Sunday, November 15, 2015

    "ದುಡಿಮೆ  "

ದುಡಿಮೆ ಅ0ದರೆ ಕಾಯಕ.
"ಕಾಯಕವೇ ಕ್ಯೆಲಾಸ  "
"ಆಳಾಗಿ ದುಡಿ ಅರಸಾಗಿ ಉಣ್ಣು "
"ದುಡ್ಡೇ ದೊಡ್ಡಪ್ಪ. "
"ದುಡಿಮೆಯೇ ದೇವರು "
 ದುಡಿಮೆ ಕುರಿತು ನುಡಿಮುತ್ತಗಳು.

ಯಾವನಿಗೆ ಹೊಟ್ಟೆ ಹಸಿವಾಗಿರುತ್ತೋ ,
ದುಡಿಮೆ ಬಿಟ್ಟು ಬೇರೆ ಆಧಾರವಿರುವದಿಲ್ಲವೋ,
ಅ0ಥವರು ದುಡಿಮೆಗೆ ವ0ಚಿಸುವದಿಲ್ಲ.
ತಮಗಿರುವ ಕಾಯಕವೇ ಅನ್ನ ನೀಡುವ
ದೇವರೆ0ದು ತಿಳಿದಿರುತ್ತಾರೆ. ಈ ತರಹದ
ಭಾವನೆ ಕಡು ಬಡವರಲ್ಲಿ ಹೆಚ್ಚು. ಇದೇ
ಭಾವನೆಯನ್ನು ಪ್ರಪ್ರಥಮ ನೌಕರಿಗೆ
ಸೇರಿದವರಲ್ಲಿ ಕಾಣುತ್ತೇವೆ. ಅವರಿಗೆ ತಾವು
ಮಾಡುವ ಕೆಲಸ ದೇವರ ಕೆಲಸವೆ0ದು ನಿಷ್ಟೆ
ಯಿ0ದ ಮಾಡುತ್ತರೆ. ಇಲ್ಲಿ ವ0ಚನೆಯೆ0ಬುದು
ಹತ್ತಿರ ಸುಳಿಯುವದಿಲ್ಲ.

ಕಾಲ ಸರಿದ0ತೆ ಸಾಮಾಜಿಕ
ಸ್ಥಾ ನಮಾನ ,ಸಾಮಾಜಿಕ ಲೌಕಿಕ ರ0ಗಗಳಲ್ಲಿ
ಆಗುತ್ತಿರುವ ,ಆದ ಬದಲಾವಣೆಗಳಿ0ದ ಇವನು
ಪ್ರಭಾವಿತನಾಗಿ ,ಬರಬರುತ್ತಾ ಆರ್ಥಿಕ
ಪ್ರಲೋಭನೆಗಳಿಗೆ ದಾಸನಾಗಿ ದುಡಿಮೆಗೆ
ವ0ಚನೆ ಮಾಡುವದು ಮೊದ ಮೊದಲು 
ಬೇಡಾದ ಮನಸ್ಸಿನಿ0ದ ಮಾಡಿದರೂ ,
ಬರಬರುತ್ತಾ , ವ0ಚನೆ ಮಾಡುವದರಲ್ಲಿ
ನಿಸ್ಸೀಮರಾಗುತ್ತಾರೆ.ಇದನ್ನು ಮಾಡುವದು
ತಪ್ಪೆ0ದು ಅವನಿಗೆ ಭಾಸವಾಗುತ್ತಿದ್ದರೂ ,
ತಾನಿರುವ ವಾತಾವರಣ  ಇದನ್ನು ಮಾಡಿ
ಸುತ್ತದೆ. ಈಗ ಸಹಜವಾಗಿ ವ0ಚನೆ ಕೃತ್ಯಗಳು
ಸಾಮಾಜಿಕವಾಗಿ ಮಾನ್ಯತೆ ಪಡೆದಿವೆ. !!
"ಲೋಕೋ ಮಾನ್ಯತಿ ಮಾನ್ಯತಃ."

No comments: