Thursday, December 10, 2015

ಹಿತಶತ್ರು
ಸಾಮಾಜಿಕ ಜೀವನದಲ್ಲಿ 
ಸ0ಭ0ಧಿಗಳಲ್ಲಿ ಅ0ದರೆ ಅಣ್ಣ-ತಮ್ಮ0ದಿರು,
ಇಲ್ಲವೆ ಬೀಗರು ಬಿಜ್ಜರುಇವರಲ್ಲಿ ಹಿತಾಸಕ್ತಿ  ಸ0ಘರ್ಷ ಇರುತ್ತೆ.
ಒಬ್ಬರಿಗೆ ಒಬ್ಬರು ಸಹಾಯ ಮಾಡುವ
ಮೇಲ್ನೋಟಕ್ಕೆ ಕಣ್ಣೀರು ಒರೆಸುವ 
ತ0ತ್ರ ಗಾರಿಕೆಯಲ್ಲಿ ಇದರಲ್ಲಿ ಪಾಲ್ಗೊಳ್ಳುವ ಎಲ್ಲರೂ 
ನಿಸ್ಸಿಮರೇ.
ಆದರೆ ಇಲ್ಲಿ ದ್ವೇಷ ಇರೋದು ಕಡಿಮೆ.
ದ್ವೇಷದಿ0ದ ಬೀಗಸ್ತನಕ್ಕೆ ಅಡ್ಡಿಬರುತ್ತೆ 
ಆನ್ನೋ  ಭಾವನೆ ಇಲ್ಲಿ ಇರುತ್ತೆ.
ರಾಜಕೀಯದಲ್ಲಿ ಹಾಗಲ್ಲ ಇಲ್ಲಿ
ಪಕ್ಕಾ ಹಿತ ಶತ್ರುಗಳು ಇರುತ್ತಾರೆ.
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ
ಗೊತ್ತಗೊಲ್ಲ.
ತಮ್ಮ ಕೆಲಸ ಸಾಧನೆಗಾಗಿ ರಾಜಕೀಯ 
ಚದುರ0ಗ ಚೆನ್ನಾಗಿ ಆಡುತ್ತಾರೆ.
ಎಲ್ಲರೂ ಕಾಲು ಹಿಡಿದು ಎಳೆಯುವವರೇ
ಚುನಾವಣೆ  ಸಮಯದಲ್ಲ0ತೂ ಅತಿರೇಕಕ್ಕೆ ಹೋಗಿರುತ್ತೆ.
ನ0ಬೋದೇ ಕಷ್ಟ್. ರಾಜಕೀಯ 
ಮರಿ ನಾಯಕರಿಗೆ ಇವು ಮಾಮುಲು.
ನಮ್ಮ0ತೋರಿಗೆ ಇದು ಬಹಳ ಖಿಲಾಡಿ 
ಗೇಮ್. ಹಿತಶತ್ರು/ಹಿತಾಸಕ್ತಿ ಗೆ ಹೇಳಿ ಮಾಡಿಸಿದ ವ್ಯಕ್ತಿ
ಮಹಾಭಾರತದ "ಶಕುನಿ".
ಇವನಷ್ಟು ಲಾಭ ಬೇರೆ ಯಾರು ಪಡೆದಿಲ್ಲ 
ಇದೊ0ದು ದಾಖಲೆ.

No comments: