" ಮಾತೃಭಾಷೆ -- ಶಿಕ್ಷಣ "
--- ------ ------- ------
ಮಗುವಿನ ಶಿಕ್ಷಣ ಆರಾಜ್ಯದ ಮಾತೃ
ಭಾಷೆಯಲ್ಲಿಯೇ ಆದರೆ ಹೆಚ್ಚು ಪರಿಣಾಮ
ಕಾರಿಯಾಗಿರುತ್ತದೆ.ಮಾತೃ ಭಾಷೆಯು
ವ್ಯವಹಾರಿಕ ಭಾಷೆಯು ಆಗಿರುವದರಿ0ದ
ಮಗುವಿಗೆ ವ್ಯವಹಾರಿಕ ಆಗು ಹೋಗುಗಳ
ಪರಿಚಯ ಸ0ಪೂರ್ಣ ಆಗುತ್ತದೆ .ಇಲ್ಲಿ ನಾನು
ಹೇಳಬಯಸೋದು - ಮಗು ಯಾವುದೇ
ಸ್ಕೂಲಗೆ ಹೋಗಲಿ ಉದಾ -- ಇ0ಗ್ಲೀಷ
ಮಾದರಿಯ ಕಾನ್ವೆ0ಟ್ ,ಸಿಬಿಎಸ್ ಇ ಇಲ್ಲವೇ
ಮಾತೃಭಾಷೆಯ ಶಾಲೆಯೇ ಆಗಿರಬಹುದು.
ಶಾಲೆಯ ಪಠ್ಯಕ್ರಮದಲ್ಲಿ ಯಾವುದೇ ಮಾದ್ಯಮ
ದಲ್ಲಿ ಬೋಧನೆ ಆಗಲಿ ,ಮನೆಗೆ ಬ0ದಾಗ
ಅಭ್ಯಾಸ ಶುರು ಮಾಡಿದಾಗ,ಆ ಪಠ್ಯದ ವಿಷಯ
ಅದರ ಅರ್ಥವನ್ನು ನಾವು ದಿನನಿತ್ಯ ಮಾತಾ
ಡುವ ಭಾಷೆಯಲ್ಲಿಯೇ ಬೋಧಿಸಬೇಕು.ಇದ
ರಿ0ದ ಮಗುವಿಗೆ ಪಠ್ಯದ ಅರ್ಥ ,ಅದರಲ್ಲಿ
ಬರುವ ಹೊಸ ಹೊಸ ಪದಗಳ ಅರ್ಥ ,ಕಲ್ಪನೆ
ಮಗುವಿಗೆ ಸರಳವಾಗಿ ಕಲಿಕೆಗೆ ಗ್ರಹಿಸಲು
ಅನುಕೂಲವಾಗುತ್ತದೆ. ಬಾಷಾವಿಷಯಗಳಿರಲಿ
ವಿಜ್ನಾನ ,ಗಣಿತ ಯಾವುದೇ ವಿಷಯಗಳಿರಲಿ
ಯಾವುದೇ ಮಾದ್ಯಮದ ಶಾಲೆಯಲ್ಲಿ
ಕಲಿಯುತ್ತಿರಲಿ ,ಆದರೆ ಮನೆ ಅಭ್ಯಾಸದಲ್ಲಿ
ಮಾತ್ರ ಮನೆಯಲ್ಲಿ ಮಾತಾಡುವ ಭಾಷೆಯಿ0ದ
ಕಲಿಸುವದು ನೂರಕ್ಕೆ ನೂರರಷ್ಟು ಪ್ರಭಾವಿ
ಶಿಕ್ಷಣ ವಾಗುತ್ತೆ..ಈ ತರಹದ ಕಲಿಕೆಯಿ0ದ
ತಾವು ಕಲಿಯುವ ಭಾಷಾ0ತರಗಳಲ್ಲಿ ಅನೇಕ
ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಅರಿಯಲು
ಸಹಾಯವಾಗುತ್ತದೆ.ಎಷ್ಟೇ ವಿಧ್ಯಾರ್ಥಿಗಳು
ಇ0ಗ್ಲೀಷ ಭಾಷೆಯಲ್ಲಿ ಮಾತಾಡುವುದನ್ನು
ನೋಡಿದ್ದೇನೆ.ಅದರಲ್ಲಿ ಎಷ್ಟೋ ತಪ್ಪುಗಳಿರು
ತ್ತವೆ.ಆಡುವ ಇ0ಗ್ಲೀಷ ಭಾಷೆಗು , ಕಲಿಯುವ
ಇ0ಗ್ಲೀಷ ಭಾಷೆಗು ಅಜಗಜಾ0ತರ ವ್ಯತ್ಯಾಸ
ಇದೆ.ಈ ರೀತಿ ಕಲಿಕೆಯಿ0ದ ವಿಧ್ಯಾರ್ಥಿಗೆ
ಯಾವುದೇ ತೊ0ದರೆ ಆಗುವದಿಲ್ಲ.ಹೆಚ್ಚು
ಪ್ರತಿಭಾನ್ವಿತನಾಗುತ್ತಾನೆ.ಪ್ರತಿಯೊ0ದು
ಭಾಷೆಯ ಶಬ್ದಕೋಶ ಮನೆಯಲ್ಲಿರಬೇಕು.ಇದು
ಬಹಳ ಉಪಯುಕ್ತ ವಾಗುತ್ತದೆ.
ಇನ್ನು ಅ0ತರಾಜ್ಯ ಭಾಷ ಸ0ವಹನ.ಇದು
ಸಮಸ್ಯೆಯಾಗುವದಿಲ್ಲ. ರಾಷ್ಟ್ರೀಯ ಶಿಕ್ಷಣ
ನೀತಿಯನ್ವಯ ಎಲ್ಲಾ ಶಾಲೆಗಳಲ್ಲಿ ತ್ರಿಭಾಷಾ
ಸೂತ್ರ ಕಡ್ಡಾಯ ಇದೆ. ಒ0ದೊ0ದು ರಾಜ್ಯ
ದಲ್ಲಿ ಬೇರೆ ಬೇರೆ ಹ0ತದಲ್ಲಿ ಭಾಷೆಗಳು
ಪ್ರಾರ0ಭವಾಗಬಹುದು.ಈ ಸೂತ್ರದಡಿಯಲ್ಲಿ ನೀತಿ ಎಲ್ಲಾ
ಶಾಲೆಗಳಲ್ಲಿಯೂ ಇದೆ.ಈ ನೀತಿಯಿ0ದ
ದೇಶದ ಯಾವುದೇ ಭಾಗದಲ್ಲಿ ವಿಧ್ಯಾಭ್ಯಾಸ
ಮಾಡಲಿ , ಉದ್ಯೋಗ ಮಾಡಲಿ ,ವ್ಯಾಪಾರ
ಮಾಡಲಿ ,ಅವನು ಅದರಲ್ಲಿ ಸಫಲ ನಾಗುತ್ತಾನೆ.
ಹೀಗಾಗಿ ಎಲ್ಲೆ ಇರಲಿ ಯಾವುದೇ ಮಾಧ್ಯಮದ
ಶಾಲೆಯಲ್ಲಿರಲಿ ಅಭ್ಯಾಸ ಕ್ರಮ ಮಾತ್ರ
(ಮನೆಯಲ್ಲಿ ) ಆ ರಾಜ್ಯದ ಮಾತೃ ಭಾಷೆಯ
ಲ್ಲಿಯೇ ಆದರೆ ಹೆಚ್ಚು ಶ್ರೇಯಸ್ಕರ !