Monday, February 15, 2016

          "ಮನಸ್ಸು "
       

ಈಗ  ಸತ್ತ ವ್ಯಾಳೆ ದುಡ್ದ್ಡಿದ್ದರ 
ನಾಕ ಮ0ದಿ ಹೆಣ ಹೊರಕ ಬರ್ತಾರ.
ಇಲ್ಲಾ0ದರ ಇಲ್ಲ. ಹೆಣ್ಣ ಮಕ್ಕಳಿಗೆ ಆಗಲಿ 
,ಮಕ್ಕಳಿಗೆ ಆಗಲಿ ಒ0ದು ಚೂರು ಆಸ್ತಿ -ಪಾಸ್ತಿ
ಏನಾರ ಕೊಟ್ಟಿದ್ದರ ನಾಕ ಹನಿ ಕಣ್ಣೀರ ಹಾಕ್ತಾರ.
ದುಡ್ಡಿನ ಆಧಾರದ ಮೇಲೆ ಸ0ಭ0ಧಿಕರು 
ಸ0ಭ0ಧಿಕರ ಮನಸುಗಳು ಲೆಖ್ಖಚಾರ 
ಹಾಕ ಕಾಲ ಇದು.

ಮೊದಲು ಆಧ್ಯಾತ್ಮಿಕವಾಗಿ ಸದೃಡನಾಗಿರಬೇಕಾ
ದರೆ ಅವನ ಮನಸ್ಸು ಚ0ಚಲ ಇರಬಾರದು,
ಶಾ0ತ ಇರಬೇಕು.ಏಕಾಗ್ರತೆಯಿ0ದ ಕೂಡಿರ
ಬೇಕು. ಇವನ್ನ ಪರೀ ಕ್ಷೀಸಲಾಗುತ್ತಿತ್ತು.
ಈಗ ವಿಕಾರ ಮನಸ್ಸಿನವವರಿಗಾಗಿಯೇ 
ಪ್ರತ್ಯೇಕ ವಿಭಾಗ ತೆರೆಯೋ ಕಾಲ ಬ0ದಿದೆ.

ಮನುಷ್ಯನ ಎಲ್ಲಾ ಚರಾ-ಸ್ಥಿರ ಕೊನೆಗೆ ನಶ್ವರ
ಎ0ದು ಗೊತ್ತಿದ್ದರೂ ಯಾರೊಬ್ಬರು ಆ
ಮೋಹದಿ0ದ ಹೊರಬರಲು ತಯಾರಿಲ್ಲ.
ಮನುಷ್ಯ ಜಾತಿ ಬಿಡಿ. ಸನ್ಯಾಸಿಗಳೆ 
ಪ0ಚೇದ್ರಿಯಗಳಿಗೆ ದಾಸರಾಗಿ ಅಧೋಗತಿಗೆ 
ಇಳಿಯುತ್ತಿದ್ದಾರೆ. ಇವರಿಗೆ ಇದೆಲ್ಲಾ ಮೋಹ.
 ಮೋಹಕ್ಕೆ ಸಿಲುಕಿ ದಾಸಿಪಾಪಿ ಆಗಬಾರದೆ0ದು
ಗೊತ್ತಿದ್ದರೂ  ಮೋಹದ ಬಲೆಗೆ ಬೀಳುತ್ತಿದ್ದಾರೆ.
ಅದಕ್ಕೆ ಈಶ್ವರ ಜಗತ್ತಿನಲ್ಲಿ ಸೃಷ್ಟಿಯ ಜೊತಗೆ
ವಿನಾಶವನ್ನು ಇಟ್ಟಿದ್ದಾನೆ. ಇಲ್ಲದೇ ಹೋದರೆ
 ಜಗತ್ತು ಏಕಪಥವಾಗಿ ಚಲಿಸುತ್ತಿತ್ತು.
ವಿಜ್ನಾನದಿ0ದ ಹಿಡಿದು ಪ್ರತಿಯೊ0ದು 
ಮನುಷ್ಯನ ಚಟುವಟಿಕೆಗಳು ಆದೇವನ 
ಪ0ಚಭೂತಗಳಿ0ದ ನಿರ್ಮಿತವಾಗಿವೆ. ಕೊನೆಗೆ
ಅವು ಪ0ಚಭೂತಗಳಲ್ಲಿಯೇ ಲೀನವಾಗದೇ 
ಬೇರೆ ಗತಿಯಿಲ್ಲ. ಇರುವಷ್ಟು ದಿವಸ ಇದ್ದು 
ನಮ್ಮದು ಎ0ಬ ಬ್ರಮೆ. ನ0ತರ ಮತ್ತೊಬ್ಬನದು
ನ0ತರ ಮೊಗದೊಬ್ಬನದು. ಹೀಗೆ ಖಾತೆ
ಬದಲಾಗುತ್ತಾ ಹೋಗುತ್ತೆ ಹೊರತು ಶಾಶ್ವತ
ಅವನಹೆಸರಲ್ಲಿ ಇರೊಲ್ಲ.

ಅ0ತಿಮ ನಿಜವಾದ ಮಾಲಕ ಆ ಶಿವ.
ಶಿವಪರಮಾತ್ಮ. ಅವನೇ ನಿಜವಾದ ಜಗದ್ಗುರು.
ನಾವು ಅವನ ಆಧೀನರು.
ಎಲ್ಲವೂ ಶಿವಮಯ
ಎಲ್ಲವೂ ಆನ0ದಮಯ
ಎಲ್ಲವೂಶಿವನೇ 
ನಾನು ನೀನಾಗಿರಲು
ಜಗವೇ ಪ0ಚಲಿ0ಗೆಶ್ವರ.

No comments: