Sunday, August 7, 2016

 "ಗೆಳೆತನ  "

ಸ್ನೇಹಿತರೆ0ದರೆ  ,
" ಹಾಲು  -  ಜೇನಿನ0ಗಿರಬೇಕು  "
"ಕೊಬ್ರಿ  -- ಬೆಲ್ಲದ0ಗಿರಬೇಕು  "
" ಹೋಳಿಗೆ. --ಶೀಖರಣಿ  ಹಾ0ಗಿರಬೇಕು ".
ಚಾಲ್ತಿಯಲ್ಲಿ  ಗೆಳೆಯರ  ಬಗ್ಗೆ  ಇರುವ 
ಸಿಹಿ -ಅಭಿಪ್ರಾಯಗಳಿವು.
ಒಬ್ಬರ ಮಾತು ಒಬ್ಬರಿಗೆ ಹಿಡಿಸಿದಾಗ
ಒಬ್ಬರ ನಡೆ -ನುಡಿ - ನಡಾವಳಿಕೆ ಇನ್ನೊಬ್ಬರಿಗೆ
  ಹಿಡಿಸಿದಾಗ. , ಒಬ್ಬರ  ಭಾವನೆಗಳು
 ಇನ್ನೊಬ್ಬರ ಭಾವನೆಗಳೊ0ದಿಗೆ  ಸಮೀಕರಣ
ಗೊ0ಡಾಗ ,  ಒಬ್ಬರ  ಅಭಿರುಚಿ -ಇನ್ನೊಬ್ಬರ
ಸಧಭಿರುಚಿಯಾದಾಗ ,ಒಬ್ಬರ ಗೌರವ
ಇನ್ನೊಬ್ಬರ  ಮರ್ಯಾದೆಯ  ಮಾತಾದಾಗ
ಇ0ತಹ ಅನೇಕ ತುಲನಾತ್ಮಕ  ಭಾವನೆಗಳ
ಸಮೀಕರಣದ ಸಮಯ ಬ0ದಾಗ --
ನಿಜವಾದ ಗೆಳೆಯರು ಇನ್ನೊಬ್ಬರ ಆತ್ಮೀಯ
ಸಲಹೆಗಾರರಾಗುತ್ತಾರೆ.
    ವಯಸ್ಸಿನ ,ಅ0ತಸ್ತಿನ , ಜಾತಿಯ ,
ವರ್ಣಭೇಧ , ಉಧ್ಯೋಗ ಭೇಧ ,ವೃತ್ತಿಭೇಧ
ಗಳು ನಿಜವಾದ ಗೆಳೆತನಕ್ಕೆ ಅಡ್ಡಿ ಉ0ಟು
ಮಾಡುವದಿಲ್ಲ.
ಸದ್ಭಾವನೆ ,ಪರೋಪಕಾರಿ ,ಸಹಾನುಭೂತಿ
ಪರಸ್ಪರ ಸಹಾಯ ,ಸೌಹಾರ್ಧತೆ , ಅನುಭೂತಿ
ಇವು ನಿಜವಾದ ಗೆಳೆಯರಲ್ಲಿ  ಮನೆ ಮಾಡಿ
ಕೊ0ಡಿರುತ್ತವೆ.
  ಒಬ್ಬರ ನೋವು - ಇನ್ನೊಬ್ಬರಿಗೆ ಹೃದಯ
ತಳಮಳಿಸುವ0ತಹ ವೇದನೆ ಯಾಗುತ್ತದೆ.
ಎಲ್ಲಿ ಇ0ತಹ ಸ್ಪ0ದನೆ ಕಾಣುತ್ತೇವೆಯೋ
ಅದುವೇ ನಿಜವಾದ 'ಗೆಳೆತನ '.

No comments: