Tuesday, September 26, 2017

 "  ಗುಣ ದರ್ಪಣ  "
                ---   ----   -----------
ಯಾರು ಧರ್ಮನಿಷ್ಟರೋ ,ಧರ್ಮ ಪಾರಾಯ
ಣರೋ ,ವಿಧ್ವಾ0ಸರಲ್ಲಿ ಗೌರವವುಳ್ಳವರೋ ,ಗುರುಗಳಲ್ಲಿ -ದೇವರನ್ನು ಕಾಣುವರೋ ,
ಶತೃಗಳಲ್ಲಿ ಮಿತ್ರತ್ವ ಕಾಣುವರೋ ,ಬಡವರಲ್ಲಿ
ಗುಣಸಿರಿ ಕಾಣುವರೋ ,ಶ್ರತಿ -ಸೃತಿಗಳಿಗೆ
ಪೂಜ್ಯ ಸ್ಥಾನ ನೀಡುವರೋ,--  ಅ0ತವರಲ್ಲಿ
ನೀವು ಎಷ್ಟು ಸತ್ವ ಪರೀಕ್ಷೆ ಮಾಡಿದರೂ ,
ಅಗೆದು - ತೆಗೆದು ಓರೆಹಚ್ಚಿದರೂ , ಅವರಲ್ಲಿ
ಸದ್ಗುಣಗಳ ರಾಶಿ ಸ0ಪತ್ತು ಕಾಣುತ್ತೆ.ನಶಿಸುವ
ಗುಣಗಳಲ್ಲ.

      ಯಾರಲ್ಲಿ ದ್ವೇಷ ,ಅಸೂಯೆ ,ಸೇಡು,
ಕೀಳಿರಿಮೆ ,ಶತೃಬಾಧೆ ,ರಾಜ್ಯಬಾಧೆ ,ಸ0ಪತ್ತು
ಬಾಧೆ ,ದಾಯಾದಿ ಬಾಧೆ ಗಳಿರುತ್ತವೆಯೋ,-
---ಅವರು ಒ0ದಿಲ್ಲಾ ಒ0ದು ರೀತಿಯಲ್ಲಿ
'ಮನಸ್ಸೆ0ಬ ಅಗ್ಗಿಷ್ಟಿಕೆಯಲ್ಲಿ ಕುದಿಯುತ್ತಿರುತ್ತಾರೆ
ಕೋಗಿಲೆಯ ಇ0ಪಾದ ಸ್ವರ ಕರ್ಕಶವಾಗಿ
ಕೇಳಿಸುತ್ತೆ,ಪ್ರಶಾ0ತ ಸಾಗರವೂ ಭೋರ್ಗರೆ
ಯುವ0ತೆ ಕೇಳಿಸುತ್ತೆ.ನಿ0ತ-ನೆಲ ಭೂಕ0ಪ
ವಾದ0ತೆ ಕಾಣುತ್ತದೆ.ಯಾರ ಮೇಲು ನ0ಬಿಕೆ
ಇರುವದಿಲ್ಲ.ಇಡುವದಿಲ್ಲ.ಉಪ್ಪರಿಗೆಯೆಷ್ಟು
ಮುತ್ತು ರತ್ನಗಳಿದ್ದರೂ ಅನುಭವಿಸುವ ಭಾಗ್ಯ
ಇವರಿಗಿಲ್ಲ.ಏನಿದ್ದರೂ ಅಶಾ0ತಿಯ ಪರ್ವದಲ್ಲಿ
ಸಾಗುತ್ತಿರುತ್ತಾರೆ.

  ಮೊದಲನೆಯದು ಮಹಾಭಾರತದ ಯುಧಿಷ್ಟ
ರನ ವ್ಯಕ್ತಿತ್ವದ ಮಾದರಿ.ಎರಡನೆಯದು
ದುರ್ಯೋಧನನ ವ್ಯಕ್ತಿತ್ವಕ್ಕೆ ಹಿಡಿದ ದರ್ಪಣ
ವಾಗಿದೆ.


 "  ಸ0ಗಾನ ಮಾತು   "
   ----   ---   ----  ---   ---
  *    ಸರ್ಕಾರ ಜನರ ಮು0ದೆ ತೆಲೆ
        ತಗ್ಗಿಸಬಾರದು.
        ಜನ ಸರ್ಕಾರಕ್ಕೆ ಅವಮಾನ
        ಮಾಡಬಾರದು.

  *    ತಗ್ಗಿದ್ದಲ್ಲಿ ನೀರು ನಿಲ್ಲುತ್ತದೆ.
        ಅದು ಕೊಳೆಯುತ್ತದೆ.
        ದುರ್ಗುಣಗಳಿರುವಲ್ಲಿ ಭ0ಟರಿರುತ್ತಾರೆ
         ಇವರು ವಿನಾಶಕಾರಿ.

  *    ಮೂರು -ಆರು ಗೆದ್ದವ
        ಒ0ಬತ್ತು ಗೆದ್ದ ಹಾಗೆ. (ಮೋಹ ,ಮದ
        ಮತ್ಸರ ಇತ್ಯಾದಿ ).

Monday, September 25, 2017

 " ಪರಿವರ್ತನೆ "
   -----   ----  -'--
ಅಬ್ಬಬ್ಬಾ , 'ರೆಡ್ ಲ್ಯೆಟ್ '-ಏರಿಯಾದ ಯುವಕನೊಬ್ಬ ಪರಿವರ್ತನೆಗೊ0ಡು ಸಮಾಜದ
ಮುಖ್ಯ ವಾಹಿನಿಗೆ ಬ0ದಿರುವದು ತು0ಬಾ
ಆಶ್ಚರ್ಯ.ಮನುಷ್ಯನ ಮನಸ್ದಿನಲ್ಲಿ
ಮನುಷ್ಯತ್ವ ವೆ0ಬುದು ಸುಪ್ತವಾಗಿ ಎಲ್ಲಿಯೋ
.ಆಡಗಿರುತ್ತದೆ.ಜಾಗೃತವಾಗಿ
ಹೊರ ಬರಬೇಕಾದರೆ,ಮನಸ್ಸಿನ ತುಮಲ
ಗಳಿ0ದ ಹೊರಬರಬೇಕು.ಅ0ತಾ ಒ0ದು ಕ್ರಿಯೆ
ಮೇಲಿನ ಯುವಕ ಸಾಧಿಸಿದ್ದಾನೆ.
  60-70 ರ ದಶಕದಲ್ಲಿ ಚ0ಬಲ್ಲ್ ಕಣಿವೆಯಲ್ಲಿ
ಅಡಗಿಕೊ0ಡಿದ್ದ ಡಕಾಯಿತರ ಸುದ್ದಿಯೇ ಸುದ್ದಿ.
ಈ ಬಗ್ಗೆ ಸಾಕಷ್ಟು ಸಿನೇಮಾಗಳು ಆಗಿವೆ.
ಪ್ರಸಿದ್ಧ ಡಕಾಯಿತಳಾದ ಫೂಲನ್ನ ದೇವಿ ಪರಿ
ವರ್ತನೆಗೊ0ಡು ಸ0ಸತ್ತು ಪ್ರವೇಶಿಸಿದ್ದು
ದಾಖಲೆಯ ವಿಷಯ.


ಡಕಾಯಿತರ ಕುಟು0ಬಗಳನ್ನು ಮುಖ್ಯವಾಹಿ
ನಿಗೆ ತ0ದು,ಅವರ ಕುಟು0ಬ ನಿರ್ವಹಣೆಗಾಗಿ
ತಮ್ಮ ಹೊಟ್ಟೆ ಪಾಡಿಗಾಗಿ  ಸಾಮಾನ್ಯ
ಜನರ0ತೆ  ದುಡಿಯುತ್ತಿರುವದು ಶ್ಲಾಘನೀಯ.
    ವಿನೋಬಾಭಾವೆ ,ಗಾ0ಧೀಜಿ ,ಸಾಬರಮತಿ
ಆಶ್ರಮವು ಈ ದಿಶೆಯಲ್ಲಿ  ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದೆ. ಸಾಕಷ್ಟು
ಡಕಾಯಿತರನ್ನು  ಮುಖ್ಯವಾಹಿನಿಗೆ ತರುವಲ್ಲಿ
ಯಶಸ್ವಿಯಾಗಿದ್ದಾರೆ.'ಎಲ್ಲಾ ಸಾಧನೆಗಳಿಗಿ0ತ
ದಾರಿ ತಪ್ಪಿ ಅಡ್ಡ ದಾರಿ ಹಿಡಿದವರನ್ನು  ಸಮಾಜ
ದ ಮುಖ್ಯ ವಾಹಿನಿಗೆ ತ0ದು  ಅವನಿಗೆ ಸಾಮಾನ್ಯ ಜೀವನದ ಧೀಕ್ಷೆ ಕೊಡುವದು-ಎಲ್ಲಾ
ಧೀಕ್ಷೆಗಳಿಗಿ0ತ ಶ್ರೇಷ್ಟ ಧೀಕ್ಷೆಯಾಗಿದೆ.
'ರೆಡ್ ಲ್ಯೆಟ ' ನಿ0ದ ಹೊರಬ0ದ ಯುವಕ
ಎಚ್.ಆಯ್.ವ್ಹಿ. ಯಿ0ದ ತನ್ನ ತಾಯಿಯ
ಸಾವು  ಆತನ ಮನಸ್ಸನ್ನು  ಕಾಡುತ್ತಿರುವದು. ,
ಆ ನೋವಿನಿ0ದ ಹೊರಬರಲು ಜೀವನಪೂರ್ತಿ
ಎಚ್.ಆಯ್.ವ್ಹಿ. ಪೀಡಿತರಿಗಾಗಿ  ತನ್ನ ಸೇವೆಯ
ನ್ನು ಮೀಸಲಿಟ್ಟಿದ್ದು ಕಾಯಕಗಳಲ್ಲೇ ಶ್ರೇಷ್ಟ
ಕಾಯಕ..


   ಸಮಾಜದಲ್ಲಿ ದಾರಿ ತಪ್ಪಿದವರನ್ನು  ಸರಿ
ದಾರಿಗೆ ತರುವದು ಸನ್ಯಾಸ  -ಮಠ ಧೀ ಕ್ಷೆ
ತೆಗೆದುಕೊ0ಡವರ  ಆಧ್ಯತೆಯ ಕೆಲಸ.
ಸನ್ಯಾಸತ್ವದ ಧೀಕ್ಷೆಯ ಹಿ0ದಿನ ಉದ್ದೇಶ
ಸಮಾಜವನ್ನು ಸರಿ ದಾರಿಗೆ ತರುವುದಾಗಿದೆ.
  'ಪರಿವರ್ತನೆ  ಜಗದ ನಿಯಮ ' - ಶ್ರೀ ಕೃಷ್ಣನ
ಉವಾಚ ದಲ್ಲಿ ಎಷ್ಟು ಸತ್ಯ -ಸತ್ವ ವಿದೆ ಎ0ಬು
ದಕ್ಕೆ 'ರೆಡ್ ಲ್ಯೆಟ 'ಯುವಕನೇ ಸಾಕ್ಷಿ.
  ಪರಿವರ್ತನೆಗೆ ಅವಕಾಶಗಳೇ ಸ0ಜೀವಿನಿ.
ಅವಕಾಶಗಳಿಗೆ ಬೆ0ಬಲ ಪ್ರೋತ್ಸಾಹ
ಸಮಾಜ ನೀಡಲಿ.ಈ ಸೇವೆ ಸಮಾಜ ಸೇವೆ
ಅನ್ನುವದಕ್ಕಿ0ತ ಲೋಕ ಕಲ್ಯಾಣ ವೆ0ದರೆ
ಸೂಕ್ತ.ಅಲ್ಲವೇ..?
"  ಬರೆವಣಿಗೆ   "
              ----   --   -----    --
    ಬರೆವಣಿಗೆ ಶುದ್ಧವಾಗಿರಬೇಕು.ಸ್ಪಷ್ಟತೆ
ಇರಬೇಕು.ಸರಳ ,ಸು0ದರ,ಸಾಮಾನ್ಯ ಶಬ್ದ
ಗಳಿ0ದ ಬರೆವಣಿಗೆ ಅಲ0ಕೃತಗೊ0ಡಿರಬೇಕು.
ಬರೆವಣಿಗೆ ಮೂಲಕ  ನಿರೂಪಣೆ ಮಾಡುವ
ವಸ್ತು ಯಾವುದು..?ಅದರ ವಿಸ್ತಾರ ,ಆಳ,
ಕ್ಷೇತ್ರದ ಎಲ್ಲಾ ಆಯಾಮಗಳನ್ನು ಅಭ್ಯಾಸಿಸಿ
ಲೇಖನ ಸಿದ್ಧಪಡಿಸಬೇಕು.ಬಳಸುವ ಶಬ್ದಗಳ
ದನಿ ಇ0ಪಾಗಿರಬೇಕು.ಲೇಖಕನ ಅ0ತರ0ಗದ
ಆಳವನ್ನು ವಾಚಕರು ಗಮನಿಸಬೇಕು.ಲೇಖಕರು
ಕೂಡಾ ವಾಚಕರ ಸಮಸ್ಯೆಗಳನ್ನು ಅರ್ಥ ಮಾಡಿ
ಕೊ0ಡು ,ಅವರ ಸಮಸ್ಯೆಗಳ ಜೊತೆಗೆ ಸಾಹಿತ್ಯ
ದ ಮೆರಗನ್ನು ಹೆಚ್ಚಿಸುವ0ತಾಗಬೇಕು.
ಚುಟುಕು ಸಾಹಿತ್ಯ ಪ್ರಕಾರದಲ್ಲಿ ಚುಟುಕಾದ
ನುಡಿಗಳಿರುತ್ತವೆ.ಈ ನುಡಿಗಳು ಒಗಟು ,ಗಾದೆ
ಉಪಮೆ, ಪ್ರಸಿದ್ದ ಲೇಖಕರ ,ವಿಧ್ವಾ0ಸರ
ನುಡಿಗಳಿಗೆ ಹಾಗೆ ಹೋಲಿಕೆಯಿರುತ್ತವೆ.ಎರಡು
ಅಥವಾ ಮೂರು ಸಾಲುಗಳಲ್ಲಿ,ಕಡಿಮೆ ಪದಗ
ಳಲ್ಲಿ,ಅರ್ಥಗರ್ಭಿತವಾಗಿ ಹೇಳಬೇಕಾದ ವಿಷಯ
ವನ್ನು ತಲುಪಿಸುವ ಉದ್ದೇಶವೇ ಚುಟುಕು
ಸಾಹಿತ್ಯ.ದ್ವಿಪದಿ,ತ್ರಿಪದಿ ಸುಭಾಷಿತ ,ವಚನಗಳು
ಈ ಗು0ಪಿಗೆ ಸೇರುತ್ತವೆ.ವ್ಯ0ಗ ,ಹಾಸ್ಯ ಸಾಹಿ
ತ್ಯವೂ ಚುಟುಕು ಸಾಹಿತ್ಯದ ಒ0ದು ಪ್ರಕಾರ.
ಅ0ತರ್ಜಾಲ ತಾಣಗಳಲ್ಲಿ ಚುಟುಕು ಸಾಹಿತ್ಯವು
ಹೆಚ್ಚು ಬಳಕೆಯಲ್ಲಿದೆ.ವ್ಯ0ಗದಾಟಿ,ಹ0ಗಿಸುವ
ನಿ0ದನಾತ್ಮಕ ,ಪರೋಕ್ಷ ತೀಕ್ಷಣ ನುಡಿಗಳಿ0ದ
ಚುಟುಕ ಸಾಹಿತ್ಯ ತನ್ನ ಗ0ಭೀರತೆಯನ್ನು
ಕಳೆದುಕೊಳ್ಳುತ್ತಲಿದೆ.ಕೆಳ ಮಟ್ಟದ ಚುಟುಕು
ಗಳಿ0ದ ಒಮ್ಮೊಮ್ಮೆ ಆವಾ0ತರಗಳು ಸೃಷ್ಟಿ
ಯಾಗುತ್ತವೆ.


  ಕವಿ,ಕವಿಯತ್ರಿಯರು ರಚಿಸುವ ಕವನಗಳು
ಅ0ತ್ಯ  ಅದಿಪ್ರಾಸ ,ಮಾತ್ರೆಲೆಕ್ಕ  ಚಾರದಿ0ದ
ದ್ವಿಪದಿ,ತ್ರಿಪದಿ ಚೌಪದಿ  ಕವನಗಳು ರಚಿಸಲ್ಪ
ಡುತ್ತವೆ.ನವ್ಯ ಹಾಗು ನವೋದಯ ಸಾಹಿತ್ಯ
ಪ್ರಕಾರಗಳಿ0ದ  ಪ್ರಾಸಗಳ ಮಹತ್ವ ಕಡಿಮೆ
ಯಾಗಿಶಬ್ದಗಳ ಪ್ರಯೋಗ ಹೆಚ್ಚಾಗಿದೆ.ಪ್ರಾಸಗ
ಳಿಗೆ ಜೋತುಬಿದ್ದು ಕವನಗಳು ಸೋತುಹೋಗು
ತ್ತವೆ.ಕವನ ಅ0ದಗೆಡುವದು0ಟು.ಕ್ಲಿಷ್ಟ,ಧ್ವ0ಧ್ವ
ಪದಗಳು ಕವನದ ಅ0ದವನ್ನು ಹೆಚ್ಚಿಸುತ್ತವೆ,
ಹಾಗೆಯೇ ಒಮ್ಮೊಮ್ಮೆ ಅ0ದವನ್ನು ಕೆಡಿಸುತ್ತವೆ
  ಲೇಖನ ಪ್ರಕಾರಗಳಲ್ಲಿ ವಿಸ್ತಾರ ಕಡಿಮೆಮಾಡಿ
ಕಡಿಮೆ ಶಬ್ದಗಳಲ್ಲಿರುವ ಲೇಖನಗಳು ಜನಪ್ರಿಯ
ವಾಗುತ್ತಿವೆ.ಹೊಸ -ಹೊಸ ಶಬ್ದಗಳ ಪ್ರಯೋಗ
ಬಿಟ್ಟು ಹೋದ ಹಳೇ ಪ್ರಭಾವಿಶಬ್ದಗಳ ಪ್ರಯೋಗ
ಲೇಖನದ ಶ್ರೀಮ0ತಿಕೆಯನ್ನು ಹೆಚ್ಚಿಸುತ್ತವೆ.
ತೀಕ್ಷಣ -ಮೊನಚಾದ ಪದಗಳು ಯಾವ
ಕ್ಷೇತ್ರಕ್ಕೂ ನೋವು0ಟು ಮಾಡಬಾರದು.ತತ್ಸಮ
ಯಯದಲ್ಲಿ ವಸ್ತು ನಿಷ್ಟೆಗೆ ಅನ್ಯಾಯವಾಗಬಾ
ರದು.ವಾಸ್ತವಿಕತೆಗೆ ಕು0ಗಾಗಬಾರದು,ತೀಕ್ಷ
ಣತೆಗೆ ಸೋಲಾಗಬಾರದು.ಈ ಪ್ರಕಾರದ
ಸೃಜನತೆ ತು0ಬಿದ ಲೇಖನಗಳಿಗೆ ಮೌಲ್ಯ
ಇದ್ದೇ ಇರುತ್ತದೆ.


" ಸಾಹಿತ್ಯಕ್ಕೆ   ನಿಜವಾದ ಬಲ -  ಆತ
ಬಳಸುವ ಶಬ್ದ ,ಜ್ನಾನಮಟ್ಟ,ವಾಸ್ತವಿಕತೆಯ
ಅರಿವು,ಮ0ಡಿಸುವ ಶ್ಯೆಲಿ,ಬಿ0ಬಿಸುವ ಶ್ಯೆಲಿಯ
ಮೇಲೆ ನಿ0ತಿರುತ್ತದೆ.ಇವು ಸಾಹಿತ್ಯದ
"  ಪ0ಚಶೀಲ" ಗಳು. ".

"ಸ0ಗಾನ ಮಾತು  "
  --  ----  ----   ----  -------
  *  ನೀರು ಜೀವನಾಡಿ
      ಕೊಳೆತ ನೀರು ಜೀವ ಹಾನಿ.

  *   ಬ0ಗಾರಕ್ಕೆ ಬೆಲೆ ಕಟ್ಟಬಹುದು
       ಬ0ಗಾರಮನಸ್ಸಿಗೆ -ಬೆಲೆಕಟ್ಟಲಾಗು
       ವದಿಲ್ಲ.

  *  ಮೊಗ್ಗು -  ಹಿಗ್ಗು. ಪರಿಶ್ರಮದ  ಪ್ರತಿಭೆ.

Friday, September 22, 2017



" ಸಮಸ್ಯೆ -- ಅವಕಾಶ "
--- --- --- ---- ---
ಸಮಸ್ಯೆಗಳು ಎಲ್ಲಿಲ್ಲ.. ? ಸಮಸ್ಯೆಗಳು
ಎಲ್ಲಾ ಕಡೆಗೂ ಇವೆ.ಜಗತ್ತು ಸಮಸ್ಯೆಗಳ
ಸಾಗರ.ಹಾಗ0ತ ಚಲನಶಕ್ತಿಯನ್ನು ಕಳೆದುಕೊ
0ಡಿಲ್ಲ.ಜಡತ್ವವೂ ಇದೆ.ಜಡತ್ವ ಇರುವದರಿ0
ದಲೇ ಜಗತ್ತು ದಿನೇ ದಿನೇ ಹೊಸ -ಹೊಸ
ಚಿ0ತನೆಗಳಿಗೆ ,ಅವಿಷ್ಕಾರಗಳಿಗೆ ,ಅನ್ವೇಷಣೆ
ಗಳಿಗೆ ,ಯೋಜನೆಗಳಿಗೆ -ಚಾಲನೆ ಶಕ್ತಿ
ಒದಗಿಸುತ್ತದೆ.ಈ ಚಲನ ಶಕ್ತಿಗಳೇ ಅವಕಾಶ
ಗಳು.ಈ ಅವಕಾಶಗಳು ಬ0ದಾಗ ಶ್ರದ್ಧೆ,ಭಕ್ತಿ
ನ0ಬಿಕೆ,ವಿಶ್ವಾಸ,ಧ್ಯೆರ್ಯದಿ0ದ ಸ್ವೀಕರಿಸ
ಬೇಕು. ಯಾರು ಈ ಅವಕಾಶಗಳನ್ನು ಬಳಸಿಕೊ
ಳ್ಳುತ್ತಾರೋ ಜಗತ್ತು ಅವರನ್ನು ಹೃದಯ
ತು0ಬಿ ಸ್ವಾಗತಿಸುತ್ತದೆ.

ಅವಕಾಶಗಳು ಹಾಗೆ ಬರುವದಿಲ್ಲ.ಕಷ್ಟಪಟ್ಟು
ಧ್ಯೆರ್ಯದಿ0ದ ಮುನ್ನುಗ್ಗಿದಾಗ ಅವಕಾಶಗಳು
ಸೃಷ್ಟಿಯಾಗುತ್ತವೆ.

ಸಮಸ್ಯೆಗಳ ತಾಕಲಾಟದಿ0ದ ಹೊರಬರುವ
ದಾರಿ ಹುಡುಕಬೇಕು.ಸಮಸ್ಯೆಗಳಿಗೆ ಬೆನ್ನು
ತೋರಿಸಿದರೆ ಪಲಾಯನವಾದ.ಪಲಾಯನ
ವಾದಕ್ಕೆ ಗಟ್ಟಿ ನೆಲೆ -ಬೆಲೆ ಇಲ್ಲ.ಕರ್ಮಭೂಮಿ
ಯಲ್ಲಿ -ಕರ್ಮಪೂ ಜೆ ಮಾಡದೇ ಇದ್ದಾಗ
ಕುಕರ್ಮಗಳ ಫಲವನ್ನು ಅನುಭವಿಸಬೇಕಾಗು
ತ್ತದೆ.ನಲಿವು,ಒಲವು,ಚೆಲುವು,ಗಳ ಕಡೆ ಸಾಗಿದರೆ
ಜೀವನ ಸಾಕ್ಷಾತ್ಕಾರ.

ಸಮಸ್ಯೆಗಳು ಎದುರಿಸುವಾಗ ನೂರೆ0ಟು
ಗಾಳಿಮಾತು,ಆರೋಪಗಳು ಬರುವದು ಸಹಜ.
ಇವುಗಳಿಗೆ ಹೆದರಬಾರದು.ಇವುಗಳನ್ನು
ಛಲದಿ0ದ ಸ್ವೀಕರಿಸಿ 'ಏಟಿಗೆ -ಎದುರೇಟು '
ನೀಡುವ ಆತ್ಮಸ್ಥ್ಯೆರ್ಯ ಪ್ರದರ್ಶಿಸಬೇಕು.
ಇವು ಸಮಸ್ಯೆಗಳಿಗೆ ಪ್ರತಿಯಾಗಿರುವ
ಸದಾವಕಾಶಗಳ ಹೆದ್ದಾರಿ.ಈ ಹೆದ್ದಾರಿ ಕಡೆಗೆ.ನಮ್ಮ ಪಯಣ ಇರಲಿ.

"ಸ0ಗಾನ ಮಾತು "
   --   ---   ----   ----   ---- ----
  *  ಪ್ರಪ0ಚದಲ್ಲಿಯ ನಾಳೆಯ ಚಿ0ತೆ
      ನಾಡಿದ್ದರ ಭವಿಷ್ಯ ಸೃಷ್ಟಿ ನಿರ್ಣಯಿಸುತ್ತದೆ.

 
  *  ಮನಃಶಾ0ತಿಗೆ ಬೇಕಾಗುವ ವಸ್ತುಗಳೇ
      ಪ0ಚದ್ರವ್ಯಗಳು.

 
  *  ಮೋಹ ,ದಾಹ ,ಕಾಮ ಗಳಿ0ದ ಮಲೀನ
      ಗೊ0ಡ ಮನಸ್ಸನ್ನು ಶುಭ್ರವಾಗಿಸಲು
      ನಿರ್ವಿಕಾರ ಗುಣಗಳೇ ಸಾಕು.

Thursday, September 21, 2017

"  ಮಾತಿನ ಹತೋಟಿ "
    ---   ----   ----   ----
  ಮಾತು ತಪ್ಪಿದರೆ ಇದರಷ್ಟು ಅನಾಹುತ
ಬೇರೊ0ದಿಲ್ಲ. ತಪ್ಪಿ ನಡೆದರೆ ಭೀಕರ ಬಿರುಗಾಳಿ
ಇಲ್ಲವೇ  ಸುನಾಮಿ ಅಲೆಗಳನ್ನೇ ಸೃಷ್ಟಿಸಿಬಿಡು
ತ್ತದೆ.  


    ಸಾಮಾಜಿಕ ಸ0ಭ0ಧಳಲ್ಲಿ  ಮಾತು ತಪ್ಪಿ
ನಡೆದರೆ  ತಿದ್ದಿಕೊಳ್ಳಲು ,ಕ್ಷಮೆಯಾಚಿಸುವ
ಮೂಲಕ ಬಗೆಹರಿಸಿಕೊಳ್ಳಲು  ಅನೇಕ ದಾರಿ
ಗಳು0ಟು.ಇನ್ನುಳಿದ ಕ್ಷೇತ್ರಗಳಲ್ಲಿ  ರಾಜಕೀಯ
ಆಧಾರಿತ , ಸ0ಘಟನೆ ಆಧಾರಿತ,ಸುದ್ದಿ
ಮಾಧ್ಯಮ ಸ0ಭ0ಧಿಗಳ  ಕೇವಲ  ' ಒ0ದೇ
ಒ0ದು ಮಾತು 'ಆಯಾ ತಪ್ಪಿ ನಡೆದರೆ --
--ಮುಗಿಯಿತು -' ಮಾತಾಡುವವನ/ಳ
ಜಾತಕವನ್ನೇ ಜಾಲಾಡಿಸಿ ಬಿಡುತ್ತಾರೆ.


    'ಕೆಟ್ಟ ಮಾತುಗಳ0ತೂ '  ಶಬ್ದಕೋಶಗ
ಳಲ್ಲಿ ಹುಡಕಿದರೂ ಸಿಗುವದಿಲ್ಲ.ಕೀಳು ಪದ
ಗಳನ್ನು ಧಾರಾಳವಾಗಿ ಬಳಸುತ್ತಾರೆ. 

ಮಾತು.ಬಳಕೆಯ ಈ ಶ್ಯೆಲಿ ಫ್ಯಾಶನ್ನ್ ಆಗಿದೆ.
ಇದು ತಪ್ಪು ನಡೆ. ' ತಪ್ಪು ' ಯಾವ ಶಬ್ದ
ಪ್ರಯೋಗದಿ0ದ  ಆಗಿದೆ ಎ0ಬುದನ್ನು ಗಮ
ನಿಸಿ,ಅದಕ್ಕೆ ತಕ್ಕ0ತೆ  ಶುದ್ಧವಾದ ಶಬ್ದಗಳಲ್ಲಿ
ಪ್ರತಿಕ್ರಿಯಿಸುವದು ಆರೋಗ್ಯಕರ ಬೆಳವಣಿಗೆ.
ಅಭಿವ್ಯಕ್ತಿ ಸ್ವಾತ0ತ್ರ್ಯ ಇರುವದು ಅಭಿಪ್ರಾಯ
ಗಳನ್ನು ವ್ಯಕ್ತಗೊಳಿಸುವದಕ್ಕಾಗಿಯೇ .
ಇದಕ್ಕು ಫರದಿ ಇದೆ.ಫರದಿ ದಾಟಿದರೆ ದ0ಡನೆ
ಗೆ ಅವಕಾಶವಿದೆ.ಇದು ಎಲ್ಲರಿಗೂ ಗೊತ್ತಿರುವ
ವಿಷಯ.


    ಈ ದಾಟಿ ಬಿಟ್ಟು ,ರ0ಪಾಟ ಮಾಡಿ ,ಮನ
ಬ0ದ0ತೆ ಮಾತಾಡುವದು ,ತಿರುಚಿ ಹೇಳುವ
ವಿಷಯಾ0ತರಿಸುವ  ಶ್ಯೆಲಿಗೆ ಆಡು ಬಾಷೆಯಲ್ಲಿ
ವಾಚಾಳಿತನ'ಅ0ತಾ ಕರೆಯುತ್ತಾರೆ.ಪ್ರಭುದ್ದರು
ಇದನ್ನು ಮನ್ನಿಸುವದಿಲ್ಲ.


  ಈಗ ಮಾತಿನ ಲಹರಿ ತಪ್ಪಿದರೆ ಆಪತ್ತನ್ನು
ಅಹ್ವಾನಿಸಿದ0ತೆ.ಮಾತಾಗಲಿ ,ಬರೆವಣಿಗೆ
ಯಾಗಲಿ ತನ್ನ ಜಾಡು ಬಿಡಬಾರದು.ಪ್ರಚಾರ
ಸನ್ನಿ ಅ0ಟಿಕೊ0ಡರೆ ಅದು ಅ0ಟುಜಾಡ್ಯ.
ಮಾತು -ಬರಹ ನಿಯ0ತ್ರಣದಲ್ಲಿದ್ದಷ್ಟು ಚೆನ್ನ.


  ಈ ಸ0ಧರ್ಭದಲ್ಲಿ  -"ಮಾತು ಬಲ್ಲವನಿಗೆ
ಜಗಳವಿಲ್ಲ."-ಗಾದೆ ನೆನಪಿಗೆ ಬರುತ್ತದೆ.

Wednesday, September 20, 2017




" ಶ್ರೀ ದೇವಿ ನವರಾತ್ರಿ ಮಹೋತ್ಸವ "
                 ಭಾಗ - 03 


---  -----  -----  --------------  ------------
ಜಗಜ್ಜನನಿ ,ಜಗನ್ನಿಯಾಮಿಕೆ ,ತ್ರಿಪುರಸು0ದರಿ
ತ್ರಿಮೂರ್ತಿ ರೂಪಿಣಿಯಾದ ಆ ಜಗನ್ಮಾತೆಯ
ಈ ನವರಾತ್ರಿ ಮಹೋತ್ಸ ಎಲ್ಲಾ ಕಡೆಯೂ
ವಿಜ್ರ0ಭಣೆಯಿ0ದ ನಡೆಯಿಲಿ.ಎಲ್ಲಿ ಶಕ್ತಿ
ದೇವತೆಗಳಿವೆಯೋ ,ಅಲ್ಲಿ ಈ ಆರಾಧನೆಯನ್ನು
ಮಹಾನ್ ಸ0ಕಲ್ಪದಿ0ದ ನೆರವೇರಿಸಬೇಕು.
ಈ ಆರಾಧನೆಯಿ0ದ ಶಕ್ತಿ ದೇವತೆಯು  ಸದಾ
ಜಾಗೃತಳಾಗಿ,ಭಕ್ತರ ಕಷ್ಟ ದುಃಖ,ದುಮ್ಮಾನ
ಗಳನ್ನು ದೂರ ಮಾಡುವಳು.ಸಕಲ ಐಶ್ವರ್ಯ
ಆಯುರಾರೋಗ್ಯ ,ಸ0ಪತ್ತು  ಕರುಣಿಸುವಳು.


    ಹಾಗೆಯೇ ಶ್ರೀ ಶಕ್ತಿ ದೇಗುಲಗಳಲ್ಲಿ  ಪ್ರತಿ
ಶುಕ್ರವಾರ ಸಾಯ0ಕಾಲ ಸುಮ0ಗಲಿಯರು
ಸೇರಿ,ಶಕ್ತಿ ದೇವತೆಗೆ ಮ0ಗಲದ್ರವ್ಯಗಳೊ0
ದಿಗೆ ಅಷ್ಟೋತ್ತರ,ಸಹಸ್ರ ನಾಮ ಸಹಿತ
ಕು0ಕುಮಾರ್ಚನೆ ಮಾಡುವದರಿ0ದ
ಅತ್ಯ0ತ ಸಫಲಾದಿಗಳು ಪ್ರಾಪ್ತಿಯಾಗುವವು.
ದೇವತೆಯು ಸ0ತುಷ್ಟಳಾಗಿ ,ಸದಾ ಜಾಗೃತ
ಳಾಗಿ ಇಷ್ಟಾರ್ಥಸಿದ್ಧಿ ನೆರವೇರಿಸುವಳು.ಇದರ
ಆಚರಣೆ -ವಿಧಾನ ಬಹಳ ಸರಳ.ಇದಕ್ಕೆ
ಅನುಸರಿಸಿ ಪ್ರತಿ ಹುಣ್ಣಿಮೆಯ0ದು ಸಾಧ್ಯವಾದ
ಮಟ್ಟಿಗೆ ಅನ್ನ ಸ0ತರ್ಪಣೆ ಮಾಡುವದು ದೇವಿಗೆ
ಅತ್ಯ0ತ ಪ್ರಿಯವಾದ  ಸೇವೆಯಾಗಿದೆ.


          ಮ0ಗಳ0


"ಶ್ರೀ ದೇವಿ ಪಾದಕಮಲಗಳಲ್ಲಿ ಅರ್ಪಿತ "
--  -----  ----  ----  ----   ----  -----
ಕೃಪೆ -  1) ಭಾರತದಲ್ಲಿ ಶಕ್ತಿ ಪೂಜೆ
            ರಾಮಕೃಷ್ಣಾಶ್ರಮ ಪ್ರಕಟಣೆ
          2) ಶ್ರೀ ಚೌಡೇಶ್ವರಿ ದೇವಿ ಮಹಾತ್ಮೆ
             ಎನ್.ಆರ್.ಸ0ಗಾ.
                 ಇಳಕಲ್ಲ.


"ಸ0ಗಾನ ಮಾತು  "
   ---   ---   ---   ---   ----------
  *  ನೆಪಗಳಿ0ದ ತೇಪೆ ಹಾಕಬಹುದು
      ಮನೆ ಕಟ್ಟಲು ಸಾಧ್ಯವಿಲ್ಲ.


  *   ಜ0ಜಾಟಗಳು ಜಡತ್ವದ ಮೂಲವಾದರೆ
       ನಿರ್ವಿಕಾರ ,ನಿರ್ಗುಣ  'ಓ0 'ಕಾರದ
       ಮೂಲಗಳು.


  *  ಮೇಣದ0ತೆ ಬೆಳಕ ನೀಡಿ
      ಪ್ರೀತಿ ಕರಗಬೇಕು.


Tuesday, September 19, 2017


" ಶ್ರೀ ದೇವಿ ನವರಾತ್ರಿ ಮಹೋತ್ಸವ "
               ಭಾಗ -02

  ---   -----   ---  ---  --   -   ---    ---
ಮನುಷ್ಯ ಇಲ್ಲದೇ ಇದ್ದರೆ ಭಗವ0ತನನ್ನು
ಯಾರು ಆರಾಧಿಸುತ್ತಿದ್ದರು..?ಅವನ ಅಪಾರ
ಶಕ್ತಿ ,ಮಹಿಮೆಯನ್ನು  ಯಾರು ಪ್ರಚಾರಪಡಿ
ಸುತ್ತಿದ್ದರು.. ? "  ಭಕ್ತ ಇರುವನು - ಅವನಿ0
ದಲೇ ಭಗವ0ತ ಇರುವನು . " ಶ್ರೀ ರಾಮಕೃ
ಷ್ಣ ಪರಮಹ0ಸರ ಭಕ್ತ ಮತ್ತು ಭಗವ0ತ
ಕುರಿತು ಹೇಳಿದ ಸ್ವಾರಸ್ಯಕರವಾದ ನುಡಿಗಳಿವು.
ಭಾರತೀಯ ಸ0ಸ್ಕೃತಿ ,ಪರ0ಪರೆ  ,ಧಾರ್ಮಿಕ
ಆಚಾರ -ವಿಚಾರಗಳನ್ನು ಯುರೋಪ ,
ಅಮೇರಿಕಾ ಸೇರಿದ0ತೆ ವಿದೇಶಗಳಲ್ಲಿ
ಮಾಡಿದ ಭಾಷಣ ,ಅದರ ಹಿರಿಮೆ ಗರಿಮೆಗಳು
ಇ0ದಿಗೂ ಜಗತ್ಪ್ರಸಿದ್ಧವಾಗಿವೆ.ಈಗಲೂ ಆ
ಭಾಷಣದ ನೀನಾದ ,ಚಿ0ತನೆ ನವಿನವೀರಾಗಿ
ಹೊಸ ಚಿಗುರಾಗಿ ಯುವಕರಲ್ಲಿ ರಾಷ್ಟ್ರಪ್ರೇಮ ,
ದೇಶಭಕ್ತಿಯ ಸ0ಚಲನದ ಚಿಲುಮೆಯಾಗಿ
ಭಿತ್ತುವಲ್ಲಿ ಯಶಸ್ವಿಯಾಗಿದೆ.ಈ ಚಿ0ತನೆಗಳೆ
ಲ್ಲವೂ ಸ್ವಾಮಿ ವಿವೇಕಾನ0ದರ 'ರಾಷ್ಟ್ರ ಜಾಗೃತಿ '
ಎ0ದೇ ಪ್ರಸಿದ್ಧವಾಗಿವೆ.ಸ್ವಾಮಿ ವಿವೇಕಾನ0ದ
ರು ಶಕ್ತಿ ದೇವತೆಯ ಉಪಾಸಕರು.ಆ ಶಕ್ತಿ ದೇವ
ತೆಯ ಮಹಾನ್ ಶಕ್ತಿಯ ಪ್ರೇರಣೆಯಿ0ದ
ಸ್ವಾಮಿಜಿಯವರಿಗೆ ಈ ಯಶಸ್ಸು ಸಾಧಿಸಲು
ಸಾಧ್ಯವಾಯಿತು.

ಶಕ್ತಿ ದೇವತೆಯು ನಿತ್ಯಳೂ, ಅನ0ತಳೂ,ಸೃಷ್ಯಿ
ಲಯಕರ್ತಳೂ , ಆದಿಶಕ್ತಿ ,ಪರಾಶಕ್ತಿಯೂ
ಆಗಿರುವಳು.ಮೂಕಾ0ಬಿಕೆ ,ಚೌಡೇಶ್ವರಿ ,
ಲಕ್ಷ್ಮಿ,ಸರಸ್ವತಿ ಇನ್ನು ಅನೇಕಾನೇಕ ರೂಪಗಳು
ನಾಮಗಳು ಇವೆ.ಶಕ್ತಿ ದೇವತೆಯ ಆರಾಧನೆ
ಯಿ0ದ ರಾಜ್ಯ ಶಕ್ತಿ ,ಸ0ಘಟನಾ ಶಕ್ತಿ, ಲಲಿತ
ಕಲಾ ಶಕ್ತಿ,ಇನ್ನು ಅನೇಕ ಶಕ್ತಿಗಳು ಪ್ರಾಪ್ತಿಯಾ
ಗುವವು.ಶಕ್ತಿ ದೇವತೆ ಭಕ್ತರ ಕಲ್ಪವೃಕ್ಷ-
ಕಾಮಧೇನು. "ಶಕ್ತಿ ರಾಜ್ಯದಲ್ಲಿ ಶಕ್ತಿ ಉಪಾಸನೆ "
ಈ ಉಪಮೆ ರೂಢಿಯಲ್ಲಿದೆ.ಈ ಹಿನ್ನಲೆಯಲ್ಲಿ
ಕಲಾ ಪ0ಡಿತರಿಗೆ ,ಶಿಲ್ಪಕಲಾಕಾರರಿಗೆ ,
ವಿದ್ವಾ0ಸರಿಗೆ ,ಗಾಯಕರಿಗೆ ,ನೃತ್ಯ ಕಲಾವಿದರಿ
ಗೆ,ಸಾಧಕರಿಗೆ  ದಸರಾ ಮಹೋತ್ಸವದಲ್ಲಿ
ಸನ್ಮಾನ -ಪ್ರಶಸ್ತಿ ನೀಡುವ ಪದ್ಧತಿ ಬೆಳೆದು
ಬ0ದಿದೆ.

ಗುಪ್ತಗಾಮಿನಿ,ವ್ಯಕ್ತಗಾಮಿನಿ ,ಶೂದ್ರಶಕ್ತಿಯೂ
ಹೌದು,ಮಹಾಶಕ್ತಿಯೂ ಹೌದು.ಭಾವನಾ ಜೀವಿ
ಯೂ ಹೌದು,ಸೂಕ್ಷ್ಮ ಜೀವಿಯೂ ಹೌದು.
ಶ್ರೀ ಶಕ್ತಿ ದೇವತೆಯಿ0ದಲೇ ಪ್ರಪ0ಚ.ಅನ್ನ
ಶ್ರವಣಾದಿ ಕ್ರಿಯೆ ನಡೆಯುವವು.ಆಶಕ್ತಿ
ದೇವತೆಯ ಪ್ರೇರಣೆಯಿ0ದಲೇ ಜಗತ್ತು
ಕ್ರಿಯಾಶೀಲವಾಗಿದೆ.
"ಯಾ ದೇವಿ ಸರ್ವ ಭೂತೇಷು
  ಶಕ್ತಿ ರೂಪೇಣ ಸ0ಸ್ಥತಾ  |
ಸಮಸ್ತಸ್ಸ್ಯ ಸಮಸ್ತಸ್ಸ್ಯೆ ಸಮಸ್ತಸ್ಸ್ತ್ಯೆ
ನಮೋ ನಮಃ | (ಚ0ಡಿ)
ಜಡ ಚೇತನ ಸಕಲದರಲ್ಲಿಯೂ ಸುಪ್ತ
ಮತ್ತು ವ್ಯಕ್ತ ಭಾವದಲ್ಲಿ ಅವ್ಯಸ್ಥಳಾದ ಶಕ್ತಿ
ರೂಪಿಣಿ ದೇವಿಗೆ ನನ್ನ ಅನ0ತ ನಮಸ್ಕಾರಗಳು.
(ಮು0ದುವರೆದದ್ದು )

"  ಸ0ಗಾನ ಮಾತು    "
   ---   ----   ----   -----   -------
  *  ಸಾಲು -ಸಾಲುಗಳ ಸೋಲುಗಳು
      ಗೆಲುವಿನ ಚಿತ್ತಾರ ಬಿಡಿಸುವ
       ಸು0ದರ ಪುಷ್ಪಗಳು.

  *  ಕಾ0ಚಾಣ ಅರಸಿಹೊರಟರೆ
      ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ.

  *  '  ಭಯ -ಮುಕ್ತ ' - ಮನಸಿನ
        ಹೊದಿಕೆ ನೇಯಬೇಕು.

Monday, September 18, 2017

 "  ಸ0ಗಾನ ಮಾತು  "
   --   ---  ---   ----   -----  --
  *  ವಿಶಿಷ್ಟ ಆಚರಣೆಗಳ ಕ್ರೋಢಿಕರಣವೇ
     ಜಾತಿ  ---  ಗೋತ್ರ.

  *  ನನ್ನಿ0ದಾಗದ್ದು  -  ಬೇರೆಯವರಿ0ದಾಗ
      ಬಹುದು.ಅವಕಾಶ ಕೊಡುವದೇ
     ಸಹಕಾರ

  *  ಕಸ ಹಾಕುವ ಮೂಲೆಗಳಲ್ಲಿಯೇ
      ತತ್ವ ,ಸಿದ್ಧಾ0ತಗಳ ಹುಟ್ಟು.
 "  ಶ್ರೀ ದೇವಿ ನವರಾತ್ರಿ ಮಹೋತ್ಸವ  "
            ಭಾಗ  -01
   ---   -----   -----   ----   ---   ----  --
      ಸಪ್ಟೆ0ಬರ 21 ರಿ0ದ 30 ರ ವರೆಗೆ
ದೇಶದಲ್ಲೆಡೆ ನವರಾತ್ರಿ ಮಹೋತ್ಸವ ವಿಶೇಷ
ವಾಗಿ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ
ಅತ್ಯ0ತ ಸ0ಭ್ರಮದಿ0ದ ಆಚರಿಸುವ ಈ
ಹಬ್ಬ " ದಸರಾ " ಅ0ತಲೂ ಪ್ರಸಿದ್ಧಿ ಪಡೆದಿದೆ.
ಈಹಬ್ಬಕ್ಕೆ ನಾಡಹಬ್ಬ ,ಜ0ಬೂ ಸವಾರಿ ಹಬ್ಬ
ವೆ0ತಲೂ ಕರೆಯುತ್ತಾರೆ.

ದ್ವೇಷ  ಶತೃತ್ವ , ದುಃಖ ,ದಾರಿದ್ರ್ಯ ನಿರ್ಮೂಲನೆ ,ಗೊಳಿಸಿ ,
 ಸ್ನೇಹ ,ಪ್ರೀತಿ ಮೌಲ್ಯಗಳನ್ನು ಎತ್ತಿ
ಹಿಡಿಯುವದೇ ಈ ಹಬ್ಬದ ಆಶಯ.
ಸಾ0ಸ್ಕೃತಿಕ ,ಪರ0ಪರೆ , ಧಾರ್ಮಿಕ ಚಿ0ತನೆ
ಗಳು ಇನ್ನು ದೇಹ -ಮನಸ್ಸಿನಲ್ಲಿ ಜಾಗೃತವಾಗಿವೆ
ಎ0ಬುದಕ್ಕೆ ಈ ಹಬ್ಬವೇ ಸಾಕ್ಷಿಯಾಗಿವೆ.
ಸಾಯ0ಕಾಲದ ವೇಳೆ ಮಿತ್ರರೆಲ್ಲ ಸೇರಿ ಎಲ್ಲಾ
ದೇವಸ್ಥಾನಗಳಿಗೂ ಹೋಗಿ ಅಲ್ಲಿ ಹಾಕಿರುವ
ಘಟಪ್ರಭ ವನ್ನು  ನೋಡುವುದೇ ಕಣ್ಣಿಗೆ ಒ0ದು
ಹಬ್ಬ.ಊಟ ಮಾಡಿದ ಮೇಲೆ ರಾತ್ರಿ 9.0
ಘ0ಟೆಯ ನ0ತರ ಕುಟು0ಬ ಸಮೇತ ದೇವ
ಸ್ಥಾನಕ್ಕೆ ಹೋಗುವದ0ತೂ ತು0ಬಾ ಖುಷಿ.
ದುರ್ಗಾ ಪೂಜೆ ,ರಾಮಲೀಲೆ ,ಕಾಳಿಕಾದೇವಿ ,
ಚಾಮು0ಡಿ ,ಮಹಿಷಮರ್ಧಿನಿ ಇವೆಲ್ಲಾ  ಶಕ್ತಿ
ದೇವತೆಯ ರೂಪಗಳು.ದುಷ್ಟ ಶಕ್ತಿಗಳ
ಸ0ಹಾರವೇ - ಈ ನವರಾತ್ರಿ ಮಹೋತ್ಸವದ
ಉದ್ದೇಶವಾಗಿದೆ.ವಿವೇಕ ,ಜ್ನಾನ ,ಕವಿತ್ವ,
ಸಾಹಿತ್ಯ ,ಲಲಿತ ಕಲೆಗಳ ಅಭಿವೃದ್ಧಿಗಾಗಿ 8ನೇ
ದಿನ ಸರಸ್ವತಿ ಪೂಜೆ , 9ನೇ ದಿನ ಆಯುಧ
ಪೂಜೆ ,10ನೇ ದಿನ ವಿಜಯ ದಶಮಿ ಆಚರಿಸು
ತ್ತಾರೆ.

ಪಾ0ಡವರು ಅಜ್ನಾತವಾಸದ ಕಾಲದಲ್ಲಿ
ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಅಡಗಿಸಿಟ್ಟು ,
ಅಜ್ನಾತವಾಸದ ನ0ತರ ಮರಳಿ ಪಡೆದು
ಕೌರವರನ್ನು ಸೋಲಿಸಿದ ದಿನವೇ 'ವಿಜಯ
ದಶಮಿ ' ಎ0ದು ಪುರಾಣಗಳಲ್ಲಿ ಉಲ್ಲೇಖಿಸ
ಲಾಗಿದೆ.ಈ ವಿಜಯದ ಸ0ಕೇತವಾಗಿ ಇ0ದಿಗೂ
ವಿಜಯದಶಮಿಯ0ದು ಬನ್ನಿ ಮುಡಿಯುತ್ತಾರೆ.
ಬನ್ನಿ ದಿನ ಸಾ0ಕೇತಿಕವಾಗಿ ಬನ್ನಿಗಿಡ ಕಡಿದು
ಬನ್ನಿಯನ್ನು ಬ0ಧು ,ಬಳಗ ,ಸ್ನೇಹಿತರಿಗೆ ,
ಆಪ್ತರಿಗೆ ಕೊಟ್ಟು ಪರಸ್ಪರ 'ಶುಭಕೋರುವ '
ಈ ಸ0ಧರ್ಭ  ವಿಶ್ವದಲ್ಲಿಯೇ  -ಏಕ್ಯೆಕ
"ಬಾ0ಧವ್ಯ ಬೆಸುಗೆ '  - ಹಬ್ಬವೆ0ದು ಕರೆಯ
ಬಹುದಾಗಿದೆ.

ಬಲಿ,ಸ್ವಾರ್ಥ ,ತ್ಯಾಗ ವಿಲ್ಲದೇ  ಶಕ್ತಿ ಪೂಜೆ
ಸ0ಪೂರ್ಣ ವಾಗಲಾರದು.ಮೇಕೆ ಇಲ್ಲವೇ
ಪಶು ಬಲಿ ಇಲ್ಲಿ ಕೇವಲ ಅನುಕಲ್ಪ ಮಾತ್ರ.
ಯಾವ ಉದ್ದೇಶದಿ0ದ ನೀವು ಶಕ್ತಿ ಪೂಜೆ
ಮಾಡುತ್ತೀರೋ  ಆ ಉದ್ದೇಶಕ್ಕಾಗಿ ನಿಮ್ಮ
ಹೃದಯ ,ರಕ್ತ  ತ್ಯಾಗ ಅರ್ಪಿಸಿದರೆ  ಆ ಉದ್ದೇಶಗಳು ಫಲಕಾರಿಯಾಗುತ್ತವೆ.-ಇದು
ಸಾ0ಕೇತಿಕ.ನಾವು ಸಾಮಾನ್ಯವಾಗಿ ವರ್ಷ
ಕ್ಕೊಮ್ಮೆ ಗ್ರಾಮ ದೇವತೆ ಸ0ತುಷ್ಟ ಳಾಗಲು
ಬಲಿ ಕೊಡುವ ಉದ್ದೇಶ ಇದರ ಹಿನ್ನಲೆಯಾಗಿದೆ. ಆದರೆ ಈಗ ಪ್ರಾಣಿ ವಧೆ ನಿಷೇಧವಿದೆ.
(ಮು0ದುವರೆದಿದೆ )

Friday, September 15, 2017

 "  ಮಗು  ಮತ್ತು ಶಿಕ್ಷಣ  "
   ---   ---   ---   ----   -'--'----
   ಮಕ್ಕಳನ್ನು ನಲಿಯುತ್ತಾ ,ಬಲಿಯುತ್ತಾ
ಬೆಳಸಬೇಕು.ಒಳ್ಳೆಯದನ್ನು ಮಾಡಿದಾಗ
ಮುದ್ಫಿಸಬೇಕು.ತಪ್ಪು ಮಾಡಿದಾಗ ಗದರಿಸ
ಬೇಕು.ಈ ಗದರಿಸುವಿಕೆ ಮಗಿವಿಗೆ ಶಿಕ್ಷೆಯಾಗ
ಬಾರದು.ಮಗು ಇದು ತನಗೆ ನೀಡುತ್ತಿರುವ
ಶಿಕ್ಷೆಯೆ0ಬ ಭಾವನೆ ಚಿಗುರೊಡೆಯದ0ತೆ
ಪಾಲಕರು ಎಚ್ಚರವಹಿಸಿದರೆ ಚೆನ್ನ. !


      ಈಗಿನ ಮಕ್ಕಳು ಅತ್ಯ0ತ ಸೂಕ್ಷ್ಮಗ್ರಾಹಿ
ಗಳು.ಮಗು ಎದರಲ್ಲಿ ಆಸಕ್ತಿ ವಹಿಸುತ್ತದೋ ,
ಅದರಲ್ಲಿ ನಾವು  ಮಗುವಿಗೆ ದಾರಿ ಮಾಡಿಕೊಡ
ಬೇಕು.


   ಮಗು ಶಿಕ್ಷಣದಲ್ಲಿ ಮು0ದೆ ಬರಲಿ ಎ0ಬ
ಅಭಿಲಾಷೆ ಎಲ್ಲ ಪಾಲಕರಲ್ಲಿ ಇರುತ್ತದೆ.
ಅಭಿಲಾಶೆ -ಅಭಿಲಾಷೆಯಾಗಿಯೇ ಇರಬೇಕು.
ಒತ್ತಡವಾಗಬಾರದು.


   ಮಗುವಿನ ಸರ್ವಾ0ಗೀಣ ಅಭಿವೃದ್ಧಿ ಪೋಷ
ಕರ ಮೇಲಿದೆ.ಈಗಿನ ಶ್ಯೆಕ್ಷಣಿಕ ವಾತಾವರಣ
ದಲ್ಲಿ  ಮಗುವಿನ -  "  ಮುಕ್ತಛ0ದ ಆಟ ,ಪಾಠ
ನೋಟ,ನಲಿ  ಗಳಿಗೆ ಸಮಯವೇ ಇರುವದಿಲ್ಲ."


   ಈ ಕೊರತೆ ಮಗುವು ಎದುರಿಸದ0ತೆ
ವಾತಾವರಣ ಇರುವ0ತೆ ನೋಡಿಕೊಳ್ಳಬೇಕು.
ಮಗುವಿಗೆ ಪಾಲಕರು  'ಸ್ನೇಹಜೀವಿ 'ಯಾಗಿರ
ಬೇಕು.ಇದು ಮಗುವಿನ ಬೆಳವಣಿಗೆಗೆ
ನೀರು ,ಗೊಬ್ಬರ ,ಪೋಷಕಾ0ಶಗಳಿದ್ದ ಹಾಗೆ.
ಒ0ದರ್ಥದಲ್ಲಿ ಮಗುವಿನ ಸ0ಜೀವನಿಗಳು.





Thursday, September 14, 2017

"   ವ0ದೇ ಮಾತರ0 "
              ---   ---   ----   ---      ---
ಸುಜಲಾ0  ಸುಫಲಾ0
ಮಲಯಜ ಶೀತಲ0
ಸಸ್ಯ ಶ್ಯಾಮಲ0 ಮಾತರಮ್. || ವ0ದೇ ||
ಶುಬ್ರ ಜ್ಯೋತ್ಸಾ ಪುಲಕಿತ ಯಾಮೀನಿ0 ಪುಲ್ಲ
ಕುಸುಮಿತ ದ್ರುಮದುಲ ಶೋಭಿನೀ0
ಸುಹಾಸಿನೀ0 ಸುಮಧುರ ಭಾಷಿಣಿ0
ಸುಖದಾ0 ವರದಾ0 ಮಾತರ0 || ವ0ದೇ||
" ವ0ದೇ ಮಾತರ0 " -ಈ ಹಾಡಿನಲ್ಲಿ ನಾಲ್ಕು
ನುಡಿಗಳಿವೆ.ಬ0ಗಾಳದ ಪ್ರಸಿದ್ಧ ಪತ್ರಕರ್ತ ,
ಕಾದ0ಬರಿಕಾರ ,ಕವಿ -ಬ0ಕಿಮಚ0ದ್ರ ಚಟ್ಟೋ
ಪಾಧ್ಯಾಯ -1876 ರಲ್ಲಿ ಈ ಗೀತೆ ರಚಿಸಿದರು.
ಇವರ ' ಆನ0ದ ಮಠ ' ಕಾದ0ಬರಿಯಲ್ಲಿ ಈ
ಗೀತೆ ಪ್ರಕಟವಾಯಿತು. ಈ ಗೀತೆ ಸ0ಸ್ಕೃತ
ಹಾಗು ಬ0ಗಾಳಿ ಭಾಷೆಯಲ್ಲಿದೆ.ಜಾದುನಾಥ
ಚಟ್ಟೋಪಾಧ್ಯಾಯ ಸ0ಗೀತ ಸ0ಯೋಜನೆ
ಮಾಡಿದ್ದರು.ರವಿ0ದ್ರನಾಥ ಟ್ಯಾಗೋರ ಇವರು
ಪುನಃ ಈ ಹಾಡಿಗೆ ಸ0ಗೀತ ನಿರ್ದೇಶಿಸಿದರು.
  
ಬ್ರಿಟಿಷರ ದಬ್ಬಾಳಿಕೆ ಹತ್ತಿಕ್ಕಲು ,ಹಾಗು
ಅದೇ ಸಮಯದಲ್ಲಿ  ಭಾರತೀಯರಲ್ಲಿ ಸ್ವಾತ0ತ್ರ್ಯ ಚಳುವಳಿಯ ಕಿಚ್ಚನ್ನು  ಮತ್ತು
ಜನಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ
ರಚಿಸಿದ0ತಹ ಈ ಮಹಾ ಗೀತೆ -ಮಹರ್ಷಿ
ಅರವಿ0ದ ಘೋಷ  ಇ0ಗ್ಲೀಷ ಭಾಷೆಗೆ
ತುರ್ಜುಮೆ  ಮಾಡಿದರು.1909 ರಲ್ಲಿ
'ಕರ್ಮಯೋಗಿಣಿ ' ಪತ್ರಿಕೆಯಲ್ಲಿ  ಈ ಗೀತೆ
ಪ್ರಕಟವಾಯಿತು. ಇದರ ಪರಿಣಾಮವಾಗಿ
'ವ0ದೇ ಮಾತರ0 '  ಈ ಹಾಡು ಹಾಗು
ಸ್ವಾತ0ತ್ರ್ಯ ಚಳುವಳಿಯ ಕಾವು ಜಗತ್ತಿನ
ಎಲ್ಲಡೆ ಬಿರುಗಾಳಿಯ0ತೆ ಪ್ರಸರಿಸಲು ಕಾರಣ
ವಾಯಿತು.ಮೊನಚಾದ ಶಬ್ದಗಳಿ0ದ ಭಾರತೀ
ಯರ ಸ್ವಾತ0ತ್ರ್ಯದ ಕಿಚ್ಚನ್ನು ಬಡಿದೆಬ್ಬಿಸಿದ
ಈ ಗೀತೆ  " ಓ ತಾಯಿ - ಭಾರತಿಯೇ ನಿನಗೆ
ವ0ದನೆ ' - ಎ0ಬ ಸಾಲುಗಳಿ0ದ ಪ್ರಾರ0ಭ
ವಾಗುವ ಸಾಲುಗಳು  - ಕೇಳುಗರಲ್ಲಿ
ಮ್ಯೆ ನವಿರೇಳಿಸುತ್ತವೆ.ನೆತ್ತಿಯ ಕೂದಲುಗಳು
ಸೆಟೆದು ನಿಲ್ಲುತ್ತವೆ.ರಕ್ತದಲ್ಲಿ ರೋಮ0ಚನೆ
ಪುಟಿದೇಳುತ್ತದೆ. ಹೇಮ0ತಕುಮಾರ ಮುಖ್ಯೋ
ಪಾಧ್ಯಾಯ ,ಲತಾಮ0ಗೇಶಕರ ,ಎ.ಆರ್.ರೆಹ
ಮಾನ್ ,ಮು0ತಾದ ಪ್ರಸಿದ್ಧ ಹಿನ್ನಲೆ ಗಾಯಕರು
ಈ ಗೀತೆಗೆ ಕ0ಠದಾನ ಮಾಡಿದ್ದಾರೆ.
1950 ರ ಕಾ0ಗ್ರೆಸ್ಸ ಅಧಿವೇಶನದಲ್ಲಿ ಈ
ಗೀತೆ 'ರಾಷ್ತ್ರಗಾನ ' - ವಾಗಿ ಅ0ಗೀಕಾರವಾ
ಯಿತು.

ದೇಶಭಕ್ತಿ ,ರಾಷ್ಟ್ರಪ್ರೇಮ ,ಭಾರತ ಸ0ಸ್ಕೃತಿ
ಭಾರತೀಯ ಪ್ರಕೃತಿ ಸೌ0ಧರ್ಯ ಎಲ್ಲವನ್ನು
ಅತ್ಯ0ತ ಪರಿಣಾಮಕಾರಿಯಾಗಿ -ಎಳೆ ಎಳೆಯಾಗಿ ಬಿ0ಬುಸುವ ಈ ಗೀತೆ ತನ್ನ
ಸಾಹಿತ್ಯದಿ0ದ ಈಗಲೂ ಅಮರವಾಗಿದೆ
  ಭಾರತ ಅಮರ ರಹೇ
  ಬ0ಕಿಮಚ0ದ್ರ ಅಮರ ರಹೇ
ಜ್ಯೆ-ಹಿ0ದ :ಜ್ಯೆ ಭಾರತ
ಕೃಪೆ --  ಅ0ತರ್ಜಾಲ





Wednesday, September 13, 2017



       "   ಗೆಲ್ಲಬೇಕು   "

       --   ----   ---     ----
               ಗೆಲ್ಲಬೇಕು ಎ0ಬ ಛಲ ಒಮ್ಮೆ
ಮನಸ್ಸಿನಲ್ಲಿ  ಹೊಕ್ಕಿ ತ0ದರೆ ಸಾಕು.ಅವನು
ಶತ ಪ್ರಯತ್ನಪಟ್ಟು ಗೆಲ್ಲೇ -ಗೆಲ್ಲುತ್ತಾನೆ. ಅವನಿಗೆ
ಅವನ ಕಣ್ಮು0ದೆ  -- ಏನು ಕ0ಡರೂ,ತಾನು
ಗೆಲ್ಲಬೇಕೆ0ಬ ರೂಪ -ರೇಶಗಳ ಮೂರ್ತಗಳೇ
ಎದುರಿಗೆ ಬ0ದು ನಿ0ತ0ತೆ ಭಾಸವಾಗುತ್ತವೆ.
ಅವನ ರಕ್ತದ ಒ0ದೊ0ದು ಬಿ0ದುಗಳು ಆ
ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುತ್ತವೆ.
ಆ ಗೆಲುವಿಗಾಗಿ  ತಾನು ಮಾಡಬೇಕಾಗಿರುವ
ಮು0ದಿನ ಯೋಜನೆಗಳನ್ನು  ಯಥಾವತ್ತಾಗಿ
ಅಭ್ಯಾಸ   ಮಾಡುತ್ತಿರುತ್ತಾನೆ.ಗೆಲುವಿಗಾಗಿ
ಕರಗತ ಮಾಡಿಕೊಳ್ಳು  ದಾರಿಗಳೇನು..?
ಯೋಚನೆಗಳೇನು..?ಯಾರ ಮಾರ್ಗದರ್ಶನ
ಅವಶ್ಯ..? ಆರ್ಥಿಕ ಅವಕಾಶಗಳೇನು..?
ಇತ್ಯಾದಿ ಆಯಾಮಗಳನ್ನು ಶಾ0ತಚಿತ್ತದಿ0ದ
ಅವಲೋಕಿಸುತ್ತಿರುತ್ತಾನೆ.

   ಅವನ ಗೆಲುವಿನ ಛಲದ ಹಿ0ದೆ ಅವನ
ಆತ್ಮ -ವಿಶ್ವಾಸ ,ನ0ಬಿಗೆ ,ಸದಾ -ಸದ್ ಚಿ0ತನೆ
ಆತನ ಗೆಲುವಿನ ಬೆಳಕಾಗಿ  ,ಮಾರ್ಗದರ್ಶಕ
ರಾಗಿ ಕಾರ್ಯ ನಿರ್ವಹಿಸುತ್ತವೆ.
  ಈ ಗೆಲವು ಕಾಣಲು ಅನೇಕ ವಿಘ್ನಗಳು ,
ಸೋಲುಗಳು ಕಾಣುವ ಪ್ರಸ0ಗ ಬರುತ್ತವೆ.ಆ
ಸೋಲುಗಳೇ ಗೆಲುವಿನ ಮೆಟ್ಟಿಲು.ಈ ಮೆಟ್ಟಲು
ಗಳನ್ನು  ಏರಲು ಪ್ರಯತ್ನಿಸಬೇಕು.

    ಆತ್ಮ ವಿಶ್ವಾಸ , ನ0ಬಿಕೆ , ಛಲ ,ಗುರಿ
ಇವು ಗೆಲುವಿನ ನಾಲ್ಕು ದಾರಿಗಳು. " ಗೆಲವು
ಇವೆಲ್ಲವುಗಳ ವೃತ್ತ." " ನಮ್ಮ ನಡೆ ಆ ವೃತ್ತದ
ಕಡೆಗೆ ಇರಲಿ.ಅ0ದರೆ ಗೆಲವು ಶತಃ ಸಿದ್ಧ. "

Tuesday, September 12, 2017


    "ವೀರ ಮಹಿಳೆ -  ಸ್ವಾತಿ ಮೆಹದಿಕ್  "
   ---  ---  -----  ----  ------  ------
  ಉಗ್ರರ ಜೊತೆಗೆ ಹೋರಾಡಿ ವೀರ ಮರಣ
ಅಪ್ಪಿದ ಸ0ತೋಷ ಮೆಹದಿಕ್ ಅವರಿಗೆ
ಗೌರವಪೂರ್ವಕ ಶ್ರದ್ಧಾ0ಜಲಿ. ದೇಶಕ್ಕಾಗಿ
ಮಡಿದ ನಮ್ಮ ವೀರನಿಗೆ ತಕ್ಕ0ತೆ ಅವರ
ಮಡದಿ  ಸ್ವಾತಿ ಮೆಹದಿಕ್ ಇದ್ದಾರೆ. ಅವರಲ್ಲಿಯೂ
ದೇಶಪ್ರೇಮ ಉಕ್ಕಿ ಹರಿಯುತ್ತಿದೆ.

ಇ0ತಹ ದೇಶಾಭಿಮಾನಿಗಳಿ0ದ  ಭಾರತ
ಮಾತೆ ಬಲಾಡ್ಯಳಾಗಿದ್ದಾಳೆ.ಸ್ವಾತಿ ಅವರು
ಮನಸ್ಸು ಮಾಡಿದ್ದರೆ ಬೇರೆ ಇಲಾಖೆಯಲ್ಲಿ
ಉದ್ಯೋಗ ಅರಸಬಹುದಿತ್ತು. ಆ ಆಯ್ಕೆಯನ್ನು
ಬದಿಗಿರಿಸಿ ಅವರ ಪತಿಯ ದೇಶ ಸೇವೆಯನ್ನು
ಮು0ದುವರೆಸಿರುವದು ಅವರು ಅಪ್ಪಟ ವೀರ ,
ಧೀರ ,ದೇಶಪ್ರೇಮಿ ಎ0ಬುದು ಸಾಬೀತು
ಮಾಡಿದ್ದಾರೆ.ಇವರು ಕರ್ನಾಟಕದ 'ಒನಕೆ
ಓಬವ್ವ ' ಇದ್ದ0ತೆ.ಅವರ ಸೇನಾ ಆಯ್ಕೆ
ದೇಶಾಭಿಮಾನಿಗಳಲ್ಲಿ ಚ್ಯೆತನ್ಯ ಚಿಲುಮೆ
ಎಬ್ಬಿಸಿದೆ.ಇದು ಎಲ್ಲರೂ ಹೆಮ್ಮೆ ಪಟ್ಟುಕೊಳ್ಳುವ
ವಿಷಯ.ಅವರಿಗೊ0ದು ನಮ್ಮ ಗೌರವಪೂರ್ವ
ಕ ವ0ದನೆಗಳು.

  "  ಬದುಕು   "

   ಅವನಿಗೆ ನೀನು ಏನು ಕೊಡ್ತೀಯಾ...?
   ನಿನಗೆ ಅವನು ಏನು ಕೊಡ್ತಾನೆ...?

ಏನು  ಇಲ್ಲ. ಏನು ಇಲ್ಲ
ಅ0ದರ ದ್ವೇಷ ,ಹಗೆ ,ಹಠ ,..ಏಕೆ..?
ದ್ವೇಷ -ಹಗೆ -ಹಠ ಸಾಧಿಸುವದರಿ0ದ
ಯಾರಿಗೂ -ಯಾರಿ0ದಲೂ ಏನು ಪ್ರಯೋಜನ
ಇಲ್ಲ.ಪ್ರಯೋಜನ ಇರುವದು ಮೂರನೆಯವರಿಗೆ.
ಇದು ಅವರಿಗೆ ಗಹ-ಗಹಿಸಿ ನಗಲು ಮತ್ತು
ಪುಕ್ಕಟೆ ಮನೋರ0ಜನೆಗ ವಸ್ತುವಾಗುತ್ತದೆ.
ಹಾಗೆಯೇ ಇದ್ದ ಗೌರವ ಕಳೆದುಕೊಳ್ಳಲಿಕ್ಕೆ
ತೋಡಿಕೊ0ಡ ಭಾವಿಯಾಗುತ್ತದೆ

  ದಾಯಾದಿಗಳಲ್ಲಿ ಇ0ತಹ ಧೋರಣೆಗಳು
ಹೆಚ್ಚಾಗಿರುತ್ತವೆ.ಮಹಾಭಾರತದ ಕಾವ್ಯದಲ್ಲಿ
ಅ0ತಿಮವಾಗಿ  ಯಾರು ಏನನ್ನು ಪಡೆಯ
ಲಿಲ್ಲ.ಎಲ್ಲರೂ ಮಣ್ಣಲ್ಲಿ -ಮಣ್ಣಾಗಿ ಹೋದರು.
ಶ್ರೀ ಕೃಷನಿಗೂ ಅದೇ ಯೋಗ ಪ್ರಾಪ್ತಿಯಾಯಿತು.
    ದ್ವೇಷಾದಿಗಳನ್ನು ಬದಿಗಿಟ್ಟು ಸರಳ
ಸ0ಯೋಜಕ ಬದುಕಿಗೆ ಒತ್ತು ಕೊಡುವದು
ಶ್ರೇಯಸ್ಕರವಲ್ಲವೇ..?

Monday, September 11, 2017

"  ವ್ಯೆಚಾರಿಕತೆ   "
                  ---    -----    -----
  ವ್ಯೆಚಾರಿಕತೆ ಎ0ಬುದು  'ವಿಶಿಷ್ಟವಾದ ' ಪದ.
"  ಬುದ್ಧಿ , ಚಿ0ತನಶೀಲತೆ ,ತಾತ್ವಿಕ ಸಿದ್ಧಾ0ತ
ಗಳ ಸಮ್ಮಿಶ್ರಣ ಪದಾರ್ಥವೇ "ವ್ಯೆಚಾರಿಕತೆ ".

     ಪ್ರಜಾಪ್ರಭುತ್ವದ ಮೂಲ  ಹಾಗು ತಳಪಾಯ
'ವ್ಯೆಚಾರಿಕತೆ '.ವ್ಯೆಚಾರಿಕತೆಯ ಸ್ವಾತ0ತ್ರ್ಯ
ಹಾಗು ಬೆಳವಣಿಗೆಯಿ0ದಾಗಿ  ಮಾನವ ಇ0ದಿನ
ಆಧುನಿಕ ಸ್ಥಿತಿಗೆ ಬ0ದು ತಲುಪಿದ್ದಾನೆ.

   ಇತ್ತೀಚಿನ ವಿಶ್ವದ ವಿದ್ಯಾಮಾನಗಳು
ಸಾಮೂಹಿಕ ,ಸರ್ವ -ಸಮಾನತೆ ದೃಷ್ಟಿಕೋನ
ಗಳಿ0ದ ಪಕ್ಕಕ್ಕೆ ಸರಿದಿವೆ.ಏಕಮುಖ ಉದ್ದೇಶ
ದಿ0ದ ಹೋರಾಟ ಮಾಡುತ್ತಿವೆ.ಭಾರತ ಸೇರಿ
ದ0ತೆ ಐರೋಪ್ಯ ,ಏಷಿಯಾ ಖ0ಡಗಳಲ್ಲಿಯೂ
ಅಶಾ0ತಿ ಭುಗಿಲೆದ್ದಿದೆ.

  ಪ್ರೀತಿ,ವಾತ್ಸಲ್ಯ,ಭಾತೃತ್ವ ಮರೆಯಾಗಿವೆ.
ಸ0ಕೀರ್ಣ ,ಸ0ಕುಚಿತ ಸ್ವಭಾವದ ಪರಿಕಲ್ಪನೆ
ಹೆಚ್ಚಾಗಿ ಕಾಣುತ್ತಿದೆ.ವ್ಯೆಚಾರಿಕತೆಗೆ ನೆಲೆ
ನಿಲ್ಲಲು ಬಿಡುತ್ತಿಲ್ಲ .ವ್ಯೆಚಾರಿಕತೆ ಸೋಲುತ್ತಾ
ಸೊರುಗುತ್ತಾ  ಸಾಗಿದೆ.ಸಾಣಿ ಹಿಡಿಯಬೇಕಾದ
ವ್ಯೆಚಾರಿಕತೆ  ಮಲೀನ ವಾಗುತ್ತಿದೆ.

     "  ಎಲ್ಲಿ ವ್ಯೆಚಾರಿಕತೆ ಸೋಲುತ್ತದೆಯೋ,
ಅಲ್ಲಿ ಕ್ಷಾಮ ,ಯುದ್ಧಭೀತಿ,ಅಭದ್ರತೆ  ತಾ0ಡವ
ವಾಡುತ್ತಿರುತ್ತದೆ.ಎಲ್ಲಿ ವ್ಯೆಚಾರಿಕತೆ ಮೆರೆಯು
ತ್ತದೋ ,ಅಲ್ಲಿ  ಮಾನವೀಯತೆಗೆ ಮನ್ನಣೆಯಿ
ರುತ್ತದೆ ".

       ವ್ಯೆಚಾರಿಕತೆಯ ಪರಿಣಾಮಗಳನ್ನು
ನಾಶ ಪಡಿಸಬಹುದು.ವ್ಯೆಚಾರಿಕತೆ ಹತ್ತಿಕ್ಕಲು
ಸಾಧ್ಯವಿಲ್ಲ. ವ್ಯೆಚಾರಿಕತೆ ಎ0ಬುದು
ವ್ಯಕ್ತಿಯಿ0ದ -ವ್ಯಕ್ತಿಗೆ ಭಿನ್ನವಾದ0ತಹ
ಸೂಕ್ಷ್ಮತೆಯಿ0ದ ಕೂಡಿದ ವ್ಯಕ್ತಿತ್ವ.ಇದು ದೇವರು
ಕರುಣಿಸಿದ ಪ್ರಸಾದ.

    ಮಾಮರದ0ತೆ ವ್ಯೆಚಾರಿಕತೆಯು ಬೆಳೆಯು
ತ್ತಾ ಹೋದ0ತೆ ದೇಶ ಪ್ರಭಲವಾಗುತ್ತಾ
ಹೋಗುತ್ತದೆ.

Tuesday, September 5, 2017


"  ಶಿಕ್ಷಕ   "

                ---   ----  --
                   ಶಿಕ್ಷಕ
                   ಕಲಿಸಿದ
          ನಾಲ್ಕು ಅಕ್ಷರದಿ0ದ
          ನಾಲ್ಕು ದಿನ ಬಾಳಿ
          ನಾಲ್ಕು  ತುತ್ತು  ತಿ0ದು
          ನಾಲ್ಕು ಒಳ್ಳೆಯ ಕೆಲಸ ಮಾಡಿ
          ನಾಲ್ಕು ಜನರ ಪ್ರೀತಿಗೆ
          ಪಾತ್ರನಾದವನೇ
          ಶಿಷ್ಯೋತ್ತಮ.
           ಕುವೆ0ಪು ,ಬೇ0ದ್ರೆ
           ಕಲಾ0, ರಾಧಾಕೃಷ್ಣನ್ನ್
           ಗಾ0ಧೀಜಿ ,ಭೋಸ್ ,
            ಘೋಷ್ ,ತಿಲಕ ರ0ತಹ
            ರತ್ನಗಳನ್ನು ನೀಡಿ
            ಭಾರತದ ಕೀರ್ತಿ ಪತಾಕೆಯನ್ನು
            ಜಗತ್ತಿನಲ್ಲಿ ಹರಡಲು ಕಾರಣರಾದ
           ಎಲೆ-ಮರೆಯ ಕಾಯಿಯ0ತಿರುವ
           ನಮ್ಮ ನೆಚ್ಚಿನ ಶಿಕ್ಷಕರಿಗೆ
           ಹಾರ್ಧಿಕ ಶುಭಾಶಯಗಳು.
  ------  -------   -------   --------   ----
          ಶಿಕ್ಷಕ  ಶಕ್ತಿ
           ದೇಶ   ಶಕ್ತಿ
          ಶಿಕ್ಷಕರಿಗೆ -- ಜ್ಯೆ ಹೋ
          ಜ್ಯೆ -ಭಾರತ ಮಾತೆ.



 ಎ.ಪಿ.ಜೆ.ಅಬ್ದುಲ್ಲ ಕಲಾ0
      -------   -------   ---------
     ಎ.ಪಿ.ಜೆ. ಅಬ್ದುಲ್ಲ.ಕಲಾ0 ಸರ್.  ....
ಸರಳ.ಸಜ್ಜನ.ಮೇಧಾವಿ.
ಭವ್ಯ ಭಾರತ ,ಬಲಿಷ್ಟ ಭಾರತ ಕಟ್ಟಲು
ನೂರಾರು ಕನಸು ಕ0ಡು ,ಸಾಕಾರ ಮಾಡಲು
ಯಜ್ನ ದೀಕ್ಷೆ ಕ್ಯೆಗೊ0ಡ  ಮಹಾನ್ ದೇಶ
ಭಕ್ತ..ಸಾಮಾನ್ಯರಲ್ಲಿ  ಸಾಮಾನ್ಯ.
ಮೇಧಾವಿಗಳಲ್ಲಿ ಅಸಾಮಾನ್ಯ ಮೇಧಾವಿ.
ಅಲ್ಲಿಯೂ ಸಲ್ಲ. ಇಲ್ಲಿಯೂಸಲ್ಲ.
ಎಲ್ಲೆಲ್ಲಿಯೂ ಸಲ್ಲ.
ವಿಶ್ವದಲ್ಲಿ ಮನೆಮಾತಾಗಿರಿವ
ಭಾರತ ಮಾತೆಯ ಸುಪುತ್ರ ಎ.ಪಿ.ಜೆ.ಯವರನ್ನು
 ನೆನದು ಅವರ ನೆನಪಿನಲ್ಲಿ ಸ್ಮಾರಕ ಕಟ್ಟೋಣ.

Monday, September 4, 2017

  "  ಗೊ0ಬೆಗಳು   "
            ---    ----    ---
     ಗೊ0ಬೆಗಳು.ಕರ್ಪೂರದ ಗೊ0ಬೆಗಳು.
ಪ್ಲಾಶ್ಟಿಕ್ ಆಫ್ ಪ್ಯಾರಿಸ ಗೊ0ಬೆಗಳು.ಕಟ್ಟಿಗೆಯ
ಗೊ0ಬೆಗಳು.ಇತ್ಯಾದಿ ಇತ್ಯಾದಿ ರೂಪದಲ್ಲಿ
ಗೊ0ಬೆಗಳು ಮಾಡಲ್ಪಡುತ್ತವೆ.ಇವೆಲ್ಲವೂ
ಮಾರುಕಟ್ಟೆಯಲ್ಲಿ ಲಭ್ಯ.

  ಒಬ್ಬ ಕಲಾವಿದ ಅಳುವ ಗೊ0ಬೆ ಮಾಡಿದರೆ ,
ಇನ್ನೊಬ್ಬ ಕಲಾವಿದ ನಗುವ ಗೊ0ಬೆ ,ಮತ್ತೊಬ್ಬ
ಕಲಾವಿದ ಶೃ0ಗಾರ ಗೊ0ಬೆ ,ಮೊಗದೊಬ್ಬ
ಸಾಟಿಯಿಲ್ಲದ ರಮ್ಯ ನಿಸರ್ಗ  ಮಾಡಿದರೆ ,
ಇನ್ನೋರ್ವರು ತ0ತ್ರಜ್ನಾನ ಅಳವಡಿಸಿ
ನೂರೆ0ಟು ಆಟಿಕೆಗಳನ್ನು -ಹೀಗೆ ಅನೇಕರು
ಅನೇಕ ಬಗೆಯ ಕಲೆಗಳನ್ನು ,ಹಾಗೆಯೇ
ದೇವಾನು -ದೇವತೆಗಳ ಅನೇಕ ರೂಪಗಳನ್ನು
ಮಾಡುತ್ತಾರೆ.ಈ ಕಲಾಕೃತಿಗಳು ಗೊ0ಬೆ
ರೂಪದಲ್ಲಿ ,ವಿಗ್ರಹ ರೂಪದಲ್ಲಿ ಮಾಡುತ್ತಾರೆ.
ಗೊ0ಬೆಗಳು ಆಕಾರದಲ್ಲಿ ಸಣ್ಣವು.ವಿಗ್ರಹಗಳು
ದೊಡ್ಡದಾಗಿರುತ್ತವೆ.ಗೊ0ಬೆ -ವಿಗ್ರಹ ಇವೆರಡೂ
ನಮ್ಮ ಸ0ಸಕೃತಿ ಬಿ0ಬಿಸುವ  ಅಮೋಘವಾದ
ಕಲಾ ಮಾಧ್ಯಮಗಳು.

  ಇವೆಲ್ಲವೂ ಕಲಾವಿದನ ಕಲ್ಪನಾ ಲೋಕದಲ್ಲಿ
ಹಿಡಿದಿಟ್ಟ ಕಲೆಯಲ್ಲ.ಕಲಾವಿದನು ತನ್ನ ದೂರ
ಗಾಮಿ ದೃಷ್ಟಿಯಿ0ದ ಲೋಕವನ್ನು ಸುತ್ತಿ -ಸುತ್ತಿ
ಜೀವನಕ್ಕೆ ಹತ್ತಿರವಿರುವ ಲೋಕದ ನಡಾವಳಿಕೆ
ಗಳನ್ನು ಜಗತ್ತಿಗೆ ಪರಿಚಯಿಸುವ ಕಲಾವಿದನ
ಮಹಾನ್ ಸಾಧನ ಮಾಧ್ಯಮ ಈ ಕಲೆ.
ಇವುಗಳನ್ನೆಲ್ಲ ಗಮನಿಸಿಯೂ ಗಮನಿಸದ0ತೆ ,
ತಿಳಿದು-ತಿಳಿಯದ0ತೆ ನಾವು - ನಮ್ಮ
ಅ0ಕು -ಡೊ0ಕುಗಳನ್ನು ತಿದ್ದೊಕೊಳ್ಳದೇ
ಮು0ದೆ ಸಾಗುತ್ತೇವೆ.

       "ತಲೆ ಇದ್ದು ಇಲ್ಲದ0ತಿರುವ ಅದ್ಭುತ
ಮಾನವ"  ಎ0ಬ ಅನ್ವರ್ಥಕ ನಾಮದಲ್ಲಿ
ಸತ್ಯಾ0ಶವಿದೆ.

Friday, September 1, 2017

 "  ಅಳುವೆ   ಏತಕೋ.... "
     ---    ---    ----    ---
ಅಳುವೆ   ಏತಕೋ... ?
ಮಮ್ಮಲು    ಮರುಗುವೆ  ಏತಕೋ.... ? (ಪ)
ಯಾರಿಗೂ   ಯಾರಿಲ್ಲ
ಯಾರಿಗಾಗಿ    ಯಾರು  ನೆ0ಟರಿಲ್ಲ
ಅವರಿಗಾಗಿ  ಕಾದಿದೆ
ಅವರ ವಿಧಿ ಲಿಖಿತ....1
ಬದಲಿಸಲೂ   ಆಗದು :ಭೋಗಿಸಲೂ ಆಗದು
ತ್ಯಜಿಸಲೂ ಆಗದು ; ನಿರಾಕರಿಸಲೂ ಆಗದು
ಇದು ಅವರವರ ಕರ್ಮಫಲ...2
ಕುಡಿದೇನೆ0ದರೆ ನೀರಿಲ್ಲ
ತಿನ್ನುವೆನೆ0ದರೆ ಬಾಯಿಲ್ಲ
ಭಿಕ್ಷೆ ಕೇಳಬೇಕೆ0ದರೆ ಮಾತಿಲ್ಲ
ನಡೆದೇನೆ0ದರೆ ಶಕ್ತಿಯಿಲ್ಲ
ಉದರವನ್ನು ಉದ್ರಿ ಹೇಳಬೇಕಾಯ್ತು...3
ಏ ವಿಧಿಯೇ
ನನಗಾಗಿ ಎಲ್ಲಿ ಕಾದಿರುವೆ
ಧರ್ಮರಾಜನನ್ನು ಹಿ0ಬಾಲಿಸಿದ0ತೆ
ನನಗಾಗಿ  ಬಾ   ಹಿ0ಬಾಲಿಸಿ
ಸ್ವರ್ಗಕ್ಕಾದರೂ ಕರೆದುಕೋ
ನರಕಕ್ಕಾದರೂ ಕರೆದುಕೋ
ಇಳೆಯಿ0ದ ಮೊದಲು
ಸಾಗಹಾಕು...ಸಾಗಹಾಕು...4
ಅಳುವೆ   ಏತಕೋ...
ಮಮ್ಮಲು   ಮರೆಗುವೆ ಏತಕೋ...