Friday, February 19, 2016

 "ಪ್ರಾರ್ಥನೆ  "

ಪ್ರಾರ್ಥನೆಯಲ್ಲಿ ನಾನಾ ಬಗೆಯ
ಪ್ರಾರ್ಥನೆಗಳಿವೆ. ಸ್ವಾರ್ಥ ಪರ ಪ್ರಾರ್ಥನೆ.
ನಿಸ್ವಾರ್ಥ ಪರ ಪ್ರಾರ್ಥನೆ.

      ನನ್ನ ಹೆ0ಡತಿ ಸುಖವಾಗಿರಬೇಕು ,
ನನ್ನ ಕುಟು0ಬ ಸುಖವಾಗಿರಬೇಕು ,ಇವತ್ತು
ವ್ಯಾಪಾರ ಚೆನ್ನಾಗಿ  ನಡೆಯಲಿ , ನಾನು  3
ಅ0ತಸ್ತಿನ ಒಡೆಯನಾಗಬೇಕು ,ನನ್ನ
ದಾಯಾದಿಗಳು ನನ್ನ ಮಾತು ಕೇಳಬೇಕು.
ನನಗಾರು ವ್ಯೆರಿಗಳು ಇರಬಾರದು , ಇದು 
ಸ್ವಾರ್ಥ ಪರ. ಇದರಲ್ಲಿ ತನ್ನ ಹಾಗು ತನ್ನ 
ಕುಟು0ಬದ ಹಿತಾಸಕ್ತಿಯೇ ಮುಖ್ಯ.ಆ 
ಹಿತಾಸಕ್ತಿಗಾಗಿಯೇ ಪ್ರಾರ್ಥನೆ.ದೇವರ 
ಪ್ರಾರ್ಥನೆಯ ರೂಪದಲ್ಲಿ ನೂರೆ0ಟು ಸೇವಾರ್ಥ
ಕಾರ್ಯಕ್ರಮಗಳನ್ನು ಹಮ್ಮಿಕೊ0ಡು ತನ್ನ 
ವ್ಯಯಕ್ತಿಕ ಭಕ್ತಿಯ ಭೌತಿಕ ಪರಾವಶೆಯನ್ನು
ಜನರಲ್ಲಿ ಪ್ರದರ್ಶಿಸಿ ಅದರ ಲಾಭ ಪಡೆದುಕೊಳ್ಳುವದಾಗಿದೆ.
ರೋಗಿಗಳ ಸೇವೆ , ಟ್ರಸ್ಟ  ರಚಿಸುವದು , ಟ್ರಸ್ಟ
ಮುಖಾ0ತರ ಅನೇಕ ವಿದ್ಯಾಲಯಗಳ ಸ್ಥಾಪನೆ 
ಅನಾಥಾಶ್ರಮ ,ವೃದ್ಧಾಶ್ರಮ ಆಸ್ಪತ್ರೆ ,ಧರ್ಮ
ಪ್ರಚಾರ -ಸತ್ಸ0ಗ್ ಇ0ತಹ ಸಾಮಾಜಿಕ 
ಜನಪರ ಹಿತ ,ಶ್ರೇಯಸ್ಸು  ಬಯಸುವ
ಕಾರ್ಯಕ್ರಮಗಳು ,ಲೋಕಶಿಕ್ಷಣಕಾರಕವಾಗಿವೆ.
ಲೋಕೋದ್ಧಾರಕ್ಕಾಗಿ ತಮ್ಮ ಜೀವನವನ್ನು
ಮುಡಿಪಾಗಿಟ್ಟುಕೊ0ಡು ಮಾನವ ದೀನದಲಿತರ
ಸೇವೇಯೇ ಇವರ ಪರಮ ಗುರಿಯಾಗಿದೆ.
ಇವರು ಏನೊ0ದು ಮಾಡಿದರೂ ಜಗತ್ಕಲ್ಯಾ
ಣಕ್ಕಾಗಿಯೇ ಇರುತ್ತದೆ.

ಈ ತರಹ ಪ್ರಾರ್ಥನೆಗಳಲ್ಲಿ  ಯಾವ
ಪ್ರಾರ್ಥನೆ ಮಾಡಿದರೂ,ಆ ದೇವನ  ಆಶಿರ್ವಾದ
ದೇವಕೃಪೆ ಅವರವರ ಜಗತ್ಕಲ್ಯಾಣದ
ಸೇವೆಯ ಶ್ರೇಣಿಯ ಮೇಲೆ ಅವಲ0ಬಿತವಾಗಿರುತ್ತದೆ.
ನಿಷ್ಕಾಮ  ಸೇವನೆ
ಮುಕ್ತಿಗೆ ಸಾಧನೆ....!
ಇದು ಮಾತ್ರ ಸತ್ಯ

No comments: