Thursday, August 11, 2016

  "  ಸೇವೆ  "

" ಫಲಾಪೇಕ್ಷೆಯಿಲ್ಲದೇ ಮಾಡುವ
    ಸೇವೆ ಭಗವ0ತನ  ಸೇವೆ  "
" ದೀನರಲ್ಲಿ ಭಗವ0ತನನ್ನು  ಕಾಣು  "
"  ಆ  ಸೇವೆ  ಈ  ಸೇವೆ  ಎನಬೇಡ
   ಕಸರು ತೆಗೆದು ಹಸಿರು ನೆಟ್ಟವನೇ
   ನಮ್ಮ ಅಣ್ಣ ಕಾಣೋ.. "

       ಸೇವೆ & ಕಾಯಕ ಇವೆರಡೂ ಜಗತ್ತಿನ
ಲ್ಲಿಯೇ  ಅತ್ಯ0ತ ಮಹೋನ್ನತ ಮಾನವ
ಕಲ್ಯಾಣ ,ಸೇವೆಗಾಗಿ ಮೀಸಲಿರಿಸಿದ0ತಹ
ಕರ್ಮ ಸಾಧನೆಗಳು

ಏಸುಕ್ರಿಸ್ತ ,ಬಸವಣ್ಣ , ಪ್ಲಾರೆನ್ಸ ನ್ಯೆಟಿ0ಗೇಲ್
ಮಹಾತ್ಮಾಗಾ0ಧೀಜಿ ,ಬುದ್ಧ ,ಮದರ-ಥೆರೆಸ್ಸಾ
ಅರವಿ0ದ ಘೋಷ ,ಸೇರಿದ0ತೆ ಅನೇಕರು
ಸೇವೆ ಮತ್ತು ಕಾಯಕದ ಮಹತ್ವವನ್ನು ಜಗ
ತ್ತಿಗೆ ತಿಳಿಸಿಕೊಟ್ಟರು.

  ರೋಟರಿ ಕ್ಲಬ್ಬ್ ,ಲಾಯನ್ಸ ಕ್ಲಬ್ಬ್ ,ವಿಶ್ವಸ0ಸ್ಥೆ.
ವಿಶ್ವ ಆಹಾರ ಸ0ಸ್ಥೆ ,ಶಾ0ತಿಪಡೆ , ಸ0ಸ್ಥೆಗಳು
ಈ ಸೇವೆ ಕಾಯಕಗಳನ್ನು  ಜಗತ್ತಿನ ಅನೇಕ
ರಾಷ್ಟ್ರಗಳಲ್ಲಿ  ಈಗಲೂ ಮು0ದುವರೆಸುತ್ತಲೇ
ಇವೆ.

ದೇಶಿಯ ಮಟ್ಟದಲ್ಲಿ ಬ್ರಹತ್ ಮಠಗಳು
ದಾಸೋಹ ರೂಪದಲ್ಲಿ ಕಾಯಕವನ್ನು
ನಡೆಸುತ್ತಿದ್ದರೆ  ಅನೇಕ ಟ್ರಸ್ಟಗಳು ಉಚಿತ
ಶಿಕ್ಷಣ ನೀಡುತ್ತಿವೆ.

ಸೇವೆ ಮತ್ತು ಕಾಯಕ ಎರಡು ಮನುಷ್ಯನಲ್ಲಿಯ
ಅಹ0ಕಾರವನ್ನು ಹೊರದೂಡುವ ಸಾಧನಗಳು.
'ಯಾರಲ್ಲಿ ಆಸಕ್ತಿ ಇದೆಯೋ , ಅವರು ಈ
ಕಾಯಕದಲ್ಲಿ ನಿರತರಾಗಿ ಮಹೋನ್ನತ
ಸಮಾಜ ಕಲ್ಯಾಣ ಸೇವೆಯಲ್ಲಿ  ಭಾಗಿಯಾಗುವ
ಭಾಗ್ಯದಾತರಾಗಬಹುದು.

No comments: