Thursday, August 18, 2016


  "  ಗುರು. "
   
     "ಅರಿವೇ. ಗುರು  "
    " ಗುರುವೇ ಪರಬ್ರಹ್ಮ "
    "ಒ0ದಕ್ಷರ. ಕಲಿಸಿದಾತನೇ ಗುರು "
    "  ಗುರುವೇ ಪರದ್ಯೆವ "
     "  ಇಹ ಪರ ಸಾಧನೆಗಳಿಗೆ ಗುರುವೇ
         ಕಾರಣ ".  --ಹೀಗೆ ಗುರುವಿನ ಬಗ್ಗೆ
ನಾಣ್ಣುಡಿಗಳು ಪ್ರಚಲಿತದಲ್ಲಿವೆ.
        
ಸರ್ವೇ ಸಾಧಾರಣ ನಮಗೆ ನಮಗಿ0ತ
ಹೆಚ್ಚು ತಿಳುವಳಿಕೆ , ಜ್ನಾನವುಳ್ಳವರು ,ವ್ಯವ
ಹಾರದಲ್ಲಿ ,ಇತರೆ ರ0ಗಗಳಲ್ಲಿ ಮಾರ್ಗದರ್ಶನ
ನೀಡಿ ನಮ್ಮನ್ನು ಪ್ರಗತಿಪರರ ಸಾಲಿನಲ್ಲಿ
ಕುಳಿತುಕೊಳ್ಳುವ0ತೆ ಮಾಡುವ  ಸಾಧಕ
ಮಹನೀಯರಿಗೆ ನಾವು "ಗುರು " ಎ0ದು
ಸ0ಭೋಧಿಸುವದು0ಟು.

   ರಾಜಕೀಯಗುರು ,ವ್ಯವಹಾರಿಕ ಗುರು ,
ಸಾಮಾಜಿಕ ಗುರು ,ಆಧ್ಯಾತ್ಮಿಕಗುರು ,ಶಾಲಾ
ಗುರು ,ವ್ಯೆದ್ಯಗುರು , ಆಯಾಕ್ಷೇತ್ರದಲ್ಲಿ 
ಪರಿಣಿತರಾದವರಿಗೆ ಆಯಾ ಕ್ಷೇತ್ರದ ಗುರುಗ
ಳೆ0ದು ಕರೆಯುತ್ತಾರೆ.

ಗುರುಗಳು ಸದಾ ಪೂಜ್ಯನೀಯರು.ಯಾವುದೇ
ಫಲಾಪೇಕ್ಷೇಯಿಲ್ಲದೇ ಮಾರ್ಗದರ್ಶನ 
ಮಾಡುವವರು.ಶಿಷ್ಯನಿತ್ತ "ಗುರುದಕ್ಷಿಣೆ "ಯೇ
ಆತನಿಗೆ ಅಚ್ವು ಮೆಚ್ಚು.

ಗುರುವೇದವ್ಯಾಸರು ,ಗುರುದ್ರೋಣಾಚಾರ್ಯರು
ಗುರುವಸಿಷ್ಟರು ,ಗುರು ಶುಕ್ರಾಚಾರ್ಯರು
ಗುರುವಿನ ಮೇರು ಸ್ಥಾನದಲ್ಲಿದ್ದವರು.
ಪುರಾಣಗಳಲ್ಲಿ ,ವೇದಾ0ತಗಳಲ್ಲಿ ವ್ಯಾಖ್ಯಾನಿ
ಸಿದ ಗುರುವಿನ ಸ್ಥಾನಮಾನ ,ಘನತೆ ,ಕಾರ್ಯ
ಕ್ಷೇತ್ರ ,ಈಗಿನ ಸಾಮಾಜಿಕ ರ0ಗಗಳಲ್ಲಿ
ಕಾಣಸಿಗುವದಿಲ್ಲ.ಗುರುವಿನ ಸ್ಥಾನವನ್ನು
ಮಠಾಧೀಶರು  ಪಡೆದಿದ್ದಾರೆ.ಬದಲಾದ 
ಕಾಲಚಕ್ರಕ್ಕೆ ತಕ್ಕ0ತೆ ಈಗ ಗುರುವು
"ಅ0ತರ್ಜಾಲಗುರು "ವಾಗಿ ಮಾರ್ಪಟ್ಟಿದ್ದಾರೆ.

   ಮನುಷ್ಯ ಎಷ್ಟೇ  ಚಾಣಾಕ್ಷನಾಗಿದ್ದರೂ
,ಭೌತಿಕಗಳನ್ನು ಸ0ಪಾದಿಸಿದ್ದರೂ ಕೊನೆಗೆ
ಆತನಿಗೆ "ಮನ ಶಾ0ತಿ " ಯ ಸೌಭಾಗ್ಯ
ದೊರೆಯದಿದ್ದರೆ ಆತನು ದೌರ್ಭಾಗ್ಯನೇ ಸರಿ.

ಇದನ್ನು ತಡೆಯಲು ,ಇದನ್ನು ಬಾರದ0ತೆ
ಈಗಿನ ಆಧುನಿಕ ಯುಗದಲ್ಲಿಯೂ
"ಮನಶಾ0ತಿ" ಗಾಗಿ ಗುರುವಿನ ಅವಶ್ಯಕತೆ
ಯಿದೆ.
  ಗುರುವಿನ ಮಹಾನ್ನ್ ಚೇತನಗಳಿ0ದಾಗಿ ,
ಆತನಿಗೆ ಗೌರವಪೂರ್ವಕವಾಗಿ ಆದರಿಸಿ
ನೆನೆಯುವ ಹಬ್ಬವೇ "ಗುರುಪೂರ್ಣಿಮೆ ".

No comments: