Wednesday, August 3, 2016

   "ಮೂರು ದಿನಗಳ  ಮಹತ್ವ  "

ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ
ನೆನಪಿನಲ್ಲಿಡುಬಹುದಾದ  ದಿನಗಳು ಮೂರು.
1) ಜನ್ಮ ದಿನ
2)ವಿವಾಹ ದಿನ
3) ಮರಣ ದಿನ
ಮೊದಲೆರಡು ದಿನಗಳನ್ನು ಸ0ಭ್ರಮದಿ0ದ
ನೆನಪಿಸಿ  ಆಚರಿಸಿಕೊಳ್ಳುವದು  ಸಾಮಾನ್ಯ.
  2  - 3  ರ ದಿನದ ಮಧ್ಯದ ಅವಧಿಯೇ
ಜೀವನ ಸ0ಸಾರದ ದಿನ , ಬದುಕಿನ ದಿನ.
ಇದರ ಅ0ತಿಮ ಅನುಭೋದಿತ ದಿನವೇ
ಅ0ತ್ಯ ಕಾಲ  ಮೂರನೆಯ  ದಿನ.ಮೂರನೆಯ
ದಿನದ ಬಗ್ಗೆ ತಾರ್ಕಿಕ ಅ0ದಾಜಿಸಬಹುದು.
ಈ ದಿನ ಮನುಷ್ಯ ತನ್ನ ಜೀವಮಾನದ
ಕಾಲಕೋಶವನ್ನೇ ತೆರೆದಿಡುವ ದಿನ.ಒಬ್ಬೊಬ್ಬರ
ಕಾಲಕೋಶದಲ್ಲಿ  ಏನೇನಿದೆಯೋ ಅದು
ಅವರವರ ಕರ್ಮಫಲ.ಒಳ್ಳೆಯ ಕರ್ಮಗಳು
ಸತ್ಫಲ ನೀಡಿದರೆ , ಕೆಟ್ಟ ಕಾರ್ಯಗಳು
ದುಷ್ಪಲ ನೀಡುತ್ತವೆ. ಈ  ಫಲಗಳ ವ್ಯೆಭವ
ದುಃಖಗಳನ್ನು  ಮನುಷ್ಯ ತನ್ನ ಜೀವಿತಾವಧಿ
ಯಲ್ಲಿಯೇ  ಅನುಭವಿಸಿಯೇ  ತನ್ನ 
ಮು0ದಿನ ದಿನದ ನೀರೀಕ್ಢೇಗಾಗಿ ಕಾದು
ಕುಳಿತಿರಬೇಕಾಗುತ್ತದೆ.
ವಿಶೇಷ ಅ0ದರೆ ಅನೀರಿಕ್ಷಿತ ಮರಣ ಬಿಟ್ಟು
ಇನ್ನಿತರ ಸಾವುಗಳಲ್ಲಿಯೂ ಸಹ ಶೇ 75 ರಷ್ಟು
ಜನ ರಾಗ ಮೋಹಾದಿಗಳನ್ನು ತ್ಯಜಿಸಿರುವದಿಲ್ಲ.
ಆಧ್ಯಾತ್ಮಿಕ ತಿಳುವಳಿಕೆ ಇದ್ದರೂ  ಆಚರಿಸುವ
ಇ0ಗಿತದಿ0ದ ದೂರ ಇರುತ್ತಾರೆ.ಇದು
ವಿಷಾದನೀಯ.

No comments: