Saturday, August 6, 2016

    "ಆಲೋಚನೆ  "

  ಆಲೋಚನೆಗಳು ಮನುಷ್ಯನ ವ್ಯಯ
ಕ್ತಿಕಕ್ಕೆ ಸೇರಿದವು. ವಿಚಾರಗಳು ವಿಶ್ವದ
ಸಮಷ್ಟಿಗೆ ಸೇರಿದವು.

       ಆಲೋಚನೆ ವಿಚಾರಧಾರೆಯ ಅಭಿವ್ಯಕ್ತಿಯ
ಒ0ದು ಅ0ಗ.ಗುಪ್ತ ಆಲೋಚನೆ ,ಸಮಷ್ಟಿ 
ಆಲೋಚನೆ ,ಸಾಮಾಜಿಕ ಆಲೋಚನೆ ,ಶ್ಯೆಕ್ಷಣಿಕ
ಆಲೋಚನೆ ,ಕೌಟ0ಬಿಕ ಆಲೋಚನೆ  ಹೀಗೆ
ಹತ್ತು -ಹಲವಾರು  ಆಲೋಚನೆಗಳು ಮನುಷ್ಯನ
ಮಿದುಳಿನಲ್ಲಿ ಸುಳಿದಾಡುತ್ತಿರುತ್ತವೆ.
ಮನುಷ್ಯ ಅತೀ ಸೌ0ಧರ್ಯಕ್ಕೆ ,ಕೆಟ್ಟದ್ದಕ್ಕೆ
ಹೆಚ್ಚು ಆಕರ್ಷಿತನಾಗುವದು ಅವನ ಹುಟ್ಟುಗುಣ .
ಇಲ್ಲಿ0ದಲೇ ಮನುಷ್ಯನ ಸಮಾಜ ವಿಕಾಸ
ಪ್ರಾರ0ಭ.ಇದು ಇತಿಹಾಸ.

   ಪ್ರಾಪ0ಚಿಕ ವ್ಯವಹಾರಗಳಲ್ಲಿ  ಮನುಷ್ಯ 
ದ್ವೇಷ ,ಈರ್ಷೆ ಇತ್ಯಾದಿ ಕಾರಣಗಳಿ0ದಾಗಿ
ಮನುಷ್ಯ -ಮನುಷ್ಯನ ಮೇಲೆ ಹಗೆ 
ಸಾಧಿಸುವದು ದ್ವೇಷ ಸಾಧಿಸುವದು ,ಮಾಟ ಮ0ತ್ರ 
,ಮೂಢ ನ0ಬಿಕೆ ,ಬಾನಾಮತಿ ಮಾಡಿಸುವದು
ಇದು ಇ0ದಿಗೂ ಅಲ್ಲಲ್ಲಿ ಕ0ಡು ಬರುತ್ತಿರುವದು
ವದದಿಯಾಗುತ್ತಲೇ ಇದೆ. ಮಹಾನ್ ಮಠಾಧಿ
ಪತಿಗಳು ಕೂಡಾ ಇನ್ನು ಮೌಢ್ಯಗಳಿ0ದ 
ಹೊರ ಬ0ದಿಲ್ಲ.

  ಮನುಷ್ಯ ಬುದ್ಧಿ ಜೀವಿ.ವ್ಯೆಜ್ನಾನಿಕ
ವಾಗಿ ಅತ್ಯುನ್ನತ ಸ್ಥಾನದಲ್ಲಿದ್ದರೂ , ಮನುಷ್ಯನಿಗೆ
ಅಗತ್ಯವಿರುವ ಸೃಜನ ಶೀಲತೆಯ ಮೌಲ್ಯಗ
ಳನ್ನು ಬೆಳಸಿಕೊಳ್ಳಬೇಕಾದ0ತಹ ಅನಿವಾ
ರ್ಯತೆ ಈಗ ಒದಗಿಬ0ದಿದೆ.
  ಸೃಜನಶೀಲತೆ ಕೃಷಿ ಮಾಡುವ0ತಹ
ಆಲೋಚನೆಗಳು ನಮ್ಮ ಜೀವನದ
ಭಾಗವಾಗಬೇಕು.

No comments: