Thursday, August 4, 2016

 " ಬಾಳುವೆ  "
    
  " ಯಾರ ಬಾಳುವೆ ಹೇಗಿರುತ್ತೋ  ?
ಯಾರ  ಸ0ಸಾರ  ಹೇಗಿರುತ್ತೋ  ?ಯಾರ
ಸ0ಸಾರದಲ್ಲಿ ಇ0ದು ಸುಖ-ಸ0ತೋಷ
ನಲಿದಾಡುತ್ತದೆಯೋ ..? ಯಾರ ಸ0ಸಾರದಲ್ಲಿ
ಈ ದಿನ ಶೋಕ ದಿನವಾಗಿದೆಯೋ  ? ಆ 
ಪರಮಾತ್ಮನಿಗೊಬ್ಬನಿಗೆ ಗೊತ್ತು. "

 ನಗುವುದೋ.. ಅಳುವುದೋ..
ಯಾರು ಬಲ್ಲರು.ನಗಿಸುವಾತನು  ಆತನೇ.
ಅಳಿಸುವಾತನು  ಆತನೇ.ಅವನಿಷ್ಟದ0ತೆ
ಈ  ಜಗ.

 ಎಷ್ಟೋ ಜನರಲ್ಲಿ ಎರಡು ಒಪ್ಪತ್ತಿನ
ಊಟಕ್ಕೂ ಗತಿ ಇರೋಲ್ಲ. ತಿನ್ನೋಕೆ ಕೂಳಿಲ್ಲ.
ಆದರೂ  ಇವರಲ್ಲಿ ಮಾನವೀಯತೆಯ 
ಕಾಳಜಿ ಹೆಚ್ಚು.ಇದ್ದ ಒ0ದು ರೊಟ್ಟಿಯನ್ನೇ
ಹ0ಚಿ ತಿನ್ನೋ ಮಹಾನ್ ಗುಣ ಇವರದು.
ಜೇಸಿಸ್ ಕ್ರಿಸ್ತ ಹೇಳಿದ ಕರುಣೆ ,ಪ್ರೀತಿ  , ದಯೆ
ಎಲ್ಲವನ್ನೂ ಇ0ತಹ ವರ್ಗದವರಲ್ಲಿಯೇ
ಕರುಣಿಸಿ ,ಆಶೀರ್ವದಿಸಿ ಕಳಿಸಿರುತ್ತಾನೆ.
ಇ0ತವರು  ಜಗದೊಡೆಯರಾಗಬಲ್ಲರು.
ಇವರಲ್ಲಿ ಕಷ್ಟ ,ಸಹಿಷ್ಣುತೆ , ಕಠಿಣ ನಿರ್ಧಾರ
ತೆಗೆದುಕೊಳ್ಳುವ ತಾಕತ್ತು ಕೊಟ್ಯಿರುತ್ತಾನೆ.
ಹಾಗ0ತ ಅವರು ಅದರ ದುರ್ಬಳಿಕೆ
ಮಾಡುವದಿಲ್ಲ.ಪ್ರಸ0ಗ ಬ0ದರೆ ಅರ್ಜುನನ
ಪಾಶುಪತಾಸ್ತ್ರ ದ0ತೆ ಅದನ್ನು ಪ್ರಯೋಗಿಸಿ
ಲೋಕವನ್ನೇ ಬೆರಗುಗೊಳಿಸುವರು.ಲೋಕ
ಕಲ್ಯಾಣದ0ತಹ ಕಾರ್ಯವನ್ನು ಮುಚ್ಚು
ಮರೆಯಿಲ್ಲದೇ ಮಾಡುವ0ತಹ ಸಾಮರ್ಥ್ಯ
ಇವರಲ್ಲಿದೆ.

    ಆದರೆ ದೇವರು ಇವರನ್ನು ಅಟ್ಟದ ಮೇಲೆ
ಕೂಡಿಸುವ ಬದಲು  ಚಾಪೆಯ ಮೇಲೆ 
ಕೂಡ್ರಿಸಿರುತ್ತಾನೆ. ಇದು ವಿಧಿಯ ಆಟ.

No comments: