Thursday, November 2, 2017



 "ತಿರುಚುವಿಕೆ  "
         --  ----   ---- --
    ತಿರುಚುವಿಕೆ ಈಗ ಸುನಾಮಿ ಆಗಿದೆ.ಯಾವ
ವಿಷಯ ತಿರುಚಬೇಕು,ಯಾವ ವಿಷಯ ತಿರುಚ
ಬಾರದು ಎನ್ನುವ ಪರಿಜ್ನಾನ ಮರೆತ0ತಿದೆ.
ಧಾರ್ಮಿಕ ,ಸಾಮಾಜಿಕ ,ರಾಜಕೀಯ ಕ್ಷೇತ್ರಗಳು
ಇತರೆ ಸಣ್ಣ ಪುಟ್ಟ ವ್ಯವಹಾರಿಕ ಸ0ಭ0ಧ
ಗಳಲ್ಲೂ ತಿರುಚುವಿಕೆ ಅಘಾದ ಪ್ರಭಾವ ಬೀರು
ತ್ತಿದೆ. ತಿರಿಚುವಿಕೆಯ ಬ್ರಹ್ಮಾಸ್ತ್ರ ಬಲ್ಲವನು ,
ಎದುರಿಗೆ ಬರುವ ಗು0ಡಿನ ದಾಳಿಯಿ0ದ
ಪಾರಾಗುವಿಕೆಯೇ ಆಗಿದೆ. ಇವೆಲ್ಲಾ ತಿರುಚುವಿಕೆ
ರಾಷ್ಟ್ರೀಯ ಚಿ0ತನೆಗಳಲ್ಲಿ ಕಾಣಿಸುತ್ತಿಲ್ಲ.
ಅಧಿಕಾರದ ಆಸೆಗಾಗಿ ತಿರುಚುವಿಕೆ ಸುನಾಮಿ
ಆಗಿಬಿಟ್ಟಿದೆ.

   ಸಾಮಾನ್ಯ ಮನುಷ್ಯ ತನ್ನ ಕೆಲಸವಾಯಿತು
ತಾನಾಯಿತು,ಅನ್ನುವ ಮಧ್ಯಮ ವರ್ಗದವರಿಗೂ
ಒಮ್ಮೊಮ್ಮೆ  ತಿರುಚುವಿಕೆ ಹಾಸ್ಯಾಸ್ಪದವಾಗಿ
ಕ0ಡು ಬರುತ್ತದೆ.ಒಮ್ಮೊಮ್ಮೆ ನಾವು ಎತ್ತ
ಸಾಗುತ್ತಿದ್ದೇವೆ ಅನ್ನುವ ಚಿ0ತೆಯೂ ಕಾಡುತ್ತಿ
ರುತ್ತದೆ. ಆದರೆ ಇವು ಅವರ ಚಿ0ತನೆ ಅ0ದರೆ
ಕೊರಗುಗಳು. ಅವರು ಇದನ್ನು ಬಾಯಿಬಿಟ್ಟು
ವಸ್ತುಸ್ಥಿತಿ ವಿವರಿಸುವ ಹಾಗಿಲ್ಲ. ವಸ್ತುಸ್ಥಿತಿ
ವಿವರಿಸಿದರೆ ಯಾರೋ,ಏನೋ ಬ0ದು
ಧಮಕಿ ಹಾಕುತ್ತಾರೆ ಅನ್ನುವ ಭಯ.
ತಿರುಚುವಿಕೆ ಎಲ್ಲಿ0ದಲೋ ಪ್ರಾರ0ಭವಾಗಿ
ಎಲ್ಲಿಗೋ ಮುಟ್ಟುತ್ತದೆ.ಇದು ಸರಿನಾ ? ತಪ್ಪಾ ?
ಪ್ರಾಜ್ನರು ನಿರ್ಧರಿಸಬೇಕು.
 

No comments: