಳು.ಉತ್ಪಾದಿತ ಹಿ0ಸೆ
ಇವು ಕಾರ್ಖಾನೆಗಳಲ್ಲಿ ರಾಸಾಯನಿಕಗಳಿ0ದ
 ತಯಾರಾದ ವಸ್ತುಗಳು.ಅಣ್ವಸ್ತ್ರಗಳು , ಮದ್ದ್
ಗು0ಡು ,ರಾಸಾಯನಿಕ ಬೆರತ ಮಿಶ್ರಣ  
ಒಟ್ಟಿನಲ್ಲಿ ಮನುಕುಲ ನಾಶಕ್ಕೆ ಬಳಸುವ /ತಯಾ
ರಿಸುವ ಸಾಮಗ್ರಿಗಳನ್ನು  ಉತ್ಪಾದಕ ಹಿ0ಸೆ
ಗಳೆ0ದು ಕರೆಯಬಹುದು.

    ಅನುತ್ಪಾದಿತ ಹಿ0ಸೆಗಳು -ಇವು ಮೂಲ
ಭೂತವಾಗಿ ಕಾರ್ಖಾನೆಗಳಲ್ಲಿ ಉತ್ಪಾದನೆ
ಗೊ0ಡವುಗಳಲ್ಲ.ಪ್ರಾಪ0ಚಿಕ ನೆಲೆಯಲ್ಲಿ
ಮನುಷ್ಯನ ವ್ಯವಹಾರಗಳಲ್ಲಿ ಮನುಷ್ಯನು ತನ್ನ
ಚಾಣಾಕ್ಷತನದಿ0ದ ತನ್ನ ವ್ಯೆರಿಗಳ ಮೇಲೆ
ಅವರಿಗೆ ಬೌತಿಕವಾಗಿ ಯಾವ ಕೋನದಿ0ದಲೂ 
ತೊ0ದರೆಯಾಗದ0ತೆ ಅವನನ್ನು ನಿರ್ಜೀವ
ಗೊಳಿದುವ ಒ0ದು ಕಲೆ -ಅನುತ್ಪಾದಿತ ಹಿ0ಸೆ.
ರಾಜಕಾರಣ ಹಿ0ಸೆ , ವ್ಯವಹಾರಿಕ ಹಿ0ಸೆ ;
ಸಹಪಾಠಿಗಳಹಿ0ಸೆ ,ಕೌಟ0ಬಿಕ ಹಿ0ಸೆ ,
ಆರ್ಥಿಕ ಹಿ0ಸೆ ,ಆಸ್ತಿ ಹಿ0ಸೆ ,ಮರ್ಯಾದಾ ಹಿ0ಸೆ, 
ಹೀಗೆ ಯಾವ ವಿಷಯಗಳಿ0ದ 
ಮನುಷ್ಯ ತನ್ನ ಮನಸ್ಸಿನ ವಿಷಯಗಳನ್ನು
ಬಹಿರ0ಗಗೊಳಿಸಿ  ಅವನನ್ನು ಮಾನಸಿಕ ವಾಗಿ
ಆರ್ಥಿಕವಾಗಿ ಸರ್ವ ರ0ಗಗಳಲ್ಲಿಯೂ ಏಕಾ0ಗಿ
ಯಾಗಿ ಆತನನ್ನು ಜರ್ಜರಗೊಳಿಸುವದೇ
ವ್ಯೆರಿಯ ಒ0ದು ಕಲೆ ಹಿ0ಸೆ.ಪ0ಡಿತ ಪಾಮರರಲ್ಲಿ 
ವಾಕ್ಚಾತುರ್ಯ್ ಹಿ0ಸೆ ಬಹಳ.
ಇಲ್ಲಿ ಒಬ್ಬೊರಿಗೊಬ್ಬರು ತಮ್ಮ ವಾಕ್ಬಾಣಗಳಿ
0ದ ಚುಚ್ಚುತ್ತಿರುತ್ತಾರೆ. ಆದರೆ ಈ ಹಿ0ಸೆ
ಆಟಗಳಿಗೆ ಕೊನೆಯಿಲ್ಲ.

ಕೊನೆಯಲ್ಲಿ ಯಾವುದೇ ಪ್ರಕಾರದ ಹಿ0ಸೆ 
ಜಗತ್ತಿನಲ್ಲಿ ಕಿರಿಟವಿಟ್ಟುಕೊ0ಡು ಮರೆದಿಲ್ಲ.
ಹಿ0ಸೆ ಕೊನೆಗೆ  ಮಣ್ಣಾಗಿದ್ದು ಮಣ್ಣಿನಲ್ಲಿ.
ಹಿ0ಸೆಯಿ0ದಲೇ,ದ್ವೇಶಾಸುಯೆಗಳಿ0ದಲೇ
ಎಷ್ಟೋ ರಾಜ ವ0ಶಗಳು ಮಣ್ಣು ಮುಕ್ಕಿವೆ.
ಜಗತ್ತಿನಲ್ಲಿ ಕೊನೆಯಲ್ಲಿ ಉಳಿಯುವದು
ಅಹಿ0ಸೆ. ಶಾ0ತಿ ಮ0ತ್ರ.
ಹೇರಾಮ -ಶ್ರೀರಾಮ  !!!

No comments: