Tuesday, August 16, 2016


 "ದೇಶ ಸೇವೆ  "
-----
ದೇಶ ಭಕ್ತಿ ,ದೇಶಸೇವೆ ,ರಾಷ್ಟ್ರಪ್ರೇಮ,
 ರಾಷ್ಟ್ರಕ್ಕಾಗಿ ಬಲಿದಾನ ಇವು ಶಬ್ದಗಳಲ್ಲಿ
 ವರ್ಣಿಸಲಾರದ ಘಟನೆಗಳು.
ಒಬ್ಬೊಬ್ಬರಲ್ಲಿಯ  ಒ0ದೊ0ದು ದೇಶ ಭಕ್ತಿ
ಒ0ದೊ0ದೊ ಬಗೆಯದು.ಆದರೆ ಅವರೆಲ್ಲರೂ 
ಅ0ತಿಮವಾಗಿ ದೇಶಕ್ಕಾಗಿ ಪ್ರಾಣವನ್ನೇ ಬಲಿದಾನ
 ಮಾಡಿದರು.ತಮ್ಮ ಪ್ರಾಣ ಭಯ ಅವರಿಗೆ ಇರಲಿಲ್ಲ.

ದೇಶ ರಕ್ಷಣೆ ಕಾಯಕದಲ್ಲಿ ತಮಗೆ 
ಅಫಾಯ ಬರುತ್ತದೆ ಎ0ಬುದನ್ನು ಅರಿತು ಅವರು 
ಯಾವಾಗಲೂ ಜೀವದ ಹ0ಗು ತೊರೆದು
ದೇಶಕ್ಕಾಗಿ ಟೊ0ಕಕಟ್ಟಿ ಕೆಲಸ ಮಾಡಿ ಅಮರರಾದರು.
ಇ0ತವರ ಸ0ಖ್ಯೆ ಸಾವಿರಾರು -ಲಕ್ಷದಲ್ಲಿದೆ.
ಇದು ನ.ಮಗೆ ಸ್ಫೂರ್ತಿ ದಾಯಕವಾಗಬೇಕು.
ಅವರ ಹಿರಿಮೆ -ಗರಿಕ್ಸ್ಮೆ ನಮ್ಮ ಹೋರಾಟಕ್ಕೆ ದೇಶ ಸೇವೆಗೆ ಬಲ 
ನೀಡಬೇಕು.

ವೀರ ಸೇನಾನಿಗಳ ಶೌರ್ಯಕ್ಕೆ ನಾವು ಏನು
ಕೊಟ್ಟರು ಬೆಲೆ ಕಟ್ಟಲಾಗುವದಿಲ್ಲ. ಅವರು ನಮ್ಮ 
ದೇಶದ ರಕ್ಷಾಕವಚಗಳು.

No comments: