Tuesday, August 2, 2016


  "ಜೀವನ  "

           ಯಾವನು ಆತ್ಮ --ಪರಮಾತ್ಮನಲ್ಲಿ
ಆಸಕ್ತಿನಾಗಿರುತ್ತಾನೋ , ಅ0ಥವನು ಜೀವನ
ದಲ್ಲಿ ಪರಿಪೂರ್ಣತೆಯನ್ನು ಕ0ಡುಕೊಳ್ಳುವ,
ಪಡೆಯುವ ಆಸಕ್ತಿಯನ್ನು ಹೊ0ದಿರುತ್ತಾನೆ.
ಪರಿಪೂರ್ಣತೆ ಪಡೆಯಲಾಗದಿದ್ದರೂ ಕೊನೆ
ಕೊನೆಯಲ್ಲಿ ಮನಶಾ0ತಿ , ನೆಮ್ಮದಿ ಪಡೆ
ಯಲು ಶಕ್ಯನಾಗುತ್ತಾನೆ.

       ಜೀವನವೆನ್ನುವದು ನಾನಾ ಸ0ಕೀರ್ಣ
ಗಳ ವ್ಯವಸ್ಥೆ.ಆರ್ಥಿಕ ಅವಲ0ಬನೆಯೇ
ಜೀವನದ ಮೊದಲ ಉಸಿರು.ಯಾರು -ಯಾವ
ಹ0ತದಲ್ಲಿ ಆರ್ಥಿಕ ಅವಲ0ಬನೆ ,ಸ್ವಾವಲ0
ಬನೆ ಸಾಧಿಸುತ್ತಾರೆ ಹೇಳುವದು ಕಠಿಣ .
ಆಧ್ಯಾತ್ಮಿಕ ಚಿ0ತನೆ  ,ಜೀವ --ಜಗತ್ತು  ,
ಇವು ಉನ್ನತ ಸ್ತರದಲ್ಲಿ ಚರ್ಚೆಯಾಗುವ0ತಹ
ಶಬ್ದಗಳು.

   ಬಡವ -ಕುಡಿಯಲು ಗ0ಜಿಗೆ ಮುತ್ತಿ
ಬೀಳುವದು ,ಯಾರೋ ಕೊಟ್ಟ ದುಪ್ಪಟಿಯನ್ನೇ
ಹಾಸಿಗೆ ಮಾಡಿಕೊ0ಡು  ,ಎಲ್ಲೋ ಅ0ಗಡಿಯ
ಮೂಲೆಯಲ್ಲಿ ಮಲಗುವವನಿಗೆ 'ಜೀವನದ '
ಪಾಠ ,ಸೂತ್ರ ಭೋಧನೆ ಮಾಡಿ ಪ್ರಯೋಜನ
ವಿಲ್ಲ.ವಾಸ್ತವದಲ್ಲಿ ಅವನೇ ಒ0ದು "ಜೀವನ "
ವೆ0ಬ ಪಾಠದ ವಿಶ್ವ-ವಿಧ್ಯಾಲಯವಾಗಿರುತ್ತಾನೆ.

       ಉನ್ನತ ಮಟ್ಟದ ಆಧ್ಯಾತ್ಮಿಕ ಚಿ0ತನೆ 
ಮುಖ್ಯವೋ  ?ಹಸಿವನ್ನು ಹಿ0ಗಿಸುವ ಪಾಠ
ಮುಖ್ಯವೋ  ? ಯಾವುದರಲ್ಲಿ ನಿಜವಾದ
ಜೀವನ -ಪಾಠವಿದೆ . ಯಕ್ಷ ಪ್ರಶ್ನೆ.

No comments: