" ಹಿತ ಶತೃಗಳು "
---- -- -- ---- -
"ಯಾರೋ ಹಚ್ವಿದ ಬೆ0ಕಿಗೆ ಯಾರೋ ಬಲಿ ".
ಇದು ಇ0ದಿನ ಸಾಮಾನ್ಯ ವಾರ್ತಾಲಾಪ.
ದೊಡ್ಡ ದೊಡ್ಡ ಉದ್ದಿಮೆದಾರರಲ್ಲಿ ,ವ್ಯವಹಾರ
ಗಳಲ್ಲಿ , ಇದು ಕೇವಲ ತಮಾಷೆಯ ಮಾತಾಗಿ
ರುತ್ತದೆ.
ಇವರ ಕಾಲು ಅವರು ಎಳೆಯುತ್ತಾರೆ.ಅವರ
ಕಾಲು ಇವರು ಎಳೆಯುತ್ತಾರೆ.ಪ್ಯೆಪೋಟಿಯ
ಮೇಲೆ ಪ್ಯೆಪೋಟಿ. ಆದರೆ ಇಬ್ಬರಿಗೂ 'ಅಸಲಿ '
ನಾಟಕ ಏನು ಅನ್ನುವದು ಗೊತ್ತಿರುತ್ತದೆ.ಆದರೆ
ಇಬ್ಬರೂ ಗುಟ್ಟು -ಬಿಟ್ಟು ಕೊಡುವದಿಲ್ಲ.ಮೇಲು
ನೋಟಕ್ಕೆ ಇಬ್ಬರೂ ಸ0ಧಿಸಿದಾಗ ಒಬ್ಬರಿಗೊ
ಬ್ಬರು ಉಭಯ ಕುಶಲೋಪರಿ ವಿನಿಮಯ
ಮಾಡಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ
ಇಬ್ಬರೂ ಒಬ್ಬರಿಗೊಬ್ಬರು 'ಹಿತಶತೃಗಳು '.
ನಿತ್ಯ ಲಕ್ಷ -ಕೋಟಿ ಎಣಿಸುವವರಲ್ಲಿ ಈ
ವಿದ್ಯಾಮಾನಗಳು ಲೆಕ್ಕಕ್ಕಿಲ್ಲ.
ದಿನಗೂಲಿ ಕಾರ್ಮಿಕರಲ್ಲಿ ಹಾಗಲ್ಲ.ಒಬ್ಬನಿಗೆ
ಇವೊತ್ತು ಕೆಲ್ಸ ಸಿಗಲಿಲ್ಲಾ0ದರ-ಅವ್ನ ಮನಿ
ಒಲಿ ಹಚ್ಚಾ0ಗಿಲ್ಲ.ಅವನ ಮನಿಯಾಗ ರೊಟ್ಟಿ
ಬಡಿಯೋ ಸಪ್ಪಳ ಕೇಳಿಸೋದಿಲ್ಲ.ಇದನ್ನ
ಮಗ್ಗಲ ಮನಿಯಾ0ವ ನೋಡತಿರತಾನ.
ಕೇಳತಿರತಾನ.ಹೆ0ಡ್ತಿಗೆ ಹೇಳ್ತಾನ - "ಅವನಿಗೆ
ಇವತ್ತು ಕೆಲ್ಸ ಸಿಕ್ಕದಾ0ಗ ಇಲ್ಲ. ಸೇರು ಹಿಟ್ಟು
ಕೊಡು.ಮಾಡಿಕೊ0ಡು ತಿನ್ನಲಿ.ನಾಳೆ ಕೆಲ್ಸ
ಸಿಕ್ಕರ ಪರತ ಮಾಡತಾರ." -ಅ0ತಾ ಹೇಳ್ತಾನ.
ಇವೆರಡೂ ಘಟನೆಗಳಲ್ಲಿ ಭರ್ಜರಿಯಾಗಿ
ಮರೆಯುವದು ' ಬಡತನ ".ಇಲ್ಲಿ ಮಾನವೀ
ಯತೆ -ರೊಕ್ಕ ಇರಲಿಲ್ಲಾ0ದರೂ ಕೋಟಿ
ಕೋಟಿ ಬ್ರಹ್ಮಾ0ಡ ತೇಜಸ್ದಿಗೆ ಸಮಾನಾಗಿರು
ತ್ತದೆ. "ನಮಗೆ ಬೇಕಾಗಿರುವದು ಇ0ತಹ
ಕಾಳಜಿ. ಇ0ತಹ ಕಾಳಜಿಯುಳ್ಳವರಿಗೆ
ನಮಸ್ಕಾರಗಳು ".