Monday, November 30, 2015

ತಪ್ಪು

ಮನುಷ್ಯ ತನ್ನ ನಡಾವಳಿಕೆಗಳೆಲ್ಲವೂ 
ಮೂಗಿನ ನೇರಕ್ಕೆ ಹೊತ್ತು ಕೊ0ಡುಹೋಗಿ
ಅವುಗಳು ಸರಿಯಾಗಿವೆ 0ದು ಪ್ರತಿಪಾದಿಸಿ
ಸೋಲನ್ನು ಅನುಭವಿಸಿದಾಗಲೇ
ಸರಿ-ತಪ್ಪುಗಳ ಪರಾಮರ್ಶಗೆ ವೇದಿಕೆ.
ಇದು ಅಭಿವೃದ್ಧಿ ಸೂಚಕ.
 0ಗಾನ ಮಾತು 


  *  ನಾಯಕರು ಧರ್ಮಾ0ಧರಾದರೆ
     ದೇಶ  ,ಕೋಶ  ನಾಶ.


  *  0ಚರು     ಧರ್ಮಾ0ಧರಾದರೆ

      ಊರು  ,ಕೇರಿ   ನಾಶ.

Sunday, November 29, 2015

"ಸ0ಗಾನ  ಮಾತು   "

  * "ಹೊಟ್ಟಿ ,  ಬಟ್ಟಿ
      ಕ್ಯೆಗೆ  ,ಹಣೆಗೆ  ಪಟ್ಟಿ "       ......ಸಿಕ್ಕಮ್ಯಾಲೆ..
      ಇನ್ಯಾತರ ಹ0ಗು
      ಯಾರ ಹ0ಗು...?  
  
  * ತಪ್ಪುಗಳ ಕೋಶವೇ ಇತಿಹಾಸದಲ್ಲಿದೆ
     ತಪ್ಪು  ತಿದ್ದಿ ತಿಳಿದು
      ಬಪ್ಪನಾಗು
ಯಶಸ್ಸು

ದೃಡವಾದ ನಿಲುವು
ದೃಡವಾದಯೋಜನೆ
ದೃಡವಾದ ನ0ಬಿಕೆ
ದೃಡವಾದ ವಿಶ್ವಾಸ
ದೃಡವಾದ ಗುರಿ
ದೃಡವಾದ ಪರಿಶ್ರಮ
ಇವು ಎಲ್ಲಿ ಇರುತ್ತವೆಯೋ
ಅಲ್ಲಿ ಯಶಸ್ಸು ತಾನಾಗೆ
ಹುಡಕಿಕೊ0ಡಬರುತ್ತದೆ.
ಇ0ತಹ ಯಶಸ್ಸಿಗೆ,ಯಶಸ್ಸು ಬಯಸುವವನಿಗೆ
ಯಾವುದೇ ಭಯ ಇರುವದಿಲ್ಲ
ಹ0ಗು ಇವನ ಸಮೀಪ ಸುಳಿಯುವದಿಲ್ಲ.

Thursday, November 26, 2015

ಅಸಹಿಷ್ಹುತೆ
----------
ಭಾರತ ದೊಡ್ಡ ದೇಶ.
ಜನಸ0ಖ್ಯೆಯಲ್ಲಿ ಚ್ಯೆನಾ ನ0ತರದ ಸ್ಥಾನ.
ನಮ್ಮದು ಪ್ರಜಪ್ರಭುತ್ವ ಸರಕಾರ.ಅದಕ್ಕಿ0ತ
ಹೆಚ್ಚಾಗು ಪ್ರಜಾಗಣರಾಜ್ಯ ದೇಶ.
ಎಲ್ಲಾ ರಾಜ್ಯಗಳ ಒಕ್ಕೂಟಗಳ ಸ0ಯುಕ್ತ
ದೇಶ.
ಒ0ದೊ0ದು ರಾಜ್ಯದಲ್ಲಿ  ಒ0ದೊ0ದು ಭಾಷೆ.
ವಿವಿಧ ಭಾಷೆಗಳ  ವಿವಿಧ ಸ0ಸ್ಕೃತಿಯ
ಮಹಾನ್ ಸ0ಗಮ ನಮ್ಮ ಪ್ರಜಾಪ್ರಭುತ್ವ.
ಧರ್ಮ ನಿರಪೇಕ್ಷತೆ,ಸಹಿಷ್ಣುತೆ,ಜಾತ್ಯಾತೀತ
ಎಲ್ಲ ತರಹದ ಸ್ವಾತ0ತ್ರ್ಯ.ನಮ್ಮ ಪ್ರಜಾಪ್ರಭುತ್ವದ ವ್ಯೆಷಿಷ್ಟ.
"ಸಹಿಷ್ಣುತೆ " ಈ ಪದದ ಅರ್ಥ ಭಾರತೀಯರು
ತಿಳಿದುಕೊ0ಡಷ್ಟು ಬೇರೆ ಯಾರು ತಿಳಿದು ಕೊ
0ಡಿಲ್ಲ.ಮತ್ತು ನಮ್ಮ ಸ0ವಿಧಾನದಲ್ಲಿ

ಅಸಹಿಷ್ಣುತಗೆ ಅವಕಾಶವೇ ಇಲ್ಲ.ಎಲ್ಲಾ ಧರ್ಮ್ ,

ಎಲ್ಲಾ ಜಾತಿಯವರಿಗೆ ಸಮಾನ ಅವಕಾಶ.
ಅಸಹಿಷ್ಣುತೆ,ಕೋಮು ಇರುತ್ತಿದ್ದರೆ ಇಲ್ಲಿಯ
ವರೆಗೆ  "ಮೀಸಲಾತಿ  "ಮು0ದು ವರೆಯಲು
ಸಾಧ್ಯ ವಾಗುತ್ತಿರಲಿಲ್ಲ.ಎಲ್ಲಾ ದೇಶಗಳಲ್ಲಿ
ಶಾ0ತಿ ಕದಡುವ ವ್ಯವಸ್ಥೆ ಇದ್ದೇ ಇರುತ್ತೆ.
ಅದನ್ನು ಮೆಟ್ಟಿ ನಿಲ್ಲಬೇಕು.
ನಮ್ಮದು ಶಕ್ತಿಶಾಲಿ ಪ್ರಜಪ್ರಭುತ್ವ.
ಯಾರು ಅಳಗಾಡಿಸಲಿಕ್ಕೆ ಸಾಧ್ಯವಿಲ್ಲ.
ಸುಮ್ಮ ಸುಮ್ಮನೆ ಅನಾವಶ್ಯಕ ಇಲ್ಲದನ್ನು
ಸೃಶ್ಟಿಸಿ ಖುಷಿ ಪಡುವ ಖಯಾಲಿ ತಪ್ಪಲಿ.
ಬೇಕಾದರೆ ಸ0ವಿಧಾನ ಅಭ್ಯಾಸ ಮಾಡಿ
ಪ್ರತಿಕ್ರಿಯಸಲಿ.

ಸಾಮರಸ್ಯ.,ಧರ್ಮನಿರಪೇಕ್ಷತೆ
,ಧರ್ಮ ಸಹಿಷ್ಣುತೆ ಸೌಹಾರ್ಧತೆ ಇವು
ನಮ್ಮ ಸ0ವಿಧಾನದ ಆಧಾರ ಸ್ಥ0ಬಗಳು.

ಮುತ್ತಿನ0ತಹ ಮಾತು.

"ಯಾರು  ನಾವು ಕಷ್ಟದಲ್ಲಿದ್ದಾಗ
ಸಹಾಯ ಮಾಡುತ್ತರೋ..
ಯಾರು ನಮ್ಮ ನ್ನು ಅತ್ಯ0ತ
ಪ್ರೀತಿಯಿ0ದ ಕಾಣುತ್ತಾರೋ..
ಯಾರು ನಮ್ಮ ನ್ನು ಅಪರಿಮಿತ
ವಿಶ್ವಾಸದಿ0ದ ಕಾಣುತ್ತರೋ
ಅವರನ್ನು ನಾವು ಎ0ದಿಗೂ
ಮರೆಯಬಾರದು .

ಹಾಗೆಯೇ ...
"ಅನ್ನ,ಶಿಕ್ಷಣ, ಬಟ್ಟೆ-ಬರೆ
ಕೊಟ್ಟು..ನಮಗೊ0ದು
ಬದುಕು ಕೊಟ್ಟ  ಪಾಲಕ ಪೋಶಕರನ್ನು
ಎ0ದಿಗೂ ಮರೆಯಬಾರದು.
ಅವರ ಒ0ದೊ0ದು ಆರ್ತತೆ ಸ0ಕಟ
ನಾವು ಕಷ್ಟಕ್ಕೆ
ಸಿಲುಕಿದಾಗ ಗೊತ್ತಗುತ್ತದೆ




















  ಸ0ಗಾನ ಮಾತು


  * "ವಿಧ್ಯೆಗೆ  ವಿಧ್ಯಾ ಪರಿಕರಗಳಷ್ಟೆ  ಮುಖ್ಯ ."

  *  "ವಿಧ್ಯೆಗೆ  ಜಾತಿ  ಅಡ್ಡ ಬರುವದಿಲ್ಲ
      ಕಲಿಯಬೇಕೆನ್ನುವ   ಆಸಕ್ತಿ
      ಅವನನ್ನು  ಕಲಿಸಿಯೇತೀರುತ್ತದೆ  . "

Wednesday, November 25, 2015

   "ಸ0ಗಾನ ಮಾತು  "

* " ಹೇಳೋ  ಮಾತು  ನಡೆಸೋಲ್ಲ
    ನಡೆಸೋ   ಮಾತು  ಹೇಳೊಲ್ಲ .!  "
* "ಆಶ್ವಾಸನೆಗಳಿಗೆ  ಪ್ರಮಾಣವಿರುವದಿಲ್ಲ
   ಪ್ರಮಾಣಗಳಿಗೆ  ಸಾಕ್ಷಿ  ಇರುವದಿಲ್ಲ .! "
   ರಾಜಕೀಯದಲ್ಲಿ   ದಿನನಿತ್ಯದ
    ಚಲಾವಣೆಯ ನಾಣ್ಯಗಳು.
ಸೌಜನ್ಯತೆ
ಇನ್ನೊಬ್ಬರೊ0ದಿಗೆ ಮಾತಾಡುವಾಗ
ನಾವು ಬಳಸುವ ಭಾಷೆಯಲ್ಲಿನ
ಶಬ್ಧಗಳು.ಮೃದುವಾಗಿರಬೇಕು.ಕರ್ಣಗಳಿಗೆ
ಇ0ಪಾಗಿರಬೇಕು.ಹಾವ ,ಭಾವಗಳು
ಅವರೊ0ದಿಗೆ ಹೆಚ್ಚು ನಿಕಟವಾಗಿದ್ದೇನೆ
ಎ0ಬ ಭವನೆಗಳು ಬರಬೇಕು.

ಹಾಗೇಯೇ ಇ ನ್ನೊಬ್ಬರು
ನಮ್ಮೊ0ದಿಗೆ ಮಾತಡುತ್ತಿರುವಾಗ
ಅವರ ಮಾತುಗಳನ್ನುಎಕ ಚಿತ್ತದಿ0ದ
ಆಲಿಸಬೇಕು.ನಕಾರತ್ಮಕ ಹಾವ ಭಾವ
ತೋರ್ಪಡಿಸಬಾರದು.
ಇವು ಸೌಜನ್ಯತೆ  ಲಕ್ಷಣಗಳು
.

Tuesday, November 24, 2015

"ಸತ್ಯ ಹರಿಶ್ಚ0ದ್ರ  "

ಸತ್ಯ ಹರಿಶ್ಚ0ದ್ರ
ಮನೆ ,ಮಠ  ,ರಾಜ್ಯ
ಎಲ್ಲಾ ಕಳಕೊ0ಡ..
ಎಲ್ಲಾ ಕಳಕೊ0ಡೂ..ಸ್ಮಶಾನ ಕಾಯ್ದ.
ಯಾಕೆ  ...?
ಸತ್ಯಕ್ಕಾಗಿ
ಸತ್ಯವನ್ನು ಅರಸಿ , ಸತ್ಯವನ್ನು  ನ0ಬಿ
ಸತ್ಯಹರಿಶ್ಚ0ದ್ರನಾದ ,ಅಮರನಾದ
ಲೋಕವಿಖ್ಯಾತನಾದ.
ವಿಪರ್ಯಾಸವೆ0ದರೆ...  ..

       ಈಗ
"ಸತ್ಯ" - ಹೇಳಿ -ವಿಷಮ
ಪರಿಸ್ಥಿತಿ ಎದುರಾದಾಗ
"ಏನ್  ಮಗಾ  .
ದೊಡ್ಡ ಹರಿಶ್ಚ0ದ್ರನ್ 
ಮೊಮ್ಮಗ್  ಆಗ್ಯಾನ್.."
ಹರಿಶ್ಚ0ದ್ರ ಸತ್ಯ ಹೇಳಿ
ಸ್ಮಶಾನ ಕಾಯ್ದ
ಹೆ0ಡ್ತಿ ಮಕ್ಕಳನ್ ಕಳ್ಕೊ0ಡ್
ನೆನಪ ಐತಿಲ್ಲ.. ಅ0ತಾ
ಆಡ್ಕೋತಾರ .ಮೂದಲಸ್ತಾರ..
ಅಕಟಕಟ...ಅಕಟಕಟಾ...

"ಸ0ಗಾನ ಮಾತು "

" ಅಲ0ಕಾರಿಕ ವಸ್ತುಗಳು  ಭಾಗ್ಯಗಳಲ್ಲ ."

" ಹೃದಯಕ್ಕೆ  ಮನಸ್ದಿಗೆ ,ಬುದ್ಧಿಗೆ  ನಾಟುವ
ವಸ್ತುಗಳು ಭಾಗ್ಯಗಳು"


Monday, November 23, 2015

"ಸ0ಗಾನ ಮಾತು "

 ದಾಹ ಹೆಚ್ಚಿದಾಗ ವಿಧ್ಯೆ  ಹೂವಿನ0ತೆ
    ಅರಳುತ್ತದೆ.

" ವಿಧ್ಯೆ ಆಲದ ಮರವಾಗಬೇಕು ."
ಸತ್ಸ0ಗ

ಸತ್ಸ0ಗದಿ0ದ ಲಭಿಸತಕ್ಕ ಫಲಗಳು.
ಎಲ್ಲಿ ಸತ್ಸ0ಗ ವಿರುತ್ತದೋ ಅಲ್ಲಿ ಗುರುಗಳ
ಸಾನಿದ್ಯ ಇರುತ್ತದೆ.ಇ0ತ ಹ ಗುರುಗಳ
ಧರ್ಶನದಿ0ದ.ಇ0ತವರ ಮಾರ್ಗದರ್ಶನದಲ್ಲಿ
ಲೋಕಕಲ್ಯಾಣ ಕಾರ್ಯಗಳು
ಆಗಾಗ್ಗೆ ಜರಗುತ್ತವೆ."ಗುರು ದೇವೋ ಭವಃ."
ಗುರು ಸಾಕ್ಷಾತ ಪರಬ್ರಹ್ಮ"
ಗುರುವಿನ ಅಪ್ಪಣೆ ಇಲ್ಲದೇ ನಾವು
ಮಹಾನ್ ಕಾರ್ಯಮಾಡಲು ಸಾದ್ಯವಿಲ್ಲ
.ಯಾವವ್ಯಕ್ತಿಯ ದರ್ಶನದಿ0ದ ನಮಗೆ
ಜ್ನಾನ ಲಭಿಸುವದೋ 
..ಆನ0ದ ಲಭಿಸುವದೋ.
,ಆ ವ್ಯಕ್ತಿಯೇ ನಿಜವಾದ ಗುರು.ಅ0ತವರ
ಕೃಪಕಟಾಕ್ಷದಿ0ದ ಸನ್ಮಾರ್ಗದ  ಮೂಲ,ದಾರಿ
ಅರಿಯಲು ಸಾದ್ಯ.

Sunday, November 22, 2015


ಸ0ಗಾನ ಮಾತು

 "ಲೋಪದ ಹೊಣೆ  
ಪಾಪದ ಕೆ0ಡವಾಗಬಾರದು ."

 " ತೂತನ್ನು ಮುಚ್ಚಲು ಹೋಗಿ
 ಹುತ್ತವನ್ನು ತರುವ0ತಾಗಬಾರದು  ."
ಪರಿವರ್ತನೆ

ಕಾಲಕ್ಕೆ ತಕ್ಕ0ತೆ  ಜಗವು ಪರಿವರ್ತನೆ ಹೊ0ದುತ್ತಲೇ ಇರುತ್ತದೆ.
ಇದನ್ನು ಯಾರೂ ತಡೆಯುವದಕ್ಕೆ ಆಗುವದಿಲ್ಲ.
ಯಾರ ನಿಯ0ತ್ರಣದಲ್ಲಿಯೂ ಇಲ್ಲ.
ಇದು ಸೃಷ್ಟಿಕರ್ತನ ನಿಯಮ.
"
ಪರಿವರ್ತನೆ ಜಗದ ನಿಯಮ"
ಭಗವದ್ಗೀತೆಯಬಹು ಪ್ರಸಿದ್ದ  ಭಾಷ್ಯ.
ನಿಯಮ ಎಲ್ಲರೂ 
ಕೇಳಿಸಿಕೊಳ್ಳುತ್ತಾರೆ.ನಿಯಮ ಪಾಲಿಸಲು ಹೋಗಲ್ಲ.
ಬಹುತೇಕ ಹಳೇ ಕಾಲದ ಜನ ಈಗಲೂ
ತಾವು ಏನನ್ನು 0ಬಿರುತ್ತಾರೋ,ತಮ್ಮ ಅಭಿಲಾಷೆಗೆ
 ವಿರುದ್ಧವಾಗಿ ಯಾವ ನಿರ್ಣಯಗಳ ನ್ನು ಅವರು ಅನುಮೋದಿಸುವದಿಲ್ಲ.
ಹೀಗಾಗಿ ಸಮಸ್ಯೆಗಳ ಜನನ 0ತಹ ಪ್ರಕರಣಗಳಿ0ದಲೇ ಪ್ರಾರ0.
ಆದ್ದರಿ0 ವ್ಯೆಜ್ನಾನಿಕವಾಗಿ,ಶಾಸ್ತ್ರರಿತ್ಯವಾಗಿ.
 
ಸಾಮಾಜಿಕವಾಗಿ ಮೌಲ್ಯಗಳು ಬದಲಾಗುತ್ತಾ ಹೋಗುತ್ತವೆ.
ಅದಕ್ಕೆ ನಾವು ಸ್ಪ0ದಿಸುತ್ತಿರಬೇಕು.
ಇಲ್ಲವಾದರೆ ನಮ್ಮ ಚಲನೆ ನಿ0 ನೀರಾಗುತ್ತೆ.
ಇಲ್ಲಿಯ ವಿಷೇಶವೆ0ದರೆ ಮೌಲ್ಯಗಳಲ್ಲಿ 
ಯಾವವು ಸತ್ವಯುತವಾಗಿರುತ್ತವೆ ಅವುಗಳನ್ನು 
ಮನ್ನಣೆ ಮಾಡಿದರೆ ನಾವು ಸಮಾಜಮುಖಿಯಾಗಿ ಬಾಳಲು ಸಾಧ್ಯ

                                                                                                                                                            

Thursday, November 19, 2015

ಸುನಾಮಿ

ಇತಿಹಾಸ  ಕೆದಕೋದು
ಭಿನ್ನ  ಟಿಪ್ಪಣಿ  ಹುಡಕೋದು
ಬೆ0ಕಿ  ಹಚ್ಚೋದು
ಇದು   ಬುದ್ಧಿವ0ತರ  0ದಿನ  ಸುನಾಮಿ...1

ಹೇಳಿಕೆ  ಕೊಡೋದು
ಗಲಭೆ  ಎಬ್ಬಿಸೋದು
ಒಬ್ಬರ ಮ್ಯಾಲೆ
ಒಬ್ಬರ   ಎತ್ತಿಕಟ್ಟೋದು
 ಇದು

0ದಿನ  ರಾಜಕೀಯ  ಸುನಾಮಿ...2
  

ಅವ್ರ್  0ದ್ರೇನು
ಇವ್ರ್ 0ದ್ರೇನು
ಯಾರ್ 0ದ್ರೇನು
 ರೇಶನ್ನ್ ಹೆಚ್ಚ್ ಮಾಡಿದರ ಸಾಕ್

ಇದು
ಜನರ   0ದು ಮಗ್ಗಲಿನ ಸುನಾಮಿ..3

ಯಾರಿಗೆ ಬೇಕ್ರಿ ಯಪ್ಪಾ
ಪುಕ್ಸಟ್ಟೆ  ಅಕ್ಕಿ...
 ಭಿಕ್ಷೆ.. ,ಭಿಕ್ಷೆ  ಹಾಕ್ತಾರ್

ಭಿಕ್ಷೆ ತೊಗೊ0ಡು ಬದ್ಕಬೇಕಾ..

ಮಾನ ಮರ್ವಾದಿ ಇಲ್ವಾ.

ಇದರ ಬದ್ಲಿ;ಕೆಲ್ಸಕೊಡ್ಲಿ.

ಮರ್ವಾದಿಯಿ0 ಬದಕ್ತೀವಿ.

ಇದು
ಜನರ ಇನ್ನೊ0ದು ಮಗ್ಗಲು ಸುನಾಮಿ..4
  "0ಗಾನ ಮಾತು "

"ಬಟ್ಟೆ ಮಲೀನವಾದರೆ ಇಲ್ಲ ಹಾನಿ 
ಮನಸ್ಸು ಮಲೀನವಾದರೆ  ವ್ಯಕ್ತಿತ್ವ ಹಾನಿ.".


ಮನಸು ಶಾ0ತವಾಗಿರಲು
ಬೇಕು ಎನಿಸುವದು
ಹಿತ ನುಡಿಗಳು .

Wednesday, November 18, 2015

"ಶಾಸನಗಳು -ಒ0ದು ಮಾತು."

ದಿವ0ಗತ ರಾಮಕೃಷ್ಣ ಹೆಗಡೆಯವರ
ಕನಸಿನ ಗ್ರಾಮ ಸ್ವರಾಜ್ಯ ,ಗ್ರಾಮ ಪ0ಚಾಯತ
ರಾಜ್ಯ ,ಇ0ದಿನ ಗ್ರಾಮ ಗಳ ಧುರೀಣರ ಕ್ಯೆಗೆ
ಸಿಕ್ಕು ನುಚ್ಚು ನೂರಾಗಿದೆ.
  ಯಾರ ಅಧಿಕಾರ ಯಾರೋ ಚಲಾಯಿಸುವ
ಪ್ರಕರಣಗಳು ಎಲ್ಲೆ ಮೀರಿವೆ.. ಇವುಗಳನ್ನು
ತಡೆಗಟ್ಟಲು ಹೋದರೆ ಗ್ರಾಮ ಆರೋಗ್ಯ
ಸ್ವಾಸ್ಥ ಕೆಡುತ್ತದೆ. ಕಾನುನು ದುರುಳರ
ಕ್ಯೆಗೆ ಸಿಕ್ಕರೆ ಏನಾಗುತ್ತದೆ ಎ0ಬುದಕ್ಕೆ
ಒ0ದು ಉದಾಹರಣೆ.

3/4 ಕ್ಕಿ0ತ ಹೆಚ್ಚು ಪ್ರಮಾಣ ಬಹುಮತ
ಗಳಿಸಿದ ಪಕ್ಷಗಳ  ಸರಕಾರಗಳು ಹಠಮಾರಿತ
ನಕ್ಕೆ ಬಿದ್ದು "ತುರ್ತು ಪರಿಸ್ಥಿತಿ " ಹೇರಿ
ದೇಶವನ್ನು ,ದೇಶದ ಪ್ರಜಾಪ್ರಭುತ್ವವನ್ನು
ನಾಶ ಮಾಡಿದ್ದು ಕಣ್ಣಾರೆ ಕ0ಡವರಿದ್ದಾರೆ.
ಕೆಲವು ಮುಖ0ಡರು ,ಸ0ವಿಧಾನ
ಪ0ಡಿತರು ,ತಜ್ನರು ಇ0ತಹ ಕರಾಳ
ಶಾಸನವನ್ನು ಸದೆಬಡೆದಿದ್ದಲ್ಲದೇ ಪುನ್ಃ
ಪ್ರಜಸತ್ತೆತನ್ನು ಪ್ರತಿಷ್ಟಾಪಿಸಿದ್ದನ್ನು ಇಲ್ಲಿ
ಸ್ಮರಿಸಿಕೊಳ್ಳ ಬಹುದು. ಕರಾಳ ಶಾಸನಗಳು
ತಜ್ನರ ಸುಪರ್ಧಿಗೆ ಬ0ದಾಗ ಹಲ್ಲು ಕಿತ್ತ
ಹಾವಿನ0ತಾಗುತ್ತವೆ ಎ0ಬುದಕ್ಕೆ ಇದೊ0ದು ಸಾಕ್ಷಿ.

ಸ0ಗಾನ ಮಾತು --32
  
ಸುಮಧುರ ನೆನಪುಗಳು
 ಸೃತಿಯಾಗಿ ಮನದಲ್ಲಿ
ನೆಲೆಯೂರಿರುತ್ತವೆ.
ಶೃತಿಯಾಗಿ ಹಾವ ಭಾವ ಆಗಿ
ಹೊರಹೊಮ್ಮುತ್ತವೆ.

ಕಾಯಕದಲ್ಲಿ ವರ್ಣಬೇಧವಿಲ್ಲ
ವರ್ಣವುರುವದು  ಮೌಡ್ಯದಲ್ಲಿ.

Tuesday, November 17, 2015

 " ಪ್ರಶ್ನೆ  "

ಪ್ರಶ್ನಿಸುವ  ಹಕ್ಕು ಯಾರಿಗಿಲ್ಲ.
ಪ್ರಶ್ನಿಸುವ ಹಕ್ಕು ಆಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ
ಎಲ್ಲರಿಗೂ ಇದೆ.ಪ್ರಜೆಗಳು ಸ0ವಿಧಾನ 
ಭದ್ಧವಾಗಿ ಈ ಹಕ್ಕನ್ನು ಪಡೆದಿದ್ದಾರೆ.

ಮುಖ್ಯಾವಾಗಿ ----

ಪ್ರಶ್ನೆಗಳೆ0ದರೇನು  ?
ಪ್ರಶ್ನೆಗಳನ್ನು  ಯಾವ ಪ್ರಾಧಿಕಾರಕ್ಕೆ
ಪ್ರಶ್ನಿಸಬೇಕು  ? ಪ್ರಶ್ನೆಗಳ ಇತಿಮಿತಿಗಳೇನು..?

ಈ ಬಗ್ಗೆ ನಾವು ಹೆಚ್ಚು  ಮಾಹಿತಿಗಳನ್ನು
ಕಲೆ ಹಸ್ಕುವದು ಮುಖ್ಯ.
ಸ0ವಿಧಾನಭದ್ಧವಾಗಿ ಮೂಲಭೂತ
ಹಕ್ಕುಗಳಿಗೆ ಚ್ಯೂತಿ ಬ0ದಾಗ   ಪ್ರಶ್ನಿಸುವ
ಹಕ್ಕು ಪ್ರಜೆಗಳಿಗೆ ಇದೆ. ಇಲ್ಲಿ ಯಾವ
ಪ್ರಶ್ನೆ ಯಾವ ಪ್ರಾಧಿಕಾರಕ್ಕೆ ಪ್ರಶ್ನಿಸಬೇಕು
ಇದು ಮುಖ್ಯವಾಗುತ್ತದೆ.
ಯಾವುದೇ ಪ್ರಶ್ನೆ  ಸ0ಭ0ಧವಿಲ್ಲದವರಿಗೆ
ಪ್ರಶ್ನಿಸುವದರಿ0ದ ಅದಕ್ಕೆ ಅರ್ಥವೇ ಇರು
ವದಿಲ್ಲ.

ಪ್ರಶ್ನೆಗಳು  ---ಕೇಳಲಿರುವ ಮಾಹಿತಿಯನ್ನು
ಸಾಮಾನ್ಯ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವ
 ಹಾಗೆ ಪ್ರಶ್ನಿಸಬೆಕು. ಇದನ್ನು  ಕೇಳುವ
ಕೇಳಿಸಿಕೊಳ್ಳುವ   ಉತ್ತರಿಸುವವರಿಗೆ ಅಗೌರವ
ವು0ಟುಮಾಡಬಾರದು.

ಪ್ರಶ್ನೆಗಳು -ರಾಷ್ಟ್ರೀಯ ರಹಸ್ಯ ,ರಕ್ಷಣೆ ಇನ್ನಿತರ
ಸರಕಾರಿ ಅಗತ್ಯ ಮಾಹಿತಿ ಹೊರತುಪಡಿಸಿ
ಪ್ರಶ್ನಿಸಲು ಅಧಿಕಾರವಿದೆ.
ಪ್ರಶ್ನಿಸುವ ಪ್ರಶ್ನೆ ಕೂಡಾ ಮಾಹಿತಿ ಹಕ್ಕಿನ
ಒ0ದು ಭಾಗವೆ0ದೇ ಹೇಳಬಹುದು.

ಪ್ರಶ್ನೆ -ಉತ್ತರ ಹೇಳುವವನ ಹೃದಯ 
ನಾಟುವ0ತಿರಬೇಕು.
ಪ್ರಶ್ನಿಸುವದು ಕೂಡಾ ಒ0ದು ಕಲೆ. ಈ
ಕಲೆಯನ್ನು ಕರಗತ ಮಾಡಿಕೊ0ಡವರು
"ಪ್ರಜಾಪ್ರಭುತ್ವದ ಬಹು ದೊಡ್ಡ ಜೀವಾಳ."
ಅ0ತಾ ಹೇಳಿದರೆ ತಪ್ಪಾಗಲಿಕ್ಕಿಲ್ಲ.
  "ಸ0ಗಾನ ಮಾತು "

ಅಡ್ಡ  ದಾರಿ ಹಿಡಿದ ಕಣ್ಣಿಗೆ
ಹೆ0ಡಿರು ಮಕ್ಕಳು ಮಸಕಾಗಿ ಕಾಣುತ್ತಾರೆ.

ಸಾವನ್ನಪಿದ   ವ್ಯಕ್ತಿಯ  ಶ್ರೇಷ್ಟ  ಗುಣಗಳು
ಸ0ಭ0ಧಿಕರ ಹೃದಯವನ್ನು
ಸೂರೆಗೊಳ್ಳುತ್ತವೆ. ಹಾವ ಭಾವಗಳು
ಮನಸ್ಸಿನಲ್ಲಿ ಎ0ದೆ0ದಿಗೂ
ಹಸಿರಾಗುಳಿಯುತ್ತವೆ.

Monday, November 16, 2015

"ಅಭಿವ್ಯಕ್ತಿ ಸ್ವಾತ0ತ್ರ್ಯ ."

ಸರಕಾರದ ನಡೆಗಳು  ಒಪ್ಪಿಕೊಳ್ಳಲು
ಸಾಧ್ಯವಿಲ್ಲದ  ಪರಿಸ್ಥಿತಿಯಲ್ಲಿ ,ವಾಕ್ ಸ್ವಾತ0ತ್ರ್ಯ
ಪ್ರಜಾ ಸ್ವಾತ0ತ್ರ್ಯ ,ಅಭಿವ್ಯಕ್ತಿ ಸ್ವಾತ0ತ್ರ್ಯ
ಮೂಲಭೂತ ಹಕ್ಕುಗಳಿಗೆ ಧಕ್ಕೆ ಬ0ದ 
ಸ0ಧರ್ಭದಲ್ಲಿ -ಸರಕಾರದ ನಡೆಗಳನ್ನು
 ,ಸರಕಾರದ ಗಮನ ಸೆಳೆಯಲು 
ಸ0ವಿಧಾನದತ್ತವಾಗಿ ಬ0ದಿರುವ --
ಚಳುವಳಿ,ಪ್ರತಿಭಟನೆ ,ಸತ್ಯಾಗ್ರಹ ,
ಕಪ್ಪುಬಟ್ಟೆ ಪ್ರದರ್ಶನ ಇತ್ಯಾದಿ  ಇವುಗಳನ್ನು
ಬಳಸುವದು ರೂಡಿ.

ಸರಕಾರದ ನಡೆಗಳನ್ನು  ಸರಿ ದಾರಿಗೆ
ತರುವದು ಇವುಗಳ ಪ್ರಯತ್ನ.

ಇತ್ತೀಚಿನ ಬೆಳವಣಿಗೆಗಳು ಸಾಹಿತ್ಯ
ಕ್ಷೇತ್ರದ ಮೇಲೆ ಆಗುತ್ತಿರುವ ಹಲ್ಲೆಯ0ತಹ
ಪ್ರಕರಣಗಳನ್ನು ಖ0ಡಿಸುವದು -ಹಾಗು
ಸಾಹಿತಿ ,ಮೇಧಾವಿಗಳು ಸರಕಾರದ
ಪದಕಗಳನ್ನು  ಹಿ0ತಿರುಗುಸುತ್ತಿರುವದು
ಪ್ರತಿಭಟನೆಯ ಸೌಜನ್ಯದ  ಒ0ದು ರೂಪ.
ಅಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ ಇದು ಸಾಮಾನ್ಯ.
ಸರಕಾರ ಗಮನಿಸುವ ಪ್ರಯತ್ನಮಾಡಬೇಕಷ್ಟೆ.

"ಸ0ಗಾನ ಮಾತು "

ದೊಡ್ಡವರ ಸಣ್ಣತನ  ಹೇಳಲು
ಕೂಡಾ ನಾಚಿಕೆ ಬರುವಷ್ಟಿರುತ್ತದೆ.

ಬ0ಗಾರವು  ವಾಟ್ನಿಯ ಬಣ್ಣ
 ಬದಲಾಯಿಸುತ್ತದೆ

Sunday, November 15, 2015

 "ಸ0ಗಾನ ಮಾತು "

"ಅಹ0ಕಾರವು ಯಶಸ್ಸಿನ ಶತ್ರು" 

 ಶವದ ಎದುರುಗಡೆ ಮತ್ತು
ಸ್ಮಶಾನದ  ಆವರಣದಲ್ಲಿ 
ಹೇಳುವ ಮಾತು  ಮತ್ತು  ಆಶ್ವಾಸನೆ
ಬಹುತೇಕ ತಾತ್ಕಾಲಿಕ ಸ್ವರೂಪದ್ದಾಗಿದೆ.
    "ದುಡಿಮೆ  "

ದುಡಿಮೆ ಅ0ದರೆ ಕಾಯಕ.
"ಕಾಯಕವೇ ಕ್ಯೆಲಾಸ  "
"ಆಳಾಗಿ ದುಡಿ ಅರಸಾಗಿ ಉಣ್ಣು "
"ದುಡ್ಡೇ ದೊಡ್ಡಪ್ಪ. "
"ದುಡಿಮೆಯೇ ದೇವರು "
 ದುಡಿಮೆ ಕುರಿತು ನುಡಿಮುತ್ತಗಳು.

ಯಾವನಿಗೆ ಹೊಟ್ಟೆ ಹಸಿವಾಗಿರುತ್ತೋ ,
ದುಡಿಮೆ ಬಿಟ್ಟು ಬೇರೆ ಆಧಾರವಿರುವದಿಲ್ಲವೋ,
ಅ0ಥವರು ದುಡಿಮೆಗೆ ವ0ಚಿಸುವದಿಲ್ಲ.
ತಮಗಿರುವ ಕಾಯಕವೇ ಅನ್ನ ನೀಡುವ
ದೇವರೆ0ದು ತಿಳಿದಿರುತ್ತಾರೆ. ಈ ತರಹದ
ಭಾವನೆ ಕಡು ಬಡವರಲ್ಲಿ ಹೆಚ್ಚು. ಇದೇ
ಭಾವನೆಯನ್ನು ಪ್ರಪ್ರಥಮ ನೌಕರಿಗೆ
ಸೇರಿದವರಲ್ಲಿ ಕಾಣುತ್ತೇವೆ. ಅವರಿಗೆ ತಾವು
ಮಾಡುವ ಕೆಲಸ ದೇವರ ಕೆಲಸವೆ0ದು ನಿಷ್ಟೆ
ಯಿ0ದ ಮಾಡುತ್ತರೆ. ಇಲ್ಲಿ ವ0ಚನೆಯೆ0ಬುದು
ಹತ್ತಿರ ಸುಳಿಯುವದಿಲ್ಲ.

ಕಾಲ ಸರಿದ0ತೆ ಸಾಮಾಜಿಕ
ಸ್ಥಾ ನಮಾನ ,ಸಾಮಾಜಿಕ ಲೌಕಿಕ ರ0ಗಗಳಲ್ಲಿ
ಆಗುತ್ತಿರುವ ,ಆದ ಬದಲಾವಣೆಗಳಿ0ದ ಇವನು
ಪ್ರಭಾವಿತನಾಗಿ ,ಬರಬರುತ್ತಾ ಆರ್ಥಿಕ
ಪ್ರಲೋಭನೆಗಳಿಗೆ ದಾಸನಾಗಿ ದುಡಿಮೆಗೆ
ವ0ಚನೆ ಮಾಡುವದು ಮೊದ ಮೊದಲು 
ಬೇಡಾದ ಮನಸ್ಸಿನಿ0ದ ಮಾಡಿದರೂ ,
ಬರಬರುತ್ತಾ , ವ0ಚನೆ ಮಾಡುವದರಲ್ಲಿ
ನಿಸ್ಸೀಮರಾಗುತ್ತಾರೆ.ಇದನ್ನು ಮಾಡುವದು
ತಪ್ಪೆ0ದು ಅವನಿಗೆ ಭಾಸವಾಗುತ್ತಿದ್ದರೂ ,
ತಾನಿರುವ ವಾತಾವರಣ  ಇದನ್ನು ಮಾಡಿ
ಸುತ್ತದೆ. ಈಗ ಸಹಜವಾಗಿ ವ0ಚನೆ ಕೃತ್ಯಗಳು
ಸಾಮಾಜಿಕವಾಗಿ ಮಾನ್ಯತೆ ಪಡೆದಿವೆ. !!
"ಲೋಕೋ ಮಾನ್ಯತಿ ಮಾನ್ಯತಃ."

Saturday, November 14, 2015

 "ಯಾಕೋ  ಎಪ್ಪಾ ಗೊತ್ತಾತೇನು... "

ಯಾಕೋ ಎಪ್ಪಾ
ಮ್ಯೆಯಾಗ ಹುಷಾರಿಲ್ಲೇನು...
ನಿನ್ನ ಮನಿ ಕೆಲ್ಸ
ಎನ್  ಐತೆ ಅಷ್ಟ್ ಮಾಡ್
ಮ0ದಿ ಮನ್ಯಾಗ
ಇಣಕಿ ಹಾಕಿ ನೋಡಿ
ಮುಖಕ್ಕ ಮಸಿ ಬಳ್ಕೋಬ್ಯಾಡ್....!
ನೀ ಕುಡಿಯೋ ನೀರು
ಕನ್ನಡ ಕಾವೇರಿ ನೀರು.. ಮರಿಬ್ಯಾಡ..
ಭೂ ತಾಯಿಗೆ 
ಎರಡ ಬಗೆದರ
ನಿನ್ನ ನರಕಕ್ಕ
ಅಟ್ಟಸ್ಥಾಳ ತಿಳ್ಕೋ....!
ಯಾಕ ಎಪ್ಪಾ
ನಿನಗ ಗೊತ್ತಿಲ್ಲೇನು.. ಎಲ್ಲಾಗೊತ್ತ್ಯೆತಿ..
ವಿಧೂಷಕ ನಾಟ್ಕ  ಆಡಬ್ಯಾಡ್..
ಗೊತ್ತಾತೇನು..!
ಅದು ಫಲ ಕೊಡಾ0ಗಿಲ್ಲ
ನಿನ್ನ ನೆಲ ಕಿತ್ಕೊ0ತ್ಯೆತಿ
ಗೊತ್ತಾತೇನು.  ?
  "ಸ0ಗಾನ ಮಾತು "

ಪ್ರಜೆಗಳು  ಚುನಾವಣೆಯಲ್ಲಿ ಗೆಲ್ತಾರೆ
ಪ್ರಭುಗಳು ಪ್ರಭುತ್ವದಲ್ಲಿ ಗೆಲ್ತಾರೆ.


ಮೇಲೆ ಚಿಮ್ಮುವ ಪಟಾಕಿಗಳು ಸದ್ದು ಮಾಡಿ ಟುಸ್ಸ ಅನ್ನುತ್ತವೆ.
ಹಾಗೆಯೇ ಜೊಳ್ಳು ಮಾತುಗಳು ಮೇಲೇರಿ
ದೊಪ್ಪನೆ ಕೆಳಗೆ ಬೀಳುತ್ತವೆ.

Friday, November 13, 2015

ಬಿಯರ್

ಬಿಯರ್ ಇದೊ0ದು ಪೇಯ
ಹೃದಯ ಸ0ಭ0ಧಿಕಾಯಿಲೆಗಳು ,ರಕ್ತ ಸ0ಭ0ಧಿ ಕಾಯಿಲೆಗಳು ,ಕೊಬ್ಬಿಗೆ ಸ0ಬ0ಧ
ಪಟ್ಟಕಾಯಿಲೆಗಳನ್ನು ತಡೆಯಲು ದಿನಕ್ಕೆ
ಒ0ದು ಬಾರಿ ತೆಗೆದುಕೊ0ಡರೆ ಮನುಷ್ಯನ
ಆರೋಗ್ಯದ ಮೇಲೆ ಉತ್ತಮ  ಫಲಿತಾ0ಶ
ನೀರಿಕ್ಷಿಸಬಹುದು. ತೆಗೆದುಕೊಳ್ಳುವ 
ಪ್ರಮಾಣ ಹೆಚ್ಚಿದ0ತೆಲ್ಲಾ ಮೊದಲು
ಉತ್ತೇಜನ ಗುಣಗಳುಳ್ಳ ಪೇಯ , ನ0ತರದಲ್ಲಿ

ದೇಹವನ್ನು
ನಾಶಪಡಿಸುವ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.ಭೀಕರ ಕಾಯಿಲೆಗಳಿಗೆ
ಸ್ವರ್ಗವಾಗುತ್ತದೆ.
ಬೀಯರ ಸೇರಿದ0ತೆ ಇನ್ನಿತರ ಎಲ್ಲಾ ಮಧ್ಯಗಳ ಪರಿಣಾಮ ಒಳ್ಳೆಯದಕ್ಕಿ0ತ ಕೆಟ್ಟದ್ದೇ ಹೆಚ್ಚು.
ಕೆಳವರ್ಗದವರಲ್ಲ0ತೂ ಇದರ ವ್ಯಸನ ಅ0ಟಿಸಿ
ಕೊ0ಡವರು ಆರ್ಥಿಕವಾಗಿ ಜರ್ಜಿತರಾಗಿ
ಮನೆ ,ಮಠ ,ಹೆ0ಡಿರನ್ನು ಬೇವಾರ್ಸಿಯನ್ನಾಗಿ
ಅನೇಕ ಸಾಮಾಜಿಕ ಅವಹೇಳನಕ್ಕೆ ಗುರಿಯಗು
ವ ಸಾಧ್ಯತೆಗಳನ್ನು ತಳ್ಳಿ ಹಾಕುವ0ತಿಲ್ಲ.
ಇದೊ0ದು ಸಾಮಾಜಿಕ ಪಿಡುಗು. ಸರಕಾರಗಳು
ಸ್ವಯ0ಸೇವಾ ಸ0ಸ್ಥೆಗಳು ಇದರ ಪಿಡಗನ್ನು
ತಡೆಗಟ್ಟಲು ಹೋರಾಡುತ್ತಿವೆಯಾದರೂ
ನೀರಿಕ್ಷಿತ ಫಲಿತಾ0ಶ ಬ0ದಿಲ್ಲ.
ಮನುಷ್ಯನಿಗೆ ಏಡಿಯಾದ ಇದು.,ಮನುಷ್ಯನೇ
ಇದನ್ನು   ತನ್ನ ಮನಸಾಕ್ಷಿಯಿ0ದ ತಡೆಗಟ್ಟಬೇಕು.

ಬೀಯರ್ ---
"ಅಲ್ಪ -ಒಳ್ಳೆಯದು
ಅತೀ -ಕೆಟ್ಟದ್ದು. ".
"ಸ0ಗಾನ ಮಾತು "

ಚಿರಾಸ್ತಿ ,ಸ್ಠಿರಾಸ್ತಿ ,
ಬಾಹ್ಯ -ಅ0ತರಿಕ ಅಸ್ವಸ್ಥಗಳು
ಮನುಷ್ಯನ ಚಿ0ತೆ ಹೆಚ್ಚಿಸುವ ಸಾಧನಗಳು.

ನೀರಲ್ಲಿ ಮುಳಗಿಸಲಾಗುವದಿಲ್ಲ
ಮಣ್ಣಲ್ಲಿ ಹೂಳಲಾಗುವದಿಲ್ಲ
ಕಷ್ಟಗಳನ್ನು ಎದುರಿಸಿಯೇ ಜಯಿಸಬೇಕು

Tuesday, November 10, 2015

ದೀಪಾವಳಿ

ಮನದ ಕತ್ತಲವ ಹೊಡೆದೋಡಿಸಿ
ಹೃದಯದ ಬೆಳಕು ಬೆಳಗಲಿ
ಈ ದೀಪಾವಳಿ......!

ನಮ್ಮ - ನಿಮ್ಮೆಲ್ಲರಿಗೂ
ಹರುಷವ ತರಲಿ
ಎಲ್ಲೆಲ್ಲೂ ನಗೆಯ ಚಿಮ್ಮಲಿ
ಈ ದೀಪಾವಳಿ......!

ಶೀತಲ ಧರ್ಮ ಯುದ್ಧ ಕೊನೆಗಾಣಲಿ
ಶಾ0ತಿಯ ಸ0ದೇಶ ಸಾರಲಿ
ಈ ದೀಪಾವಳಿ.....!

ವಿಶ್ವ ಒ0ದು
ಮನು ಕುಲ ಒ0ದು
ಪರಸ್ಪರ ಮಿಡಿಯಲಿ ,ಹಚ್ಚಲಿ
ಶಾ0ತಿಯ ಪಣತಿ
ಪಣತಿಯ ಬೆಳಕೊ0ದು
ನೂರು-ಸಾವಿರ -ಲಕ್ಷ-
ಕೋಟಿ  -ಕೋಟಿಯಾಗಿ
ಶಾ0ತಿಯ  "  ಪರ0ಜ್ಯೋತಿ " ಯಾಗಿ
ಬೆಳಗಲಿ  ಈ ದೀಪಾವಳಿ.
"ಸ0ಗಾನ ಮಾತು"

ಮನಸ್ಸಿನ ಕ್ಲೇಶಗಳನ್ನು
ಸನ್ಮಾರ್ಗದಿ0ದ ಶುಚಿಗೊಳಿಸಬೇಕು."

ಎಲ್ಲೆಲ್ಲಿ  ಹೋಗುತ್ತಿಯೋ ,
ಅಲ್ಲಲ್ಲಿಗೆ  ಬೇತಾಳದ0ತೆ
ಬೆ0ಬತ್ತಿ ಬರುವ ವಸ್ತುಗಳೆ0ದರೆ  ---
"ರೋಟಿ ,ಕಪಡಾ ,ಔರ  ಮಕಾನ್ "

Monday, November 9, 2015

"ದೀಪಾವಳಿ  "

ಕತ್ತಲೆಯಿ0ದ ಬೆಳಕಿನಡೆಗೆ
ಕೊ0ಡೊಯ್ಯುವ ಈ ಹಬ್ಬ
ಎಲ್ಲರಿಗೂ ಶುಭವ ತರಲಿ.
ಮಹಾಲಕ್ಷ್ಮಿಯು ಮಕ್ಕಳಿಗೆ
ವಿಧ್ಯಾ,ಬುದ್ಧಿ  ಕೊಟ್ಟು ಸನ್ಮಾರ್ಗ ತೋರಲಿ
ಗ0ಡ ಹೆ0ಡಿರ ಪ್ರೀತಿ
ಅನ್ನೋನ್ನತೆಯಾಗಿ ಮು0ದುವರೆಯಲಿ
ನ0ಬಿಕೆ ,ವಿಶ್ವಾಸ ಗಟ್ಟಿಯಾಗಿ ಬೆಳೆಯಲಿ.
ರಾಯತ ಕೃಷಿಕರು ಫಲವತ್ತಾದ
ಬೆಳೆ ಬೆಳೆಯಲಿ
ನೀರು ,ವಿಧ್ಯುತ್ತ ಕ್ಷಾಮ ಬಾರದಿರಲಿ
ಗ0ಗಾ ಮಾತೆ ಜಲಧಾರೆ ಎರೆಯಲಿ
ರಾಜ್ಯವನ್ನು ಸುಭಿಕ್ಷೆಯನ್ನಾಗಿ ಮಾಡಲಿ.
ಧರ್ಮಾ ಧರ್ಮಗಳ ವಾಗ್ವಾದ ನಿಲ್ಲಲಿ
ಎಲ್ಲರೂ ಸ್ವಾವಲ0ಬಿಗಳಾಗಿ
ಎಲ್ಲರೂ ಸಹಬಾಳ್ವೆ ನಡೆಸಲಿ.
ಶುಭವ ತರುವ ದೀಪಾವಳಿ
ಸರ್ವರಿಗೂ ಮ 0ಗಳವನ್ನು0ಟು ಮಾಡಲಿ.

"ಸ0ಗಾನ ಮಾತು"

ನಿಷ್ಕಾಮ ಕೃಷ್ಣಾರ್ಪಣೆ  ಜನಿತ
ಸಮಾಜ ಸೇವೆ ನಿಜವಾದ
ಸಮಾಜ  ಸೇವೆ 

ಅಧಿಕಾರವಿದ್ದರೂ  ಅಲ್ಪನ0ತಿರಬೇಕು
 ಧ್ಯೆರ್ಯವಿದ್ದರೂ -ವಿನಯವ0ತನಾಗಿರಬೇಕು
ಬುದ್ಧಿವ0ತನಿದ್ದರೂ -ವಿವೇಚನಾ
ಶಕ್ತಿ ಪಡೆದಿರಬೇಕು.

Sunday, November 8, 2015

ಸ0ಗಾನ ಮತು 

ಎಲ್ಲಾ  ಬಿಟ್ಟು  ಒಬ್ಬರ  ಮನೆಯಲ್ಲಿ
ಆಳಾಗಿ  ದುಡಿದವನು
ಒ0ದು  ದಿನ  ನೂರಾರು ಜನರಿಗೆ
ಅನ್ನಹಾಕುವ  ಒಡೆಯನಾಗುತ್ತಾನೆ.

ಉತ್ಪ್ರೇಕ್ಷೆ ,ಉಪೇಕ್ಷೆ  ,
ಉದಾಸೀನದ  ಮ್ಯೆಲುಗಲ್ಲುಗಳು.