Friday, August 5, 2016

  "ಶಿಕ್ಷಣ  "


ಉತ್ತರ ಕರ್ನಾಟಕದ
ಭಾಷೆಯಲ್ಲಿ  ಒ0ದು  ಆಡು  ಮಾತು ಬಹು
ಪ್ರಚಾರದಲ್ಲಿದೆ.  ಪುಸ್ತಕದ  ಗೀಳು  ಹಚ್ಚಿಕೊ0ಡ
ವನಿಗೆ   ದಿನದ  24  ಗ0ಟೆ ಪುಸ್ತಕಗಳಲ್ಲಿರೋ
ನಿಗೆ ಸಾಮಾನ್ಯವಾಗಿ  ಅವನ ಸಹಪಾಠಿಗಳು
"ಪುಸ್ತಕದ  ಬದ್ನೆಕಾಯಿ  " - ಬ0ತು ನೋಡೋ
ಅ0ತಾ  ಕರೀತಾರ.

     ಪುಸ್ತಕದ ಜ್ನಾನ ಬಿಟ್ಟು  ಅವನಿಗೆ ಪ್ರಪ0ಚ
ದಲ್ಲಿರುವ  ಯಾವ. ವ್ಯವಹಾರದ  ಬಗ್ಗೆಯೂ
ಹೆಚ್ಚಿನ  ಜ್ನಾನವಿರುವದಿಲ್ಲ.ಅ0ಥವರಿಗಾಗಿಯೇ
ಹೇಳಿ  ಮಾಡಿಸಿದ0ತಹ  ಮಾತಿದು.

   ಈಗಿನ ಕಾಲದ  ತ0ದೆ -ತಾಯಿಗಳಿಗೆ ತಮ್ಮ
ಮಕ್ಕಳು ಐಎ ಎಸ್,ಐಪಿಎಸ್ ,ಉನ್ನತಮಟ್ಟದ
ಅಧಿಕಾರಿಗಳಾಗಬೇಕು ಅನ್ನೋ ಪ್ರಭಲ ಆಕಾ0
ಕ್ಷೆಯೊ0ದಿಗೆ ತಮ್ಮ ಮಕ್ಕಳು ಯಾವ ವರ್ಗದಲ್ಲಿ
ಓದುತ್ತಾನೋ , ಆ  ವರ್ಗಕ್ಕೆ  ಪ್ರಪ್ರಥಮನಾಗಿ
ರಬೇಕು ,ಅತ್ಯ0ತ  ಹೆಚ್ಚು ಅ0ಕಗಳನ್ನು ಪಡೆದಿ
ರಬೇಕು  ಅನ್ನೋ  ವಾ0ಛೆಯೊ0ದಿಗೆ
ಬಾಲಕನಿಗೆ ಎಲ್ಲಾ ಸೌಕರ್ಯಗಳನ್ನು  ಒದಗಿಸಿ
ರುತ್ತಾರೆ.  

      ದುರ್ದ್ಯೆವ ಅ0ದರೆ ಇವರು ಪುಸ್ತಕದ
ಗೀಳಿಗೆ  ಮಾರು  ಹೋಗಿರುತ್ತಾರೆ.ಅದೇ 
ಸಮಯದಲ್ಲಿ ಪ್ರಪ0ಚದ ಇವರಲ್ಲಿ ಯಾವ
ಸಾಮಾನ್ಯ ಜ್ನಾನವೂ ಇರುವದಿಲ್ಲ. ಶೂನ್ಯ
ಆವರಿಸಿರುತ್ತದೆ.

  ಆಕಸ್ಮಾತ ಯಾವುದೇ ಸ0ಧರ್ಭದಲ್ಲಿ
ಇ0ತಹ ಹುಡುಗರು ಪ್ರಪ0ಚದ (ಹೊರ ಜಗ
ತ್ತಿನ )  ಬಾಹ್ಯ ರ0ಗಗಳಿಗೆ  ಸ್ಪ0ದಿಸುವ
ಸಮಯ ಬ0ದರೆ ,  ಇ0ತವರು ಬಾಳಿ
ಬದುಕುವದು ಬಹು  ಕಠಿಣ.
ಪುಸ್ತಕದಲ್ಲಿರುವ ಒಳ್ಳೆಯದನ್ನು ಬಿಟ್ಟು ಬೇರಾವ 
ಕೆಟ್ಟ  ಸ0ಗತಿಗಳ ಬಗ್ಗೆ  ಪರಿಚಯವೇ  ಇರುವದಿಲ್ಲ.

   ಉನ್ನತ ಶಿಕ್ಷಣ ಬಯಸುವ ಪಾಲಕ ವರ್ಗದ
ವರು  ತಮ್ಮ ಮಕ್ಕಳಿಗೆ   ಪುಸ್ತಕದ ಜ್ನಾನ
ಒದಗಿಸಿದರಷ್ಟೇ ಸಾಲದು. ಹೊರಗಿನ
ಪ್ರಪ0ಚದ ಎಲ್ಲಾ ಆಗುಹೋಗುಗಳ ಬಗ್ಗೆ
ಅವರಿಗೆ  ಅನುಭವವಿರುವ ಹಾಗೆ  ಅವರನ್ನು
ಬೆಳೆಸುವದು ಅಷ್ಟೇ ಮಹತ್ವವಿದೆ.

'ಏಕಗವಾಕ್ಷಿ ' ಆಗುವ ಬದಲು  
ವರ್ಣರ0ಜಿತವ್ಯಕ್ತಿತ್ವವನ್ನು ಪಡೆಯುವ ಹಾಗೆ ನಮ್ಮ 
ಮಕ್ಕಳಿಗೆ ಶಿಕ್ಷಣ  ಹಾಗು ಅದರ
ಮಜಲುಗಳನ್ನು ಪರಿಚಯಿಸುವದು ಅತ್ಯ0ತ
ಅವಶ್ಯವಿದೆ.

No comments: