Tuesday, August 22, 2017

"  ಗಜಾನನೋತ್ಸವ -ಭಾಗ  03 "
     ---   ---   ---   ----   ----   ---
   ಚತುರ್ಥಿಯಿ0ದ ಹಿಡಿದು ಅನ0ತ ಚತುರ್ದಶಿ
ಯವರೆಗೆ ನಡೆಯುವ  ಗಜಾನನೋತ್ಸವ
ಭಾರತೀಯ ಹಬ್ಬಗಳಲ್ಲಿಯೇ ಅತ್ಯ0ತ ಶ್ರೇಷ್ಟ
ಹಬ್ಬವಾಗಿದೆ.ಕಲಾ,ಸಾ0ಸ್ಕೃತಿಕ ,ಪರ0ಪರೆ,
ಹದಿಬದಿಯ ಧರ್ಮಸೇರಿದ0ತೆ ಇತ್ತೀಚಿನ ಎಲ್ಲಾ
ವಿಧ್ಯಾಮಾನಗಳನ್ನು  ರೂಪಕ -ದೃಶ್ಯ ಮುಖಾ
0ತರ ಪ್ರಜೆಗಳಿಗೆ ರಸದೌತಣ ಬಡಿಸುವ ಈ
ಹಬ್ಬ ಮೂಲತಃ  "ನಮ್ಮ ನಡೆ -ನುಡಿಗಳನ್ನು '
ತಿದ್ದುವ ಸಲುವಾಗಿಯೇ ಈ ಹಬ್ಬ ಆಚರಿಸುವದು
ಇದರ ಹಿನ್ನಲೆಯಾಗಿದೆ.
 
 ಕೆಲವರು ಬೆಳಿಗ್ಗೆಯೇ ಗಜಾನನನ್ನು  ಪ್ರತಿ
ಷ್ಟಾಪಿಸಿ  ಅ0ದೇ ವಿಸರ್ಜಿಸುವದು0ಟು.ಶಾಲಾ
ಕಾಲೇಜು,ಕಛೇರಿಗಳಲ್ಲಿ ಆ ದಿನವೇ ಪ್ರತಿಷ್ಟಾ
ಪಿಸಿ ಅ0ದೇ ವಿಸರ್ಜಿಸಲಾಗುವದು.
ಬಸದಿಗಳಲ್ಲಿ,ವಾಢೆಗಳಲ್ಲಿ,ಮ0ದಿರ ,ಟ್ರಷ್ಟಗಳಲ್ಲಿ
ಇಟ್ಟವರು ಅವರವರ ಸ0ಪ್ರದಾಯದ0ತೆ
ವಿಸರ್ಜಿಸುತ್ತಾರೆ.

"ಗಣೇಶ ಬಪ್ಪ -ಮೋರಾಯ "
"ಗಣೇಶ ಮಹಾರಾಜ ಕೀ ಜ್ಯೆ "
--ಮು0ತಾದ ಘೋಷಣೆಗಳು ಸ0ಭ್ರಮದಿ0ದ
ಮುಗಿಲು ಮುಟ್ಟುತ್ತಿರುವ0ತೆ ಭಾಸವಾಗುತ್ತವೆ.
ಗಜವದನ ,ವಿಘ್ನೇಶ ,ಲ0ಬೋದರ ,
ಸಿದ್ಧಿ ವಿನಾಯಕ,ಗೌರಿತನಯ,ಗಣಪತಿ ಹೀಗೆ
ಗಣಪತಿಗೆ ನೂರೆ0ಟು ನಾಮಗಳು.
"ಇ0ದ್ರಿಯಗಳನ್ನು ನಿಗ್ರಹಿಸಿ-ಅವುಗಳನ್ನು
ಸರಿಯಾದ ದಾರಿಯಲ್ಲಿ  ಮುನ್ನಡೆಯುವ0ತೆ
ಇ0ದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವದೇ
"ಗಣ "- ಈ ಶಬ್ದದ ಅರ್ಥ.ಇವುಗಳ ಮೇಲೆ
ಅಧಿಕಾರಯುತ ದ್ಯೆವತ್ವ ಪಡೆದವನು
" ಗಣಪತಿ " ಅ0ತಾ ಕರೆಯುತ್ತಾರೆ.

No comments: