Sunday, August 7, 2016

  "   ಮನಸ್ಸು "

               ಮನುಷ್ಯ ಬುದ್ಧಿ ಜೀವಿ. ಮನುಷ್ಯನ
ಬುದ್ಧಿಮಟ್ಟ ಆಯಾ ಮನುಷ್ಯನ  ಮಿದುಳಿನ
ಲ್ಲಿರುವ ಜೀವಕೋಶಗಳ ಆಧಾರದ ಮೇಲೆ
  ಜಗತ್ತಿನ ಸ0ಪರ್ಕ -ಸ0ವಹನಗಳಿಗೆ
ಪ್ರತಿಕ್ರಿಯಿಸುತ್ತಿರುತ್ತದೆ. ಮಿದುಳಿನ ' ಆತ್ಮ '
ವೆ0ದೇ ಕರೆಯುವ 'ಮನಸ್ಸು ' ಇದನ್ನು 
ನಿಯ0ತ್ರಿಸುತ್ತಿರುತ್ತದೆ.
      ಮನುಷ್ಯನ  ಅಪಾರವಾದ ಮನಸ್ಸಿನ
ತರ0ಗಗಳ ಆಧಾರದ ಮೇಲೆ ಇ0ದಿನ
ಜೀವಜಗತ್ತು , ವ್ಯೆಜ್ನಾನಿಕ ಜಗತ್ತು ನಿ0ತಿದೆ.
  ಮನಸ್ದು --ಕ್ರಿಯೆಗಳ ಹೃದಯ. ಕ್ರಿಯೆಗಳನ್ನು
ನಿಯ0ತ್ರಿಸುವ ಹೃದಯ  -ಸದಾಕಾಲ ಒಳ್ಳೆಯ
ಪರಿಸರ ,ಚಿ0ತನೆ ,ಕಾಯಕ , ಸಮಾಜಕಲ್ಯಾಣ
ಜೀವ ಜಗತ್ತುಗಳ ಕಲ್ಯಾಣಕ್ಜಾಗಿ ದುಡಿಯುವ0ತೆ
ಬೀಜ -ಭಿತ್ತಿ ಬೆಳಸಿ ಒಳ್ಳೆಯ ಸ0ಪದ್ಭರಿತ
ಫಲವನ್ನು ಪಡೆಯುವುದೇ  --ಮುಖ್ಯ ಕಾರ್ಯ
ವಾಗುತ್ತದೆ.ಸಮಾಜಮುಖಿಯಾಗಿರುವವರು
ಚಿ0ತಿಸಬೇಕು.
      ಮನಸ್ಸಿನ ಇನ್ನೊ0ದು ಕಾರ್ಯ ದುರ್ಗುಣಗ
ಳನ್ನು  -ಪ್ರಚೋದಿಸಿ ಜಗತ್ತಿಗೆ 'ಅಮ0ಗಳ '
ವು0ಟು ಮಾಡುವ ಕಾರ್ಯಗಳನ್ನು ಮಾಡುತ್ತಿ
ರುತ್ತದೆ. ಇದನ್ನು ಬೆಳೆಯಗೊಡದ0ತೆ
ಚಿವುಟಿ ಹಾಕುವದು ಸಮಾಜದ ಗಣ್ಯರ 
ಕರ್ತವ್ಯವಾಗಿದೆ.
   ದೇವರು -ಮಿದುಳನ್ನು ಸೃಷ್ಟಿಸಿ  ,ಬುದ್ಧಿ -
ಮನಸ್ಸು ಎಲ್ಲವನ್ನು ಮನುಷ್ಯನಿಗೆ ನೀಡಿದ್ದಾನೆ
ಅದರ0ತೆ ಆಯ್ಕೆಯೂ  ನೀಡಿದ್ದಾನೆ.
ಸನ್ಮಾರ್ಗ -ದುರ್ಮಾರ್ಗ ಇವೆರಡರಲ್ಲಿ ಒ0ದರ
ಆಯ್ಕೆ ಮನುಷ್ಯನಿಗಿದೆ.

No comments: