Tuesday, August 23, 2016


 " ಕರ್ಮ  "
       --    --   --
       "ದುಡಿತವೇ  ಕರ್ಮ "
        "ಕರ್ಮವೇ  ಶಕ್ತಿ. "
         "ಶಕ್ತಿಯೇ  ಸ0ಘಟನೆ  "
         "  ಸ0ಘಟನೆಯೇ  ದೇಶಸೇವೆ. "
        "  ದೇಶಸೇವೆಯೇ  ಈಶಸೇವೆ  "
           "ಈಶಸೇವೆಯೇ  ಮೋಕ್ಷ ಸಾಧನೆ  ".
        ಯಾವುದೋ ಕೆಲಸಕ್ಕೆ   ,ಕರ್ಮಕ್ಕೆ
ಕುಲಭೇದವಿಲ್ಲ , ಧರ್ಮಭೇದವಿಲ್ಲ ,
ಮೇಲು -ಕೀಳು ಭೇದವಿಲ್ಲ.

   ಯಥಾ ರೀತಿ , ಯಥಾ ಪ್ರಕಾರ 
 "ಬ0ದದ್ದೆಲ್ಲವೂ ಭಗವ0ತನ  ಇಚ್ಛೆ , 
ಭಗವಾನುಗ್ರಹ ,  ಭಗವಾನ ಆದೇಶವೆ0ತಲೂ
ತನ್ನ ಕರ್ಮವನ್ನು ಮಾಡುತ್ತಾ  ಸಾಗುತ್ತಾನೋ ,
ಭಗವಾನ ಅ0ತಹ ಭಕ್ತರನ್ನು  ಯಾವತ್ತಿಗೂ
ಕ್ಯೆ -ಬಿಡುವದಿಲ್ಲ.ಭಗವ0ತ ನಮಗೆ
ಕಾಣಿಸದಿದ್ದರೂ  ನಾವು ಮಾಡುವ ಎಲ್ಲಾ
ಕರ್ಮಗಳನ್ನು ವಿಕ್ಷಿಸುತ್ತಿರುತ್ತಾನೆ.ಆತನ
ಅರಿವಿಗೆ ಬಾರದ ಜ್ನಾನವಿಲ್ಲ.

  ಸಮಾಜದ ನಿ0ದನೆಗೆ ,ಬಹಿಷ್ಕಾರಕ್ಕೆ ,
ಒಳಗಾಗಿಯೂ  -ತಾವು ಲೋಕ ಕಲ್ಯಾಣಾರ್ಥ
ಕ್ಯೆಗೊ0ಡ ಕಾರ್ಯಗಳನ್ನು  ಅ0ಜದೇ ,
ಎದೆಗು0ದದೇ  ಮು0ದುವರೆಸುತ್ತಾ ಸಾಗಿ
ಅ0ತಿಮವಾಗಿ ಜನರೇ ಇವರ ಭೋಧನೆ
ತತ್ವ ,ಸಾಧನೆ ಲೋಕಚಿ0ತನೆ ಮೆಚ್ಚಿ ಇವರನ್ನು
ಮಹಾತ್ಮರನ್ನಗಿ ಮಹಾತ್ಮರ ಸಾಲಿನಲ್ಲಿ
ಗುರುತಿಸುತ್ತಾರೆ.

ಬಸವಣ್ಣ ,ಮಹಾತ್ಮಾಜಿ ,ಸ್ವಾಮಿ ವಿವೇಕಾನ0ದ
,ಪುರ0ದರ ದಾಸರು , 
ಕನಕದಾಸರು ,ರಾಮಕೃಷ್ಣ ಪರಮಹ0ಸರು
ರಾಘವೇ0ದ್ರ ಸ್ವಾಮೀಜಿ ,ಸಾಯಿಬಾಬ
ಇವರೆಲ್ಲಾ ಶ್ರೇಷ್ಟ ಮಹಾತ್ಮರು.
ಆನೆ ನಡೆದು ಬ0ದ ದಾರಿಯೇ ರಾಜಮಾರ್ಗ.
ಎ0ಬ0ತೆ  ಮಹಾತ್ಮರು ಹಾಕಿಕೊಟ್ಟ  ಧರ್ಮ
ಭೋಧನೆಗಳು ,ಚಿ0ತನೆಗಳು ಇ0ದಿಗೂ
ಅಜರಾಮರ.

ನಮ್ಮ ನಡಿಗೆ ಯಾವಾಗಲೂ ಬೆಳಕಿನ
ಕಡೆಗೆ ,ದೀಪದ ಕಡೆಗೆ ಇರಲಿ.

No comments: