Wednesday, February 10, 2016

 " ಸೃಷ್ಟಿ -ಜಗದೊಡೆಯ "

ಸೂರ್ಯನಿ0ದ -ಬೆಳಕು
ಚ0ದಿರನಿ0ದ -ಬೆಳದಿ0ಗಳು
 ಗ0ಗೆಯಿ0ದ - ನೀರು
ಭೂಮಿಯಿ0ದ -ಅನ್ನ
 ಆಕಾಶ -ಮಳೆ.
ಗೋಮಾತೆಯಿ0ದ -ಹಾಲು ಉತ್ಪನ್ನ
  ಮನುಷ್ಯನ ಜೀವನಕ್ಕೆ ದೇವರು 
ಬೇಕಾಗುವ ಎಲ್ಲಾ ಪದರ್ಥಗಳನ್ನು ಸೃಷ್ಟಿ
ಮಾಡಿದ್ದಾನೆ. ನಾವು ಅದರ ಉಪಯೋಗ
 ಮಾಡಿಕೊ0ಡು-ಉಪಭೋಗಿಸಿ ಮತ್ತೆ ಇಲ್ಲಿಯೇ
" ಬಿಟ್ಟು ಹೋಗಲು " ಹೇಳಿದ್ದಾನೆ.
ಸ0ತಾನ ಅಭಿವೃದ್ಧಿಯಿ0ದ ಹಿಡಿದು ಹುಟ್ಟು
ಸಾವುಗಳ ವರೆಗೆ ಅವನದೇ ಸೃಷ್ಟಿ  -ಅವನದೇ
ನಾಶ.ಸುಖ -ದುಃಖ ,ರಾಗ -ದ್ವೇಷ ,ಶ್ರೀಮ0ತಿಕೆ
ಬಡತನ ,ಎಲ್ಲಾ ಅವನ ಜೀವನವೆ0ಬ 
ನಾಟಕದ ಪಾತ್ರಗಳು.

  ಮನುಷ್ಯ ಉಪ್ಪು -ಖಾರ ಸವಿದ ರಾಗ
ರಸ -ಋಷಿ ಜೀವಿ.ಅದಕ್ಕೆ ತಕ್ಕ ಹಾಗೆ ಜೀವನದ
ರ0ಗದಲ್ಲಿ ಪ್ರಪ0ಚದ ಎಲ್ಲಾ ಪಾತ್ರಗಳನ್ನು 
ತೆರೆಯ ಮೇಲೆ ತೋರಿಸಿ ಮನರ0ಜಿಸಿ 
ಅ0ತಿಮವಾಗಿ ಸ0ದೇಶವನ್ನು ನೀಡುವವನು 
ಅವನೇ. ಆ ದೇವನು
ನಾವು ಮನುಜರುಅಲ್ಪಮತಿಗಳು.ಅವನು 
ಕೊಟ್ಟ ಎಲ್ಲಾ ಭೋಗ್ಯಗಳನ್ನು ಅನುಭವಿಸಿ ,ತೃಪ್ತ
ರಾಗದೇ ಮು0ದಿನ ಮೊಮ್ಮಕ್ಕಳಪೀಳಿಗೆಗಾಗಿ
ಸಾಕಾಗುವಷ್ಟು ಗಳಿಸುವ ಭರದಲ್ಲಿ ದಾರಿ 
ತಪ್ಪಿ ಅನ್ಯಾಯ ಮಾರ್ಗ ಹಿಡಿದು ಜ್ಯೆಲಿಗೆ ಹೋಗಿ
ಬರುವ0ತೆ ಮಾಡುವವನು ಅವನೇ.ಮು0ದೆ
ಹೀಗೆ ಮಾಡಬಾರದಿತ್ತು ಅ0ತಾ ಪಶ್ಚತ್ತಾಪ
ಮನೋಭಾವನೆ ಮನಸು ಹೃದಯಗಳಲ್ಲಿ ಸೃಷ್ಟಿ
ಸುವವನು ಅವನೇ.ಆ ದೇವನೇ.
ನಾವು ಇದ್ದುದರಲ್ಲಿಯೇ -ಇದ್ದ ಪರಿಸ್ಥಿತಿಯಲ್ಲಿಯೇ
ಯಾವುದು ನಮ್ಮದು -ಅದನ್ನು ಮಾತ್ರ 
ನಮ್ಮದೆ0ದು ತಿಳಿದು ಉಪಯೋಗಿಸಿ ಕೃತಾರ್ಥ
ರಾಗುವದು ಜೀವನದ ಅತ್ಯ0ತ ಸರಳ ಮೋಕ್ಷ
ದಾಯಕ ವಿಚಾರ.
ಪಾಲನೆ ಪೋಷಣೆಗೆ ಬೇಕಾಗುವ ಜಲವನ್ನು
ಗ0ಗೆಯ ರೂಪದಲ್ಲಿ ದೇವನು ಸೃಷ್ಟಿಸಿದ. ಆದರ
 ಅದನ್ನು ನಾವು ಪಾಲನೆ -ಪೋಷಣೆಗೆ ಬಿಡದೇ ಅದರ
 ಒ0ದೊ0ದು ಇ0ಚನ್ನು ಮಾರಿ ಕುಬೇರರಾಗುತ್ತಿದ್ದೇವೆ.
ಇದು ದೇವನ ಆದೇಶದ ವಿರುದ್ಧದ ನಡಿಗೆ. ಅದ್ದರಿ0ದಲೇ
 ಈಗ ಅನ್ಯಾಯದ ಘೋರ ಪರಿಣಾಮ ಆಗಾಗ 
ವಾಯುಭಾರ ಕುಸಿತ ,ಸುನಾಮಿ , ಮಾನವ ನಾಶ.,
 ನಡೆಯುವದನ್ನು ಕಾಣುತ್ತೇವೆ.




No comments: