Thursday, February 18, 2016


ಮನಸ್ಸು

      ವಿಶ್ವ ಗ್ರ0ಥಾಲಯವೇ ಮನಸ್ಸು.. 
ಸರಿ. ಗ್ರ0ಥಾಲಯ = ಗ್ರ0ಥ + ಆಲಯ
ಅ0ದರೆ ಗ್ರ0ಥಗಳ ರಾಶಿ.ಪುಸ್ತಕಗಳ ರಾಶಿ.
ಒ0ದರ್ಥದಲ್ಲಿ ಜ್ನಾನ ದೇಗುಲ.ವಿಶ್ವ ಕೋಶ.
ಜ್ನಾನ ಕೋಶ ಹೀಗೆ ಅರ್ಥ್ಯೆಸಬಹುದು.
       ಕಥೆ ,ಕಾದ0ಬರಿ ,ವಚನ ಸ0ಗ್ರಹ.
ಮಹಾ ಗ್ರ0ಥಗಳು. ಶಬ್ದಕೋಶಗಳು.
ಪತ್ತೇದಾರಿ ಕಾದ0ಬರಿ ,ಹಾಸ್ಯ
 ಪುಸ್ತಕಗಳು ಹೀಗೆ ಪ್ರಪ0ಚದಲ್ಲಿ
 ಲಭ್ಯವಿರುವ ಎಲ್ಲಾ ಬಗೆಯ
 ಪುಸ್ತಕ ರಾಶಿ  ಇಲ್ಲ ಕಾಣುತ್ತೇವೆ.
        ಆದರೆ ವಿಚಿತ್ರ ಅ0ದರೆ ಇಷ್ಟೆಲ್ಲಾ
 ಬಗೆಯ ಪುಸ್ತಕಗಳಿದ್ದರೂ ಎಲ್ಲರು 
ಎಲ್ಲಾ ಬಗೆಯ ಪುಸ್ತಕ ಆಯ್ಕೆ ಮಾಡುವದಿಲ್ಲ. 
ಅವರ ಅಭಿರುಚಿಗೆ ತಕ್ಕ0ತೆ ಪುಸ್ತಕ ಆಯ್ಕೆ ನಡೆಯುತ್ತದೆ.

      ಅದೇ ರೀತಿ ಮನಷ್ಯನ  ಮಿದುಳು.
ಎಲ್ಲಾ ಮನುಷ್ಯರಲ್ಲಿ  ಮಿದುಳು ಇರುತ್ತದೆ
. ಆದರೆ ಆಮಿದುಳು ಪ್ರಕೃತಿಗೆ   ಪ್ರತಿಕ್ರಿಯಿಸುವ ಪರಿ 
ಮನುಷ್ಯನಿ0ದ ಮನಷ್ಯನಿಗೆ ಅಗಾಧ ಪ್ರಮಾಣದಲ್ಲಿ 
ವ್ಯತ್ಯಾಸವಾಗುತ್ತ ಹೋಗುತ್ತದೆ.  ಈ ಕ್ರಿಯೆಯುಮಿದುಳಿನಲ್ಲಿರುವ
 ನರಗಳ  ಪ್ರಚೋದನೆ ಹಾಗು ಆನರಗಳು ಸ್ರವಿಸುವ 
ರಾಸಾಯನಿಕ ಕ್ರಿಯೆಗಳಿ0ದ ಮನುಷ್ಯನ ನಡಾವಳಿಕೆಯ 
ಚಿತ್ತವು ಕೇ0ದ್ರಿಕ್ಫ್ತವಾಗಿರುತ್ತದೆ.ಮನುಶ್ಯನಲ್ಲಿ 
ಸ್ರವಿಸುವ ಪಧಾರ್ಥವು  ಜಗತ್ತಿಗೆ ಒಬ್ಬನಲ್ಲಿ 
 ಅವಿಷ್ಕಾರವಾಗಿ ಕಾಣಬಹುದು.
ಅದೇಸಮಯದಲ್ಲಿ ಮತ್ತೊಬ್ಬನಲ್ಲಿ 
ಸಮಾಜ ವಿರೋಧಿ   ಸ್ಪ0ದನೆಯಾಗಿ   
ಪರಿಣಮಿಸಬಹುದು ಇದು ವಿಭಿನ್ನವಾದ ಕ್ರಿಯೆ.
ಇದರ ಮೇಲಿ0ದ ಜಗತ್ತಿನ  ಆಗುಹೋಗುಗಳ
 ನಿರ್ಧಾರ. ಆದರೆ ಇವೆಲ್ಲಕ್ರಿಯೆಗಳಿಗೂ ಒ0ದು 
ಚೇತನ ಇದೆ.  ಅದುವೇಉ ನಾವೆಲ್ಲರು ಕರೆಯುವ
ಜಗನ್ನಿಯಾಮಕ  ದೇವರು. ನಾವೆಲ್ಲಾ ದೇವರ
 ಸೃಷ್ಟಿ ದೇವರ ಸೃಷ್ಟಿಸಿದ ಪುಸ್ತಕದ ಹಾಳೆಗಳು.
ಒಬ್ಬರಲ್ಲಿ ಇದು ಮಹಾನ್ ಗ್ರ0ಥ.
ಇನ್ನೊಬ್ಬರಲ್ಲಿ ಖಾಲಿ ಹಾಳೆಗಳ ಪುಸ್ತಕ.

No comments: