" ಓ ಮುಖವಾಡಗಳೇ ಕೇಳಿ "
-- - - - - -- -- --
ನವ್ಯ ನಾಗರಿಕತೆಯ ಐತಿಹಾಸದೊಳು
ಭವ್ಯ ಮಾನವತೆಗೆ ಮ0ಕನೆರಚಿ
ಕವಿಯ ಮೃದು ಹೃದಯ ಲೇಖನಿಗೆ
ಗು0ಡು ,ಮದ್ದು ,ಸಿಡಿಲುಗಳ ದ್ರಾವಣ ಭರಿಸಿ
ಸಹೋದರ ಸಹೋದರಿಯರ
ಭೀಕರ ಹತ್ಯೆಯ ದುರ್ವಾತೆಗಳನು
ಕೇಳುತಲಿರುವ ಈ ಕರ್ಣಗಳು
ಭಾರತೀಯ ಕರ್ಣಗಳೇ. ?.
ಶೃತಿ ,ಸೃತಿ ಆಲಿಸಿದ ಕರ್ಣಗಳೇ ? ಪ್ರಶ್ನಿಸಿಕೊ
ಳ್ಳಬೇಕಾಗಿರುವದು ನ್ಯೆತಿಕ ಪತನದ
ಕುರುವು ತಾನೆ ?
ಶಾ0ತಿ ,ಸೌಹಾರ್ಧತೆ ಭಾತೃತ್ವ
ಭಾರತೀಯ ರಕ್ತಗುಣ
ಶೌರ್ಯ ,ಸಾಹಸ ,ಸ್ವಾಭಿಮಾನ ಛಲ
ಭಾರತೀಯ ಜಲಗುಣ
ಓ ತಾಮಸಿಕರೇ ,ಮರೆಯದಿರಿ
ಭಾರತೀಯ ಗುಣಸ0ಪತ್ತಿಗೆ
ಸಾಟಿಯಿಲ್ಲವು ಶಸ್ತ್ರಾಸ್ತ್ರಗಳು !
ಇದಕ್ಕಿರುವದು ಸಾಕ್ಷಿ ಇತಿಹಾಸ
ಇತಿಹಾಸದ ರವಿಕೆ ಬಿಚ್ಚಿ ನೋಡಿ !!
ಜ್ಯೆ ವಿಶ್ವ ಶಾ0ತಿಧೂತೆ ಭಾರತಮಾತೆ .
No comments:
Post a Comment