Friday, November 11, 2016


" ಬೆನ್ನಲ್ಲಿ ಚೂರಿ  "
    ---   ----   ------
 "ಬೆನ್ನಲ್ಲಿ ಚೂರಿ ಹಾಕೋರು ಇವ್ರು".
ಅ0ತಾ  ನಾವು ಸಾಕಷ್ಟು ಸಲ ನಾಲ್ಕು ಮ0ದಿ
ಕೂಡಿದಾಗ  ಆಡ್ಕೋತಿರತಿವಿ.ನ0ಬಿಕಸ್ಥ
ಗೆಳೆಯರು ,ಆಪ್ತರು  ಯಾವುದೋ ವ್ಯವಹಾರ
ದಲ್ಲಿ ಒಪ್ಪ0ದವಾಗಿ -ಆ ವ್ಯವಹಾರ ಮು0ದುವರೆ
ಸಲಿಕ್ಕಾಗದೇ ಆ ವ್ಯವಹಾರವನ್ನು  ಮುರಿದು
ಕೊಳ್ಳುತ್ತಾರೆ. ಇ0ತಹ ಸ0ಗತಿಗಳು  ಒಪ್ಪ0ದ
ವಾದವರಲ್ಲಿ ಒಬ್ಬರಿಗೆ ಹೇಳಲಾಗದಷ್ಟು ಹಾನಿ
ತರುತ್ತದೆ.ಪ್ರಸ0ಗ ಬ0ದರೆ ಮಾನ -ಹಾನಿಯೂ
ಆಗುತ್ತದೆ.ಇವು ಬಹುತೇಕ ಹಣಕಾಸಿನ
ವ್ಯವಹಾರಗಳಲ್ಲಿ ನಡೆತಕ್ಕ ಸ0ಗತಿಗಳು.ಆದರೆ
ಇದೇ ಸ0ಗತಿಗಳು ಕೊಡುವ ಹೆಣ್ಣು -ಗ0ಡಿನ
ವ್ಯವಹಾರದಲ್ಲಿ ಆದರೆ ಹೆಣ್ಣಿನ ಕಡೆಯವರ 
ಮರ್ಯಾದೆ ಪುಡಿಗಾಸಿಗೆ ಬರೋಲ್ಲ. ಅದಕ್ಕ 
ಇ0ತಹ ವ್ಯವಹಾರದಲ್ಲಿ ಸೂಜಿಯಷ್ಟು ಸಣ್ಣ
ತಪ್ಪು ಕೂಡಾ ಬೆಟ್ಟದಷ್ಟು ದೊಡ್ದದಾಗಿ 
ಹಗರಣಕ್ಕ ಕಾರಣವಾಗುತ್ತೆ.

  ರಾಜಕಾರಣದಲ್ಲಿ 'ಬೆನ್ನಿಗೆ ಚೂರಿ ಹಾಕೋದು'
ಸಾಮನ್ಯ ದೃಶ್ಯ.ಸಾಮಾನ್ಯ ಮಾತು.ಟಿಕೇಟು
ಯಾರು ಕೊಡ್ತಾರೆ ,ದುಡ್ಡು ಯಾರು ಕೋಡ್ತಾರೆ 
ಕೊನೆಗಳಿಗೆಯಲ್ಲಿ ಆ ಪಕ್ಷ ಸೇರಿ ,ಮೊದಲಿನ 
ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರಿಗೆ ಇರುಸು
ಮುರುಸು ಮಾಡ್ತಾರೆ.ಇದು ಕೆಲ ದಿನಗಳ 
ವರೆಗೆ ಮಾತ್ರ.ಮು0ದೆ ಅದೇ ಸಾಮಾನ್ಯ ದೃಶ್ಯ
ಆಗ್ತದ.ರಾಜಕಾರಣದಲ್ಲಿ 'ನಿಯತ್ತು ' ಕಡಿಮೆ 
ಆಗೆದ.ಮಾತಿಗೆ ಬೆಲೆಯಿಲ್ಲ. ಇಲ್ಲಿ ಯಾರು
ಯಾವಾಗ -ಯಾರ ಬೆನ್ನಿಗೆ ಚೂರಿ ಹಾಕ್ತಾರ
ಹೇಳಕಾಗೋಲ್ಲ.

ಆದರೆ ಸಜ್ಜನ ಸಾಧುಗಳಿಗೆ ಇ0ತಹ ವ್ಯವಹಾರ
ಹಿಡಿಸೋದಿಲ್ಲ.ಒ0ದು ವೇಳೆ ಕಿತಾಪತಿಗಳು
ಯಾರಾದರೂ ಇ0ತಹ ವ್ಯಕ್ತಿಗಳಿಗೆ ಮಾಡಿದರ
ಅವರಬೆನ್ನಿಗೆ ಚೂರಿ ಅಷ್ಟೇ ಅಲ್ಲ ; ಅದು 
ಅವರ ಮಾನಕ್ಕಬ0ದ ಕುತ್ತು.ಅ0ತಾ ತಿಳಿದು 
ಆಗಬಾರದ್ದು -ಆಗಿಹೋಗುತ್ತೆ.

   ಬೆನ್ನಿಗೆ ಚೂರಿ ಹಾಕೋದು ಒಳ್ಳೇದಲ್ಲ.
ಇದು ನಮ್ಮ ಸ0ಸಕೃತಿಯಲ್ಲ. ಇದು
 ಬದಲಾಗಬೇಕು. ನಮ್ಮ ಸ0ಸಕೃತಿಯನ್ನು 
ಎತ್ತಿ ಹಿಡಿಯಬೇಕು.

No comments: