Tuesday, November 24, 2015

"ಸತ್ಯ ಹರಿಶ್ಚ0ದ್ರ  "

ಸತ್ಯ ಹರಿಶ್ಚ0ದ್ರ
ಮನೆ ,ಮಠ  ,ರಾಜ್ಯ
ಎಲ್ಲಾ ಕಳಕೊ0ಡ..
ಎಲ್ಲಾ ಕಳಕೊ0ಡೂ..ಸ್ಮಶಾನ ಕಾಯ್ದ.
ಯಾಕೆ  ...?
ಸತ್ಯಕ್ಕಾಗಿ
ಸತ್ಯವನ್ನು ಅರಸಿ , ಸತ್ಯವನ್ನು  ನ0ಬಿ
ಸತ್ಯಹರಿಶ್ಚ0ದ್ರನಾದ ,ಅಮರನಾದ
ಲೋಕವಿಖ್ಯಾತನಾದ.
ವಿಪರ್ಯಾಸವೆ0ದರೆ...  ..

       ಈಗ
"ಸತ್ಯ" - ಹೇಳಿ -ವಿಷಮ
ಪರಿಸ್ಥಿತಿ ಎದುರಾದಾಗ
"ಏನ್  ಮಗಾ  .
ದೊಡ್ಡ ಹರಿಶ್ಚ0ದ್ರನ್ 
ಮೊಮ್ಮಗ್  ಆಗ್ಯಾನ್.."
ಹರಿಶ್ಚ0ದ್ರ ಸತ್ಯ ಹೇಳಿ
ಸ್ಮಶಾನ ಕಾಯ್ದ
ಹೆ0ಡ್ತಿ ಮಕ್ಕಳನ್ ಕಳ್ಕೊ0ಡ್
ನೆನಪ ಐತಿಲ್ಲ.. ಅ0ತಾ
ಆಡ್ಕೋತಾರ .ಮೂದಲಸ್ತಾರ..
ಅಕಟಕಟ...ಅಕಟಕಟಾ...

No comments: