Wednesday, August 24, 2016

"ದುಡಿಮೆ  "

          "ದುಡಿಮೆಯೇ ದೇವರು  "
           "ದುಡಿಮೆಯೇ  ದೇಶದ  ಸ0ಪತ್ತು ".

                      ದುಡಿಮೆಯಲ್ಲಿ ಭೌತಿಕ
ಶ್ರಮ ಆಧರಿಸಿ ದುಡಿಯುವ ಒ0ದು ವರ್ಗವಿದೆ.
ಇನ್ನೊ0ದು ಭೌದ್ಧಿಕ  ಶ್ರಮವಹಿಸಿ ದುಡಿಯೋರು.

         ಭೌದ್ಧಿಕ ಶ್ರಮವಹಿಸಿ ದುಡಿಯೋರಲ್ಲಿ
ಅವರ ದುಡಿಮೆಯ ಫಲ ನೀರಿಕ್ಷೆಗೂ ಮೀರಿ
ಇರುತ್ತದೆ. ಇವರಲ್ಲಿ ಶ್ರಮವೆ0ಬ ಮಾತು
ಬರುವದಿಲ್ಲ.ಆದರೆ ಬುದ್ಧಿವ0ತರು.

     ಭೌತಿಕ ಶ್ರಮವಹಿಸಿ ದುಡಿಯುವವರಲ್ಲಿ
ದಿನದದುಡಿಮೆಯಾಗಲಿ ,ತಿ0ಗಳ ದುಡಿಮೆ
ವೇತನರೂಪದಲ್ಲಾಗಲಿ ಆದಾಯ ತು0ಬಾ 
ಕಡಿಮೆ. ಅವರ ಆದಾಯ ಅವರ ಕುಟು0ಬ
ನಿರ್ವಹಣೆಗೆ ಸಾಲುವಷ್ಟು ಮಾತ್ರ ಇರುತ್ತೆ.
ಈ ಕುಟು0ಬದಲ್ಲಿ ಯಾರಾದರೂ   ಕಾಹಿಲೆಗೆ
ತುತ್ತಾದರೆ ಬಹಳ ತೊ0ದರೆ ಅನುಭವಿಸುತ್ತಾರೆ.

      ಒ0ದ0ತೂ ನಿಜ.ನಿಜವಾದ ಬದುಕು
ಮತ್ತು ಬದುಕಿನಿ0ದ ನಾವು ಆನ0ದ 
ಸವಿಯಬೇಕಾದರೆ 'ಪರಿಶ್ರಮದ'  ದುಡಿಮೆ
ಯಿ0ದ ಮಾತ್ರ ಎ0ಬುದು  ಅಲ್ಲಗಳೆಯುವ0
ತಿಲ್ಲ.ಇವರಿಗೆ ನಾಳೆಯ ಚಿ0ತೆ ,ಮಕ್ಕಳ
ಚಿ0ತೆ ,ಇನ್ನಿತರ ಗೋಜಲುಗಳ ಬಗ್ಗೆ
ತಲೆಕೆಡಿಸಿಕೊಳ್ಳುವವರಲ್ಲ.ಎಲ್ಲಾ ದೇವರ
ಮೇಲೆ ಭಾರ ಹಾಕಿ'ಹೊಟ್ಟೆ ತು0ಬ ಊಟ 
ಮಾಡಿ ಕಣ್ಣತು0ಬ  ನಿದ್ರೆಗೆ ಜಾರುವವರು
ಈ ವರ್ಗದವರು ಮಾತ್ರ

   ವಿಪರ್ಯಾಸವೆ0ದರೆ ಇವರನ್ನು ನಾವು
ಬಡವರೆ0ದು  ಕರೆಯುತ್ತೇವೆ. ವಾಸ್ತವದಲ್ಲಿ
ಮುಕ್ತ ಮನಸ್ಸಿನ ಶ್ರೀಮ0ತರು.

No comments: