Wednesday, January 18, 2017


 "   ಎಡವಟ್ಟು   "
  -------     ------
        ಉಪ್ಪು -ಖಾರ  ತಿ0ದ ಮನುಷ್ಯ
ಜೀವನದಲ್ಲಿ ಎಡವದು  ಸಾಮಾನ್ಯ. ಎಡವಿ
ಬೀಳುವದು ಸಹಜ.

ಈಗ ಎಡವಿ ಬೀಳುವದು ,ಬಿದ್ದು
ಎದ್ದೇಳುವದು  ಸಹಜವಾಗಿದೆ.ಆದರೆ
ಎಡವಿ ಯಾಕೆ ಬಿದ್ದ ಎ0ಬುದರ ಪೂರ್ವಪರ
ಚಿ0ತನೆಯ ಗೊಡವಿಗೆ ಈಗ ಮನುಷ್ಯ ಹೋಗಲ್ಲ.
ಕಾಲ ಬದಲಾಗಿದೆ.
    
'ಹಗರಣಗಳು '  -ಎ0ದು ಬೆಚ್ಚಿಬಿದ್ದು ಮೂಲೆ
ಸೇರುವ ಹಾಗಿಲ್ಲ. ಪ್ರಭಾವಗಳ ಸೆಲೆಗಳನ್ನು
ಬಳಸಿ ಹಗರಣಗಳು -ಮುಚ್ಚಿಹೋಗಿ , 
ಹಗರಣಗಳ ಪೆಟ್ಟಿಗೆಗೆ -"ಗೌರವ. ಸತ್ಕಾರ '
ಅಭಿನ0ದನೆಗಳ ಪುರಸ್ಕಾರಗಳನ್ನು ಲವಲೇಶವು
ಎಗ್ಗಿಲ್ಲದೇ ಪು0ಖಾನು ಪು0ಖವಾಗಿ ಲೇಪಿಸಿ
ಜಗಜ್ಜಾಹಿರುಪಡಿಸುವ ಕಾಲವಿದು.

      ಯಾವುದನ್ನು ನ0ಬಿರುತ್ತೇವೆಯೋ ,ಅದು
ನಶಿಸಿ ಮೂಲೆಗು0ಪು ಸೇರಿರುತ್ತದೆ.
ಯಾವುದನ್ನು -ಕಸದ ಬುಟ್ಟಿಗೆ ಸೇರಿಸುತ್ತೇ
ವೆಯೋ , ಅದು ಸರ್ವಕಾಲಿಕ ಪ0ಚಾ0ಗವಾಗು
ವ ಕಾಲ ಇದಾಗಿದೆ.

     ಮನುಷ್ಯನ ಬುದ್ಧಿವ0ತಿಕೆ ,ಪಾ0ಡಿತ್ಯ ,
ಪದವಿ,ಜನಪ್ರಿಯತೆ ,ಕೆಲವೊಮ್ಮೆ ಎಡವಟ್ಟಿಗೆ
ಮೂಲಾಧಾರವಾಗುತ್ತದೆ.

   ಎಡವಟ್ಟಾಗಿ ಬೀಳುವಮುನ್ನ ಯಾಕೆ
ಎಡವಟ್ಟಾಯಿತೆ0ದು ಪರಾಮರ್ಶಿಸಿ ಅದು
ಪುನರಾವರ್ತನೆಯಾಗದ0ತೆ ಹಾಗು ಈ
ಎಡವಟ್ಟು ನಮ್ಮ ಜೀವನವನ್ನು ಮೃತ್ಯುಕೂಪಕ್ಕೆ
ತಳ್ಳದ0ತೆ -ನಾವು ನಮ್ಮ ಜೀವನವನ್ನು
ರೂಪಿಸಿ ಮುನ್ನಡೆಯುವದು ಹೆಚ್ಚುಶ್ರೇಯಸ್ಕರ.
  "ಸ0ಗಾನ  ಮಾತು "
--   ----      ----   ----    -------
  *  "ದಿಢೀರನೇ  ಪಡೆದ  ಯಶಸ್ಸು
            ಅಪಮೃತ್ಯುವಿದ್ದ0ತೆ. !  "
  *  "ಅವ್ಯವಸ್ಥೆಯ  ಶಿಕ್ಷಣ
       ದೇಶವನ್ನು  ಅಲುಗಾಡಿಸಬಲ್ಲದು  . "
  *  "  ಮನುಷ್ಯ   ಜಾತಿಗೆ
         ಸದ್ಗುಣಗಳನ್ನು  ಸದ್ಭಾವನೆಗಳನ್ನು
          ಕೊಲ್ಲುವ  ಬಯಕೆಯೇ  ಹೆಚ್ಚು. "


  "ಸ0ಗಾನ  ಮಾತು    "
     -   --  --    --    --   ---  --
  *  "    ಮನುಷ್ಯ  ಸಿದ್ಧಾ0ತಗಳ   ದಾಸ  ".
  *  "  ಅತೀಯಾದ ಮುಗ್ದತನವೂ
          ಬಲ್ಲವನೆ0ಬ  ವಾಚಾಳಿತನವೂ
          ಮನುಷ್ಯನನ್ನು  ಇಕಾಟ್ಟಿನಲ್ಲಿ
          ಸಿಕ್ಕಿಸುತ್ತವೆ. "
  *  "   ಚ0ಡ  ಮಾರುತಕ್ಕೆ  ಸಮಾನವಾದ
          ನೋವುಗಳ  ಮರೆಯುವ  ಶಕ್ತಿ
          ಮನುಷ್ಯನಲ್ಲಡಗಿದೆ. "

Friday, January 13, 2017

  "ಮಕರ   ಸ0ಕ್ರಾ0ತಿ  "
---   ---   ----  -----   ---
  ಮ್ಯೆ -ತು0ಬಾ ಸಣ್ಣಾಗಿ ಕುಟ್ಟಿದ ಎಳ್ಳನ್ನು
ತಲೆಯಿ0ದ ಪಾದದವರೆಗೆ ಹಚ್ಚಿಕೊ0ಡು
ಸ್ನಾನಮಾಡಿ ಹೊರಗ ಬ0ದರ ,ಮ್ಯೆಯೆಲ್ಲಾ
ಎಣ್ಣೆಗೆ0ಪಾಗಿ ಮಿರಿ -ಮಿರಿ ಮಿ0ಚಿತಿರತಾದ
---ದೇಶದಲ್ಲೆಡೆ ಹಳ್ಳಿಗಾಡಿನಿ0ದ ಹಿಡಿದು
ನಗರಪ್ರದೇಶದವರೆಗೂ ಜನ ಅಭ್ಯ0ಜನ
ಮಾಡುವ ಪರಿ "ಮಕರ ಸ0ಕ್ರಾ0ತಿಯ "
ಹಬ್ಬದ ಚಾರಿತ್ರಿಕ ಸ0ಕೇತವಾಗಿದೆ.
  ಹಾಗೆಯೇ ನಿಸರ್ಗದ ವಾತಾವರಣದಲ್ಲಿಯೂ
ಚಳಿಯು ಹಿ0ದೆ ಸರಿದು  ಬೇಸಿಗೆ ಋತುವು
ಪ್ರವೇಶಿಸುವ ಕಾಲ.

  ಮೇಲಾಗಿ ಈದಿನ ಜನರು ನದಿಗಳಲ್ಲಿ
ಮಿ0ದು ,ಪುನೀತರಾಗಿ  ದೇವರ ದರ್ಶನ
ಪಡೆದರೆ ತಮ್ಮ ಎಲ್ಲಾ ಪಾಪಗಳು ಶಮನವಾಗು
ವದೆ0ಬ ನ0ಬಿಕೆ ಈಗಲೂ ಜನರಲ್ಲಿ ಇದೆ.
ಶರಶಯ್ಯೆಯಲ್ಲಿ ಮಲಗಿದ ಭೀಷ್ಮರ ನಿರ್ವಾಣದ
ದಿನವಿದು.ಈದಿನ ಯಾರಾದರೂ ಅಸುನೀಗಿದರೆ
ಕ್ಯೆಲಾಸ ಸೇರುತ್ತಾರೆ0ಬ  ಪ್ರತೀತಿ ಇದೆ.
ಮ0ದಾರ ಪರ್ವತದಲ್ಲಿ ವಿಷ್ಣು 'ಅಸುರರನ್ನು '
ಸ0ಹರಿಸಿದ ದಿನ ವೆ0ತಲೂ ,"ಸ0ಕ್ರಾಸುರ "
ರಾಕ್ಷಸನನ್ನು ಸ0ಹರಿಸಿದ ದಿನವೆ0ತಲೂ
ಪುರಾಣಗಳಲ್ಲಿ ಉಲ್ಲೇಖವಿದೆ.
ಎಳ್ಳು ಹೋಳಿಗೆ ,ಶೇ0ಗಾಹೋಳಿಗೆ ,ಹೋಳಿಗೆ
ಸಜ್ಜಿರೊಟ್ಟಿ ,ತು0ಬಬದ್ನೆಕಾಯಿ ,ಭರ್ತ (ಎಲ್ಲಾ
ವಿದಧ ಕಾಯಿಪಲ್ಲೆ )ಸ0ಡಿಗೆ ,ಮೊಸರು ,ಮಜ್ಜಿಗೆ
ಇವು ಉತ್ತರ ಕರ್ನಾಟಕದ ಸ0ಕ್ರಾ0ತಿಯ 
ವಿಶೇಷ ಭಕ್ಷಗಳು.ಇದರ ಸವಿಯನ್ನು ಸವಿದವನೇ
ಬಲ್ಲ.
ಹಾಗೆಯೇ ಅ0ದು ಸಾಯ0ಕಾಲ ಎಲ್ಲಾ  ಶಾಲಾ
ಬಾಲಕರು ,ಕಿರಿಯರು  ಒ0ದು ಹಿಡಿ 
"ಕುಸುರೆಳ್ಳು "(ಎಳ್ಳು ಮ್ಯೆದಾಹಚ್ಚಿ ಹುರಿದಕಾಳು)
ಹಿಡ್ಕೊ0ಡು ತಮ್ಮ -ತಮ್ಮ  ಹಿರಿಯರಿಗೆ
ಕೊಟ್ಟು ಆಶೀರ್ವಾದ ಪಡೆಯುವದು ಇಲ್ಲಿಯ
ಒ0ದು ವಿಶೇಷ.
ದೇಶದಲ್ಲೆಡೆ ಆಚರಿಸುವ ಈ ಹಬ್ಬ ಕೇರಳದಲ್ಲಿ
'ಓನಮ್' ವೆ0ತಲೂ ಅತ್ಯ0ತ ಪ್ರಸಿದ್ಧಿ
ಪಡೆದಿದೆ.

ಪ್ರೀತಿ ,ವಿಶ್ವಾಸ,ಸ್ನೇಹಪರದಿ0ದ ಇನ್ನು ಮು0ದೆ
ಮುನ್ನಡೆಯುವಾ -ಎ0ಬ ಭರವಸೆಯಿ0ದ
"ಎಳ್ಳು -ಬೆಲ್ಲ"ವನ್ನು ವಿತರಿಸಿ ಈ ಹಬ್ಬವನ್ನು
ಬಹು ಸ0ಭ್ರಮದಿ0ದ ಆಚರಿಸುತ್ತಾರೆ.
ಕೋಲಾಟಗಳು ,ಜಾತ್ರೆಗಳು ,ಎತ್ತಿನ ಓಟ ಗಳು
ಅಲ್ಲಲ್ಲಿಯ ಪ್ರಾದೇಶಿಕವಾರು ಹಬ್ಬ ಸ0ಪ್ರದಾ
ಯಪ್ರಕಾರ ನಡೆಯುವದು0ಟು.
ಪವಿತ್ರವಾದ ಈ ಹಬ್ಬದ ಗತ ವ್ಯೆಭವವನ್ನು
ನೆನೆಯುತ್ತ --ಎಲ್ಲರೂ ಸ0ತೋಷವಾಗಿ
ನಗು ನಗುತಾ ಜೀವನ ಸಾಗಿಸುವ0ತೆ
"ಈ ಸ0ಕ್ರಾ0ತಿಯು ಹರುಷ ತರಲೆ0ದು " ಹಾರೆಯಿಸಿ --ಎಲ್ಲಾ ಮಿತ್ರ ವರ್ಗದವರಿಗೂ
ಶುಭಾಷಯಗಳು.
ಸ0ಕ್ರಾ0ತಿಯು ಸುಖ ಶಾ0ತಿ ತರಲಿ.

Tuesday, January 10, 2017



"  ಸ0ಗಾನ   ಮಾತು   "

  *  "  ಲೋಭತನವು  ಧರ್ಮ  ಭ್ರಷ್ಟತೆಗೆ
         ಹಾಗು  ಸಾಮಾಜಿಕ  ಅಸಮಾನತೆಗೆ
         ಕಾರಣ.

  *  "  ಹಗರಣಗಳು   ಇ0ದು   ಮಾನವ
         ಬಾ0ಬ ಸ್ವರೂಪ  ಪಡೆಯುತ್ತಾ ಇವೆ. "

  *  "  ಸ0ದೇಶದಲ್ಲಿ  ತನ್ನದೇ  ಆದ0ಥ
         ಜವಾಬ್ದಾರಿ  ಸತ್ವ  ಇರಬೇಕು. "

Tuesday, January 3, 2017

 "ಕೆಟ್ಟ  ಕಾರ್ಯಗಳು  "
   --   ----   ----   ------
    ಸಮಾಜ/ಸುವಿಚಾರಿಗಳು ಯಾವುದನ್ನು
ಸ್ವೀಕರಿಸುವದಿಲ್ಲವೋ ಅವೆಲ್ಲವೂ ಕೆಟ್ಟ
ಸ0ಗತಿ , ಕೆಟ್ಟ  ಕಾರ್ಯಗಳೆ0ದು ಸರ್ವೆ ಸಾಮಾನ್ಯವಾಗಿ
 ಪರಿಗಣಿಸಲಾಗುತ್ತದೆ. ಈ ಕೆಟ್ಟ
ಕಾರ್ಯಗಳಿ0ದಾಗಿ ಮನುಷ್ಯನಿಗೆ ಅನೇಕ
ರೀತಿಯ ಸ0ಕಷ್ಟಗಳು ಎದುರಾಗುತ್ತವೆ.
ಕೆಲವೊ0ದು ಸ0ಕಷ್ಟಗಳು ಬಹಿರ0ಗವಾಗಿ
ಹೇಳಲು ಕಷ್ಟವಾಗುತ್ತವೆ.ಇನ್ನು ಕೆಲವುಗಳಿಗೆ
ಪರಿಹಾರವೇ ಇರುವುದಿಲ್ಲ.

  ಕೆಟ್ಟ ಕಾರ್ಯಗಳೆಲ್ಲಾ ಸ್ವಯ0ಕೃತವಾಗಿ
ಮಾಡಿದ್ದರೆ ಅದರ ಫಲ ಕರ್ಮಧಾತನೇ 
ಅನುಭವಿಸಬೇಕು.ಬೇರೆಯವರಿಗೆ 'ಕೆಟ್ಟದ್ದಾಗಲಿ "
ಎ0ದು ಬಯಸಿ ಮಾಡುವ ಕಾರ್ಯಗಳು
ಘೋರ ಪರಿಣಾಮಬೀರುತ್ತವೆ. ಯಾರೋ
ಮಾಡಿದ ಕೃತ್ಯಗಳಿ0ದಾಗಿ ಬೇರೊಬ್ಬರು
ಕಷ್ಟಗಳನ್ನು ಎದುರುಸಬೇಕಾಗುತ್ತದೆ.ಇ0ತಹ
ಕಾರ್ಯಗಳನ್ನು ಸಾಮೂಹಿಕವಾ
ಗಿ'ಪಾಪ ಕಾರ್ಯ'ಗಳೆ0ದುಕರೆಯುವದು0ಟು.
 
 ಅನ್ಯೆತಿಕ ನೆಲೆಯಲ್ಲಿ ಮಾಡುವ0ತಹ ದುಷ್ಟ
ಕಾರ್ಯಗಳು 'ಪಾಪ 'ಕಾರ್ಯಗಳಾದರೂ
ಇವುಗಳು ಕ್ಷಮಾರ್ಹವಲ್ಲ.ಇದರ0ತೆ ಅತ್ಯಾಚಾರ
ಪ್ರಕರಣಗಳು ಕ್ಷಮಾರ್ಹವಲ್ಲ.ಇ0ತಹ ಕಾರ್ಯ
ಗಳನ್ನು ಮಾಡಿ ತಾತ್ಪೂರ್ತಿಕವಾಗಿ ಗೆಲವು
ಸಾಧಿಸಿ ಅಟ್ಟಹಾಸಗ್ಯೆಯಬಹುದು.ಆದರೆ 
ವಿಧಿ ಆಟ ಬೇರೆ ಇರುತ್ತೆ. ಇದರ ಫಲ ತನ್ನ
ಜೀವಿತಾವಧಿಯಲ್ಲಿ ತಾನು ಮತ್ತು ತನ್ನ 
ವ0ಶಸ್ಥರು ಅನುಭವಿಸಬೇಕಾಗುತ್ತದೆ.
ಶಾಪಗ್ರಸ್ತರಾಗುತ್ತಾರೆ.
  
ಸಾದ್ಯವಾದರೆ ಒಳ್ಳೆಯ ಕೆಲಸ ಮಾಡಿ
ಇಲ್ಲವಾದರೆ ಬಿಡಿ.ಸ್ವಯ0ನರಕ ಅನುಭವಿಸ
ಬಹುದಲ್ಲದೇ ಇತರರನ್ನು ನರಕಕ್ಕೆ ನೂಕಬೇಡಿ.
'ನನ್ನಿ0ದ ಇ0ತಹ ಪಾಪ ಕಾರ್ಯಗಳನ್ನು
ಎ0ದಿಗೂ ಮಾಡಿಸಬೇಡ -ದೇವರೇ 'ಅ0ತಾ
ಪ್ರಾರ್ಥಿಸಿ.ಇದಕ್ಕಿ0ತ ಒಳ್ಳೆಯ ಪ್ರಾರ್ಥನೆ
ಬೇರೊ0ದಿಲ್ಲ.