Thursday, February 11, 2016

   "ಭಗವದ್ಗೀತೆ "
         
ಭಗವದ್ಗೀತೆ  ಭಾರತೀಯರೆಲ್ಲರಿಗೂ 
ಚಿರಪರಿಚಿತವಾದ ಪಾವನ ಗ್ರ0ಥ. ವಯಸ್ಸಾ
ದವರು  ದಿನಾಲು ಒ0ದೆರಡು  ಭಗವದ್ಗೀತೆಯ
ಶ್ಲೋಕವನ್ನು ಪಠಿಸುವದು ರೂಢಿ.  
  ಭಗವದ್ಗೀತೆ -ಜಗದೊಡೆಯ ಮಹಾವಿಷ್ಣು
ಅರ್ಜುನನಿಗೆ ಭೋಧಿಸಿದ ಧರ್ಮ ಕಾರಣಿಕಗಳು.
ಭಗವದಗೀತೆಯಲ್ಲಿ ಸಕಲವೂ ಉ0ಟು. ಅದನ್ನು
ತಿಳಿದುಕೊಳ್ಳುವ ಮನಸ್ಥಿತಿ ನಮ್ಮಲ್ಲಿರಬೇಕು.
ದುಷ್ಟರನ್ನು  ಸದೆಬಡಿಯಲು ತೆಗೆದುಕೊಳ್ಳಬೇ
ಕಾದ ಎಲ್ಲಾ ಕಠಿಣ ಮಾರ್ಗಗಳು ,ಶಾ0ತಿ 
ಪಾಲನೆ ಬ0ದಾಗ  ಶಾ0ತಿಪಾಲನೆ ಸೂತ್ರಗಳನ್ನು 
ಹೇಗೆ  ನಿಭಾಯಿಸಬೇಕೆ0ಬ ಉಲ್ಲೇಖವು 
ಇದೆ.ಧರ್ಮ ಸೂಕ್ಷ್ಮತೆ ಬ0ದಾಗ
ಧರ್ಮ -ಅಧರ್ಮ ವ್ಯಾಖ್ಯಾ ನಗಳು ಇವೆ.
ಪ್ರಪ0ಚದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳ
ಸೂಕ್ಷ್ಮಗಳು ಇಲ್ಲಿ ಇವೆ.ಯುದ್ಧ ಸ0ಧರ್ಭದಲ್ಲಿ 
ವ್ಯೂಹ ರಚನೆ ಕ್ರಮ ,ಯುದ್ಧ ತ0ತ್ರಗಳು ಇವೆ.
ಭದವದ್ಗೀತೆ -ಶಾ0ತಪ್ರಿಯರಿಗೆ ರಾಮಾಯಣ
ಕ್ಷತ್ರಿಯರಿಗೆ -ಮಹಾಭಾರತ.,ಅಹಿ0ಸಾವಾದಿಗ
ಳಿಗೆ -ಬೌದ್ಧ ಧರ್ಮ ಗ್ರ0ಥವೂ ಆಗಿದೆ.ನಾವು
ಯಾವ ಮಾರ್ಗದಲ್ಲಿ ವಿಮರ್ಷೆ ಮಾಡುತ್ತೆವೆಯೋ
 ಆ ಮಾರ್ಗದಲ್ಲಿಯೇ ಉತ್ತರ ದೊರಕುತ್ತದೆ.
ವ್ಯಾಸ ಮಹರ್ಷಿಗಳು ಮಹಾಭಾರತ ರಚಿಸಿ
ಮನುಕುಲಕ್ಕೆ  ಅಪಾರ ಜ್ನಾನ ಸಿರಿಯನ್ನೇ 
ಧಾರೆ ಎರೆದಿದ್ದಾರೆ.ಅದರ ಬೆಳಕು ,ಕ0ಪು
ತ್ರಿಲೋಕಕ್ಕೂ ಹರಡಿದೆ.ಜೀವನದಲ್ಲಿ ಸಮಯಸಿ
ಕ್ಕರೆಒಮ್ಮೆಯಾದರೂ ಅದನ್ನು  ಓದಬೇಕು.

No comments: