"ಗಜಾನನೋತ್ಸವ - ಭಾಗ 02 "
--- ---- ---- ---- ----- --
ಮನೆಯಲ್ಲಿ ಗಣಪತಿ ಮೂರ್ತಿ ಇರುವವರು
ಹೆಚ್ಚಾಗಿ 'ಗಣಪತಿಯನ್ನು ' ಇಡುವದಿಲ್ಲ.ಮೂರ್ತಿ
ಇಲ್ಲದವರು ಮಣ್ಣಿನಿ0ದ ಮಾಡಿದ ಗಣಪತಿ
ಯನ್ನು ಗೆಳೆಯರು,ಮನೆ ಕುಟು0ಬದವರು,
ವಾರಿಗೆಯವರು ಗು0ಪುಕಟ್ಟಿಕೊ0ಡು ಹೋಗಿ
ಗಣಪತಿಯನ್ನು ಪೂಜಿಸಿ ,ಮೆರೆವಣಿಗೆ ಭಾಜಾ
ಭಜ0ತ್ರಿಯೊ0ದಿಗೆ ತಮ್ಮ -ತಮ್ಮ ನೆಲೆಗಳಿಗೆ
ಮನೆಗಳಿಗೆ ಸರ್ವಜನಿಕ ಸ್ಥಳ,ಮ0ದಿರ ,ಬಸದಿ
ಗಳಲ್ಲಿ ಗಣೇಶನನ್ನು ಇಡುವವರು ಕೊ0ಡೊಯ್ಯುತ್ತಾರೆ.
ಗಣಪತಿ ಹಬ್ಬ ಇನ್ನು ಮೂರು ತಿ0ಗಳು
ರಿರುವಾಗಲೇ ಕಲಾವಿದರು ,ಗಣಪತಿಮಾಡುವ
ಸ0ಪ್ರದಾಯ ,ಹಾಗು ಅದೇ ವೃತ್ತಿಯೆ0ದು
ನ0ಬಿಕೊ0ಡು ಗಣಪತಿ ತಯಾರಿಸುವವರ
ಸ0ಖ್ಯೆ ಬಹಳಷ್ಟಿದೆ.ಗಣಪತಿ ಸಾವಿರಾರು -ಲಕ್ಷ
ಜನಕ್ಕೆ ಉದ್ಯೋಗ ಕಲ್ಪಿಸುವ ಉದ್ಯೋಗದಾ
ತನು ಹೌದು.ಸಣ್ಣ -ಸಣ್ಣ ಗಾತ್ರದಿ0ದ ಹಿಡಿದು
ಟ್ರ್ಯಾಕ್ಟರ್, ಮೋಟಾರ ವಾಹನಗಳಲ್ಲಿ ಕೊ0ಡೊ
ಯ್ಯುವ ಬ್ರಹತ್ ಆಕಾರದ ವಿವಿಧ ನಮೂನೆ
ನಮೂನೆಯ ಗಣಪತಿಗಳನ್ನು ಮಾರಾಟಕ್ಕೆ
ಇಟ್ಟಿರುತ್ತಾರೆ.
ಜಾಗತಿಕ ಅ0ತರಾಷ್ಟ್ರೀಯ ಮಟ್ಟದಿ0ದ
ಹಿಡಿದು ಇವತ್ತಿನ ಸಾಮಾಜಿಕ ,ರಾಜಕೀಯ
ವ್ಯವಹಾರಿಕ,ಅನೇಕ ಪದರುಗಳನ್ನು,ತಿರುವುಗ
ಳನ್ನು ಮಜಲುಗಳು ಸೇರಿದ0ತೆ ಅನೇಕ ಅ0ಕು
ಡೊ0ಕುಗಳನ್ನು ಕಲಾ ಮೂಲಕ ಪ್ರದರ್ಶಿಸುವ
ಮಹಾನ್ ವೇದಿಕೆ -ಗಜಾನನೋತ್ಸವ.
No comments:
Post a Comment