Thursday, August 24, 2017

   "   ಸಮಚಿತ್ತ   "
     ---    ----   ------
                '  ಚಿತ್ತ ' ವನ್ನು  ಸಮಸ್ಥಿತಿಯಲ್ಲಿ
ಡುವದೇ - ' ಸಮಚಿತ್ತ  '. ' ಚಿತ್ತ  ' ಇದು
ಮನಸ್ಸನ್ನು  ನಿಯ0ತ್ರಣಗೊಳಿಸುವ  ಒ0ದು
ಕ್ರಿಯೆ. 'ಪ್ರಜ್ನೆ '  ಇದರ ಪರಿಣಾಮದ ಗುಣಗಳು.
    ಮನುಷ್ಯ ಭಾವನಾ ಜೀವಿ. ಆವೇಶಕ್ಕೊಳ
ಗಾಗುವದು ಸಹಜ.ಈ ಆವೇಶದ ಭೌತಿಕ,
ಮಾನಸಿಕ  ಪರಿಣಾಮಗಳು ಮತ್ತು ಸ0ಘರ್ಷ
ಗಳು  ಪ್ರಜ್ನೆ ಹಾಗು  ಚಿತ್ತದತ್ತ ತೂಗುವ ತಕ್ಕಡಿ
ಯ0ತೆ ತೂಗುತ್ತಿರುತ್ತದೆ.ಪ್ರಜ್ನೆ ಹಾಗು ಚಿತ್ತ
ನಾಣ್ಯದ ಎರಡು ಮುಖಗಳು. 

    ಪ್ರಜ್ನೆ ಮೀರಿ ಮಾತಾಡುವದಾಗಲಿ ,ಪ್ರಜ್ನೆ
ಮೀರಿ ವರ್ತಿಸುವದಾಗಲಿ , ಪ್ರಜ್ನೆ ಮೀರಿದ
ನಡಾವಳಿಕೆಗಾಗಲಿ  ,ಇವು ಮನಸ್ಸನ್ನು  ಸಮ
ಚಿತ್ತದಲ್ಲಿಡಲು ಸಾಧ್ಯವಾಗದ ಪರಿಣಾಮವಾಗಿ
ಆವೇಶದಲ್ಲಿ ತೋರುವ ಅಗೌರವ - ಅವಮ
ರ್ಯಾದೆ,ಅವಾಚ್ಯನುಡಿಗಳು ಕುಕೃತ್ಯಗಳು ,
'ಪ್ರಜ್ನೆ  ' - ಈಪದಕ್ಕೆ  ಹಾಗು ಈ ಶಬ್ದದ ಅರ್ಥ
ವ್ಯಾಪ್ತಿಯನ್ನು  ಅದರ ತೂಕವನ್ನು ತೂಗುವ
ಪರಡಿಗಳಾಗುತ್ತವೆ.

     ಈ ಘರ್ಷಣೆಗಳನ್ನು  ತಡೆಯುವದೇ
ಚಿತ್ತದತ್ತ  ಸಾಗುವ ಮನಸ್ಸನ್ನು  ಸ್ವಾಗತಿಸಲು
ಸಿದ್ಧರಾಗಬೇಕು.ಚಿತ್ತವನ್ನು ರಾಗ -ಮೋಹ -
ದಾಹಗಳಿ0ದ ದೂರದಲ್ಲಿಡುವ0ತಹ , ಆಕರ್ಷ
ಣೆಗೆಳಿಗೆ ಬಲಿಯಾಗದ0ತಹ  -ಮಾನಸಿಕ
ಸಿದ್ಧತಗೆ  ಪೂರಕವಾಗಿ ಕಾರ್ಯನಿರ್ವಹಿಸುವದೇ
'ಚಿತ್ತದ 'ಕೆಲಸ.ಚಿತ್ತದಕೆಲಸ ಉಯ್ಯಾಲೆ
ಯ0ತೆ ಆ ಕಡೆ -ಈ ಕಡೆ ವಾಲುತ್ತಿರುತ್ತದೆ.
ಚಿತ್ತವನ್ನು ಲ0ಬಕೋನದಲ್ಲಿರುವ0ತೆ ಕಾಯ್ದು
ಕೊಳ್ಳುವದೇ  'ಸಮಚಿತ್ತ '.ಸಮಚಿತ್ತ ಸಾಧಿಸಿ
ದವನು ಯಶೋಧರ.


No comments: