Friday, August 5, 2016

  "  ಜೀವನದ  ಬೆಲೆ  "

ಜೀವನದ ಬೆಲೆ ಗೊತ್ತಾಗಬೇಕಾದರೆ
ಅತೀ ಶ್ರೀಮ0ತಿಕೆ ಅನುಭವಿಸಿ ದಟ್ಟ ದರಿದ್ರ
ನಾರಾಯಣನಾಗಬೇಕು.  ಇಲ್ಲವೇ   ಸಾವು
ಬದುಕಿನ ನಡುವೆ. ಹೋರಾಟ  ನಡೆಸಿ
ಜೀವ0ತ  ಹೊರ  ಬ0ದಿರಬೇಕು. ಬಹುಶಃ
ಇವರಿಬ್ಬರಿಗೆ  ಮಾತ್ರ "  ಜೀವನ  ,ಜೀವನದ
ಬೆಲೆ , ಮತ್ತು  ಹಣದ  ಪ್ರಭಾವ  ಚೆನ್ನಾಗಿ
ಅರಿವಿರುತ್ತೆ. ಇದು ಒ0ದು ಕಡೆಯಾದರೆ -
ಹುಟ್ಟಿನಿ0ದ ದಾರಿದ್ರ್ಯವನ್ನು  ಅನುಭವಿಸುತ್ತಾ
ಇರುವವರಿಗೆ ಪ್ರಪ0ಚ  ಜ್ನಾನ  , ಲೌಕಿಕ
ಜ್ನಾನ , ಅನುಭವ  - ಇವು. 'ಶೃತಿ -ಸೃತಿ 'ಗಳಲ್ಲಿ
ವರ್ಣಿಸಿದಕ್ಕಿ0ತ ಹೆಚ್ಚು ಶಕ್ತಿಶಾಲಿಯಾಗಿ
ಇವರಲ್ಲಿ ಮನೆ ಮಾಡಿಕೊ0ಡಿರುತ್ತವೆ. ಒ0ದೇ
ಒ0ದು  ದೌರ್ಬಲ್ಯವೆ0ದರೆ  ಈ ವರ್ಗದ
ಜನರಿಗೆ ಹೇಳುವ ರೀತಿ ಗೊತ್ತಿರೋಲ್ಲ.
ಅವಿದ್ಯಾವ0ತರು.ಅಜ್ನಾನಿಗಳಲ್ಲ .
'ಒ0ದು  ರೊಟ್ಟಿಯ ಮಹತ್ವ  ,ಒ0ದು ಹಿಡಿ
ಅನ್ನದ ಮಹತ್ವ , ಒ0ದು ಪುಸ್ತಕದ ಮಹತ್ವ
ಇವು - ಹಸಿವಿನಿ0ದ ಹಸಿದವನಿಗೆ  , ಜ್ನಾನದಿ0ದ
ಹಸಿದವನಿಗೆ ಮಾತ್ರ ಗೊತ್ತು.ಇವರೆಲ್ಲಾ
ಬಲ್ಲವರಾದರೂ ,ಬಲ್ಲಿದವರೆ0ದು ತೋರ್ಪಡಿ
ಸುವ ಇಚ್ಛೆ , ಒಣ ಅಡ0ಬರ , ತ್ಯಾಪಿ -ಟೋಪಿ
ಇವರು ಇಷ್ಟ ಪಡುವದಿಲ್ಲ.

ಪ್ರಪ0ಚದ ಎಲ್ಲಾ ಮಜಲುಗಳನ್ನು ಕ0ಡು ,
ಸ್ಯೆದ್ಧಾ0ತಿಕವಾಗಿ -ಅನುಭವಿಸಿ ಈಗ
ಮೌಲ್ಯಯುತ  ಜೀವನ  ನಡೆಸಲು ಹಾತೊರೆ
ಯುತ್ತಿರುವ  ಮನಸುಗಳಿವು.ಇವರ ಅನಿಸಿಕೆ
ಗಳಿಗೆ ಸಮಾಜ ಬೆನ್ನು ತೋರದೇ -ಸ್ವಾಗತ 
ಕೋರಿದರೆ  ಜೀವನವೆ0ಬ ಆಟದ ಅ0ಗಳವು
ಖುಷಿಯೋ. ಖುಷಿ.

No comments: