Friday, October 28, 2016

"ನಡತೆ  "
        ---   ----   ---  
            ಯಾವ ಮನುಷ್ಯನು ಅಕ್ಕ -ತ0ಗಿಯರ
ಗ0ಟು ಅಪಹರಿಸುತ್ತಾನೋ ,ತ0ದೆ -ತಾಯಿಯ
ರಿಗೆ ಅನ್ನ -ನೀರು ನೀಡದೇ ಉಪವಾಸ
ಬಳಲಿಸುತ್ತಾನೋ ,ಯಾವನು ಮಿತ್ರನಿಗೆ ಕೊಟ್ಟ
ಮಾತಿನ0ತೆ ನಡೆಯದೆ ಮೋಸಮಾಡು
ತ್ತಾನೋ ,ಬಡ -ಬಗ್ಗರಿಗೆ ಅನ್ಯಾಯ ಮಾಡಿ
ಹಣ ಕಬಳಿಸುತ್ತಾನೋ ,ದುಡಿಯದೇ ದುಃಖ
ಪಡದೇ ಅನ್ಯರ ಗ0ಟಿನ ಮೇಲೆ ,ಭೂಮಿಯ
ಮೇಲೆ ಕಣ್ಣಿಟ್ಟಿರುತ್ತಾನೋ ,ಲೋಭಿ ,ವ0ಚಕ
ಮೋಸಗಾರರು , ದರೋಡೆಕೋರರು -ಒ0ದೇ
ಮಾತಿನಲ್ಲಿ ಹೇಳಬೇಕಾದರೆ ಸಮಾಜವಿರೋಧಿ
ಚಟುವಟಿಕೆ ಮಾಡುವವರೆಲ್ಲರೂ  ,ಇತರರಿಗೆ
ಮಾನಸಿಕ ಹಿ0ಸೆ ಕೊಡುವವರೆಲ್ಲರೂ ರಾಕ್ಷಸ
ದುರ್ಗುಣಗಳ ನಡತೆಗೆ ಸೇರಿದವರಾಗಿರುತ್ತಾರೆ.
ಇವರೆಲ್ಲರೂ ಪ್ರಾಣಿಗಳ0ತೆ ವರ್ತಿಸುತ್ತಾರೆ.
ಇವರ ನಡತೆ ಎಲ್ಲವೂ ಸೌಜನ್ಯ ಮೀರಿ
ಅನಾಗರಿಕ ವರ್ತನೆಯಿ0ದ ಕೂಡಿರುತ್ತದೆ. 
ಇವರ ಆಹಾರವೂ ಕೂಡಾ ಅಸಾತ್ವಿಕ 
ಆಹಾರವಾಗಿರುತ್ತದೆ.ಇವರ ಅ0ತರಿಕ ಬಾಹ್ಯ
ಸೌ0ಧರ್ಯವು ಕೂಡಾ ಅಸುರಿ ಗುಣ 
ಹೊ0ದಿರುತ್ತದೆ.

  ಬಡವರಿಗೆ ದೀನ ದಲಿತರಿಗೆ ,ಅನಾಥರಿಗೆ
ಅ0ಗವಿಕಲರಿಗೆ ,ದೀರ್ಘಕಾಲಿಕ ರೋಗದಿ0ದ
 ನರಳುವವರಿಗೆ ಅಶಕ್ತರಿಗೆ ನೆರವಾಗುವದರೊ
0ದಿಗೆ ಅವರಿಗೆ ಆಹಾರ ,ಬಟ್ಟೆ ,ವಸತಿ
ನೀಡಿ ಯೋಗ್ಯ ರೀತಿಯಿ0ದ ನಡೆದುಕೊಳ್ಳು
ವವರು ಸತ್ಪುರುಷರ ವರ್ಗಕ್ಕೆ ಸೇರುತ್ತಾರೆ.
ದೇವಾಲಯ ,ಆಸ್ಪತ್ರೆ ,ಶಾಲೆ ,ಮ0ದಿರ
ಮಠ ,ಆಶ್ರಮ ,ಕಾರ್ಖಾನೆ ಮು0ತಾದ
ನಾಲ್ಕು ಜನರಿಗೆ ಉಪಯೋಗವಾಗುವ0ತಹ
ಲೋಕೋಪಕಾರಿ ಕಾರ್ಯಗಳನ್ನು ಮಾಡುತ್ತಾ
ಸದಾ ಲೋಕ ಕಲ್ಯಾಣ ಚಿ0ತನೆ ಮಾಡುವವರು
 ಸತ್ಪುರುಷರು.ಇವರು ಶಾ0ತ ಗುಣದವರು
ದಯಾಮೂರ್ತಿಗಳು ,ಅನ್ಯರ ಕಷ್ಟಗಳನ್ನು
ಅರ್ಥ ಮಾಡಿಕೊಳ್ಳುವವರೂ,ದೇವರ ಮೊರೆ
ಹೋಗುವವರೂ ,ದೇವರನ್ನು ನ0ಬಿ ಇತರರನ್ನು
 ಸನ್ಮಾರ್ಗದಲ್ಲಿ ಕೊ0ಡೊಯ್ಯಬಲ್ಲರು .
ಇವರ ನಡತೆ ಆಹಾರ ಎಲ್ಲಾ ಸಾತ್ವಿಕ.

     ಮನುಷ್ಯನು ಇ0ದ್ರಿಯಗಳ ದಾಸ. ಅಸುರ
ಗುಣಗಳನ್ನು ಮ್ಯೆ ಸೋ0ಕದ0ತೆ ದಿನಾಲು
ನಾವು ನಮ್ಮ ಮನಸ್ಸನ್ನು ದ್ಯಾನ ,ತಪಸ್ದು
ಪೂಜೆ ,ಸೇವೆಗಳಲ್ಲಿ ತೊಡಗಿಸಿಕೊ0ಡು ದೇವರಲ್ಲಿ 
ಸದಾ ಮನಸ್ದು ತನ್ಮಯ ವಾಗಿರುವ0ತೆ ಪ್ರಾರ್ಥಿಸಬೇಕು 

Thursday, October 27, 2016

"  ಕಾಲ  "
        ---   ---  -- --- ---
      "  ಕಾಲ "  ಎಲ್ಲರಿಗೂ ನೋವುಕೊಟ್ಟೆ
ಕೊಡುತ್ತದೆ.ಏಕೆ0ದರೆ ಗಡಿಯಾರದಲ್ಲಿ 
ಇರೋದು ಮುಳ್ಳುಗಳು. ಹೂಗಳಲ್ಲ  "--ಇದು
ಕಾಲದ ಬಗ್ಗೆ ಇರುವ ಒ0ದು ಪಾರ್ಶ್ವದ ವಿಚಾರ.

        ಗಡಿಯಾರದಲ್ಲಿ ಕಾಲವನ್ನು ತೋರಿಸುವ
ಬಾಣಗಳು ಮುಳ್ಳೆ0ದು ಭಾವಿಸಿ --ಕಾಲ
ಎಲ್ಲರಿಗೂ ನೋವನ್ನು  ಕೊಡುತ್ತದೆ ಎನ್ನುವದು
ಕೇವಲ ಕಾಲ್ಪನಿಕ.ಸತ್ಯಕ್ಕೆ ದೂರವಾದ ಸ0ಗತಿ.
ಕಾಲವನ್ನು ತೋರಿಸುವ ಬಾಣಗಳು ಅರ್ಜುನನ
ಜಗತ್ತನ್ನೇ ಗೆಲ್ಲಬಲ್ಲ ಶಸ್ತ್ರಗಳೆ0ದು ಭಾವಿಸಿದರೆ
ಕಾಲದ ಬಗ್ಗೆ ಇರುವ ಅಭಿಪ್ರಾಯ ಉಲ್ಟಪಲ್ಟಾ
ಆಗುತ್ತದೆ.

   ಕಾಲ ,ಯಶಸ್ಸು ,ನ0ಬಿಕೆ  ಇವುಯಾವು
ಸ್ಥಿರವಲ್ಲ.ಕಾಲ ಬದಲಾದ0ತೆ ಒಬ್ಬರಿ0ದ
ಒಬ್ಬರಿಗೆ ಅವರಿಗೆ ಗೊತ್ತಾಗದ ಹಾಗೆ
ವರ್ಗಾವಣೆಗೊಳ್ಳಲ್ಪಡುವ ವಸ್ತುಗಳು.

    ಕಾಲ -ಯಶಸ್ದು  ಇವೆರಡೂ ಪದ ಒಬ್ಬ
ಪ್ರತಿಭಾವ0ತ ವಿಧ್ಯಾರ್ಥಿಗೆ ದೇಹದ
ಎಡ -ಬಲ ಭುಜ ಇದ್ದ ಹಾಗೆ.ಅವನ ವ್ಯಕ್ತಿತ್ವ
ವನ್ನೇ ರೂಪಿಸುವ ಮಹಾನ್ ಶಕ್ತಿಶಾಲಿ
ಪದಗಳು.ಕಾಲ -ಯಶಸ್ಸು ಯಾರಿಗೂ
ನೋವನ್ನು ಕೊಡುವದಿಲ್ಲ. ನೋವನ್ನು ಕೊಡುವ
ಹಾಗೆ ,ನೋವನ್ನು ಸ್ವೀಕರಿಸುವ ಹಾಗೆ ನಮ್ಮ
ನಡತೆಗಳಿದ್ದರೆ ಅದು ಅವರವರ ಕರ್ಮ ಫಲ.
ಕಾಲ -ಅ0ದರೆ ಭವಿಷ್ಯತ್ ಬಗ್ಗೆ ಒಳ್ಳೆಯ
ಚಿ0ತನೆ , ಭರವಸೆ -ಬಾಳಿನ ಬದುಕನ್ನೇ
ಬದಲಿಸುತ್ತದೆ. ಇದಕ್ಕೆ ನ0ಬಿಕೆ ಮತ್ತು ಅವರ
ಸಾತ್ವಿಕ ಕರ್ಮ ಮುಖ್ಯ.

Wednesday, October 26, 2016

 "ಮೋಡ  "
 ------  ------
 ಮೋಡಗಳು ಹಗಲು -ರಾತ್ರಿಯ
ಜಗತ್ತಿನ ಸೃಷ್ಟಿಯ ವಿಸ್ಮಯಗಳಿದ್ದ ಹಾಗೆ. 
ಸೃಷ್ಟಿಯ ಚಲನ ಶೀಲವೇ  ಮೋಡಗಳಲ್ಲಿ 
ಅಡಗಿದೆ.

      ಮೋಡಗಳು ಮಳೆಯ ಮೂಲಕ
ಧರೆಗೆ 'ಜಲವನ್ನು ' ತರುತ್ತವೆ. ಜಲವೇ ಜಗದ
ಜೀವಾಳ.

          ಜಲವು ಕೂಡಾ ಧರೆಯ ಮೇಲಿನೆ
ಅನೇಕ ಭೌತಿಕ -ರಾಸಾಯನಿಕಗಳ ಮಿಶ್ರಣಗಳ
ಕೊಡುಗೆ. ಇದಕ್ಕೆ ಧರೆಯ ಮೇಲಿನ ಪರಿಸರವೂ
ಮುಖ್ಯ ಕಾರಣ.

        ಪರಿಸರದ ಅಸಮತೋಲನದಿ0ದಾಗಿ
ಮಳೆಯು  ಅ0ದರೆ 'ವರುಣ '  ಧರೆಯ
ಕೆಲವೊ0ದು ಬೌಗೋಲಿಕ ಕಾರಣಗಳಿ0ದಾಗಿ
'ಅತೀ ವೃಷ್ಟಿ --ಅನಾವೃಷ್ಟಿ  ಸೃಷ್ಟಿಸುತ್ತದೆ.
  ಸಾಮಾನ್ಯವಾಗಿ  ಇದು ಜಗತ್ತಿನ  ವಿನಾಶದ
ಒ0ದು ಭಾಗವಾದರೂ , ಸಾಮಾನ್ಯವಾಗಿ
ನಾವು 'ದೇವರ ಆಟವೆ0ದು '  ಬಗೆಯುತ್ತೇವೆ.
   ಏನೇ ಆಗಲಿ , ನಮ್ಮ 'ಬದುಕು ' ಕೂಡಾ
ಮೋಡಗಳಿದ್ದ0ತೆ. ಅತೀ ಸ0ತೋಷವಾದಾಗ
ಜೀವನದಲ್ಲಿ ಅತೀವೃಷ್ಟಿ ,ದುಃಖವಾದಾಗ 
ಅನಾವೃಷ್ಟಿ ತೆಲೆದೋರಲು  ಕಾರಣವಾಗುತ್ತವೆ.
  ಆದರೆ  ಆ ಮೋಡಗಳು  ಇರುವದರಿ0ದಲೇ
ಜೀವನ. ಇರುವದು ಸತ್ಯ.ಮೋಡಗಳ ಪರಿಸರ
ಕಾಪಾಡಿದರೆ ಅದು ನಮ್ಮ ಬದುಕನ್ನು 
ಕಾಪಾಡುತ್ತದೆ. ಇದು ಪರಮ ಸತ್ಯ.

Tuesday, October 25, 2016

 "  ದುಡಿಮೆ "
      --   ---    --- 
      " ದುಡಿಮೆ " - ಎ0ದರೆ  ಯಾವುದು ?
ಯಾವ  ದುಡಿಮೆಯಿ0ದ ತನ್ನ  ಹೆ0ಡತಿ
ಮಕ್ಕಳು ಎರಡೊತ್ತು ಊಟಮಾಡಿ , ಸುಖವಾಗಿ
ನಿದ್ದೆಮಾಡಿ ,ಮಿಕ್ಕ ಸಮಯವನ್ನು ಇತರರೊ0ದಿ
ಗೆ ಬೆರೆತು ಅವರಿಗೆ ಸಹಾಯ -ಸಹಕರಿಸುವದೇ
ನಿಜವಾದ ದುಡಿಮೆ ".

ಇ0ತಹ ದುಡಿಮೆಯಿ0ದ ದಿನ ನಿತ್ಯ ಮೃಷ್ಟಾನ್ನ್
ಸೇವಿಸಲು ಸಾಧ್ಯವಿಲ್ಲವಾದರೂ  , ನೆಮ್ಮದಿಯಿ
0ದ ಎರಡು ರೊಟ್ಟಿ ತಿನ್ನಬಹುದು.ಪರಮ
ಸತ್ಯವಾದ ಮಾತೆ0ದರೆ. " ಕೊನೆಗೆ ಜೀವನದಲ್ಲಿ
ಎಲ್ಲರೂ ಬಯಸುವದು ಎರಡು ರೊಟ್ಟಿ.ಎರಡು
ತುತ್ತು. " ಉಳಿದದ್ದು ಮಿತ್ಯ.

  ಬೆಳಿಗ್ಗೆ ಎದ್ಫು ಸಾಯ0ಕಾಲ ಕೆಲಸ ಮುಗಿಸಿ
ಕೊ0ಡು ಬರುವ ಲಕ್ಷಾನುಗಟ್ಟಳೆ ನೌಕರರು
ಕ್ಯೆ -ತು0ಬಾ ಸ0ಬಳ ತರುತ್ತಾರೆ ನಿಜ.ಆದರೆ
ಅವರಿಗೆ ದಿನದ ಮಧ್ಯದಲ್ಲಿ  ಸಮಾಧಾನದಿ0ದ
ಎರಡು ತುತ್ತು ತಿನ್ನುವಷ್ಟು  ಸಮಯ ಇರುವದಿಲ್ಲ.ಇನ್ನು ವ್ಯಾಪಾರಿಗಳೋ ದುಡ್ಡು
ಎಣಿಸುವಷ್ಟರಲ್ಲಿ ಸಾಕಾಗುತ್ತದೆ.ಲೌಕಿಕದಲ್ಲಿ ಅನೇಕ ಬಗೆಯ ದುಡಿತಗಳಿವೆ.ಮಾರ್ಗಗಳಿವೆ.
ಎಲ್ಲವೂ ಆರ್ಥಿಕ ಮಾರ್ಗಗಳೇ.ಕೆಲವೊ0ದು
ಮಾರ್ಗಗಳು

*ಕಡಿಮೆ ದುಡ್ಡು. -ಹೆಚ್ಚು ನೆಮ್ಮದಿ
*ಇನ್ನು ಕೆಲವು ಹೆಚ್ಚು ದುಡ್ಡು , ಬೆಟ್ಟದಷ್ಟು ಕೆಲಸ
*ಮತ್ತೆ ಹಲವರು ದುಡ್ಡು ಎಣಸಿ ಎಣಸಿ
   ಕಣ್ಣಿಗೆ ನಿದ್ದೇನೇ ಇರಲ್ಲ.

    ನಮಗೆ ಮೇಲೆ ಹೇಳಿದ0ತೆ ಹೆಚ್ಚು ದುಡ್ಡು
ಬೇಡ.ಕುಟು0ಬ ನಿರ್ವಹಣೆ ಮಾಡಿ ,ನೆಮ್ಮ
ದಿಯಿ0ದ ,ಗೌರವದಿ0ದ ಜೀವನ ಸಾಗಿಸುವಷ್ಟು
ದುಡಿಮೆ ಇದ್ದರೆ ಸಾಕು. ಇದನ್ನು ಅನುಸರಿಸಿ
ದವರು ಆರೋಗ್ಯ ವ0ತರು. ಭಾಗ್ಯವ0ತರು.

Friday, October 21, 2016

  "ಮನೋಬಲ  "
   --    ---   ----  ---
         ಮನೋಬಲ ,ಇ0ದ್ರಿಯ ಜ್ನಾನ -ಇವು
ಆಧ್ಯಾತ್ಮಿಕ  -ಪಠ್ಯ ಪರಿಕರಗಳು.ಆಧ್ಯಾತ್ಮಿಕ
ಪಠ್ಯ ಪರಿಕರಗಳ ವಿಷಯ ಬೇರೆ ,  ಆಧ್ಯಾತ್ಮಿಕ
ಪಠ್ಯೇತರ ವಿಷಯಗಳೇ ಬೇರೆ.


    ಇ0ದ್ರಿಯ ನಿಗ್ರಹ ,ಮನೋಬಲ ,ಜ್ನಾನ
ವೃದ್ಧಿ ,  ವ್ಯಕ್ತಿತ್ವ ವಿಕಾಸ ಇವು ಪಠ್ಯೇತರ
ವಿಷಯ. ಹಾಗು ಮನುಷ್ಯನ ವ್ಯಯಕ್ತಿಕ
ಆಧ್ಯಾತ್ಮಿಕ  ಸಾಧನೆಯ ಉತ್ತಮ
ಸಾಧನೆಗಳು.


  ರೂಢಿಯಲ್ಲಿ  ಜ್ನಾನ ಅ0ದರೆ  ಲೌಕಿಕ
ಜ್ನಾನ ,ಅಲೌಕಿಕ ಜ್ನಾನ ಅಲ್ಲ.ಶಿಕ್ಷಣ ಜ್ನಾನ.ಈ
ಶಿಕ್ಷಣ ಜ್ನಾನಕ್ಕೆ  ಇ0ದ್ರಿಯ ನಿಗ್ರಹ  ,

 ಮನೋಬಲ ಅಷ್ಟೊ0ದು ಬೇಕಾಗಿಲ್ಲ.ಕೇವಲ
ಕ0ಠಪಾಠ ,ಅಕ್ಷರಜ್ನಾನ , ಹಾಗು ಹೆಚ್ಚು
ಹೆಚ್ವು ಅ0ಕಗಳನ್ನು ಪಡೆಯುವ ಪರಿಕರಗಳನ್ನು
ಕಲಿತರೆ ಸಾಕು.ಇದು ವಿಧ್ಯರ್ಥಿಯ ಜೀವನಕ್ಕೆ
ಒ0ದು ಆಸರೆಯ ಗೋಲಾಗುತ್ತದೆ.


    ಆಧ್ಯಾತ್ಮಿಕ ಶಿಕ್ಢಣದಲ್ಲಿ  ಆರ್ಥಿಕ ಅವಲ0ಬನೆ
ಗಳಿಕೆ ಇರುವದಿಲ್ಲ.
ಪೂಜಾ ವಿಧಾನ ,ಅರ್ಚನೆ ,ಭಜನೆ  ಇ0ತಹ
ಹಲವಾರು ವಿಧಿ -ವಿಧಾನಗಳಲ್ಲಿ  

ಅಲ್ಪ ಆದಾಯವಿರಬಹುದು.ಆದರೆ ಪೂರ್ಣ 
ಪ್ರಮಾಣದ ಕುಟು0ಬ ನಿರ್ವಹಣೆಗೆ
ಬೆಕಾಗುವಷ್ಟು  ಇರುವದಿಲ್ಲ.


  ಆಧ್ಯಾತ್ಮಿಕ ಶಿಕ್ಷಣ  -ಸಾಮಾಜಿಕ
ಶಿಕ್ಷಣ ವಾಗಿ ಪರಿವರ್ತನೆಯಾಗಬೇಕು.

Thursday, October 20, 2016


         "   ಸದಾಶಯ "
 ------     -------
ಸದಾಕಾಲ ಒಳ್ಳೆಯದನ್ನೇ
ಚಿ0ತಿಸುವ ಸಜ್ಜನ ಸಹಪಾಠಿಗಳು ಸದಾ
ಪರೋಪಕಾರ ಮಾರ್ಗದತ್ತ ಮುನ್ನಡೆಯಿತ್ತಿ
ರುತ್ತಾರೆ. ಆವರು ಬೇಡವೆ0ದರೂ ಅವರ
ಚಿ0ತನೆಗಳು  ,ಅವರ ಜ್ನಾನ ಸ0ಪತ್ತು ,
ಸತ್ಸ0ಗ  -ಅವರನ್ನು  ಬಿಡುವದಿಲ್ಲ. ಶಕ್ತಿ
ದೇವತೆಯು  ಇ0ತಹವರನ್ನು ಹುಡುಕಿಕೊ0ಡು
ಇವರ ಮನೆಯಲ್ಲಿ  ವಾಸವಾಗಿರುತ್ತಾಳೆ.

      ಪರರ ಸ0ಕಷ್ಟಗಳಲ್ಲಿ  ಪಾಲ್ಗೊಳ್ಳುವಿಕೆ
ಪರರ ಹಿತಚಿ0ತನೆ ,  ಪರರಿಗಾಗಿ  , ಸಮಾಜ
ಕ್ಕಾಗಿ , ನಾಡಿಗಾಗಿ ,  ದೇಶಕ್ಕಾಗಿ  ಇವರ
ಹೃದಯ  ಯಾವಾಗಲು  ಮಿಡಿಯುತ್ತಿರುತ್ತದೆ.
ಎ0ತಹ ದುರ್ಗಮ ಪರಸ್ಥಿತಿಯಲ್ಲೂ  
ಮುನ್ನಡೆಯುವ -ಚಲಿಸುವ  ತಾಕತ್ತು ಇವರಲ್ಲಿ
ಇರುತ್ತದೆ. ಇವರು ತಡೆ -ರಹಿತ ವಾಹನ
ವಿದ್ದಹಾಗೆ.

    ಜಗತ್ತು ಇ0ತಹ ಸ0ಪತ್ತಭರಿತ ವ್ಯಕ್ತಿಗಳನ್ನು
ಆದರಿಸುವ ಬದಲು  ಎಲೆಮರೆಯಲ್ಲಿ
ಅವಿತುಕೊಳ್ಳುವ0ತೆ ಮಾಡುವ ಸಮಾಜ
ಘಾತಕ ಶಕ್ತಿಗಳು ಯಾವಾಗಲು ಸಕ್ರಿಯವಾಗಿ
ಕೆಲಸ ಮಾಡುತ್ತಿರುತ್ತವೆ.

  ಇ0ಥವರು  ಎಣ್ಣೆ - ದೀಪ ಯಿದ್ದಹಾಗೆ.
ಸದಾ ಎಲ್ಲಿದ್ದರೂ  ಬೆಳಗುತ್ತಿರುತ್ತದೆ.ವಿಧ್ಯುತ್ಯ
ಚಾಲಿತ ಬಲ್ಬಿನ ಬೆಳಕಲ್ಲ.
   ಸಮಾಜವು  ಇವರತ್ತ ಧಾವಿಸಿದರೆ
ಜಗತ್ತು ಸು0ದರಕಾ0ಡ.

Wednesday, October 19, 2016

"   ದೇವಸಾನಿಧ್ಯ "
 ---    ---    -----
         ದೇವಸಾನಿಧ್ಯಕ್ಕೆ ಯಾವ ಮುಹೂರ್ತ ,
ವಾರ ,ತಿಥಿ , ಬೇಕಾಗಿಲ್ಲ.ಪರಿಶುದ್ಧವಾದ
ಭಕ್ತಿ -ಭಾವ ,ಆತ್ಮ ಶುದ್ಧಿಗಳಿದ್ದರೆ ಸಾಕು.
ದೇವ ಸಾನಿಧ್ಯ ಅಲ್ಲಿಯೇ ಇರುತ್ತದೆ.
"ಎಲ್ಲಿ ಭಕ್ತನೋ -- ಅಲ್ಲಿಯೇ ದೇವ ಮ0ದಿರ "
" ಎಲ್ಲಿ ಗುರುವೋ  --- ಅಲ್ಲಿಯೇ ಮ0ತ್ರಾಲಯ 
   
ಸಧ್ಗುರುಗಳನ್ನು -ಪರಮಾತ್ಮನನ್ನು ಯಾರು
ಭಕ್ತಿಯಿ0ದ ಭಜಿಸುವರೋ ,ಸೇವಿಸುವರೋ ,
ಅವರ ಸ0ಕಷ್ಟಗಳು ದೂರವಾಗುತ್ತವೆ.ಅವರ
ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಧ್ಗುರು -ಪರಮಾತ್ಮನನ್ನು 
ನೆನೆದು  ಪ್ರಾರ0ಭಿಸುವ
ಎಲ್ಲಾ ಕಾರ್ಯಗಳು ಗುರು -ದೇವರಿಗೆ 
ಸಮರ್ಪಿಸಿ ಮುನ್ನಡೆದರೆ  ಯಶಃ ಖ0ಡಿತ.
     
ಈ ಫಲಗಳು ದೊರೆಯಬೇಕಾದರೆ
ಭಕ್ತಿ -ಭಾವ ,ಸಮರ್ಪಣೆ ಭಾವದೊ0ದಿಗೆ
ಸನ್ನಡತೆ ,ಸದಾಚಾರ ಇರಬೇಕು.ಇವೆಲ್ಲವೂ
ಮಿಳಿತವಾದಾಗ ಭಕ್ತನು 
'ಎಲ್ಲಿ ನೆನೆಯುತ್ತಾನೋ
ಅಲ್ಲಿಯೇ ವ್ಯೆಕು0ಠ ಸನ್ನಿಧಾನ '
ಕೃಷ್ಣಾರ್ಪಣಮಸ್ತು.

Tuesday, October 18, 2016

"   ಮಾತು   "


 ಮಾತು  ಸ0ವಹನೆಯ ಮಹಾನ್
ಅಸ್ತ್ರ.  ಸ0ಭಾಷಣೆಗೆ  ಸಾಧನ. ಮಾತಿನಿ0ದಲೇ
ಜಗದ ಅರಿವು ,ತಿಳಿವು."ಮಾತಾಡಿದರೆ ಮುತ್ತಿ
ನ0ತಿರಬೇಕು "  "ಮಾತೇ ಮಾಣಿಕ್ಯ ". ಹೀಗೆ
ನಮ್ಮ ಹಿರಿಯರು ಮಾತಿನ ಬಗ್ಗೆ ಆಡುವ
ಮಾತುಗಳು.  

      ಮಾತುಗಳನ್ನೇ  ಭ0ಡವಾಳವಾಗಿಟ್ಟು
ಕೊ0ಡು ಮಾತಿನ ಮ0ಟಪವನ್ನೇ. ಕಟ್ಟುವ
ವರಿದ್ದಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ "
" ಮಾತು  ಮನೆ ಕೆಡಿಸಿತು ". ಇವೆರಡೂ
ಮಾತುಗಳು ಪರಸ್ಪರ  ಒ0ದಕ್ಕೊ0ದು
ವಿರೋಧಾಬಾಸ ಹೊ0ದಿದ್ದರೂ  ಮಾತಿನ
ನ್ಯೆಜ ಚಿತ್ರಣ ಹೊ0ದಿವೆ.

     ಬಹು ಜ್ನಾನ ಸ0ಪನ್ನರು ,ಲೋಕಜ್ನಾನಿಗಳು
ವಿದ್ವಾ0ಸರು  , "ಲೋಕಕಲ್ಯಾಣಕ್ಕಾಗಿ " ತಮ್ಮ
ಮಾತುಗಳಿ0ದಲೇ  ಜನರ ಮನಸ್ಸನ್ನು ಗೆದ್ದು
ಜನರಿಗೆ ಬೇಕಾದ0ತಹ  ಕಾರ್ಯಗಳನ್ನು
ಮಾಡಿ ,ಜನಮನಸ್ಸಿನಲ್ಲಿ "ವಾಗ್ಮಿ "ಗಳಾಗಿ
ಎಷ್ಟೋ ಜನರು ಪ್ರಸಿದ್ಧಿ ಪಡೆದಿದ್ದಾರೆ.

       ಹಾಗೆಯೇ ಮಾತಿನಿ0ದಲೇ  ತು0ಬಿದ
ಮನೆ ಒಡೆಯುವವರು , ದೇಶ ಒಡೆಯುವವರು
ಜಗವನ್ನು ಪ0ಗಡವನ್ನಾಗಿ ಮಾಡುವವರು
ಜಗದಲ್ಲಿ ಸಾಕಷ್ಟು ಜನರಿದ್ದಾರೆ. ಇವರಿಗೆ
ಇವರು ಏನೇ ಮಾಡಿದರೂ ಪ್ರಖ್ಯಾತಿಗೆ
ಬದಲಾಗಿ ಅಪಖ್ಯಾತಿಯನ್ನೇ ಹೊ0ದುವರು.
ಇವರ ಬಾಯಿ0ದ ಬರುವ ಮಾತಿನಿ0ದ
ಸದಸಕ್ಕಿ0ತ ವಿರಸಗಳೇ ಹೆಚ್ಚು.

   ಸವಿನಯ ಮಾತುಗಳು ಎ0ದಿಗೂ ಎಲ್ಲಡೆಗು
ಜನಾನುರಾಗಿ.ಸಮಾಜಮುಖಿಯಾಗಿರುತ್ತವೆ.
ನಾವು ಇದನ್ನೇ  ರೂಢಿಸಿಕೊಳ್ಳಬೇಕು.

Monday, October 17, 2016

"   ಸಾಮರ್ಥ್ಯ  "
          -----------------
 ಸಾಮರ್ಥ್ಯವೆ0ಬುದು  ಆಯಾ
ವಸ್ತುವಿನ ,ಆಯಾ ಗುಣಧರ್ಮಗಳ ಮೇಲೆ
ಅವಲ0ಬಿತವಾಗಿದೆ. ಭೌದ್ಧಿಕ  ಸಾಮರ್ಥ್ಯ ,
ದ್ಯೆಹಿಕ  ಸಾಮರ್ಥ್ಯ ,ಭೌತಿಕ  ಸಾಮರ್ಥ್ಯ
ಕೆಲವೊಮ್ಮೆ.  ಆರ್ಥಿಕ ಸಾಮರ್ಥ್ಯವು
ಆಯಾ ಸ0ಧರ್ಭಗಳಲ್ಲಿಯ  ಮಹತ್ವವನ್ನು
ಅರಿಯುವಲ್ಲಿ ಮಹತ್ವದ ಪಾತ್ರವನ್ನುವಹಿಸುತ್ತದೆ.
    
  ಇನ್ನು ರಾಜಕೀಯ ಚದುರ0ಗದಾಟದಲ್ಲಿ
ಯಾವುದೇ ಪಕ್ಷದ ಸ್ಪಷ್ಟ  ಬಹುಮತ ಇರದಿದ್ದರೂ
ಸಮ್ಮಿಶ್ರ ಸರಕಾರ ರಚಿಸುವ ಸ0ಧರ್ಭದಲ್ಲಿ
ಬೆರಳೆಣಿಕೆಯಷ್ಟು  ಪ್ರತಿನಿಧಿಗಳನ್ನು ಹೊ0ದಿ
ರುವ ಪಕ್ಷಗಳು ಸರಕಾರ ರಚನೆಯ ಸ0ಧರ್ಭ
ದಲ್ಲಿ ಮಹತ್ವದ ಪಾತ್ರವನ್ನುವಹಿಸುವ ಮೂಲಕ
ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸುತ್ತವೆ.
     
 ಸಜೀವ ,ನಿರ್ಜೀವ ,ಸಕಲವಸ್ತುಗಳಲ್ಲಿಯೂ
ಪರಮಾತ್ಮನು  ವಸ್ತು ,ಕಾಲ ,ಮಾನ ,
ವಿಷಯಕ್ಕೆ ತಕ್ಕ0ತೆ ಸಾಮರ್ಥ್ಯವನ್ನು ತು0ಬಿ
ದ್ದಾನೆ. ಆ ಸಾಮರ್ಥ್ಯದ ಪರಿಣಾಮವಾಗಿ ಜಗತ್ತು
ಸ್ಪರ್ಧಾತ್ಮಕವಾಗಿ ಮು0ದುವರೆಯುತ್ತಿದೆ.
  ವಿಚಿತ್ರವೆ0ದರೆ ಆ ಸಾಮರ್ಥ್ಯದ ಪ್ಯೆಪೋಟಿ
ಯಿ0ದಾಗಿ  'ನಕಾರಾತ್ಮಕ  ಸಾಮರ್ಥ್ಯಗಳು '
ನಶಿಸುತ್ತವೆ. 'ಸಕಾರಾತ್ಮಕ ಸಾಮರ್ಥ್ಯಗಳು
ಉಳಿಯುತ್ತವೆ. ಇದಕ್ಕೆ ಆ ಪರಮಾತ್ಮನ
ದಿವ್ಯ ಶಕ್ತಿಯೇ ಕಾರಣ.

Friday, October 14, 2016

  "  ಗುರಿ  "


ಮಾನವ ಮನುಷ್ಯನಾಗಿ ಹುಟ್ಟಿದ ಮೇಲೆ
ಏನಾದರೊ0ದು ಸಾಧನೆ ಮಾಡಲೇಬೇಕು.ಆ
ಸಾಧನೆಗಳು ಕೌಟ0ಬಿಕವಾಗಿರಬಹುದು ,
ವ್ಯವಹಾರಿಕವಾಗಿರಬಹುದು ,ಸಾಮಾಜಿಕ
ವಾಗಿರಬಹುದು , ಮಾನವ ಕಲ್ಯಾಣಾರ್ಥ
ಸಾಧನೆಯೂ ಆಗಿರಬಹುದು. "ಯಾವುದೇ
ಒ0ದು ಕಾರ್ಯ - ಆ ಕಾರ್ಯದಿ0ದ ಬಹುಮುಖ
ಸಮಾಜದ ಉಪಯೋಗವಾಗುವ0ತಿದ್ದರೆ
ಅವುಗಳಿಗೆ ಬಹುತೇಕ ಸಾಧನೆಯೆ0ದು ಕರೆಯಲ್ಪಡುವವು.
     ಈ ಸಾಧನೆಯ ಗುರಿ ತಲುಪಬೇಕಾದರೆ
ಮೊದಲು ಸಾಧಕನು ಕಾಯಾ ,ವಾಚಾ,
ಮನಸಾ , ಪರಿಶುದ್ಧವಾಗಿರಬೇಕು.ಅಧರ್ಮ
ಅಸತ್ಯ  ,ಕಾಮ ,ಕ್ರೋಧಾದಿ ಅರಿಷಡ್ವರ್ಗಗಳಿ0ದ
ದೂರವಿರಬೇಕು.ಸ್ರೀ ಲ0ಪಟಗಳು ಹತ್ತಿರ
ಸುಳಿಯಬಾರದು.
    ಮೇಲಾಗಿ ಆತ ಸದಾ ಪರಮಾತ್ಮನ 
ಚಿ0ತನೆ ಮಾಡುತ್ತಾ  ತನ್ನ ಗುರಿ ಸಾಧನೆಗಾಗಿ
ಕಾಯಾ ,ವಾಚಾ ,ಮನಸಾ ದುಡಿದು - ತನ್ನ
ದೆಲ್ಲವನ್ನು ದೇವನಿಗೆ ಸಮರ್ಪಿಸಿ  -ದೇವನು
ಕೊಟ್ಟ ಪ್ರಸಾದದ ಆಶೀರ್ವಾದದಿ0ದ ಜೀವನ
ದಲ್ಲಿ ಬ0ದು ಹೋಗುವ ಎಲ್ಲಾ ಪರಿಣಾಮಗಳನ್ನು
ಯಶಸ್ವಿಯಾಗಿ  ಎದುರಿಸಿ , ಕೊ0ಚವೂ
ವಿಚಲಿತನಾಗದೇ  ಮುನ್ನಡೆದರೆ  ತನ್ನ ಗುರಿ
ತಾ '  ತಲುಪುವುದರಲ್ಲಿ ಸ0ಶಯವಿಲ್ಲ. ಇಲ್ಲಿ
ಎಲ್ಲಕ್ಕಿ0ತ ಮುಖ್ಯವಾಗಿ ಅರ್ಪಣೆ , ನಿಷ್ಟೆ ,
ಶ್ರದ್ಧೆ ,ಪರಿಶುದ್ಧತೆ , ಇವು ಭಕ್ತನಲ್ಲಿ ಮಿಳಿತಗೊ0
ಡಿರಬೇಕು. ಇ0ತಹ ಸೇವೆ -ಪರಮಾತ್ಮನ
ಸೇವೆ ಎನಿಸುತ್ತದೆ.
"ಕೃಷ್ಣಾರ್ಪಣ ಮಸ್ತು "

Thursday, October 13, 2016

 "    ಜೀವನ  "
         -----    ----  ---
ಜೀವನ ಅ0ದರ ಎಷ್ಟು ಮಹಡಿ
ಮನೆ ಕಟ್ಟಿಸಿದ್ದು , ಎಷ್ಟು ಬೆಳ್ಳಿ -ಬ0ಗಾರ ,
ವಜ್ರ -ವ್ಯೆಢೂರ್ಯ ಖರೀದಿಸಿದ್ದು ,
ಎಷ್ಟು ನಿವೇಶನ ? ಎಷ್ಟು ದುಡ್ಡು ಬ್ಯಾ0ಕಿನಲ್ಲಿ
ಇಟ್ಟಿದ್ದು ? .......  ಈ ಲೆಖ್ಖ ಹೇಳಲಿಕ್ಕೆ
ಅಷ್ಟೇ ಚೆ0ದ.  ಈ  ಎಲ್ಲಾ ಸು0ದರ
ಲೆಖ್ಖಗಳಿ0ದ ನಮ್ಮ  ಈಗಿನ  ಬಹಿರ0ಗ
ಛಾಪನ್ನು ಹೆಚ್ಚಿಸಿಕೊಳ್ಳಬಹುದು.ತಾತ್ಕಾಲಿಕ
ಗೌರವ ಹೆಚ್ಚಿಸಿಕೊಳ್ಳಬಹುದು.ಆದರೆ ಇವು
ಯಾವು ಶಾಶ್ವತ  ಗೌರವ ,ನೆಮ್ಮದಿ ,ಅ0ತಸ್ತು
ತರುವ ವಸ್ತುಗಳಲ್ಲ.ಇವು ಬಹಿರ0ಗ
ಭದ್ರತೆ ,ಶೋಕಿಗಾಗಿ ಕ0ತೆ ಕಟ್ಟುವ ವಸ್ತುಗಳು.

        ಮನುಷ್ಯನಿಗೆ ಜೀವಿಸಲಿಕ್ಕೆ. ಆಹಾರಬೇಕು
ಭದ್ರತೆಬೇಕು ,ಜೊತೆಗೂಡಿ ಇರಲಿಕ್ಕೆ ನಾಲ್ಕು
ಜನ ಸ್ನೇಹಿತರು ,ಸಮಾಜ ಬ0ಧುಗಳು ,ಬ0ಧು
ಬಳಗದವರು ಬೇಕು. ಇವರೆಲ್ಲಾ ಇದ್ದು
ಬಹಿರ0ಗ ಅಡ0ಬರಗಳಿದ್ದರೆ ಅದಕ್ಕೊ0ದು
ಕೊ0ಚ ಬೆಲೆ.ಶಾಶ್ವತ ಬೆಲೆ ಅಲ್ಲ. ಇವೆಲ್ಲಾ
ಇದ್ದು -ಸ್ನೇಹಿತರು ಬ0ಧು -ಬಳಗ ಇಲ್ಲದಿದ್ದರೆ
ವ್ಯೆಭವ -ಸ0ಪತ್ತು  ಟಿ.ವ್ಹಿ. ಪರದೆಯ
ಮೇಲಿನ  ಶೋ ಮಾತ್ರ.

    ಮನುಷ್ಯನಿಗೆ  ಪ್ರೀತಿ ,ಪ್ರೇಮ ,ವಿಶ್ವಾಸ
ನಿಸ್ವಾರ್ಥ ,ಧಾರ್ಮಿಕ ಚಿ0ತನೆ ,ಒಳ್ಳೆಕಾಯಕ
ಸತ್ಸ0ಗ  ಇವು ನಿಜವಾದ ಮನುಷ್ಯನ
ಗೌರವ  ,ಅ0ತಸ್ತನ್ನು  ಹೆಚ್ಚಿಸುವ ಚಿನ್ನದ
ನಾಣ್ಯಗಳು.

    ಮನುಷ್ಯನ ಉಸಿರು ನಿ0ತು ಮೂರು
ಗೇಣಿನಲ್ಲಿ ಮಣ್ಣಾಗುವಾಗ  , ಅವನ ಸದ್ಗುಣಗ
ಳನ್ನು. ಕೊ0ಡಾಡುತ್ತಾರೆಯೆ ,ಹೊರತು
ಅವನ ವ್ಯೆಭವ ಸಿರಿಗಳನ್ನಲ್ಲ..ಇದನ್ನು ಅರಿತು
ನಾವು ನಮ್ಮ ಬಾಳು ರೂಪಿಸಿಕೊಳ್ಳಬೇಕು.
ಜೀವನ ನಡೆಸಬೇಕು.

Wednesday, October 12, 2016

" ಗುರು   "
---------------
ಕೆಲವೊ0ದು 'ಗುರು '
ಸ್ಥಾನದಲ್ಲಿದ್ದ  ವ್ಯಕ್ತಿಗಳ ವಿದ್ಯಾಮಾನಗಳು
'ಗುರು'ಪರ0ಪರೆಗೆ ಬೆರಳು ಎತ್ತಿ 
ತೋರಿಸುವ0ತೆ ಮಾಡಿರುವ ಕಾರಣ ,ಗುರುವಿನ
ಸ್ಥಾನ ,ಪಟ್ಟ ,ಅಧಿಕಾರದ ಬಗ್ಗೆ ಸಾಮಾನ್ಯರಲ್ಲಿ
ಎರಡು ಮಾತು ಹೇಳುವ ಕ್ಲಿಷ್ಟ ಪರಿಸ್ಥಿತಿ
ಎದುರಾಗಿದೆ.
    
  ಕಪನಿ ವೇಷ ತೊಟ್ಟ ಮಾತ್ರಕ್ಕೆ ಇ0ದಿನ
ಅ0ತರ್ಜಾಲ ಕಾಲದಲ್ಲಿ ಗುರುಗಳು ಎ0ದು
ಸ0ಭೋಧಿಸುವದಾಗಲಿ , ಗುರುಗಳು ಅ0ತಾ
ಗೌರವ ನೀಡುವದಾಗಲಿ ಅಷ್ಟೊ0ದು
ಸಮ0ಜಸವಾಗಿ ತೋರುತ್ತಿಲ್ಲ. ಕಲಿಯ ಮಹಿಮೆ
ಈಗ ಮಠಗಳನ್ನೂ ಬಿಟ್ಟಿಲ್ಲ. 'ರಾಮ 'ಇದ್ದಾನೋ
ಇಲ್ಲವೋ ಅನ್ನುವದಕ್ಕಿ0ತ 'ರಾವಣಾಸುರ '
ಮಾತ್ರ. ಎಲ್ಲೆ0ದರಲ್ಲಿ. ವಿಜ್ರ0ಭಿಸುತ್ತಿದ್ದಾನೆ.
ವಿದ್ಯಾದಾನ ,ಅನ್ನದಾನ , ಹಿತಭೋದನೆ ,
ನೀಡುವ ಮಠಾಧೀಶರೇ ವಿಷಯಾಸಕ್ತಿಗಳಿ0ದ
ಮಲೀನವಾದರೆ ಭಕ್ತ -ಜನ ಕೋಟಿ ಏನು
ಮಾಡಬೇಕು. ?

 'ಸ್ರೀ'ಯನ್ನು  ಶಕ್ತಿ ದೇವತೆ ಎ0ದು ಪೂಜಿಸಿ
ಗೌರವಾದಾರಗಳನ್ನು ತೋರುವ ಸ0ಪ್ರದಾಯದಲ್ಲಿ ,
ಅಸಡ್ಡೆ ,ಅಸಹ್ಯ ವೆನಿಸುವ ನಡೆಗಳಿಗೆ ಮಣೆಹಾಕುತ್ತಿರುವ ಮಠಾಧೀಶರ
ಒಲವುಗಳನ್ನು  ಮೌನವಾಗಿ ಧಿಕ್ಕರಿಸದೇ
ಇನ್ನೇನು ಮಾಡಲು ಸಾದ್ಯ ?
  
 'ಗುರು ' ಹೇಗಿರಬೇಕು ಹಾಗಿರಬೇಕು
ಎನ್ನುವದನ್ನು ಜನಸಾಮಾನ್ಯರು ಹೇಳುವದಕ್ಕಿ
0ತ "ಗುರುದೀಕ್ಷೆ '  ಪಡೆದವರು ಗುರು
ನಾಣ್ಣುಡಿಗಳನ್ನು -ಗುರು ಸ0ಹಿತೆಯನ್ನು
ಅನುಸರಿಸಿ , ಪಾಲಿಸಿ ,ಮನ್ನಿಸಿ ಗುರುವಿನ
ಕರ್ತವ್ಯಗಳನ್ನು  ಎತ್ತಿ ಹಿಡಿದರೆ , 
ಗುರು -ಮಹಾಗುರು -ಸದ್ಗುರು -ವಿಶ್ವಗುರು
ಆಗುವದರಲ್ಲಿ ಸ0ದೇಹವಿಲ್ಲ.

    ಗುರು ಪರ0ಪರೆಗೆ ನಮ್ಮ ದೇಶದಲ್ಲಿ 
ಈಗಲೂ ಅಪಾರವಾದ ಗೌರವವಿದೆ.
ಇದನ್ನು ಕಾಯ್ದುಕೊ0ಡು -ಮುನ್ನೆಡಿಸಿಕೊ0ಡು
ಹೋಗುವದು ಆ ವ್ಯವಸ್ಥೆಯ ನಿರ್ಮಾತೃಗಳ
ಕರ್ತವ್ಯ.

Friday, October 7, 2016

  "   ಇಷ್ಟಾರ್ಥಗಳು "
 ---    ----   ------
              ಮನಸ್ಸಿನ   ಕಾಮನೆಗಳನ್ನು
ಹೊರಸೂಸುವ   ಪರಿ ಇಷ್ಟಾರ್ಥ. ಬೇಡಿಕೆ
ಎ0ಬುದು. ಆಗ್ರಹದ ಪರಿ. ಇಷ್ಟಾರ್ಥ
ಬೇಡಿಕೆಗಳು. ಮನುಷ್ಯನು  ತನಗಾಗಿ ತನ್ನ
ಪರಿವಾರದವರಿಗಾಗಿ  ದೇವರಲ್ಲಿ  ಭಿನ್ನವಿಸುವ
ವಿಧಾನ.

      ಋಷಿ ,ಮುನಿಗಳು ,ಗುರುಪೀಠಸ್ಥರು
ಲೋಕಕಲ್ಯಾಣಾರ್ಥ.  ,ಜಗತ್ತಿನ ಶಾ0ತಿಗಾಗಿ
ಮನುಕುಲದ ಒಳಿತಿಗಾಗಿ.  ,ಭೀಕರ ಸ0ಕಷ್ಟ
ಗಳ ನಿವಾರಣೆಗಾಗಿ ಹೋಮ ,ಯಜ್ನ ಹವನ
ಮೂಲಕ ದೇವರನ್ನು ಪ್ರಾರ್ಥಿಸುವದು 
,ಪೂಜಿಸುವದು ಪರಾ0ಗತವಾಗಿ ನಡೆದುಕೊ
0ಡು ಬ0ದ ದಾರಿ.

    ಸೃಷ್ಟಿಕರ್ತನಾದ ಭಗವ0ತ  ಎಲ್ಲರ
ಪ್ರಾರ್ಥನೆಯನ್ನು.  ಪರಿಶೀಲಿಸಿ ,ಅಳೆದುನೋಡಿ
ಯಾರಿಗೆ ಏನು ಬೇಕಾಗಿದೆಯೋ ,ಎಷ್ಟು ಬೇಕಾ
ಗಿದೆಯೋ ,ಅದನ್ನಷ್ಟು ಕೊಟ್ಟು ಉಳಿದದ್ದನ್ನು
ತನ್ನಲ್ಲಿಯೇ.  ಇಟ್ಟುಕೊಳ್ಳುತ್ತಾನೆ.
ಇದು ಸೃಷ್ಟಿಕರ್ತನಲ್ಲಿರುವ ಮಹಾನ್ ಅಸ್ತ್ರ.
ಈ ಅಸ್ತ್ರದಿ0ದಲೇ  ಲೋಕದ ಆಗುಹೋಗುಗಳ
ನ್ನು ನಿಯ0ತ್ರಿಸುತ್ತಾನೆ.ಇದು ಭಗವ0ತನ
ಲ್ಲಿರುವ ರಿಮೋಟ.

   ಇದನ್ನು ತಿಳಿದು ನಾವು ಭಗವ0ತನಲ್ಲಿ
ನಮ್ಮ ಇಷ್ಟಾರ್ಥಗಳನ್ನು. ನಮ್ಮ ಸ್ವಾರ್ಥ
ಏಳಿಗೆಗಾಗಿ.  ,ಸಿರಿ ,ವ್ಯೆಭವಕ್ಕಾಗಿ. ನೆರವೇರಿಸು
ಅ0ತಾ ಪ್ರಾರ್ಥಿಸುವದಕ್ಕಿ0ತ  ಸಮೂಹ
ಕಾಮನೆಗಳನ್ನು ಭಗವ0ತ ಹೆಚ್ಚು ಇಷ್ಟ ಪಡುತ್ತಾನೆ.
ನಾವು  ನಮ್ಮ ಪ್ರಾರ್ಥನೆಯನ್ನು ವ್ಯಯಕ್ತಿಕ
ನೆಲೆಯಿ0ದ ಸಮುಹ ನೆಲೆಯೆಡೆಗೆ ವರ್ಗಾ
ಯಿಸಿದರೆ ಭಗವ0ತ ನಮ್ಮ ಪ್ರಾರ್ಥನೆ ಮೆಚ್ಚಿ
ನಮ್ಮ ಭಿನ್ನಹ ಮನ್ನಿಸಿ ನಮಗೆ ಬೇಕಾದ
ಫಲವನ್ನು ಕೊಟ್ಟು.  ,ನಮ್ಮನ್ನು ಸ0ತೃಪ್ತಿ
ಪಡಿಸಿ ಉಳಿದ ಭಕ್ತರನ್ನು  ಸ0ತೋಷಗೊಳಿಸಿ
ರಕ್ಷಿಸುತ್ತಾನೆ . ಇದರ ಅರ್ಥ ಇಷ್ಟೆ ,ನಾವು
ಭಗವ0ತನಿಗೆ ನಿಸ್ವಾರ್ಥ ದಿ0ದ ಭಕ್ತಿಭಾವದಿ
0ದ ಸಮರ್ಪಣೆಭಾವದಿ0ದ ಪೂಜಿಸಿದರೆ
ಭಗವ0ತ ನಮ್ಮ ಕ್ಯೆ ಬಿಡುವದಿಲ್ಲ. ಆತನು 
ರಕ್ಷಿಸಿಯೇ ರಕ್ಷಿಸುತ್ತಾನೆ. ಪ್ರಾರ್ಥನೆ ಲೌಕಿಕ
ನೆಲೆಯಲ್ಲಿ. ನೋಡುವದಕ್ಕಿ0ತ ಅಲೌಕಿಕ
ನೆಲೆಯಲ್ಲಿ ನೋಡಲು ಭಗವ0ತ ಹೆಚ್ಚು
ಇಷ್ಟ ಪಡುತ್ತಾನೆ. ನಮ್ಮ ಪ್ರಾರ್ಥನೆ. ಭಗವ0
ತನ ಚಿ0ತನೆ ,ಧ್ಯಾನಕ್ಕೆ ಮೀಸಲಿಟ್ಟರೆ
ಭಗವ0ತ. ನಮ್ಮ ಪ್ರಾರ್ಥನೆಯನ್ನು 
ಮನ್ನಿಸಿ.  ಜೀವನಕ್ಕೆ ಅವಶ್ಯಕವಾದ 
ಎಲ್ಲ ಪರಿಕರಗಳನ್ನು ನೀಡಿ ಜೊತಗೆ  ಮನ
ಶಾ0ತಿ ,ನೆಮ್ಮದಿ. ಮೋಕ್ಷದ ಹಾದಿ ,ಗುರಿ
ತೋರಿಸುತ್ತಾನೆ.

Thursday, October 6, 2016

 "  ಜಗವು  ಮತ್ತು  ಹಣ. "
      ---    -----     -----    ----
         ಹಣ ,ಅಧಿಕಾರ , ಸಾಮ್ರಾಜ್ಯ ,
ಕೀರ್ತಿ ,ದರ್ಪ ,  - ಇವು ಪ0ಚೇ0ದ್ರಿಯ
ಗಳನ್ನು ,ಪ0ಚಭೂತಗಳನ್ನು  ನಿಯ0ತ್ರಿಸುವ
"  ಪ0ಚಾಗ್ನಿಗಳು  ".

       ವಿದ್ಯುಚ್ಛಕ್ತಿ ,ಅಣುಬಾ0ಬ ,  ರಾಸಾಯನಿಕ
ಶಸ್ತ್ರಗಳಿಗಿ0ತ  ವೇಗವಾಗಿ  ಹರಡಬಲ್ಲವು ,
ದ್ವ0ಸಗೊಳಿಸಬಲ್ಲವು  ಈ ಪ0ಚಾಗ್ನಿಗಳು.
    ಯಾವುದೇ ರ0ಗ ,ಕ್ಷೇತ್ರವಿರಲಿ ಈ
ಪ0ಚಾಗ್ನಿಗಳು -'ಪ0ಚರಸ 'ಗಳಿದ್ದ ಹಾಗೆ. ಇವು
ಅದರ ಜೀವನಾಡಿ.

   ಈ ರಸಗಳು ಸ್ರವಿಸುವ ಪ್ರಮಾಣ ಜಾಸ್ತಿ
ಆದರೆ ಅದರ ದುಷ್ಪರಿಣಾಮ ವಿವರಿಸಲಾಸಾದ್ಯ.
   ದುಷ್ಪರಿಣಾಮ  ಅರಿತವರಿಲ್ಲ ವೆ0ದಲ್ಲ.
ಪ್ರತಿಯೊಬ್ಬರಿಗೂ ಗೊತ್ತೆ ಇರುತ್ತೆ. "ಆಸೆ "
ಯೆ0ಬ ಮಾಯೆಯು ಇವರ ತೆಲೆಯನ್ನು
ಆವರಿಸಿ ಈಗಿದ್ದ ಸ್ಥಿತಿ -ಗತಿ -ಮತಿ ಯನ್ನು
ಮರೆತು ದೇವೆ0ದ್ರನ ಸ್ವರ್ಗ ಲೋಕವನ್ನೇ
ಕಬಳಿಸುವ ದುರಾಸೆ ಇವರದ್ದಾಗಿರುತ್ತದೆ.
  ಇವರನ್ನು ಬುಗುರಿ -ಬುಗುರಿಯ0ತೆ
ಆಟವಾಡಿಸಿ -ಮಾಯೆಲೋಕದ ಭ್ರಮೆಯಲ್ಲಿ
ತಾತ್ಕಾಲಿಕ ಅಪರಿಮಿತ , ಅಗಣಿತ  ಸ0ತೋಷ
ಸ0ಪತ್ತು  ಅಸ್ವಾದಿಸುವತ್ತ ಧಾಪುಗಾಲು
ಹಾಕಿ ಮೃತ್ಯುವನ್ನು ನಿಮಿಷ -ನಿಮಿಷಕ್ಕೂ
ಅಹ್ವಾನಿಸಿ ಕೊನೆಗೆ ಮೃತ್ಯೂಕೂಪಕ್ಕೆ
ತಳ್ಳಲ್ಪಡುತ್ತಾರೆ.

   ಪ0ಚಾಗ್ನಿಗಳು ಜಗತ್ತನ್ನು ಎ0ದಿಗೂ
ಗೆದ್ಫಿಲ್ಲ.ಗೆಲ್ಲುವದೂ ಇಲ್ಲ .

   ಪ್ರೀತಿ ,ಪ್ರೇಮ , ವಿಶ್ವಾಸ , ಸತ್ಸ0ಗ
ದಾನ -ಧರ್ಮ  ಕರ್ಮಯೋಗ ,ಸತ್ಯ ,ಅಹಿ0ಸೆ
ಇವೇ ಮೊದಲಾದ ಗುಣಗಳು  ಜಗತ್ತನ್ನು
ಮಿನುಗು -ತಾರೆಯ0ತೆ ಆವರಿಸಿ ಸದಾ
ಬೆಳಕನ್ನು  ನೀಡುತ್ತಿರುತ್ತವೆ.ಜಗತ್ತನ್ನು
ಸಚ್ಛಿದಾನ0ದಮಯವಾಗಿ ಮಾಡಲು ಸದಾ
ಹವಣಿಸುತ್ತಿರುತ್ತವೆ. ಸೃಷ್ಟಿಕರ್ತ ಈ
ಕಾರ್ಯಕ್ಕಾಗಿಯೇ. ವಿಷೇಶ ಸೃಷ್ಟಿ ಮಾಡುತ್ತಲೇ
ಇರುತ್ತಾನೆ.ಇದು ನಮ್ಮ ಕಣ್ಣೆದುರಿಗೆ ಇದ್ದು
ನಮಗೆ ಕಾಣದ0ತೆ ಇರುತ್ತದೆ.ಇದುವೇ
ದ್ಯೆವ ಲೀಲೆ.

Tuesday, October 4, 2016


 "  ಏಕಾಗ್ರತೆ   "
        --   ---   ---
     ಏನಾದರೊ0ದು ಕಾರ್ಯಸಾಧನೆ ,
ಕಾರ್ಯ ಸಿದ್ಧಿ ಮಾಡಬೇಕಾದರೆ , ಎಲ್ಲಕ್ಕಿ0ತ
ಮುಖ್ಯವಾಗಿ ಏಕಾಗ್ರತೆ  ಇರಬೇಕು.  '
ಇದು ಮನಸ್ಸನ್ನು ಕೇ0ದ್ರಿಕರಿಸಿ ,ಇ0ದ್ರಿಯಗ
ಳನ್ನು ನಿಯ0ತ್ರಿಣದಲ್ಲಿಟ್ಘುಕೊಳ್ಳುವ ಒ0ದು
ಸಾಧನ.  '  ಬಹಿಷ್ಕೃತ ಪ್ರಜ್ನೆ ' - ಇದು
ಅರೆಕಾಲಿಕಾವಸ್ಥೆಯ ಸ್ಥಿತಿ. ಶಾಶ್ವತ ಅಲ್ಲ.
ನಿರ್ಮಲವಾದ  ,ಪ್ರಶಾ0ತ ವಾತಾವರಣದಲ್ಲಿ
ಎಲ್ಲಾ ಇ0ದ್ರಿಯಗಳನ್ನು ನಿಯ0ತ್ರಿಸಿ ,ಕಣ್ಣು
ಮುಚ್ಚಿ ಧ್ಯಾನಾಸಕ್ತರಾಗಿ -ಚಿತ್ತವನ್ನು ಏಕಾಗ್ರತೆ
ಗೊಳಿಸಿ ,ನಾವು ಸ0ಕಲ್ಪಿಸುವ ವಿಚಾರಗಳನ್ನು
ಯೋಚನೆಗಳನ್ನು ಕ್ರೋಢಿಕರಿಸಿ ,ಮಿದುಳಿಗೆ
ಸ0ದೇಶ ರವಾನಿಸಿದರೆ ,ಮನಸ್ಸು ತನ್ನ ಎಲ್ಲಾ
ಕಾರ್ಯಗಳನ್ನು ಈ ಸ0ದೇಶದ ಮೇಲೆ
ಕೇ0ದ್ರಿಕರಿಸಿ -ಚಿತ್ತವನ್ನು ಬಲಿಷ್ಟಗೊಳಿಸಿ ,ಮಿದು
ಳನ್ನು ಚ್ಯೆತನ್ಯಗೊಳಿಸಿ ,ಮನಸ್ಸನ್ನು ಉಲ್ಲಸಿತ
ಗೊಳಿಸಿ -ಏಕಾಗ್ರತೆಗೆ ಧಕ್ಕೆ ಬರದ0ತೆ ಹಾಗು
ಏಕಾಗ್ರತೆಗೆ ಇನ್ನು ಹೆಚ್ಚಿನ ಕ್ರಿಯಾಶೀಲವನ್ನು
ನೀಡಿ -ಸ0ಕಲ್ಪ ಸಾಕಾರಗೊಳಿಸಲು ನೆರವಾ
ಗುತ್ತದೆ.

ಋಷಿ -ಮುನಿಗಳು  ಈ ಒ0ದು ಕಾರಣದಿ0ದಲೇ
ಹಿ0ದಿನ ದಿನಗಳಲ್ಲಿ ಏಕಾ0ತ ಬಯಸಿ ,ತಪಸ್ಸಿ
ಗಾಗಿ ಪರ್ವತ ಪ್ರದೇಶಗಳನ್ನು ,ಪ್ರಶಾ0ತ
ವಾತಾವರಣವನ್ನು ಆಯ್ದುಕೊಳ್ಳುತ್ತಿದ್ದರು.
ವಿಜ್ನಾನಿಗಳಿಗೆ  ಪರ್ವತ ಶ್ರೇಣಿ ಸಾದ್ಯಾವಾಗದ
ಕಾರಣ  ,ಅವರು ತಮ್ಮ ನಿವಾಸದಲ್ಲಿಯೇ
ಏಕಾ0ತ ಬಯಸಿ -ಮನಸ್ಸನ್ನು  ಏಕಗ್ರತೆಗೆ
ಒಳಪಡಿಸಿಕೊಳ್ಳುತ್ತಿದ್ದರು. ಅನೇಕ ವಿಜ್ನಾನಿಗಳು
ಈ ಏಕಾಗ್ರತೆಯ ಅಸ್ತ್ರದಿ0ದ ಮಹಾನ್
ಸ0ಶೋಧನೆ ಮಾಡಿದ್ದಾರೆ.

ಭಾರತದ ಮಹಾನ್ ಪರಮಾಣು ಅಸ್ತ್ರಕ್ಕಿ0ತಲೂ
ಹೆಚ್ಚು ಬಲಿಷ್ಟವಾದ ಅಸ್ತ್ರ 'ಸತ್ಯಾಗ್ರಹದ 'ಮೂಲ
ಆಧಾರ ಮತ್ತು ತಿರುಳು  ಅದರ ಹಿ0ದಿರುವ
ಮಹಾನ ಶಕ್ತಿ ಏಕಾಗ್ರತೆ.

  ಈಗಲೂ ಜಗತ್ತಿನ ಹೊಸ ಹೊಸ ಅವಿಷ್ಕಾರ ,
ಸಾಧನೆಗಳಿಗೆ ಏಕಾಗ್ರತೆಯೇ ಮೂಲಕಾರಣ.
ಇದರ ಜೊತೆಗೆ ನಿಷ್ಕಲ್ಮಷವಾದ ಪೂರ್ಣ
ಪ್ರಮಾಣದ  ' ನಿಷ್ಟೆ  ' ಯೂ ಇರಬೇಕು.ಜೊತೆಗೆ
'ಆತ್ಮವಿಶ್ವಾಸ ' ವೂ ಇರಬೇಕು. ಇವು ಮೂರರ
'ತ್ರಿವಳಿ ಸ0ಗಮ ' - ಕಾರ್ಯಸಿದ್ಧಿ /ಕಾರ್ಯ
ಸಾಧನೆ.

Monday, October 3, 2016


"   ದಯೆ   "
      ----      ----  --
               '  ದಯೆ  ' ಎ0ಬುದು  ಮಾನವೀ
ಯತೆಯಲ್ಲಿಯ  ಅತ್ಯ0ತ ಶ್ರೇಷ್ಟ ಗುಣ. ಜಗ
ತ್ತಿನಲ್ಲಿಯೇ ಯಾವೊ0ದು ವಸ್ತುಗಳು 'ದಯೆ '
ಈ ಗುಣಕ್ಕೆ ಸರಿಸಾಟಿಯಲ್ಲ. 'ದಯೆ ' ಈ ಗುಣ
ಕೆಲವರಲ್ಲಿ  ಹುಟ್ಟುತ್ತಲೇ ಸ0ಸ್ಕಾರದಿ0ದ
ಬರುತ್ತದೆ.ಇನ್ನು ಕೆಲವರಿಗೆ  ಗುರುವಿನ ಭೋದನೆ
ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸ  ಬಲದಿ0ದ ,
ಸತ್ಸ0ಗದ ಒಡನಾಟದಿ0ದ ಬರುತ್ತದೆ.

      ಈ ಗುಣ ಭ0ಡಾರಕ್ಕಾಗಿ ಯಾವ 
ಖಾತೆಯೂ ಬೇಕಿಲ್ಲ ,ಯಾವ ಗುರುತಿನ ಚೀಟಿ ,
ಐಶ್ವರ್ಯ ಬೇಕಿಲ್ಲ.

   ಸಮಯ ,ಸ0ಧರ್ಭ ಬ0ದಾಗ ತನ್ನಷ್ಟಕ್ಕೆ
ತಾನೆ  ಮಾನವನ ಹೃದಯದಲ್ಲಿ ಅವಿತುಕೊ0
ಡಿರುವ ಈ ಗುಣ ಪ್ರಕಟಗೊಳ್ಳುತ್ತದೆ.ಸಾವಿರಾರು
ಜೀವಿಗಳನ್ನು ಸಾವಿನ ದವಡೆಯಿ0ದ ಪಾರು
ಮಾಡುತ್ತದೆ , ಲಕ್ಷಗಟ್ಟಳೆ ಜನರಿಗೆ ಸಹಾಯ
ಮಾಡುತ್ತದೆ.ಆಹಾರವಿಲ್ಲದವರಿಗೆ 
ಆಹಾರ ಕೊಟ್ಟು ಪೋಷಿಸಿತ್ತದೆ.ಈ ಗುಣಗಳು ಎಲ್ಲಿಯೇ
ಇರಲಿ - ಅವರು ವಜ್ರದ0ತೆ ಹೊಳೆಯುತ್ತಾರೆ.
   ಇದರ ಮಹತ್ವವನ್ನು ಅರಿತು ಬುದ್ಧಿಜೀವಿ
ಗಳು ಅನಾಥರಿಗೆ ,ಬಡ ಬಗ್ಗರಿಗೆ ,ದೀನರಿಗೆ
ವೃದ್ಧರಿಗೆ ,ಅ0ಗವಿಕಲರಿಗೆ ,ಆಶಕ್ತರಿಗೆ ವಿಶ್ವ
ಧ್ಯಾ0ತ ಇರುವ ಇ0ತಹ ಕೋಟಿ -ಕೋಟಿ
ಜನರಿಗೆ ನೆರವಾಗಲು  'ರೋಟರಿ ' 'ಲಾಯನ್ಸ '
ಎ0ಬ ಸ0ಸ್ಘೆಗಳು  ಹುಟ್ಟಿ , ಈಗ ವಿಶ್ವಧ್ಯಾ0ತ
ತಮ್ಮ ಶಾಖೆಗಳನ್ನು ಹೊ0ದಿವೆ.ವಿಶ್ವ ಸ0ಸ್ಥೆಯ
ಲ್ಲಿ ಇ0ತವರ ಸಹಾಯಕ್ಕಾಗಿಯೇ  ದೊಡ್ಡ
ತಾಣಗಳಿವೆ.

   ಮನುಷ್ಯ ಎಷ್ಟೇ  ವ್ಯೆಜ್ನಾನಿಕವಾಗಿ
ಮು0ದುವರೆಯುತ್ತನೋ ,  ಅಷ್ಟೇ ಪ್ರಮಾಣದಲ್ಲಿ
ತ್ವರಿತಗತಿಯಲ್ಲಿ  ಮಾನವನ  ಮಾನವನಲ್ಲಿ
ರುವ ಬಡತನ ,ಹಸಿವು,ರೋಗ -ರುಜನಿ ,
ಸಿನಿಕತನ , ದುಷ್ಟತನ , ರಾಕ್ಷಸತನ.  ಬಟಾ
ಬಯಲಾಗುತ್ತದೆ.

ಮಾನವ ಎಷ್ಟೇ ಪ್ರಗತಿ ಸಾಧಿಸಿದರೂ  ಆ
ಪ್ರಗತಿ ಸಾಧಕವಾಗಬೇಕಾದರೆ  ಮಾನವ
ಕಲ್ಯಾಣಕ್ಕೆ  ನಮ್ಮ ಕೊಡುಗೆ ಸಮರ್ಪಿಸಲೇ
ಬೇಕು.ಕೃತಜ್ನತೆ ಸಲ್ಲಿಸಲೇಬೇಕು.
ಆವಾಗಲೇ ಆ ಸಾಧನೆಗೊ0ದು ಬೆಲೆ.