Sunday, September 27, 2015

"ಸ0ಗಾನ ಮಾತು "

ಕಲ್ಲು ಮುಳ್ಳು ಹಾದಿ ಬಲ್ಲವನು
ಜೀವನದಲ್ಲಿ  ಆನ0ದಿಸುತ್ತಾನೆ 
        
ಜನ ಮೆಚ್ಚುವ0ತಹ 
ಸರಕಾರವಿರಬೇಕು
ಸರಕಾರ ಮೆಚ್ಚುವ0ತಹ
ಅಧಿಕಾರಿಗಳಿರಬೇಕು.

Wednesday, September 23, 2015

 "ಸ0ಗಾನ ಮಾತು "

 ಕಾಲಕ್ಕ ತಕ್ಕ0ತೆ  ಸಾಮಾಜಿಕ
ನಿಯಮಗಳು ಬದಲಾಗುತ್ತವೆ.
ತಾ0ತ್ರಿಕ ನಿಯಮಗಳು
ಬದಲಾಗುವದಿಲ್ಲ.

ಆತ್ಮದ ಕಡೆಗೆ  ಓಗೊಡು
ಅದು  ಸರಿಯಾಗಿರುತ್ತದೆ

Sunday, September 20, 2015

  "ಸ0ಗಾನ ಮಾತು  "

ಉಡಾಫೆ ಮಾತುಗಳ ಸಹಾಯದಿ0ದ
ವ್ಯಕ್ತಿಯ  ಜವಾಬ್ದಾರಿ ಮಟ್ಟವನ್ನು
ಅರಿಯ ಬಹುದು  

ಆಸೆಗಳು ಗಾಳಿಪಟವಿದ್ದ0ತೆ .
"ಯಾಕ  ಅಳ್ತಿಯಾ  -ಬಾಳ ಸ0ಗಾತಿ -3 "

ಪತಿ ಪಾರಾಯಣದಾಗ ಸುಖ  ಐತೆ
ಸ್ವರ್ಗ  ಐತೆ  :  ಮತಿಯಿ0ದ ನಡಕೋಬೇಕು
ಅಮೃತ  ಐತೆ   .....1

ಕದ್ದು ಕೇಳ ಬಾರದು
ಹಾರಕಿ ಸುದ್ದಿ ಹೇಳಬಾರದು    
ಸುಳ್ಳು  ನ0ಬಬಾರದು
 ಸತ್ಯ ಮುಚ್ಚಿಡಬಾರದು
 ಹೆಣ್ಣಿಗೆ  ನಾಲ್ಕು ವೇದ ಇದ್ದಾ0ಗ
 ಯಾಕ  ಅಳ್ತಿ.  .......2

Thursday, September 17, 2015

" ಸ0ಗಾನ ಮಾತು  "

ಕಾಯ್ದೆ ದೃಷ್ಟಿಯಿ0ದ ಪ್ರಶ್ನಿಸಲು
ಅವಕಾಶವಿದ್ದರೂ
ಎಷ್ಟೋ ವಿಷಯಗಳು
ಬಾಯಿಬಿಡದೇ ಕಾಲಗರ್ಭದಲ್ಲಿ  
ಹುದಗಿ ಹೋಗುತ್ತವೆ.

ಕೊಲೆಯ ಸರಪಣಿಗಳ ಹಿ0ದೆ
ನಿಗೂಢತೆಯ
ಮುಸುಕು  ಇದ್ದೇ ಇರುತ್ತದೆ.
" ಯಾಕ ಅಳ್ತಿಯಾ  --ಬಾಳ ಸ0ಗಾತಿ  2 "

ಪುರಾಣಕ ಕರಕೊ0ಡು 
ಹೋಗಿಲ್ಲಾ0ತ  ಅಳಬ್ಯಾಡ
ಪುರಾಣ  !
ಹದಿಬದಿಯ  ಧರ್ಮದೊಳಗ್ಯೆತೆ
ಯಾಕ  ಅಳ್ತಿ  .........1

ಮಾವ  ಅತ್ತಿ 
ಸಿಟ್ಟಿಗೆದ್ದಾರ0ತ ಅಳಬ್ಯಾಡ
ತ್ಯಾವಯಿರತನಕ  ನೀರಯಿರತ್ಯೆತೆ
ಯಾಕ   ಅಳ್ತಿ  ..........2
   
ಹೆಣ್ಣಿಗೆ  ಮಾನ  ಒ0ದು  ಕಣ್ಣು
ಕಣ್ಣಿಟ್ಟು  ನೋಡಬೇಕು
ನೆರೆ ಹೊರೆಯವರನ್ನು
ಯಾಕ  ಅಳ್ತಿ    .........3 

Wednesday, September 16, 2015

 "ಸ0ಗಾನ ಮಾತು"

ಜಲ ವಿವಾದ ' ದಲ್ಲಿ
' ಜಲರೋಗ   '
ಬ0ದ0ತೆ ವರ್ತಿಸಬಾರದು.

ಜನಹಿತ ಮಾರಣ ಹೋಮವಾಗದ0ತೆ
ಕಾವಲುಗಣ್ಣಿರುಸುವದೇ
ಜನಪರ  ಸರಕಾರದ   
ಧ್ಯೇಯವಾಗಿರಬೇಕು.
"ಒಲವು"

ಒಲವೇ  ಪ್ರೀತಿ
ಒಲವೇ ಪ್ರೇಮ
ಒಲವೇ ನಿಲಯ
ಒಲವೇ ಪ್ರೇಮ ಮ0ದಿರ
ಒಲವಿನ  ಓ0ಕಾರ  ನಿತ್ಯ ಸತ್ಯ.
"ಯಾಕ ಅಳ್ತಿಯಾ   -- ಬಾಳ ಸ0ಗಾತಿ  -1 "

ಯಾಕ  ಅಳ್ತಿಯಾ  ಬಾಳ  ಸ0ಗಾತಿ
ಅಳಬ್ಯಾಡ  , ದುಃಖ ಪಡಬ್ಯಾಡ
ಬಾಳು  ಬೇವು  ಬೆಲ್ಲಯಿದ್ದಾ0ಗ  .....1

ಕರಿಯಾಕ ಬರಲಿಲ್ಲಾ0ತ  ಅಳಬ್ಯಾಡ
ಸರಿಯಾಗಿ ತಿಳ್ಕೊ, ಸೇವೆ
ಮಾಡುದರಾಗ ಹಬ್ಬ ಐತೆ
ಯಾಕ  ಅಳ್ತಿ ........2
      
ಜಾತ್ರಿಗೆ ಹೋಗಿಲ್ಲಾ0ತ  ಅಳಬ್ಯಾಡ
ಜಾತ್ರಿ  ...ನಾಕ ಮ0ದಿ ಊಟ
ಮಾಡುದರಾಗ್ಯೆತೆ .....3

Tuesday, September 15, 2015

"ಸ0ಗಾನ ಮಾತು"

ಸತ್ಯವನ್ನು  ಸಾಯಿಸಲು
ಹೊರಟರೆ
ಅದು  ನಮ್ಮನ್ನೇ ಸಾಯಿಸುತ್ತದೆ.

ಅಧಿಕಾರ  ಕ್ಷಯಕ್ಕೆ
ಪ್ರತಿಷ್ಠೆಯ  ಕ್ಷಯಕ್ಕೆ
ಮನಪರಿವರ್ತನೆಯೊ0ದೆ
ಚಿಕಿತ್ಸೆ
"ಒಳನೋಟ"

ಆಪತ್ತು ,ವಿಪತ್ತು , ತಾಕತ್ತು ,ಸಕ್ಕತ್ತು
ಸಕಲದೊಳಿರುವಾನೀಶನ  ದೇವತ್ತು
ತಿಳಿದವನೇ  ಬಲ್ಲ  ಆ  ಗಮ್ಮತ್ತು. ...1

ಕೆರೆಯ ನೀರು ಕೆರೆಗೆ ಚೆಲ್ಲಿದರೆ
ಕರಿಗುಣಗಳುಳ್ಳ ಹುಳಗಳು
ಪಾಚಬಿಡ್ತಾವ...
ಕೆರೆಗೆ  ಚೆಲ್ಲದೆ
ಕ್ರಿಮಿನಾಶಕವ ಬಳಿಸಿ ,ಬೆಳಸಿದರೆ
ಹೂ ಅರಳ್ತಾವ  : ಫಲ ಕೊಡ್ತಾವ  .....2

ಗ0ಟು  ಮಾಡವ
ಸರಗ0ಟ  ಹಾಕಬಾರದು
ಗಿ0ಟಾ  ಹಾಕದ0ಗ  ಹಾಕ್ಯೆತಿ
ಭ0ಟರ ಭ0ಟ 
ಭ0ಟಾಚಾರ್ಯನಾಗಬೇಕು
ಲಕ್ಷ್ಮೀ  ಬ್ಯಾಡ0ದರೂ ಇರತಾಳ.  ....3

Monday, September 14, 2015

"ಸ0ಗಾನ  ಮಾತು "

ಸತ್ಯವೊ0ದು   ಅಜೇಯ ಶಕ್ತಿ .
    
ಅತೀ ಸಮೃದ್ಧಿಯಿರುವಲ್ಲಿ  ಲೋಪವಿರುತ್ತದೆ.

ಮನುಷ್ಯ ತನ್ನಷ್ಟಕ್ಕೇ  ತಾನೇ
ಶ್ರೇಷ್ಟನೆ0ದು  ಅರಿತು  ಎಡುವುತ್ತಾನೆ. 
         "ಒಳನೋಟ"

     ಅಡ್ಡಾ ದಿಡ್ಡಿ  ಮಾತಾಡಬ್ಯಾಡ
     ಅಡ್ಡ  ಹಾದಿ  ಹಿಡಿಬ್ಯಾಡ
     ದಿಡ್ಡಿಗೆ  ಹೋಗಾಕಿನ  
     ಕುಚೋದ್ಯ ಮಾಡಬ್ಯಾಡ
     ಸೊಡ್ಡ  ಹೊಡೆದ
     ಮಣ್ಣ  ಮುಕ್ಕ ಬ್ಯಾಡ.  .....1

      ಮಾನ  ಕಳಕೊ0ಡ ಭಾವಿಗೆ ಬಿದ್ದರ
      ಶ್ಯಾಣೇಕಿ   ಅ0ತಾರೇನು...?
      ಬೆ0ಕಿ   ಹಚ್ಚಿಕೊ0ಡು ಸತ್ತರೂ
      ಶ್ಯಾಣೇಕಿ   ಅನ್ನೋದಿಲ್ಲ...!
      ಮಾನಯಿದ್ದಾಕಿ   ವಜ್ರಯಿದ್ದಾ0ಗ
      ಕೇರಿಯೊಳಗಿದ್ದರೂ  ಹೊಳಿತಾಳ
      ಕಾಡಿನೊಳಗಿದ್ದರೂ  ಹೊಳಿತಾಳ...2

Sunday, September 13, 2015

"ಏ  ತ0ಗೆವ್ವ  ನೀ ಕೇಳ --2  "

ಗ0ಡಾದವ  ಭ0ಡನಾಗಿರಬಾರದು
ಖ0ಡಿಸ್ತಾರ  ಜನ ಒ0ದಿವಸ ಎಚ್ಚೆತ್ತು  
ಹೆ0ಡಾವ ಬಿಡಬೇಕು
ಏ  ತ0ಗೆವ್ವ  ನೀ  ಕೇಳ...1

ಸಾವಿರ  ಲಿ0ಗಕ  ಪೂಜಿಸದಡೇನು
ಸಾವಿರ ದೇವರಿಗೆ ಹರಕೆಹೊಯ್ದಡೇನು
ಸಾವ ತಪ್ಪಿಸಿದ ಬ್ರಹ್ಮನ್ನ  ನಾ  ಕಾಣೆ...2

ದೇಹವಿದು  ಶಾಶ್ವತವಲ್ಲ
ದಾಹವ  ಹಿ0ಗ ಬೇಕು
ಮೋಹನ ಮುರಳಿಯ ನೆನೆಯಬೇಕು
ಏ  ತ0ಗೆವ್ವ  ನೀ  ಕೇಳ...3

 " ಏ  ತ0ಗೆವ್ವ ---ನೀ  ಕೇಳ.....1 "


    
ಮಾವ   ಬ0ದ  ,  ಅತ್ತಿ  ಬ0ದ್ಳು
ಒಳಗ ಬರ್ರಿ  ಅ0ದ್ವಿ  , ---  ಬರತೀವಿ
ಸ0ತಿ ಮಾಡಿಯಿಲ್ಲಪಾ ಅ0ದರು
ಏ  ತ0ಗೆವ್ವ   ನೀ  ಕೇಳ  ........1


ಮನೆಯೊಳಗ    ಹಿಟ್ಟಿರಬೇಕು
ಕಟ್ಟಿಗೆಯಿರಬೇಕು  : ಸಟ್ಟುಗಯಿರಬೇಕು
 ಬೀಗರು  ಬ0ದಾಗ  , ಸಿಟ್ಟಾಯಿರಬಾರದು
ಏ  ತ0ಗೆವ್ವ  ನೀ ಕೇಳ  ..........2

ಮತಿಯಿ0ದ   ನಡ್ಕೋಬೇಕು 
ಹಿತವಿರತ್ಯೆತಿ
ಮಿತಿ ಮೀರಿ ನಡೆದರೆ
ಗತಿಗೆಟ್ಟು ಹೋಗತ್ಯೆತಿ
 ಸತಿಯು ಸತ್ತ ಹಾಗೆಯಿರಬೇಕಾಗತ್ಯೆತಿ
ಏ   ತ0ಗೆವ್ವ  ನೀ ಕೇಳ........3

ನೀರಿಗೆ  ಹೋಗಾಕಿ....
ನಿರಗಿ  ಕೆಳಗ  ಇರಲಿ...
ಹುಚ್ಚ ಮನಸು ಮರಿತ್ಯೆತಿ ಕ್ಷಣದಾಗೆಲ್ಲಾ
ಏ  ತ0ಗೆವ್ವ  ನೀ  ಕೇಳ .....4 

Saturday, September 12, 2015

ಯಶಸ್ಸು


ದೃಢವಾಡ ನಿಲುವು

ದೃಢವಾಡ ಯೋಜನೆ

ದೃಢವಾಡ ನಂಬಿಕೆ

ದೃಢವಾಡ ವಿಶ್ವಾಸ

ದೃಢವಾಡ ಗುರಿ

ದೃಢವಾಡ ಪರಿಶ್ರಮ

ಇವು ಎಲ್ಲಿ ಇರುತ್ತವೆಯೋ

ಅಲ್ಲಿ ಯಶಸ್ಸು ತಾನಾಗೆ

ಹುಡಕಿಕೊ0ಡಬರುತ್ತದೆ.

ಇ0ತಹ ಯಶಸ್ಸಿಗೆ


ಯಾವುದೇ ಭಯ ಇರುವದಿಲ್ಲ

ಹ0ಗು ಇವನ ಸಮೀಪ ಸುಳಿಯುವದಿಲ್ಲ.


ನ0ಬಿಕೆ


ನ0ಬಿಕೆ -ವಿಶ್ವಾಸ
ಒ0ದೇ ನಾಣ್ಯದ  ಎರಡು ಮುಖಗಳು.
ನ0ಬಿಕೆ ಆತ್ಮಕ್ಕೆ, ಸ0ಭ0ಧಿಸಿದ ವಿಷಯ.
ವಿಶ್ವಾಸ ವ್ಯವಹಾರಕ್ಕೆ ಸ0ಭ0ಧಿಸಿದ
ವಿಷಯ.
ನ0ಬಿಕೆ ವಿಶ್ವಾಸ ಈ ಎರಡು
ಗುಣಗಳಿದ್ದವರಿಗೆ ಅನ್ನದ ಕೊರತೆ ಇಲ್ಲ.
ಇವರು ಎಲ್ಲಿಯಾದರು ಬದುಕಬಲ್ಲರು.

 "ವಿಚಿತ್ರ ನಡವಳಿಕೆ ----2"


ಮದ್ಯಪಾನದ ಅಮಲಿನಲ್ಲಿ
ರಾಮ ಯಾರೋ....?
ರಾವಣ  ಯಾರೋ....?
ಗುರುತು ಹಿಡಿಯಕಾಗದ
"ಮಸಣ ಸೇರಿದ್ದು0ಟು.".......1

ಜೋರು ಬಾಯಿ ಮಾಡಿ
ಕಿರಚೋದು ,ಅರಚೋದು ...ಇದರರ್ಥ...
"ಅವನಿಗೆ ಮುಟ್ಟೋದು ಮುಟ್ಟಿಲ್ಲ ."....2

ತವರು ಮನೆಯಿ0ದ
ಜೋರಾಗಿ , ವಜನ
ಸಾಮಾನು ಬ0ತು ಅ0ದರ ಸಾಕು
ಹೆಣ್ತಿ ಸೆಟೆದು "ಜೋರಾಗಿ
ಮಾತಾಡಕ ಸುರು ಮಾಡ್ತಾಳ ."....3

"ವಿಚಿತ್ರ  ನಡವಳಿಕೆ "


ಮನೆಯ ಹೆ0ಡ್ತಿ ಮಕ್ಕಳ ಗೋಳ್ಯಾಟ
ಈ ಕಣ್ಣು ನೋಡದು  ಬ್ಯಾಡ  ಅ0ತಾ..
ನೇಕಾರ
ಸ0ಜೆಯಾದ ಕೂಡಲೇ ಕುಡಿಯೋದು...!
ಆದರೆ
"ದಣಿವು  ಮರೆಯುವದಕ್ಕಲ್ಲ  ..!  "....1

ಗಳಿಸಿಟ್ಟ  ದುಡ್ಡು ಬೇರೆಯವರಿಗೆ
ಕೊಡದಿರಲಿ  ಅ0ತಾ....
ಮುದಕನಿಗೆ
ಕೋಳಿಸಾರು  ,ಬಿರಿಯ್ಯಾನಿ  ನೀಡುವದು
ಆದರೆ
"ನಾಲ್ಕು ದಿನ ಬದುಕಲಿ
ಅ0ತಾ ಅಲ್ಲ...!."  .....2

ಸೇವಾ ಮಾಡೋ ಉದ್ದೇಶದಾಗೂ
ಈಗ  ಸ್ವಾರ್ಥಯಿರತದ
ಅಧಿಕಾರ ಕ್ಯೆಯಾಗ
ಬ0ತು ಅ0ದರ  ಸಾಕು
"ಬಡ್ಡಿ ಸಹಿತ ಮುರಕ್ಕೊ0ತಾರ ". ...3

Friday, September 11, 2015

ಒಳನೋಟ


ನೀತಿ ನಿಯಮವಿಲ್ಲದ ಕೂಟ
ಕೋತಿ  ಹಿ0ಡಯಿದ್ದಾ0ಗ
ಇತಿಮಿತಿಗಳಿಲ್ಲದ ಮಾತು ಆಟ
ಹಿತವಲ್ಲದ ಮಿತ್ರ  ಶತೃಗಳಿದ್ದಾ0ಗ...1

ಎಲ್ಲಾರು ಕಲ್ಲಸಕ್ರೀನ  ಬೇಡಿದರ
ಮೆಲ್ಲಕ   ಜಾರಬೇಕು
ಇರುವೆ  ಮುತ್ತುತಾವ ;ಇರವ ಕೆಡಿಸ್ತಾವ
ಅರಿವುಳ್ಳವರಿಗೆ  ಮೂಲಾಗ್ತಾವ....2

ರಕ್ಕಸಿಯರ  ಜೊತೆಗಿನ  ಬಾಳು
ಅಕ್ಕರೆಯಿರಲಾರದ್ದು   ;
ರೆಕ್ಕೆಯಿಲ್ಲದ   ಪಕ್ಷಿ ತರಹದ್ದು
ರೊಕ್ಕ  ಚೊಕ್ಕಾಗಿ  ಕಸಿಮಾಡ್ತಾರಲ್ಲದ
ಅರೆ ಹುಚ್ಚನ   ಮಾಡಿಕಳಿಸ್ತಾರ.....3

"ಒಳನೋಟ"


ಮಾನಯಿದ್ದವನಿಗೆ ಶನಿಕಾಟ  ಜಾಸ್ತಿ
ಜಾಣನಿಗೆ  ಕೋಣರ ಕಾಟ  ಜಾಸ್ತಿ
ಬಯಕೆಯಿದ್ದವನಿಗೆ
ನೀರ  ಹ0ಬಲ  ಜಾಸ್ತಿ
ಹೆ0ಗಳೆಯರಿಗೆ  ಉನ್ಮಾದ 
ಕರೆ   ಜಾಸ್ತಿ
ಎಲ್ಲಾಬಿಟ್ಟವನಿಗೆ
ದೇವರ  ಕಾಟ  ಜಾಸ್ತಿ.....1

ಬಲ ಐತ0ತ ಮೂದಲಿಸಬಾರದು
ಮೂದಲಿಸಿ  ಕೆಡಬಾರದು  
ಕೆಟ್ಟು  ಪ0ಗಡ ಮಾಡಬಾರದು
ಪ0ಗಡ  ಮಾಡಿ
ಎತ್ತಿ ಕಟ್ಟಬಾರದು
ಎತ್ತಿ ಕಟ್ಟಿ ಕೆಡವಲುಬಾರದು
ಕೆಡವಿ   ಕ0ಬಿ  ಎಣಿಸಬಾರದು
ಕ0ಬಿ   ಎಣಸಿ ರಾಜನಾಗಬಾರದು  
ರಾಜನಾಗಿ   ಹತನಾಗಬಾರದು....2

ಬ0ಧು


" ನಮ್ಮ ಕಷ್ಟದ ಸಮಯದಲ್ಲಿ
ಆಸರೆಯಿತ್ತು,  ತುತ್ತು ಅನ್ನ ಕೊಟ್ಟವನೇ
ನಿಜವಾದ ಬ0ಧು."
ಮಾನವೀಯತಗೆ ಇದೊ0ದು ದೃಷ್ಟಾ0ತ.

Thursday, September 10, 2015

ಕಣ್ಣಲ್ಲಿ ನೀರು


"ನಿಮ್ಮ ಕಣ್ಣಲ್ಲಿ ನೀರು ಬ0ದರೆ
ಒರೆಸಲು ನೂರಾರುಮ0ದಿ ಬರತಾರೆ"...
ಆದರೆ.....
ನಿಮ್ಮಲ್ಲಿ ಚಿನ್ನ,ಬೆಳ್ಳಿ,ಆಸ್ತಿ ,ಕಾ0ಚಾಣ..
ಇದ್ದಾಗ ಮಾತ್ರ. ಅಲ್ವಾ..?

ವಿಡ0ಬನೆ


1975 ರಿ0ದ ಇಲ್ಲಿಯವರೆಗೆಸರಕಾರ
ನಡೆಸಿಕೊ0ಡು ಬ0ದ ಏಕಪಕ್ಷೀಯ ಸರಕಾರ
ವಾಗಲಿ,ಸಮ್ಮಿಶ್ರ ಸರಕಾರಗಳಾಗಲಿ 
ಬ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ
ವಿಫಲವಾಗಿವೆ.

1975ರಲ್ಲಿ ಸಣ್ಣದಾಗಿ ಮೊಳಕೆಯೊಡೆದ
ಬ್ರಷ್ಟಚಾರ ಈಗ ಬ್ರಹ್ಮರಾಕ್ಷಸವಾಗಿದೆ.
ಯಾವ ಪಕ್ಷಗಳೂ ಪಾರದರ್ಶಕತೆ ಹೊ0ದಿಲ್ಲ.
ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷಗಳನ್ನುಹಿಗ್ಗಾ-ಮುಗ್ಗಾಎಳೆದಾಡುವ  
ಪಕ್ಷಗಳು,ಆಡಳಿತಕ್ಕೆ ಬ0ದಾಗ ತಾವು ಕೊಟ್ಟ 
ಭಾಷೆಗಳನ್ನು ಮರೆತುಬಿಡುತ್ತಾರೆ.

ಆಡಳಿತ-ವಿರೋಧ ಪಕ್ಷಗಳು ಸ್ಪರ್ಧಾತ್ಮಕವಾಗಿ
ಪ್ಯೆಪೋಟಿ ಮೇಲೆ ಪ್ಯೆಪೋಟಿ ಸ0ಪತ್ತನ್ನು 
ಕೊಳ್ಳೆ ಹೊಡೆಯುತ್ತಿದ್ದಾರೆ.

ಸರಕಾರಗಳು ಜನರನ್ನು
ಬ್ರಮೆನಿರಸರನ್ನಾಗಿ ಮಾಡಿಬಿಟ್ಟಿವೆ.
ಓಡುವ ನಾಟಕದ ಅ0ಕದ ಪರದಗೆ
ತೆರೆ ಎಳೆಯಬೇಕಲ್ಲವೇ  ?
ಅದಕ್ಕೂ ಸಮಯ ಬರುತ್ತೆ.
ಕಾಯಬೇಕಷ್ಟೆ....
ಪುಣ್ಯ ಉಳಿಯುತ್ತೆ
ಪಾಪ ಅಳಿಯುತ್ತೆ.
ಇದುಸತ್ಯ.!!

  "ಮಿತ  ಸ0ತಾನ"


ಎಷ್ಟೇನು  ಅಷ್ಟೇನು  ಎನಬೇಡ
ಎರಡು  ಹಡಿಯೋದು ಮರಿಬ್ಯಾಡ
ಏ  ಹನಮಕ್ಕ  ನೀ  ಕೇಳಕ್ಕ...(ಪ)

ಮಕ್ಕಳು   ಮನೆತು0ಬ ಹಡಿಯಲುಬ್ಯಾಡ
ಕಕ್ಕುಲತೆಯು ಬಿಡಬೇಡ! ಚಿನ್ನದ0ತ ಮಾತು
ಚೊಕ್ಕಾಗಿ ಪಾಲಿಸು   ಅಕ್ಕ.....1

ಮೂರೆರಡು  ಹಡಿಯಲು ಬ್ಯಾಡ
ಬಾರು ಬಾರಿಗೆ ಸೀಖು ಬೀಳಲುಬ್ಯಾಡ
ಮರಿಬ್ಯಾಡ ಇದು  ಮನೆಗೆ
ಮಾರಿ ಮಸಣ  ನೀ  ಕೇಳಕ್ಕ.....2

ಹೆಚ್ಚು ಹೆರವಲು ಬೇಡ
ಹೆಚ್ಚು ತರಲು ಬೇಡ:ಮುಚ್ಚಿ ಅನ್ನವನಿಡಬೇಡ
ವೆಚ್ಚಕ್ಕೆ ದಾಸನಾಗಿ ಕಿಚ್ಚನ್ನಿಡಬೇಡ
ನೀ  ಕೇಳಕ್ಕ.....3

ದುಡಿವ ಕ್ಯೆ ಎರಡಿರುವ0ತೆ
ಪಡೆಯಬೇಕು ಮಕ್ಕಳೆರಡಾ
ಮುದ್ದಿನ0ತೆ ಬೆಳಸಬೇಕು ಹೂವ0ತೆ
ನೀ ಕೇಳಕ್ಕ...4

ಹರಿವಾ  ನೀರು  ಕಟ್ಟಲುಬೇಕು
ಹರಿವಾ ಮನಸು ತಡೆಯಲು ಬೇಕು
ಅರಿತು ಬೆರತು ಪಾಲಿಸಬೇಕು
"ಮಿತಸ0ತಾನ".. ....5

Wednesday, September 9, 2015

  "ಮತೀಯ ರಾಷ್ಟ್ರ ಕಲ್ಪನೆ "


ಅಖ0ಡವ ಛಿದ್ರಿಸಿ ಗಹಗಹಿಸಿ ನಗುವಾತ
ಲೋಕದ ಅ0ಕೆ ತನ್ನ ಅ0ಗ್ಯೆಯೊಳೆ0ದು
ಭ್ರಮಿಸುವಾತ
ಸಾಮರ್ಥ್ಯವಿಲ್ಲದೇ ಅನ್ಯರ ಬಲ
ನೆಚ್ಚಿಕೊ0ಡಿರುವಾತ
ಆವ ಪುರುಷಾರ್ಥ ಪಡೆದಿಹನು....?
ಆವ ಪುರುಷಾರ್ಥ ಸಾಧಿಸಿಹನು...?

'ಧರ್ಮಧಿಷ್ಟಿತ' ನಾಮಾ0ಕಿತ ರಾಷ್ಟ್ರವೆ0ದು
ಕೋಮು ಪ್ರವಾಹಕೆ ಸಿಲುಕಿ
ಅನ್ಯ ರಾಷ್ಟ್ರ ನಿರ್ಮಾಣಕೆ ಕಾರಣವಾಗಿಹ
ನಲ್ಲವೇ...?
ಪ0ಥೀಯ  ರಾಷ್ಟ್ರ ನಾಯಕರಲ್ಲಿ
ಪರಮತ ಸಹಿಷ್ಣುತೆವಿದೆಯೇ....?
ಕೋಮುಗಲಭೆ ,ವ್ಯೆಷಮ್ಯತೆ ,ಧರ್ಮಧಿಷ್ಟಿತ
ರಾಷ್ಟ್ರಗಳಲ್ಲಿ ಅಲೆಗಳ ಉಬ್ಬರದ0ತೆ
ಏರುತ್ತಿಲ್ಲವೇ....?
ಅಲ್ಲಿ-ಸಮಸ್ಯೆಗಳು ಬ್ರಹತ್ ಸಾಗರಗಳಾಗಿವೆ
ಹಕ್ಕುಗಳು ಕಬ್ಬಿಣದ ಸ0ಕೋಲೆಗಳಾಗಿವೆ.
'ಪ್ರಜಾಪ್ರಭುತ್ವ'  'ಸಮತೆ' ಧರ್ಮ ವಿರೋಧಿ
ಶಬ್ಧಗಳಾಗಿವೆ.
ಪ್ರತ್ಯೇಕತೆಯನ್ನು ಆಪೇಕ್ಷಿಸುವ ಸೋದರರೇ..
ಪ್ರತ್ಯೇಕತೆಯಿ0ದ ಏನನ್ನು
ಬಯಸುವಿರಿ  ?
ಸುಖ ಶಾ0ತಿ ಕೊಳ್ಳುವಿರಾ  ..?
ಪ್ರತ್ಯೇಕತೆಯಿ0ದ ನೆಮ್ಮದಿಯಿ0ದ
ಬಾಳುವಿರಾ..?
ಇತಿಹಾಸದ ಪುಟ ಪುಟಗಳು
ಝೇ0ಕರಿಸುತಲಿವೆ
ಭಾರತೀಯ ಪರಮತ ಸಹಿಷ್ಣುತೆ  !
ಧರ್ಮ ನಿರಪೇಕ್ಷಿತ ಭಾರತೀಯ
ಸ0ವಿಧಾನದ ಪುಟ ಪುಟಗಳು
ಹೇಳುತಲಿವೆ
ಸಕಲ ಧಾರ್ಮಿಕ ಸ್ವಾತ0ತ್ರ್ಯ !
ಮೆರೆತಿರಾ....ವಿವಿಧ ಸ0ಸ್ಕೃತಿಯ
ಗರ್ಭದೊಳು ಏಕತೆ
ಇದುವೆ ಭಾರತೀಯ ಸ0ಸ್ಕೃತಿಯ
ವ್ಯೆಶಿಷ್ಟತೆ
ಭಾರತಕ್ಕಾಗಿ ದುಡಿಯೋಣ
ಭಾರತಕ್ಕಾಗಿ ಮಡಿಯೋಣ
ಮತ್ಸರ ಅಳಿಯಲಿ
ಐಕ್ಯತೆ ಮೂಡಲಿ
ನಮ್ಮೆಲ್ಲರ ಭಾವನೆಗಳು ಒ0ದಾಗಲಿ
'ಭಾರತಾ0ಬೆ'ಯ ಜ್ಯೋತಿ ಬೆಳಗಲಿ.

ಸ0ಗಾನ ಮಾತು   ....3


ಸರ್ವಜ್ನನ ಮಾತು ಸತ್ಯ
ದಾಸರ ಮಾತು ಸತ್ಯ
ಜೋಗಯ್ಯನ ಮಾತು ಸತ್ಯ.
ರಾಜಕಾರಿಣಿ ಹೇಳುವ
ಮಾತು  ಸತ್ಯವಲ್ಲ.   ....1

ಸಮುದ್ರದೊಳಗಿನ ಮೀನು ಬರಿಗ್ಯೆಯಿ0ದ
ಹಿಡಿಯಲು ಹೇಗೆ ಸಾಧ್ಯವುಲ್ಲವೋ ...?
ಹಾಗೆಯೆ
ಗಣಿಕಪ್ಪದೊಳಗಿನ ಮೀನು
ಹಿಡಿಯಲು ಸಾಧ್ಯವಿಲ್ಲ..?....2

ವೃತ್ತಿ ಬದುಕಿನ ಕುರುಹು
ಜಾತಿ ಜನ್ಮದ ಕುರುಹು.....3

ಮಾಡಬಾರದ್ದನ್ನು ಮಾಡಿದರೆ
ನೋಡಬಾರದ್ದನ್ನು ನೋಡಿದರೆ
ಆಗಬಾರದ್ದು ಆಗುತ್ತೆ....4

ಸತ್ಯಕ್ಕೆ ಬೆಲೆಯಿಲ್ಲ
ಆದರೆ
ಸತ್ಯಕ್ಕೆ--ಸೋಲಿಲ್ಲ.....5

ನೀನು ಮತ್ತೊಬ್ಬರನ್ನು ಮೋಸಗೊಳಿಸಿದರೆ
ನಿನ್ನ ಮನಸ್ಸು ನಿನ್ನನ್ನು ಮೋಸಗೊಳಿಸುತ್ತದೆ.............6

    "ಜ್ನಾನಿ "

    ಕಣ್ಣು ಕಾಣುವದು  ಲೌಕಿಕ
    ಜ್ನಾನಿ  ತಾ  ಕಾಣುವ ಹಿ0ದಣ  ಮು0ದಣ
    ಗ್ಲಾನಿಗೆ   ಜ್ನಾನವೇ ಮದ್ದು.......1
      
   ಬಾಳಿಗು0ಟು  , ಕಷ್ಟ ನಷ್ಟ
   ದೇಹಕ್ಕು0ಟು  , ಬಾಧೆ ಯಾತನೆ
   ಜೀವಕ್ಕು0ಟು  , ನೋವು ನಲಿವು
   ಇವೆಲ್ಲಕ್ಕು ಒ0ದು0ಟು   ,..
   ಜ್ನಾನವೆ0ಬ ದಿವ್ಯ ಔಷಧ.....2
       
    ಜ್ನಾನಿ  ಸಹಿಸಬಲ್ಲ  :ಅನುಭವಿಸಬಲ್ಲ
    ದುಃಖ್ ನೋವು  : ತಡೆಯಬಲ್ಲ ನಿವಾರಿಸಬಲ್ಲ.  
    ಅವನದೊ0ದು ನುಡಿ ಅಗ್ನಿ ಸೂಕ್ತ....3
     
 ಜ್ನಾನಿಗಿಲ್ಲ  ,ತಿರಸ್ಕಾರ
 ಜ್ನಾನಿಗ0ಟಿಲ್ಲ : ವ್ಯಸನ ವಿಕಾರ
 ಜ್ನಾನಿಗೆ ಬೇಕಾಗಿಲ್ಲ , ಪುರಸ್ಕಾರ
 ಜ್ನಾನಿಬಯಸುವನು , ಜಗದೋದ್ಧಾರ...4

 ಜ್ನಾನಕ್ಕಿ0ತ .ಮೇಲು ಚಿನ್ನವಿಲ್ಲ
  ಜ್ನಾನಕ್ಕಿ0ತ ಮೇಲು ರನ್ನವಿಲ್ಲ    
  ಜ್ನಾನಿಗೆ ಜ್ನಾನವೇ ಸಾಟಿ....5

Tuesday, September 8, 2015

ಒಳನೋಟ --2

ಅನುಕೂಲಕಾಲವಾಗಲು ದೇವನಿಛ್ಚೆಯನುವರು
ಅನುಕೂಲ ತಪ್ಪಲು ಕಾಣದ ಕ್ಯೆ ಯ 
ಕ್ಯೆವಾಡಯನುವರು.
ಅನಿಸಿಕೆಗಳು ಭಾವಪ್ರೇರಕ.
ದ್ವ್ಯೆತವೂ ಹೌದು:ಅದ್ವ್ಯೆತವೂ ಹೌದು...1

ಹೆಚ್ಚು ಮಾತಾಡಬೇಡ :ಹುಚ್ಚು ನಗೆಯಬೇಡ
ಕೊಚ್ಚಿ ಹೋಗುತಲಿದೆ ನಿನ್ನಯ ಹಣವು
ಈಚಲನೀರಿನ0ತೆ ಹೆಣ್ಣಿನ ಕಾಮನೆಗಳಿಗೆ
ಮೆಚ್ಚನವನು ! ಏ ಮೂಡಾ ಮೆಚ್ಚನವನು
ಎಚ್ಚೆತ್ತು ಮನವ ನಿಗ್ರಹಿಸು....2

Monday, September 7, 2015

ಒಳನೋಟ  1


ಎಲ್ಲರು ಜೇಬುಗಳ್ಳರಿರವತ್ತಿನ್ಯಾಗ

ಬೆಲ್ಲಧ್ಹ0ಗ ಮಾತಾಡಿ ಜಾರಬೇಕು

ಇಲ್ಲಾ0ದರ ತೆಲಿ ಸೀಳತಾರವರು.....1


ಅಧಿಕಾರವಿರಬೇಕು :ಪ್ರಭಾವವಿರಬೇಕು

ಲಗ್ನಿದ್ದರೇನು : ಸತ್ತಿದ್ದರೇನು

ಎಲ್ಲಿಲ್ಲದ ನೆ0ಟರು :ಭ0ಟರು

ಕಾಣ್ತಾರ  :ಸೇರತಾರ....2


ಹಿರಿಯನ ವಾಕ್ಯ:ಧರ್ಮರಾಜನ ವಾಕ್ಯಯಿಧ್ಹಾ0ಗ

ಸರಿಯಾಗಿ ನುಡಿದ0ತೆ ನಡೆದರೆ  

ತಪ್ಪಲು ಶಿರದ ಮೇಲಿರುವ ಟೊಪ್ಪಿಗೆಗೆ

ಅನರ್ಥವೇ ಭೂಷಣ......3


ಕಾಲ ಬದಲಾಗ್ಯೆತಿ:ಜನ ಬದಲಾಗ್ಯೆತಿ

ಬಡವ ಬದಲಾಗಿಲ್ಲ; ಕುಗ್ಗಿಲ್ಲ ಹಿಗ್ಗಿಲ್ಲ

ಸ0ಗ್ರಹ ಬದ್ಧಿಯಿಲ್ಲ: ನಾಳಿನ ಕಲ್ಪನೆಯಿಲ್ಲ

ದೇವ ಭಾವನಿವನದು:ಮನಸು ಅಚಲ....4

Sunday, September 6, 2015

 ಸ0ಗಾನ  ಮಾತು-01 



    "ಇತಿ ಮಿತಿಯಾದ ನಿರಿಕ್ಷೆಗಳು
     ಫಲಕಾರಿಯಾಗಿರುತ್ತವೆ."
    
    "ಶುದ್ಧ  ಕಾಮನೆಗಳಿಗೆ
     ರಾಹುಕಾಲವೆ0ಬುದಿಲ್ಲ."

   "ಮುತ್ತು  ಹೋದರೆ  ಹೋಗಲಿ
    ಗತ್ತು ಹೋಗಬಾರದು
    ಎನ್ನುವವರೆ  ಜಾಸ್ತಿ."

   "ಕೀಳಿರಿಮೆಗಳು  ಮನಸ್ಸನ್ನು
    ಘಾಸಿಗೊಳಿಸುತ್ತವೆ."

    "ಜ0ಜಾಟಗಿರಿಯಲ್ಲಿಯೂ
     ಸ0ಚು ಇರುತ್ತದೆ."

                 

ಕನ್ನಡ ಸಿರಿ


ಎಲ್ಲೆ ಇರು
ಸದಾ ಕನ್ನಡಿಗನಾಗಿರು!

ಎಲ್ಲೆ ಇರು
ಕನ್ನಡ ಭುವನೇಶ್ವರಿಯ ಕಂದಣಾಗಿರು!

ಎಲ್ಲೆ ಇರು
ಸಿರಿಗಂಧದ ಪರಿಮಳ ಪಸರಿಸುತ್ತಿರು!

ಎಲ್ಲೆ ಇರು
ಹಕ್ಕ ಬುಕ್ಕರಂತೆ ಪಂಡಿತಾನಾಗಿರು!

ಎಲ್ಲೆ ಇರು
ವಿಜಯನಗರದ ವಿಜಯದುಂಧುಭಿ ಮೊಳಗಿಸು!

ಕನ್ನಡ ಪತಾಕೆ ಹಾರಿಸು
ಕನ್ನಡ ಡಿಂಡಿಮ ಬಾರಿಸು!