Saturday, August 19, 2017

"ಸಿ0ಹ   ಮತ್ತು   ಸಿ0ಹಾಸನ   "
      ---    ----    ----    -----   ---
    ಸಿ0ಹ  ಕಾಡು ಪ್ರಾಣಿ.ಸಿ0ಹಕ್ಕೆ ಇನ್ನೊ0ದು
ಹೆಸರು ಮೃಗರಾಜ.ಮೃಗಗಳ ರಾಜನಾದ
ಸಿ0ಹ ಮಾ0ಸಹಾರಿ.ಅರಣ್ಯದಲ್ಲಿ ವಾಸಿಸುವ
ಚಿಕ್ಕ-ಪುಟ್ಟ ವನ್ಯ ಜೀವಿಗಳನ್ನು ಹೆದರಿಸಿ  ,
ಬೆದರಿಸಿ ,ಬೇಟೆಯಾಡಿ ಅವುಗಳನ್ನು ಕೊ0ದು
ತನ್ನ ಆಹಾರವನ್ನು ಪೂರೆಯಿಸಿಕೊಳ್ಳುವದು
ಸಿ0ಹದ ದಿನಚರಿ.ಸಿ0ಹ ಪರಾವಲ0ಬಿ.
 
ತನ್ನ ಬಲಿಷ್ಟವಾದ ಶಕ್ತಿಯಿ0ದ ,ಮಾ0ಸ
ಖ0ಡಗಳಿ0ದ ,ಘರ್ಜನೆಯಿ0ದ  ಅರಣ್ಯದಲ್ಲಿ.
ವಾಸಿಸುವ ಎಲ್ಲಾ ಪ್ರಾಣಿಗಳ
ಮೇಲೆ .ಪರಮಾಧಿಕಾರ ಚಲಾ
ಯಿಸುತ್ತದೆ.ಇದರ ಪ್ರಚ0ಡ ಶಕ್ತಿಯೇ ಸಿ0ಹ
ರಾಜನಾಗಲು ಇರುವ ಅರ್ಹತೆ. ಆದರೆ ಬೌದ್ಧಿಕ
ಶಕ್ತಿ ಇರುವದಿಲ್ಲ !

  ಯಾವ ಮನುಷ್ಯನು ಚತುರನಾಗಿರುತ್ತಾನೋ,
ಶಕ್ತಿಶಾಲಿಯಾಗಿರುತ್ತಾನೋ,ಅಘಾದ ಸ್ಯೆನ್ಯ
ಪಡೆಹೊ0ದಿರುತ್ತಾನೋ ಆತನು ಕೇವಲ
ರಾಜನಲ್ಲ ಚಕ್ರವರ್ತಿಯೂ ಆಗುತ್ತಾನೆ.
ಸಿ0ಹಾಸನಾಧೀಶನಾಗುತ್ತಾನೆ.
   ಸಿ0ಹ ಮತ್ತು ಸಿ0ಹಾಸನ ಈ ಎರಡು
ಘಟನೆಗಳಲ್ಲಿ ಕ0ಡು ಬರುವ ಸಾಮ್ಯತೆ
ಎ0ದರೆ ಕ್ರೌರ್ಯ.ಎರಡರಲ್ಲಿಯೂ ಕ್ರೌರ್ಯ
ತು0ಬಿ ತುಳುಕುತ್ತದೆ.

  ಈಗ ಮೊದಲಿನ0ತೆ ಅರಣ್ಯಗಳಿಲ್ಲ.ಸಿ0ಹ
ಗಳಿಲ್ಲ.ಸಿ0ಹಾಧೀಶರಿಲ್ಲ.ಆದರೆ ನಮ್ಮನ್ನಾಳುವ
ಪ್ರಜಾಸೇವಕರಿದ್ದಾರೆ.ಪ್ರಜಾಪಾಲಕರಿದ್ದಾರೆ.
ಇವರು ನೇರವಾಗಿ  ಕ್ರೌರ್ಯದಿ0ದ ಬ0ದವ
ರಲ್ಲ.ತೆಲೆ ಎಣಿಕೆಯ ಮೇಲೆ ಬ0ದಿರುತ್ತಾರೆ.
ನಾಯಕರಾದವರ ನೀತಿ,ನಿಲುವುಗಳ ಮೇಲೆ
ಕ್ರೌರ್ಯದ ಚದುರ0ಗದಾಟ ಇಲ್ಲಿ ಇಣುಕು
ಹಾಕುತ್ತಿರುತ್ತದೆ.

   ದಾಳ ಉರುಳಬಹುದು :ಉರುಳಲಿಕ್ಕಿಲ್ಲ
   ಉರುಳಿದರೆ ಅಶಾ0ತಿ
   ಉರುಳದಿದ್ದರೆ ಶಾ0ತಿ
   ಉರುಳುವದು ಬೇಡವೇ ಬೇಡ ಅಲ್ಲವೇ..?

No comments: