" ಶ್ರೀ ದೇವಿ ನವರಾತ್ರಿ ಮಹೋತ್ಸವ "
ಭಾಗ - 03
--- ----- ----- -------------- ------------
ಜಗಜ್ಜನನಿ ,ಜಗನ್ನಿಯಾಮಿಕೆ ,ತ್ರಿಪುರಸು0ದರಿ
ತ್ರಿಮೂರ್ತಿ ರೂಪಿಣಿಯಾದ ಆ ಜಗನ್ಮಾತೆಯ
ಈ ನವರಾತ್ರಿ ಮಹೋತ್ಸ ಎಲ್ಲಾ ಕಡೆಯೂ
ವಿಜ್ರ0ಭಣೆಯಿ0ದ ನಡೆಯಿಲಿ.ಎಲ್ಲಿ ಶಕ್ತಿ
ದೇವತೆಗಳಿವೆಯೋ ,ಅಲ್ಲಿ ಈ ಆರಾಧನೆಯನ್ನು
ಮಹಾನ್ ಸ0ಕಲ್ಪದಿ0ದ ನೆರವೇರಿಸಬೇಕು.
ಈ ಆರಾಧನೆಯಿ0ದ ಶಕ್ತಿ ದೇವತೆಯು ಸದಾ
ಜಾಗೃತಳಾಗಿ,ಭಕ್ತರ ಕಷ್ಟ ದುಃಖ,ದುಮ್ಮಾನ
ಗಳನ್ನು ದೂರ ಮಾಡುವಳು.ಸಕಲ ಐಶ್ವರ್ಯ
ಆಯುರಾರೋಗ್ಯ ,ಸ0ಪತ್ತು ಕರುಣಿಸುವಳು.
ಹಾಗೆಯೇ ಶ್ರೀ ಶಕ್ತಿ ದೇಗುಲಗಳಲ್ಲಿ ಪ್ರತಿ
ಶುಕ್ರವಾರ ಸಾಯ0ಕಾಲ ಸುಮ0ಗಲಿಯರು
ಸೇರಿ,ಶಕ್ತಿ ದೇವತೆಗೆ ಮ0ಗಲದ್ರವ್ಯಗಳೊ0
ದಿಗೆ ಅಷ್ಟೋತ್ತರ,ಸಹಸ್ರ ನಾಮ ಸಹಿತ
ಕು0ಕುಮಾರ್ಚನೆ ಮಾಡುವದರಿ0ದ
ಅತ್ಯ0ತ ಸಫಲಾದಿಗಳು ಪ್ರಾಪ್ತಿಯಾಗುವವು.
ದೇವತೆಯು ಸ0ತುಷ್ಟಳಾಗಿ ,ಸದಾ ಜಾಗೃತ
ಳಾಗಿ ಇಷ್ಟಾರ್ಥಸಿದ್ಧಿ ನೆರವೇರಿಸುವಳು.ಇದರ
ಆಚರಣೆ -ವಿಧಾನ ಬಹಳ ಸರಳ.ಇದಕ್ಕೆ
ಅನುಸರಿಸಿ ಪ್ರತಿ ಹುಣ್ಣಿಮೆಯ0ದು ಸಾಧ್ಯವಾದ
ಮಟ್ಟಿಗೆ ಅನ್ನ ಸ0ತರ್ಪಣೆ ಮಾಡುವದು ದೇವಿಗೆ
ಅತ್ಯ0ತ ಪ್ರಿಯವಾದ ಸೇವೆಯಾಗಿದೆ.
ಮ0ಗಳ0
"ಶ್ರೀ ದೇವಿ ಪಾದಕಮಲಗಳಲ್ಲಿ ಅರ್ಪಿತ "
-- ----- ---- ---- ---- ---- -----
ಕೃಪೆ - 1) ಭಾರತದಲ್ಲಿ ಶಕ್ತಿ ಪೂಜೆ
ರಾಮಕೃಷ್ಣಾಶ್ರಮ ಪ್ರಕಟಣೆ
2) ಶ್ರೀ ಚೌಡೇಶ್ವರಿ ದೇವಿ ಮಹಾತ್ಮೆ
ಎನ್.ಆರ್.ಸ0ಗಾ.
ಇಳಕಲ್ಲ.
No comments:
Post a Comment