Friday, February 26, 2016


ದೇಶಭಕ್ತಿ

ನಾವು ಯಾವ ಮಾತೃ ಭೂಮಿಯಲ್ಲಿ 
ನೆಲೆಸಿರುತ್ತೇವೆಯೋ ,ಆಮಾತೃ ಭೂಮಿಯ
ಅನ್ನ ,ಜಲ ವಾಯು ಸೇವಿಸುತ್ತೇವೆಯೋ
ಆ ಮಾತೃಭೂಮಿಯ ಋಣ ತೀರಿಸು ವದು
ನಮ್ಮ ಕರ್ತವ್ಯ.
ಹೊಟ್ಟೆ ಬಟ್ಟೆ ರಟ್ಟೆ  ಕೆಲಸವಾಯಿತು ಅ0ದರೆ
ಮುಗಿಲಿಲ್ಲ. ಅದರ ಋಣ ತೀರಿಸಬೇಕು.
ಅದರ ಋಣ ಹೇಗೆ ತೀರಿಸ್ತೀರಾ  ?.
ಅನ್ನ ಜಲ ನೀರು ಇವು ಮೂರು ಅಗತ್ಯ 
ಪೋಷಕಾ0ಶಗಳು .ಇವುಗಳಿಲ್ಲದೇ ಮನಜನ 
ವಿಕಾಸ ಸಾದ್ಯವೇ ಇಲ್ಲ. ಇವುಗಳನ್ನು ನಾವು
ಭೂಮಿಯಿ0ದ ನಮ್ಮ ವಿಕಾಸಕ್ಕಾಗಿ ಸಾಲದ
ರೂಪದಲ್ಲಿ ಪಡೆದಿದ್ದೇವೆ ಇವುಗಳನ್ನು ನಾವು
ಹಿ0ತಿರುಗಿಸುವದು ನಮ್ಮ ಕರ್ತವ್ಯ ವಲ್ಲವೇ ?
 ಹೌದು ಹಿ0ತಿರುಗಿಸಬೇಕು.ಸರಿ.ನಮ್ಮಲ್ಲಿ
ಅನೇಕ ವಸ್ತುಗಳಿರುತ್ತವೆ. ಅದರಲ್ಲಿ ನಾವು
 ಕೆಲವೋ0ದು ಸ್ವ0ತಉತ್ಪನ್ನ ಮಾಡುತ್ತೇವೆ.
ಇನ್ನು ಕೆಲವೋ0ದು ಬೇರೊಬ್ಬರು
ಉತ್ಪಾದಿಸುವಲ್ಲ್ಲಿ ಸಹಕರಿಸುತ್ತೇವೆ. 
ಈ ಸಹಕಾರಿ ತತ್ವದಿ0ದಲೇ ನಮ್ಮ ಜೀವನ 
ನಮ್ಮ ದೇಶದ ಅಸ್ತಿತ್ವ. ನಮ್ಮಲ್ಲಿದ್ದುದನ್ನು
 ಮತ್ತೊಬ್ಬರಿಗೆಕೊಟ್ಟು ಅವರಿಲ್ಲಿದ್ದುದದ್ದನ್ನು ನಾವು
ಪಡೆದು ಪರಸ್ಪರ ಕೃತಾರ್ತರಾಗುತ್ತೇವೆ.
 ಅದೇ ರೀತಿ ಭೂಮಾತೆಯಿ0ದ ಪಡೆದ0ತಹ 
ವಸ್ತುಗಳನ್ನು ನಾವು ಭೂ ಮಾತೆಗೆ ಮರಳಿಸುವದು
 ನಮ್ಮ ಕರ್ತವ್ಯ. ಯಾವದೇ ರೀತಿಯಾಲ್ಲಗಲಿ ಹಣದ ರೂಪದಲ್ಲಾಗಲಿ 
ಸೇವೆರೂಪದಲ್ಲಾಗಲಿ ನಾವು ಈ ಭೂಮಿಯ 
ಋಣ ತೀರಿಸಬೇಕು.ಇಲ್ಲಿ ಜಾತಿ ಭೇದ ಇಲ್ಲ.
ಭೂಮಾತೆಗೆ ಎಲ್ಲ ಜಾತಿ ಒ0ದೇ.
ನಾವೆಲ್ಲರೂ ಆ ತಾಯಿಯ ಮಕ್ಕಳು.
ಭೂಮಾತೆಯ ಸೇವೆಗೆ ಸದಾ ಸಿದ್ದರಾಗಿರಬೇಕು.
ಭೂಮಾತೆಗೆ ದ್ರೋಹ ಸಲ್ಲದು. ನಾವು 
ತಿ0ದ ಅನ್ನಕ್ಕೆ ಎರಡು ಬಗೆದ0ತೆ. ಅ0ತಹ ಹೀನ ಕೃತ್ಯ
ಎ0ದಿಗೂ ಮಾಡಬಾರದು.ದೇಶಭಕ್ತಿ ದೇಶಸೇವೆ
ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ.
ಕಾನೂನು ಬಾಹಿರ ಚಟುವಟಿಕೆಗಳು 
ಅವರ ವ0ಶವನ್ನೇ ಸತ್ಯಾನಾಶಗೊಳಿಸುತ್ತವೆ.

No comments: