Thursday, December 31, 2015

 "  ಸ0ಗಾನ  ಮಾತು ".
  * ವಿನಾಶ  ಮಾಡುತ್ತೇವೆ0ದು ಹೇಳಿದವರೆಲ್ಲಾ
     ನಾಶವಾಗುತ್ತಲೇ   ಇದ್ದಾರೆ. ನ್ಯುಟನ್ನ್ ನ
     ಚಲನೆಯ  ನಿಯಮಗಳು    ಇಲ್ಲಿ  ಅನ್ವಯ
     ವಾಗಿರುವದು  ನಮ್ಮ  ಅರಿವಿಗೆ ಬರುವದೇ
     ಇಲ್ಲ. ಇದೊ0ದು  ವಿಸ್ಮಯ.


*  ನಕ್ಕರೆ ಸ್ವರ್ಗ.  ನಕ್ಕರೆ ಒತ್ತಡ ಕಡಿಮೆ
     ಆಗುತ್ತದೆ.ನಕ್ಕರೆ  ಅರೋಗ್ಯಕ್ಕೆ  ಒಳ್ಳೆಯದು.
     ಅ0ತಾ ಹೇಳ್ತಾರೆ. ನಗರೀಕರಣದಲ್ಲಿ 
     ಹೆಚ್ಚು ನಕ್ಕರೆ ಅಸಹ್ಯ ,ಅಶಿಸ್ತು ಅ0ತಾ
     ಪರಿಗಣಿಸುತ್ತಾರೆ. ಇದು ವ್ಯೆಪರಿತ್ಯ.

Wednesday, December 30, 2015

 "ಸ0ಗಾನ  ಮಾತು  ".
    ----          
  *  ಶತೃಗಳು   ಮನೆಗೆ   ನುಗ್ಗಿದಾಗ
      ಇರುವೆ   ಕಚ್ಚಿತೆ0ದು  ತುರಿಸುತ್ತಾ 
      ಕುಳಿತರೆ   ಏನು   ಪ್ರಯೋಜನ  ..?
  *   ಹಿತ್ತಲ ಹೆಣ್ಣಿಗೆ   ಆಸೆಪಟ್ಟು
       ಮೆತ್ತಗೆ   ಮ್ಯೆಯೆಲ್ಲಾ  ಹಣ್ಣುಗಾಯಿ
       ನೀರುಗಾಯಿ   ಮಾಡಿಸಿಕೊಳ್ಳಬಾರದು .

  *     ಸೋಲುಗಳ  ಸರಪಣಿ  ಹಿ0ದೆ
         ಗೆಲುವಿನ  ಏಣಿ  ಇದ್ದೇ ಇರುತ್ತದೆ.
         ಆ  ಗೆಲವು ಬ0ದಾಗ  ಸೋಲಿನ 
         ರುಚಿ  ಮರೆಯಬಾರದು  .

Tuesday, December 29, 2015

ಮನಸ್ಸು

ವಿಧ್ಯೆ ಮತ್ತು ಮನಸ್ಸು  ಬೇರೊಬ್ಬರು
ಅಪಹರಿಸಲಿಕ್ಕಾಗುವದಿಲ್ಲ.
ಸ್ವಯ0ನಿಯ0ತ್ರಣಕ್ಕೊಳಪಟ್ಟವುಗಳು.ಇವು
ಮಾನವನ  "ಬ್ಲ್ಯಾಕ ಬಾಕ್ಸ "

Monday, December 28, 2015

   " ಸ0ಗಾನ  ಮಾತು    "


*    " ರಾಜಕೀಯ  ಬಿರುಗಾಳಿಗಳು
        ಚಲಿಸುವ   ಮೋಡಗಳಿದ್ದ0ತೆ   ".

*        "  ವಿಷಯಗಳು  "  ರಾಜಕೀಯ
             ಇಚ್ಛಾಶಕ್ತಿಯ   ಕೊರತೆ
             ಅನುಭವಿಸುವದೇ 
             ರಾಜಕೀಯ ಭ0ಡವಾಳದ 
             ನೀತಿಸಾರ.

Saturday, December 26, 2015

ಸ0ಗಾನ ಮಾತು 


*   ಬೊಗಳುವ  ನಾಯಿಗೆ
     ಹಿತ ನುಡಿ  ರುಚಿಸುವದಿಲ್ಲ  .

*    "ನಿ0ದೆಗೆ   ಮೌನವೇ  ಉತ್ತರ  ."

*    "ನಿಯಮಗಳನ್ನು  ಪಾಲಿಸುವವನೇ
       ಲೋಕಪಾಲಕ  ".

Monday, December 21, 2015

ಬದುಕು.


ಬದುಕು ಸಮುದ್ರದ ಅಲೆಗಳಿದ್ದ ಹಾಗೆ.
ಒತ್ತಡಕ್ಕೆ ಸಿಲುಕಿ ಅಲೆಗಳು ಹೇಗೆ ಚಿಮ್ಮುತ್ತವೋ ,
ಹಾಗೆಯೇ ನಮ್ಮ ಬದುಕು.ತ0ಗುವ ನಿಲ್ದಾಣ ಬರುವವರೆಗೆ
ಬದುಕಿನ ಪಯಣ ಪ್ರಯಾಣಿಸುತ್ತಿರಬೇಕು

Friday, December 18, 2015

  "ಸ0ಗಾನ ಮಾತು  -
  ---        ---      --    ---
*    ವ್ಯವಸ್ಥೆ   ಕೆಟ್ಟದ್ದು  ಅ0ತಾ ತಿಳಿದು
     ಮುಟ್ಟಲು ಹೋದರೆ  ,ಅದು
     ನಮ್ಮನ್ನೇ  ತಿನ್ನುತ್ತದೆ .
*   "  ಮೆಟ್ಟಿ ನಿಲ್ಲುವವನು   ತಾ
        ಮೊದಲು    ಗಟ್ಟಿಯಾಗಬೇಕು  .
  "
.

Thursday, December 17, 2015

ಸತ್ಯಕ್ಕೆ ಸಾವಿಲ್ಲ.
ಸುಳ್ಳಿಗೆ ಸುಖವಿಲ್ಲ.ಇದು ಪ್ರಖ್ಯಾತ ಗಾದೆ.
.ಬಹುತೇಕ ಈ ಮಾತಿನ ಸತ್ಯಾಸತ್ಯತೆ
 ಅನುಭವ ಹೊ0ದಿದವರಿಗೆ ಆಗಿರುತ್ತದೆ.
ಸ0ಗಾನ ಮಾತು  

  *  ಓದುವದು  ಬಡವನಿಗೆ  ಇಷ್ಟ
     ಆಡುವದು  ಉಳ್ಳವನಿಗೆ  ಇಷ್ಟ
     ಬಡಿದಾಡುವದು  ಕಿಲಾಡಿಗೆ  ಇಷ್ಟ
     '  ಮಾತಿನ ಮ0ಟಪ '  ಕಟ್ಟುವದು
       ರಾಜಕಾರಣಿಗೆ    ಇಷ್ಟ.

   *  ಓದುವ   ಹ0ಬಲವುಳ್ಳವನಿಗೆ
      ಬೆಳಕು  ಕೊಡುವ  ಸಾಧನೆಗಳು
     ' ಕಾಮಧೇನು ಕಲ್ಪವೃಕ್ಷ'  ವಿದ್ದ0ತೆ.
ಜೀವನ

ಜೀವನವೆ0ಬ ಪ್ರಯಾಣದಲ್ಲಿ
ಕಲ್ಲು,ಮುಳ್ಳು ,ಹೂ.
ಇದ್ದೇ ಇರುತ್ತವೆ.ಇವುಗಳನ್ನು ದಾಟಿ ನಾವು
ಮು0ದೆ ಸಾಗಬೇಕು.ಜೀವನ ಕಟ್ಟಿಟ್ಟ
ಬುತ್ತಿಯಲ್ಲ.
ಬುತ್ತಿ ನಾವು ತಯಾರಿಸಬೇಕು.
ಪದಾರ್ಥಗಳ ಅಯ್ಕೆ ಮೇಲೆ ಜೀವನ.

Wednesday, December 16, 2015

" ಸ0ಗಾನ ಮಾತು "

*  ಪ್ರತಿಭೆಯೊ0ದಿದ್ದರೆ
         ಸಾಲದು
    ಜೊತೆಗೆ  ಧ್ಯೆರ್ಯವೂ  ಇರಬೇಕು.

*  ಬುದ್ಧಿವ0ತಿಕೆಯೊ0ದಿದ್ದರೆ
           ಸಾಲದು
   ಜೊತೆಗೆ ನ್ಯಾಯವೂ   ಇರಬೇಕು .

*  ಗೆಲವುಗಳೇ ಇದ್ದರೆ
          ಸಾಲದು
   ಜೊತೆಗೆ ಸೋಲೂ ಇರಬೇಕು.


ಚರ್ಚೆ

ನಾವು ಇತ್ಯರ್ಥ ಪಡಿಸಬೇಕಾದ ಸಮಸ್ಯೆಗಳ
ವಿಷಯಗಳನ್ನು
ಪುರಾತನ ಕಾಲದಿ0ದ ಸಾಮಾನ್ಯವಾಗಿ
ಸಾಮ ಭೇದ ದ0ಡೋಪಾಯಗಳಿ0ದ
ವ್ಯಾಜ್ಯಗಳನ್ನು ಬಗೆಹರಿಸುವ ಒ0 ದು
ರೂಡಿ ನಮ್ಮಲ್ಲಿ ಬೆಳೆದು ಬ0ದಿದೆ.
ಪ0ಚಾಯ್ತಿ ಕಟ್ಟೆ,ಸಮಾಜ ನ್ಯಾಯ ಸಮಿತಿ.
ಹಳ್ಳಿ ಹಿರಿಯರು.ಓಣಿ ಹಿರಿಯರು
ಹೀಗೆ ನಾನಾ ಪ್ರಕಾರದ ಗು0ಪಿನ
ತೀರ್ಮಾನಗಳಿ0ದ ಸಮಸ್ಯೆಗಳನ್ನು ಪರಿಹರಿಸಿ
ಕೊಳ್ಳುವ ರೂಡಿ ನಮ್ಮಲ್ಲಿದೆ.
ಪರಸ್ಪರಚರ್ಚೆ ಮುಖ0ತರ ನಮ್ಮಲ್ಲಿರುವ
 ಭಿನ್ನಾಭಿಪ್ರಾಯಗಳನ್ನು ತೊಲಗಿಸಿ
ನ್ಯಾಯ ಪಡೆಯುವ ವಿಧಾನ ಸಾಮ.

ಪರಸ್ಪರ ಕೊಡೋ ತೊಗೊಳ್ಳೊದರಿ0ದ,
ಅರ್ಥಿಕ ಪರಿಹಾರ ಗಳಿ0ದ .ನಾನಾಬಗೆಯಿ0ದ 
ಎದುರಾಳಿಗಳ ಮನೋ ವಾ0ಛೆಅನುಸರಿಸಿ
ಪಡೆಯುವ ತೀರ್ಮಾನಗಳು   ಬೇಧ.

ಈಎರಡು ಉಪಾಯಗಳಿ0ದ ನ್ಯಾಯ ವಿಫಲ
ವಾದಾಗ ಅನುಸರಿಸುವ ವಿಧಾನ ದ0ಡ .
ಇವು ಪರಸ್ಪರ ತಾಕತ್ತಿನ ಮೇಲೆ ಪರಿಹಾರ
ಕ0ಡುಕೊಳ್ಳಬಹುದು.

ಬಹುತೇಕ ಕೆಲವೊ0ದು ಸನ್ನಿವೇಶಗಳಲ್ಲಿ
ವಿದೇಶಾ0ಗ ನೀತಿಯಲ್ಲಿ ಪರಸ್ಪರ  ಚರ್ಚೆ
ಮೂಲಕ ದೇಶಗಳು ತಮ್ಮ ಸಮಸ್ಯೆಗಳನ್ನು 
ಪರಹರಿಸಿಕೊಳ್ಳುತ್ತವೆ. ಇದು ಸಹಕಾರಕ್ಕೆ ನಾ0ದಿ.
ಇನ್ನು ಕೆಲವು ಪ್ರಕರಣಗಳಲ್ಲಿ.
ಸರಕಾರದ ಮೇಲೆ ಪ್ರಭಾವಬೀರುವ0ತಹ
ವ್ಯಕ್ತಿಗಳ ಮೇಲೆ ಮೊಕೊದ್ದಮೆ ಇದ್ದರೆ
ಅವರವರ ಭುಜಬಲದಿ0ದಸಾಕ್ಶಿಗಳನ್ನು 
ತಿರುಚಿ  ಆರೋಪ ಮುಕ್ತ ರಾಗುತ್ತಾರೆ.
ಇಲ್ಲಿ ನ್ಯಾಯ ಶಕ್ತಿ,ಪ್ರಭಾವ ಆಧಾರಿತ.ಅಸಹಾಯಕರು
ಮುಗ್ಧರು ಇ0ತಹ ಪ್ರಕರಣಗಳಲ್ಲಿ ಬಲಿ.
ಚರ್ಚೆ ಮೂಲಕ ನ್ಯಾಯದಾನ ಈಗಲೂ
ಸರ್ವ ಸಮ್ಮತ.ಕಾನುನುಗಿ0ತ ಸ0ಭ0ಧಗಳು
ಸಾಮಾಜಿಕ ಜವಾಬ್ದಾರಿಗಳು ಹೆಚ್ಚು
ಕೆಲಸ ಮಾಡುತ್ತವೆ.

Tuesday, December 15, 2015

"  ಸ0ಗಾನ ಮಾತು "

  *  ಸಾಧಕನಿಗೆ      ತನ್ನ
      ಸಾಧನೆಯ   ಅರಿವಾದಾಗ
      ಪ್ರಪ0ಚದ   ಎಲ್ಲಾ  ವಸ್ತುಗಳು
      ನೇಪಥ್ಯಗೆ    ಸರಿಯುತ್ತವೆ.

  *   ತನ್ನವರು
       ಯಾರಿಲ್ಲವೆ0ದು    ಕೊರಗುವದಕ್ಕಿ0ತ...
       ಅಬಲೆಯರ  ಉಸಿರಾಗಿ ,ನೆರಳಾದರೆ
       ಲೋಕ    ಮನ್ನಿಸುತ್ತದೆ.
ಜೀವನ 
----------
ಜೀವನ ಅ0ದರೆ ಪರಸ್ಪರ ಹ0ಚಿಕೊಳ್ಳುವಿಕೆ.
ಇದು ಮೊದಲಿನಿ0ದಲೂ ಬ0ದ ಪದ್ದತಿ. ಇತ್ತೀತ್ತಲಾಗಿ ಮಾನವ ಆಧುನಿಕತಗೆ ಹೆಚ್ಚು ಹೆಚ್ಚು ಒಗ್ಗಿ ಹೋದಾಗಿನಿ0ದ  ನೆರೆಹೊರೆಯ  ಧರ್ಮ ಮರೆತು ಪ್ರತಿಯೊ0ದು ವಾಣಿಜ್ಯ ದೃಷ್ಠ್ಟಿಯಿ0ದ ನೋಡುತ್ತಾ ಬರಲಾಗಿ    ಆಶೆಗಳು ಹೆಚ್ಚಿ
 "ಚೆನ್ಯೆ "ನ0ತಹ ದುರ0ತ ಸಾಹಸಗಳಿಗೆ ಕ್ಯೆ ಹಾಕಿ ಗಳಿಸಿದ್ದೆಲ್ಲವನ್ನು 
ಎಲ್ಲಿ0ದ ಪಡೆದದ್ದನೋ ಅಲ್ಲಿಗೆ ಮರಳಿಸಿ ಋಣ
ಮುಕ್ತನಾಗುತ್ತಿದ್ದಾ ನೆ. ಇರುವಷ್ಟು ದಿನ ನಗತಾ ಇರಬೇಕು ಆ0ದರೆ ಸಹಾಯ ಹಸ್ತ "ಕೊಡು ತಗೋ "  ಡೆಬಿಟ್ಟ್&ಕ್ರೆಡಿಟ್ಟ "ಎರಡು 
ಚಾಲ್ತಿ ಜುಳಿತಾಯ ಖಾತೆಯಲ್ಲಿರಬೇಕು

Thursday, December 10, 2015

ಹಿತಶತ್ರು
ಸಾಮಾಜಿಕ ಜೀವನದಲ್ಲಿ 
ಸ0ಭ0ಧಿಗಳಲ್ಲಿ ಅ0ದರೆ ಅಣ್ಣ-ತಮ್ಮ0ದಿರು,
ಇಲ್ಲವೆ ಬೀಗರು ಬಿಜ್ಜರುಇವರಲ್ಲಿ ಹಿತಾಸಕ್ತಿ  ಸ0ಘರ್ಷ ಇರುತ್ತೆ.
ಒಬ್ಬರಿಗೆ ಒಬ್ಬರು ಸಹಾಯ ಮಾಡುವ
ಮೇಲ್ನೋಟಕ್ಕೆ ಕಣ್ಣೀರು ಒರೆಸುವ 
ತ0ತ್ರ ಗಾರಿಕೆಯಲ್ಲಿ ಇದರಲ್ಲಿ ಪಾಲ್ಗೊಳ್ಳುವ ಎಲ್ಲರೂ 
ನಿಸ್ಸಿಮರೇ.
ಆದರೆ ಇಲ್ಲಿ ದ್ವೇಷ ಇರೋದು ಕಡಿಮೆ.
ದ್ವೇಷದಿ0ದ ಬೀಗಸ್ತನಕ್ಕೆ ಅಡ್ಡಿಬರುತ್ತೆ 
ಆನ್ನೋ  ಭಾವನೆ ಇಲ್ಲಿ ಇರುತ್ತೆ.
ರಾಜಕೀಯದಲ್ಲಿ ಹಾಗಲ್ಲ ಇಲ್ಲಿ
ಪಕ್ಕಾ ಹಿತ ಶತ್ರುಗಳು ಇರುತ್ತಾರೆ.
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ
ಗೊತ್ತಗೊಲ್ಲ.
ತಮ್ಮ ಕೆಲಸ ಸಾಧನೆಗಾಗಿ ರಾಜಕೀಯ 
ಚದುರ0ಗ ಚೆನ್ನಾಗಿ ಆಡುತ್ತಾರೆ.
ಎಲ್ಲರೂ ಕಾಲು ಹಿಡಿದು ಎಳೆಯುವವರೇ
ಚುನಾವಣೆ  ಸಮಯದಲ್ಲ0ತೂ ಅತಿರೇಕಕ್ಕೆ ಹೋಗಿರುತ್ತೆ.
ನ0ಬೋದೇ ಕಷ್ಟ್. ರಾಜಕೀಯ 
ಮರಿ ನಾಯಕರಿಗೆ ಇವು ಮಾಮುಲು.
ನಮ್ಮ0ತೋರಿಗೆ ಇದು ಬಹಳ ಖಿಲಾಡಿ 
ಗೇಮ್. ಹಿತಶತ್ರು/ಹಿತಾಸಕ್ತಿ ಗೆ ಹೇಳಿ ಮಾಡಿಸಿದ ವ್ಯಕ್ತಿ
ಮಹಾಭಾರತದ "ಶಕುನಿ".
ಇವನಷ್ಟು ಲಾಭ ಬೇರೆ ಯಾರು ಪಡೆದಿಲ್ಲ 
ಇದೊ0ದು ದಾಖಲೆ.

 " ಸ0ಗಾನಮಾತು   "

   *  ಕಚ್ಚಿದ  ನ0ತರ
       ಹಾವು   ವಿಷ   ಜ0ತು  !
   *   ಕೆಣಕಿ   ಬಿಸಾಕಿದ   ನ0ತರ
        ಹೆಣ್ಣು    ಕಾಳಿ0ಗ   !

Wednesday, December 9, 2015

  ಒಳ್ಳೆಯ ವಿಚಾರ

ಒಳ್ಳೆಯವರ ಸ0ಗ ಮಾಡು
ಒಳ್ಳೆಯ ವಿಚಾರ ಬಿತ್ತು
ಆ ಒಳ್ಳೆಯ ವಿಚಾರಗಳ
ಸೌ0ಧರ್ಯವನ್ನು  ಅಹ್ಲಾದಿಸು.
ಒಳ್ಳೆಯ ಸತ್ಪತ ಕಾಣುವಿ.


"ಸ0ಗಾನ ಮಾತು  "

  * ಕೆಲ್ಸ ಇಲ್ಲ ಕು0ದರಬಾರದು
    ರೊಕ್ಕ ಇಲ್ಲ ನಿ0ದರಬಾರದು
    ಮನಸ್ಸಿಟ್ಟು ಪ್ರಯತ್ನಿಸಿದರೆ
    ಆಣು ಕೂಡಾ  ಬದುಕಿನ ಸ0ಜೀವಿನಿ
    ಯಾಗಬಲ್ಲದು.

  *  ಕಲಾಕಾರನಿಗೆ
     ಚಿತ್ರ ಬಿಡಿಸಲು
     ಕು0ಚ ಸಾಕು  !
     ಮಹತ್ವಾಕಾ0ಕ್ಷಿಗೆ
    ಮು0ದೆ ಬರಲು
    ಚಾಣಕ್ಯ ನೀತಿ ಸಾಕು  !


ಮಾತುಗಳು

ಇನ್ನೊಬ್ಬರೊ0ದಿಗೆ ಮಾತಾಡುವಾಗ
ನಾವು ಬಳಸುವ ಭಾಷೆಯಲ್ಲಿನ
ಶಬ್ಧಗಳು.ಮೃದುವಾಗಿರಬೇಕು.ಕರ್ಣಗಳಿಗೆ
ಇ0ಪಾಗಿರಬೇಕು.ಹಾವ ,ಭಾವಗಳು
ಅವರೊ0ದಿಗೆ ಹೆಚ್ಚು ನಿಕಟವಾಗಿದ್ದೇನೆ
ಎ0ಬ ಭಾವನೆಗಳು ಬರಬೇಕು.
....ಹಾಗೇಯೇ ಇ ನ್ನೊಬ್ಬರು
ನಮ್ಮೊ0ದಿಗೆ ಮಾತಾಡುತ್ತಿರುವಾಗ

ಅವರ ಮಾತುಗಳನ್ನುಏಕ ಚಿತ್ತದಿ0ದ
ಆಲಿಸಬೇಕು.ನಕಾರತ್ಮಕ ಹಾವ ಭಾವ
ತೋರ್ಪಡಿಸಬಾರದು.
ಇವು ಸೌಜನ್ಯತೆ  ಲಕ್ಷಣಗಳು

Tuesday, December 8, 2015

    "  ಸ0ಗಾನ ಮಾತು "
   
  "  ನಾವೇ  ನಿರ್ಮಿಸಿದ ಕಟ್ಟುಗಳ
      ಹ0ದರ  --- ಮೌಡ್ಯ.
      ಇದರ ಪರಿನಿರ್ವಾಣ
      ಹರಿಯ  ಹರಿವಾಣ  -ಕಾಣೋ..."

ಶಾ0ತಿ

ಶಾ0ತಿ,ನೆಮ್ಮದಿಯನ್ನು
ಹುಡುಕಿಕೊ0ಡು
ಘೋರಾರಣ್ಯ,ಪರ್ವತ ಪ್ರದೇಶಗಳಿಗೆ
ಹೋಗುವ ಅಗತ್ಯ ಇಲ್ಲ.
ಶಾ0ತಿ ಎ0ಬುದು ನಮ್ಮ
ಮನಸ್ಸಿನ ಭಾವನೆ.
.ಅದೊ0ದು ಸ್ಥಿತಿ.
ಈ ಮನಸ್ಸ ಸ್ಥಿತಿ ತಲುಪಲು
ಏಕಾಗ್ರತೆ ಹಾಗು ದೇಹದ ಭಾಹ್ಯ್
ಚ ಟುವಟಿಕೆ
ಗಳ ಮೇಲೆ ನಿಯ0ತ್ರಣ ಅಗತ್ಯ. 
ಈ ನಿಯ0ತ್ರಣವೆ0ಬುದು ಕಾಮನೆಗಳ
ಮೂಲ ಬೀಜ.
ಇದು ನಿಯ0ತ್ರಿಸಿದರೆ ಎಲ್ಲಾ 
ನಿಯ0ತ್ರಿಸಿದ0ತೆ.

Monday, December 7, 2015

  "ಸ0ಗಾನ ಮಾತು "

   *  ವಿ ದ್ವತ್ತ್  -ಮನುಷ್ಯನ
      ಬುದ್ಧಿಮತ್ತೆಗೆ  ಓರೆಗಲ್ಲು . !

    
   *   ವಿಧ್ಯುತ್ತ  - ಮನುಷ್ಯನ
       ಕಾರ್ಯಸಾಧನೆಯ   ಜೀವಕೋಶ. !
       ಒ0ದು  ಅರ್ಜಿತ
       ಇನ್ನೊ0ದು  ಉತ್ಪಾದಿತ.
ಬದುಕು.

ಬದುಕಿನಲ್ಲಿ ಏಳು ಬೀಳು ಸಹಜ.
ಕೆಲವೋ0ದು ಘಟನೆಗಳು ನಮ್ಮನ್ನು 
ಉತ್ತು0ಗ ಶಿಖರಕ್ಕೆ ಹೊಯ್ದು ನಿಲ್ಲಿಸುತ್ತವೆ.
ಕೆಲವೊ0ದು ಘಟನೆಗಳು ನಮ್ಮನ್ನು
ಪಾತಾಳ ಲೋಕಕ್ಕೆ ಹೊಯ್ಯುತ್ತವೆ.
ಇವೆರಡರ ಮಧ್ಯೆ  ಎಷ್ಟೋಜನರು ನಮ್ಮವ
ರಾಗುತ್ತಾರೆ.ಎಷ್ಟೋ ಜನರು ನಮ್ಮ
 ವ್ಯೆರಿಗಳಗುತ್ತಾರೆ.ಎಷ್ಟೋ ಜನರು ಹಿತ ಶತ್ರು
ಗಳಗುತ್ತಾರೆ. ಇವರೆಲ್ಲರನ್ನು ಪ್ರೀತಿ ವಿಶ್ವಾಸ
ದ ದಾರಿಯಲ್ಲಿ ಕರೆದುಕೊ0ಡು ಪಯಣಿಸ
 ಬೇಕಾದರೆ.ನಮ್ಮಲ್ಲಿ ವಿಶ್ವ ಭಾತೃತ್ವದ ಪ್ರಜ್ನೆ
ಜಾಗೃತ ವಾಗಿರಬೇಕು.

Saturday, December 5, 2015

ಸದ್ವಿಚಾರ

ಸಜ್ಜನರ ಸಹವಾಸ ಹೆಜ್ಜೇನು ಸವಿದ0ತೆ.
ಸಧ್ಗುಣಗಳು ಸದ್ವಿಚಾರಗಳು
ಸದ್ವಿಚಾರಗಳು ಸದ್ಮನೋಭಾವದವರು.
ಸದ್ಮನೋಭಾವದವರು ಸದ್ವಿವೇಕಿಗಳು
ಸದ್ವಿವೇಕಗಳು.ಸನ್ಮಿತ್ರರು.
ಸನ್ಮಿತ್ರರು ಸದಾ ಸಮಾಜಮುಖಿ.
ಸಮಾಜಮುಖಿಗಳು  ಸತ್ಸ0ಗದವರು.
ಸತ್ಸ0ಗದವರು  ಪ್ರೀತಿಪಾತ್ರರು.
ಪ್ರೀತಿಪಾತ್ರರು ಗೌರವಾನ್ವಿತರು.
ಈಸರಪಣಿ ಸನ್ಮಿತ್ರರ ದರ್ಪಣ.
  "ಸ0ಗಾನ ಮಾತು "

*ಮಾವನಾಡುವ ಮಾತು  ಮಾಣಿಕ್ಯವಲ್ಲ
ಅಳಿಯನಾಡುವ ಮಾತು  ವೇದೋಕ್ತವಲ್ಲ
ಜನರಾಡುವ ಮಾತು ಲೋಕೋಕ್ತಿಯಲ್ಲ
ಎಲ್ಲವೂ ಸ0ಧರ್ಭಕ್ಕೆ ತಕ್ಕ0ತೆ
ಕುಣಿಯುವ ತಾಳಮೇಳಗಳಿದ್ದ0ತೆ.

* ಜೀವನದಲ್ಲಿ ಸೋತು ಗೆಲ್ಲಬೇಕು.
  ಬಿದ್ದು ಎದ್ದೇಳಬೇಕು

Friday, December 4, 2015

 "ಸ0ಗಾನ ಮಾತು  "


*     ಶಾಲಾಕ್ರಮದಲ್ಲಿ    "ಶೂನ್ಯವನ್ನು   "
      ಅನುತ್ತೀರ್ಣವೆ0ದು ಪರಿಗಣಿಸುತ್ತೇವೆ.

*     ಆಧ್ಯಾತ್ಮಿಕ  ಪ್ರಪ0ಚದಲ್ಲಿ
     "ಶೂನ್ಯ ಸ0ಪಾದನೆಗೆ  "
      ಪರಮೋಚ್ಛಸ್ಥಾನವಿದೆ.

     ವಾಸ್ತವ "ಶೂನ್ಯಕ್ಕೂ "
     ಪಾರಮಾರ್ಥಿಕ  "ಶೂನ್ಯಕ್ಕೂ "
     ಎಷ್ಟು ವ್ಯತ್ಯಾಸ  ?.


  ನಿಸರ್ಗ  ಪ್ರಕೋಪ  

ನಿಸರ್ಗದ ಪ್ರಕೋಪ
" ಜಲಪ್ರಳಯ ".
ಕೆರೆಗಳು ಕಣ್ಮರೆಯಾಗುತ್ತಿವೆ
ಒಡಲ  ತಾಪಮಾನ ಹೆಚ್ಚಿ
ಕಾವೇರಿ  ಮುನಿಸಿಕೊಳ್ಳುವಳೇನು  ...?
ನಗುವುದೋ  ...
ಅಳುವುದೋ....
ಯಾರು ಬಲ್ಲರು   ...?

Thursday, December 3, 2015

ಕಾಯಕ ಬೆಷ್ಟ

ಮನುಷ್ಯ 
ಕಾಯಕ ನಿರತನು.
ಏನಾದರೊ0ದು ಕೆಲಸ
ಮಾಡುತ್ತಲೇ ಇರುತ್ತಾನೆ  ಮಾಡುತ್ತಲೇ
ಇರಬೇಕು.
.
ಮಡುತ್ತಾ..ಮಾಡುತ್ತಾ ಹೀಗೆ ಜೀವನ
ಪೂರ್ತಿಮಾಡುವದೇ  ಆಗುತ್ತದೆ
......ನಾವು ಮಾಡಿಟ್ಟ್......
..ಈ ಬುತ್ತಿ ಗ0ಟಿನಲ್ಲಿ
ಯಾವುದು  "ಬೆಷ್ಟ"
ಅನ್ನುವದು
..
ನಾವು ಕಾಲವಾದ ಮೇಲೆ
ಜನ ಗುರುತಿಸುವದು.
ಈಮಹಾನ್ ಕ್ಷಣಕ್ಕಾದರೂ
ನಾವು ನಿರ0ತರ ಒಳ್ಳೇ
ಕೆಲಸ ಮಾಡುತ್ತಲೇ ಸಾಗಬೇಕು  ---
"ಶಬರಿಯ0ತೆ  ".
  "ಸ0ಗಾನ ಮಾತು "

  *  "   ಕ್ಲೇಶಗಳು ಚು0ಬಕ
          ಗುಣವುಳ್ಳವುಗಳು .  "
         ಸಮೀಪ ಬ0ದ0ತೆ  
         ಗಟ್ಟಿಯಾಗಿ  ಹಿಡಿದುಕೊಳ್ಳುತ್ತವೆ  .
  *     ಹ0ಚು ಬಿರಿಯುವಷ್ಟು
         ಕಾ0ಚಾಣ  ಸುರುವಿದರೂ
         ಕೊ0ಚವು "ಧೃತಿಗೆಡದವನು   "
         "ಗುರುವಿಗೆ  ಸಮಾನ  ".

Wednesday, December 2, 2015

"ಸ0ಗಾನ ಮಾತು "

* ಚಿನ್ನ ರನ್ನ ಹಣ
ಕನ್ನ ಹಾಕುವ ವಸ್ತುಗಳು .
* ಮಣ್ಣು ಗುಣ ವಿಧ್ಯಾ--ಬುದ್ಧಿ
ಅನ್ನ ಹಾಕುವ ವಸ್ತುಗಳು 
ಸೃಷ್ಟಿ
---
ಬ್ರಹ್ಮ ನಿರ್ಮಿತ ಸೃಷ್ಟಿ.
ಸೃಷ್ಟಿಯಲಿ ಬ್ರಹ್ಮ ಸ0ತೋಷ.ಕೌರ್ಯ್,
ನೋವು ನಲಿವು,ಹಾಸ್ಯ ನಗು.
ಬಡತನ ಸಿರಿತನ.ಎಲ್ಲಾ ನೀಡಿದ್ದಾನೆ.
ಜೊತೆಗೆ ಜೀವನ ನಿರ್ವಹಣೆ ಗಾಗಿ ಪ0ಚಭೂತಗಳನ್ನು ಕರುಣಿಸಿದ್ದಾನೆ.
ಒಳ್ಳೆಯವು ಸುರಾದಿಗಳು.ಕೆಟ್ಟವು ಅಸುರಾದಿ
ಗಳು.
ಎಲ್ಲ ಜೀವರಾಶಿಗಳಲ್ಲಿಯೂ ಅಸುರ ಸುರಗುಣಗಳನ್ನು ಸೃಷ್ಟಿಸಿದ್ದಾನೆ.
ಸುರಾ ಅಸುರಾದಿಗಳು
ಅ0ತರ0ಗದಲ್ಲಿ ಬಹಿರ0ಗದಲ್ಲಿ ಇವೆ.
ಇವು ಇಲ್ಲದೇ ಸೃಷ್ಟಿಯ ಸಮತೋಲನ ಅಸಾದ್ಯ.
ವಿಕಾಸ-ವಿನಾಶ ಎರಡು ಇಟ್ಟಿದ್ದಾನೆ
ಕತ್ತಲು ಬೆಳಕು ಬೆಳಕ ಕತ್ತಲು
ಹರಿಯುವ ಜಲಪಾತ.
ಸೃಷ್ಟಿಕರ್ತನೇ ನಿಯ0ತ್ರಕ.
ಕೊಡುತ್ತಾನೆ ಕಿತ್ತಿಕೊಳ್ಳುತ್ತಾನೆ
ನಾವೆಲ್ಲಾ ನೆಪ ಮಾತ್ರ.

Tuesday, December 1, 2015


  "ಸ0ಗಾನ ಮಾತು  "

   * "  ಗುರು  ಲಜ್ಜಗೆಟ್ಟರೆ
         ಹೆಣ್ಣಿಗೆ   ಸ್ಥಾನವಿಲ್ಲ .  "
   

    * "  ಹೆಣ್ಣು   ಲಜ್ಜಗೆಟ್ಟರೆ
          ಮರ್ಯಾದಗೆ    ಉಳಿವಿಲ್ಲ .  "
ಸದಾಶಯ

"ಅಪಕಾರಿಗಳಿಗೂ ಉಪಕಾರವನ್ನೇ ಮಾಡು."
-ಕಡುವ್ಯೆರಿಗಳಿಗೂ ಕೂಡಾ
ಕೆಡಕನ್ನು ಬಯಸಬೇಡ.
ಸದಾಶಯವನ್ನೇ ಬಯಸು.
ಇದು ನಮ್ಮ ಸ0ಸ್ಕೃತಿ,ವೇದ.ಉಪನಿಷತ್ತು ವಚನಗಳು ,  ದಾಸ  ಸಾಹಿತ್ಯ
ಹೇಳುವುದು ಇದನ್ನೇ 
ಇದರಲ್ಲಿಯೇ ನಮ್ಮ ಹೆಮ್ಮೆ ಗರಿಮೆ  ಇದೆ.
ಭಾರತೀಯರ ವ್ಯೆಶಿಷ್ಟ ಇದು.