Saturday, August 19, 2017


    "   ದೇವರು  "

 --   --  --  ----   -----

ಆತ್ಮ ಸ್ವರೂಪಿಯಾದ ದೇವರು
ಎಲ್ಲಾ ಕಡೆ ಇರುತ್ತಾನೆ.ಆ ದೇವರನ್ನು ಕಾಣಲು
ಕಠಿಣ  ಮಾರ್ಗಗಳತ್ತ ಕಣ್ಣು ಹಾಯಿಸಬೇಕಾಗಿಲ್ಲ.


ಸರಳತೆ  ,ನಿರ್ಮಲ ಮನಸ್ಸು ,ಪವಿತ್ರ
ಕಾಯಕ ,ಪ್ರತಿಫಲಾಪೇಕ್ಷೆಯಿಲ್ಲದೇ  ನೆರವು
ನೀಡುವ ಸಹಾಯಹಸ್ತ  ---ಇವು ನಾಲ್ಕು
ದೇವರನ್ನು ಕಾಣಲು ಇರುವ ನಾಲ್ಕು
ದಿಕ್ಕುಗಳು.

 ಶರಣ ತತ್ವಗಳಾಗಲಿ , ದಾಸರ ತತ್ವಗ
ಳಾಗಲಿ , ಯಾವುದೇ ಧರ್ಮದ ತತ್ವಗಳಾಗಲಿ
ಎಲ್ಲಾ ಹೇಳುವದು ವಿಭಿನ್ನ ವಿಭಿನ್ನ ರೀತಿಯಲ್ಲಾ
ದರೂ , ಎಲ್ಲವುಗಳ ಆಶಯ , - ಸಾಮಾನ್ಯ
ಮನುಷ್ಯನೂ ಕೂಡಾ ಸುಲಭ ಮಾರ್ಗಗಳಲ್ಲಿ
ದೇವರನ್ನು ಕಾಣಬೇಕು ಎ0ಬ ಹ0ಬಲದೊ0
ದಿಗೆ ತಮ್ಮ ಭೋಧನೆಗಳನ್ನು  ತಿಳಿಸಲು
ಪ್ರಯತ್ನಿಸಿವೆ.


"ಮನುಷ್ಯ ಎಷ್ಟೇ ಪ0ಡಿತನಾದರೂ ,
ಇವೆಲ್ಲವುಗಳನ್ನು ತಿಳಿದುಕೊ0ಡರೂ ,ಪ್ರತಿಫ
ಲಾಪೇಕ್ಷೇಯಿಲ್ಲದೇ ಏನನ್ನು  ಮಾಡಲು
ಮನಸ್ಸು ಮಾಡುವದಿಲ್ಲ. ". ಅಗತ್ಯ ಶ್ರಮಕ್ಕೆ
ಫಲಬೇಕು ನಿಜ. ಇಲ್ಲಿ  'ಪ್ರತಿಫಲಾಪೇಕ್ಷೆ'
ಎ0ದರೆ  -ಅಗತ್ಯಕ್ಕಿ0ತ ಹೆಚ್ಚು.ಇದರನೇರ
ಅರ್ಥ -ಆಸೆ ಬುರುಕತನ ,ಆಸೆಮಾರಿ,ಇನ್ನಿಲ್ಲದ
ದಾಹ ,ಆಗ್ರಹ ಇತ್ಯಾದಿ.


ಈ ಮಾರ್ಗದಲ್ಲಿಯೇ ನಾವು ನಡೆಯುತ್ತಿ
ರುವದರಿ0ದ ದೇವರನ್ನು ಕಾಣುವ ಸರಳ
ತತ್ವಗಳನ್ನು ಬದಿಗಿರಿಸಿ , ಭೋಗ ಜೀವನಕ್ಕೆ
ನೀಡುವ ಸುಖಗಳಿಗೆ  ದಾಸರಗಿ  ದೇವರನ್ನು
ಕಾಣಲು ಇರುವ ಎಲ್ಲಾ ಅವಕಾಶಗಳನ್ನು
ಕಳೆದುಕೊಳ್ಳುತ್ತಿದ್ದೇವೆ.


ಪ್ಯೆಪೋಟಿಯ ಸಮರದಲ್ಲಿ  ಸರಳ ತತ್ವಗಳು
ಸವಕಲು ನಾಣ್ಯಗಳಾಗಿವೆ. "ಎಲ್ಲಾ ಇದ್ದರೂ
ಇಲ್ಲದ0ತವರಾಗಿ "  ನಾವಿ0ದು ನರಳುತ್ತಿದ್ದೇವೆ.

    "ಸರಳತೆ "  --- ಎಲ್ಲಿ ಇರುತ್ತೋ ,ಅಲ್ಲಿ
ಸದಾಕಾಲ. ದೇವರ ಅಸ್ತಿತ್ವ ಇರುತ್ತದೆ.

No comments: