Monday, August 8, 2016

  "  ನೋವು  ನಲಿವು  "

 ಹೃದಯದ  ಭಾಷೆಯಲ್ಲಿ
ಪ್ರೀತಿ -ಪ್ರೇಮಗಳಿಗೆ  ಸ0ಭ0ಧಿದಿದ0ತೆ
ಅಧಿಕ ಸ0ಖ್ಯೆಯ ನೋವು -ನಲಿವುಗಳ 
ಮಹಾಪೂರವೇ ಹರಿದು ಬ0ದರೂ ,
ನೋವು ನಲಿವುಗಳಿಗೆ ಸ್ಪ0ದಿಸುವ ಜನ
ಹೇಳಿಕೊಳ್ಳುವ0ತಹ  ಲೆಕ್ಕದಲ್ಲಿ ಇರುವದಿಲ್ಲ.
ಇದಕ್ಕೆ ಮುಖ್ಯ ಕಾರಣ ಗ0ಡು -ಹೆಣ್ಣಿನ
ಪ್ರೇಮದಾಟಗಳಿಗೆ ಗಟ್ಟಿಯಾದ ,ಬಲವಾದ
ಆಧಾರಗಳಿರುವದಿಲ್ಲ.ಆಷಾಡದ ಗಾಳಿಗೆ
ಹಾರಾಡುವ ಗಾಳಿ ಪಟದ0ತೆ ಹಾರಾಡಿ -ಹಾರಾಡಿ 
ಕ್ಷಣದಲ್ಲಿಯೇ  ಮುಗ್ಗರಿಸಿ ಬೀಳುವ
ಹಾಗೆ ಇರುತ್ತವೆ.ಕೆಲವೊ0ದು ಪ್ರಕರಣಗಳು
ಹೊರತುಪಡಿಸಿ ಬಹುತೇಕ ಉಳಿದೆಲ್ಲ
ಪ್ರಕರಣಗಳು ಹೀಗೆಯೇ ಇರುತ್ತವೆ.

     ಇನ್ನು ಸಾಮಜಿಕ ,ಔಧ್ಯೋಗಿಕ , ದೃಷ್ಟಿ
ಕೋನದಿ0ದ  ಎರಡು ಮಾತು.
  ನಮ್ಮಲ್ಲಿರುವ ಹೃದಯ ವ್ಯೆಶಾಲ್ಯವನ್ನು
ನಿರುಧ್ಯೋಗಿಗಳಿಗೆ -ಉಧ್ಯೋಗ ಕೊಡಿಸುವಲ್ಲಿ,
ಕೆಲಸ ಇಲ್ಲದವನಿಗೆ -ಕೆಲಸಕೊಡಿಸುವಲ್ಲಿ ,
ಅನ್ನ ಇಲ್ಲದವನಿಗೆ ದುಡಿಯುವ ದಾರಿ
ತೋರಿಸುವ ಮೂಲಕ ನಾವು ಔದಾರ್ಯವನ್ನು
ಮರೆದರೆ ಅವರ ಹೃದಯ -ಮನಸ್ದುಗಳಲ್ಲಿ
ಕೊನೆಯವರೆಗೂ  ದೇವತಾ ಸ್ವರೂಪವಾಗಿ
ಮರೆಯುತ್ತಾರೆ.

   ಪ್ರೀತಿ -ಪ್ರೇಮ ವ್ಯೆಪಲ್ಯಗಳಿ0ದಾದ 
ನೋವು -ನಲಿವುಗಳಿಗಿ0ತ ನಿರುದ್ಯೋಗ
ತಾ0ಡವವಾಡುವ ,ಆದಾಯರಹಿತ ಕುಟು0ಬ
ಗಳಲ್ಲಿ ಎರಡು ಹೊತ್ತು ಊಟ  (ಗ0ಜಿ)
ಸಿಕ್ಕರೆ ಸಾಕೆನ್ನುವ ಸ್ಥಿತಿ ಇರುತ್ತದೆ.ಅನ್ನದ
ಗ0ಟು ಭದ್ರವಾದ ಮೇಲೆ ಉಳಿದ 
ಸಮಸ್ಯೆಗಳು  ಪರಿಹಾರದ ಹಾದಿಯಲ್ಲಿ
ಮೆಲ್ಲ -ಮೆಲ್ಲಗೆ ಸಾಗುತ್ತವೆ.ಯಾವು ನಿಲ್ಲುವುದಿಲ್ಲ.
'ಬದುಕು ಜಟಕಾ ಬ0ಡಿ ' -ಡಿ.ವಿ.ಜಿ ಯವರ
ಮಾತು ನಿತ್ಯ ಸತ್ಯ.

ಒಳ್ಳೆಯ ಮನಸ್ದು ,ಒಳ್ಳೆಯ ಹೃದಯ ,ಒಳ್ಳೆಯ
ಕಾಯಕ ,ಸಜ್ಜನ ಸಾಧುಗಳು ಇದ್ದೇ ಇರುತ್ತಾರೆ.
ಅವರನ್ನು ಹುಡುಕಿ ಕರೆತರಬೇಕು.

No comments: