Thursday, November 3, 2016

  "ಗೆಳೆತನ   &  ಜಗತ್ತು  "
   ---   ---   ----    --- --
            ಜಗತ್ತು ಒ0ದು ಸ0ತೆ.ಈ ಸ0ತೆಯಲ್ಲಿ  
ಕೆಲವೊಬ್ಬರಿಗೆ  ಕಾಳು -ಕಡಿ 
ಬೇಕಾದರೆ ,ಹಲವರಿಗೆ ತಪ್ಪಲು ಪಲ್ಲೆ , ಇನ್ನು
ಕೆಲವರಿಗೆ  ಬೇಕರಿ ಪಧಾರ್ಥಗಳನ್ನೋ ,ಕುರಕುಲ ತಿ0ಡಿಯನ್ನೋ  ಇಷ್ಟ ಪಡ್ತಾರೆ.
ಅದೇ ರೀತಿ  ಹಲವಾರು ವಿಭಿನ್ನ  -ವಿಭಿನ್ನ
ಅಭಿರುಚಿ ,ಗೆಳೆತನ , ಹವ್ಯಾಸ ಗಳುಳ್ಳವರು
ತಮ್ಮ -ತಮ್ಮ  ಅ0ತಸ್ತುಗಳಿಗುಣವಾಗಿ 
ಗೆಳೆತನ ಬಯಸಿ  ಗೆಳೆತನ ಮಾಡಲು
ಆಸಕ್ತಿವಹಿಸುತ್ತಾರೆ. ಇನ್ನು ಕೆಲವರು 
ಯಾವುದರಲ್ಲಿಯೂ  ಆಸಕ್ತಿ ಇಲ್ಲದೇ  ರಬ್ಬರ 
ಚೆ0ಡಿನ0ತೆ ಬಿದ್ದಲ್ಲೇ ಬಿದ್ದಿರತಾರೆ.
  
 ಗೆಳೆತನ ,ಕಾಲ ,ಸಮಯ ,ಸ0ಧರ್ಭ ,ಇವು
ಹಲವಾರು ಸ್ತರಗಳಲ್ಲಿ  ಹಲವಾರು ಸಮಯಗ
ಳಲ್ಲಿ ,ಒ0ದಾಗುತ್ತವೆ.ಹಾಗೆಯೇ ಪರಸ್ಪರ
ವಿರೋಧಿಗಳಾಗುತ್ತವೆ.ಇದಕ್ಕೆಲ್ಲಾ ಮೇಲಿನ 
ಘಟನೆಗಳೇ ಕಾರಣವಾದರೂ  ಪರೋಕ್ಷವಾಗಿ
ಮನುಷ್ಯನ ಬುದ್ಧಿಮತ್ತೆಯೂ  ಇದರಲ್ಲಿ 
ಆಸಕ್ತಿ ವಹಿಸಿರುತ್ತದೆ.

  "ಒಳ್ಳೆಯ ಗೆಳೆತನ  ಏನೊ0ದನ್ನು ಆಪೇಕ್ಷಿ
ಸುವದಿಲ್ಲ.ಇ0ತಹ ಗೆಳೆತನಕ್ಕೆ ಯಾರೊಬ್ಬರ
ಪ್ರಭಾವ ವಲಯವೂ ಬೇಕಿಲ್ಲ.ಅದು ಅರಳುವ 
ಸುಗ0ಧದ ಅಗರಬತ್ತಿ ".

No comments: