Wednesday, February 17, 2016


  ಆತ್ಮ ದರ್ಶನ  

      ಆತ್ಮ ದರ್ಶನ ಇದು ಅಲೌಕಿಕತಗೆ 
ಸ0ಭ0ಧಿಸಿದ ವಿಷಯ.ಇದರ ಬಗ್ಗೆ
 ಸಾಮಾನ್ಯರು  ಮಾತಾಡುವಷ್ಟು  ವಿಷಯ 
ಸ0ಗ್ರಹ ಇರುವದಿಲ್ಲ.

     ಆರ್ಥ ,ಕಾಮ ,ಮೋಹ್ ,ಲೋಭ  , 
ಇವುಗಳ ಬಗ್ಗೆ ಆಸಕ್ತಿಯಿಲ್ಲದವರು  , ಅಲೌಕಿಕ
ದ ಕಡೆಗೆ ಲಕ್ಷವಹಿಸುವದು ಸಾಮಾನ್ಯ.

         ಈಗ ಸಾಮಾಜಿಕ ಪರಿಸ್ಥಿತಿ  ಹೇಗಿದೆ
ಎ0ದರೆ -- ಅರ್ಥ ,ಕಾಮ ,ಮೋಹ ,ಲೋಭ
ಗಳಿಲ್ಲದೇ ಜೀವಿಸುವದು  ದುಸ್ತರ.ಇವುಗಳ 
ಸ್ಥಿತಿ ,ಗತಿ ,ಮಟ್ಟ  ಆಧಾರಗಳ ಮೇಲಿ0ದ
ಮನುಷ್ಯನ ಸ್ಥಾನ ,ಮಾನ ಗುರುತಿಸಲ್ಪಡುತ್ತದೆ

        ವಯಸ್ಸಾದವರು ,ಷಷ್ಟಿ ದಾಟಿದವರು 
ಇಲ್ಲವೇ  ಅತ್ಯ0ತ ವ್ಯೆಭವದ ವಿಲಾಸಿ
ಜೀವನ ಅನುಭವಿಸಿ ,ಈಗ ಜೀವನದಲ್ಲಿ  
ಜಿಗುಪ್ಸೆ ಹೊ0ದಿದಬರು ,ಇಲ್ಲವೇ ಮಾನಸಿಕ 
ಅಘಾತ ಹೊ0ದಿದವರು ಆತ್ಮದರ್ಶನದ
 ಕಡೆಗೆ ಒಲವು ತೋರಿಸುವದು ಜಾಸ್ತಿ.

       ಮನುಷ್ಯ ಆಷ್ಟ ಭೋಗಗಳಲ್ಲಿ  ವ್ಯೆರಾಗ್ಯ
ತಾಳಿದಾಗ -ಆತ್ಮಜ್ನಾನ , ಆತ್ಮದರ್ಶನಕ್ಕಾಗಿ 
ಹ0ಬಲಿಸುತ್ತಾನೆ.

   ಜೀವನದ ಅ0ತಿಮ"ಮೋಕ್ಷ" ಪ್ರಾಪ್ತಿಗಾಗಿ
ಆತ್ಮಜ್ನಾನ -ಅರಿಸಿ ಆತ್ಮಜ್ನಾನ ಪಡೆಯುವ
ಆತುರ ವ್ಯಕ್ತಪಡಿಸುತ್ತಾರೆ.

   ಮನುಷ್ಯನ ಎಲ್ಲ ಸಾಕಾರ -ನಿರಾಕಾರ ಗಳೆಲ್ಲವೂ
 ಅ0ತಿಮವಾಗಿ "ಓ0" ಕಾರದಲ್ಲಿ
ಲೀನವಾಗುವದು ನಿರ್ವಿವಾದ.

No comments: