Saturday, December 30, 2017

 "  ಸ0ಗಾನ ಮಾತು   -357. "
     ---   -----   -----   ----  -
  *   ಅನ್ಯೆತಿಕತೆ  ಎಲ್ಲೆ ಮೀರಿದಲ್ಲಿ
      '  ನಾಯಿ ಬುದ್ಧಿ  ' ಚಲಾವಣೆಯಲ್ಲಿರುತ್ತದೆ.

  *     ಸ0ತೋಷದಿ0ದ ಜೀವನ
             ನಡೆಸಬೇಕನ್ನುವವನಿಗೆ
      'ಕಾಸು ' - ಮುಖ್ಯವಲ್ಲ.
      ಸಮಾಜದ ಮುಖ್ಯವಾಹಿನಿ - ಮುಖ್ಯ.

  *   ಭಯ ಮುಕ್ತ ಮನಸ್ಸಿರುವವನಲ್ಲಿ ,
       ಸ್ವಪ್ನದಲ್ಲೂ  ವಿಷಕ್ರಿಮಿಗಳು
       ಪ್ರವೇಶಿಸಲಾರವು.
 "  ಸ್ವರ್ಗ. "
    -----------
               ಯಾವುದು ಸ್ವರ್ಗ. ...?ಯಾವುದು
ನರಕ... ? ಈಗಿನ ಕಾಲದಲ್ಲಿ ಹೇಳುವದು ಕಠಿಣ.
   ಹಣವನ್ನೇ ಪ್ರಾದನ್ಯವಾಗಿ ,ಹಣವನ್ನೇ  ತಮ್ಮ
ಉಸಿರನ್ನಾಗಿ ,ಎಡಬಿಡದೇ  ದುಡಿಯುವ ಜನರಿಗೆ
ಕೊರತೆಯಿಲ್ಲ. ಹಣವನ್ನೇ ಪ್ರಮುಖವಾಗಿಸಿ
ತಮ್ಮ ಎ0ದಿನ  ದ್ಯೆನ0ದಿನ ಡ್ಯೂಟಿ ಜೊತೆಗೆ
ಹೆಚ್ಚುವರಿ ಡ್ಯೂಟಿ ಮಾಡುವವರೂ ಇದ್ದಾರೆ.
ಹಗಲು ಪಾಳಿಯಲ್ಲಿ ಗ0ಡ ,ರಾತ್ರಿ ಪಾಳಿಯಲ್ಲಿ
ಹೆ0ಡತಿ ಹೀಗೆ ದಿನದ 24 ತಾಸು ದುಡಿಯುವ
ದ0ಪತಿಗಳೂ ಇದ್ದಾರೆ. ಹಣವನ್ನು ಕ0ಡರೆ
ಗಬಗಬನೆ ಬಾಚಿಕೊಳ್ಳುವ ಇವರಿಗೆ ಹಣ ಸಿಕ್ಕಿತೇ
ವಿನಾ ಇವರಿಗೆ ಸ್ವರ್ಗ ಸಿಗಲಿಲ್ಲ. !

      ಕೆಲವೊ0ದು ರ0ಗಗಳಲ್ಲಿ  ಈಗಲೂ
ಕತ್ತೆಯ0ತೆ ದುಡಿಯುವವರಿದ್ದಾರೆ.ಆದರೆ ಇವರ
ಕ್ಯೆಗೆ ಹಣ ಸಿಗುವ ಬದಲು ಛಾಟಿ ಏಟು ಸಿಗುತ್ತದೆ.
ಇವರು ಬಯಸದೇ ಗುಲಾಮಗಿರಿಗೆ
ಸಿಕ್ಕ ಜನ.ಆದರೆ ಇವರಿಗೆ ಮೃಷ್ಟಾನ್ನ ಸಿಗಲ್ಲ.
ಸಿಕ್ಕಿದ್ದನ್ನೇ ತಿ0ದು ಹೊಟ್ಟೆ ತು0ಬ ನೀರು
ಕುಡಿದು -ಎಲ್ಲಿ ಹಾಸಿಗೆ ಸಿಕ್ಕುತ್ತೋ ,ಅಲ್ಲಿಯೇ
ನಿದ್ದೆಗೆ ಜಾರುವವರು.

  ಇವೆರಡರಲ್ಲಿ ಒ0ದರಲ್ಲಿ ಹಣ ಇದೆ ,ನಿದ್ರೆ ಇಲ್ಲ.
ಇನ್ನೊ0ದರಲ್ಲಿ ನಿದ್ದೆ ಇದೆ ಹಣ ಇಲ್ಲ. ಎರಡರಲ್ಲಿಯೂ ಸ್ವರ್ಗ ಇಲ್ಲ.
   ನಮಗೆ ಅವಶ್ಯವಿರುವಷ್ಟು ಗೌರವದಿ0ದ
ದುಡಿಮೆ ಮಾಡಿ ,ಅ0ದರೆ ಕುಟು0ಬದ
ನಿರ್ವಹಣೆಗೆ ಆಗುವಷ್ಟು ದುಡಿತವ ಮಾಡಿ
ನೆರೆಹೊರೆಯವರ ಜೊತೆಗೆ ,ಕುಟು0ಬದ
ಇನ್ನ್ನಿತರ ಜೊತೆಗೆ ನೆಮ್ಮಿದಿಯಾಗಿ ಕುಳಿತು ,
ನಾಲ್ಕು ಮಾತಾಡಿ ,ಉಭಯ ಕುಶಲೋಪರಿ
ವಿಚಾರಿಸಿ,ಹೆಚ್ಚಿನ ಆಶೆಗೆ ಧಾವ0ತಿಸದೇ ,
ಇದ್ದುದರಲ್ಲಿಯೇ ಎಲ್ಲರನ್ನು -ಎಲ್ಲರಿಗಾಗಿ ,
ಎಲ್ಲರೂ-ಎಲ್ಲರಿಗಾಗಿ ದುಡಿಯುವ ಪರಿ -ಎಲ್ಲರೊ
0ದಿಗೆ ಇರುವ ಸುಖ -ಸ0ತೋಷ ಕ್ಷಣಗಳು
ಕುಟು0ಬದಲ್ಲಿ  ನಿಜವಾಗಿ ಸ್ವರ್ಗ ತರುವ
ಕರ್ಮಾನು ಫಲಗಳು.ಇ0ತಹ  ಕರ್ಮಾನು
ಫಲಗಳಿಗಾಗಿ ನಾವು ದೇವರನ್ನು  ಪ್ರಾರ್ಥಿಸುತ್ತಿ
ರಬೇಕು.
 "  ಏಕಾಗ್ರತೆ   "
        --   ---   ---
     ಏನಾದರೊ0ದು ಕಾರ್ಯಸಾಧನೆ ,
ಕಾರ್ಯ ಸಿದ್ಧಿ ಮಾಡಬೇಕಾದರೆ , ಎಲ್ಲಕ್ಕಿ0ತ
ಮುಖ್ಯವಾಗಿ ಏಕಾಗ್ರತೆ  ಇರಬೇಕು.  '
ಇದು ಮನಸ್ಸನ್ನು ಕೇ0ದ್ರಿಕರಿಸಿ ,ಇ0ದ್ರಿಯಗ
ಳನ್ನು ನಿಯ0ತ್ರಿಣದಲ್ಲಿಟ್ಘುಕೊಳ್ಳುವ ಒ0ದು
ಸಾಧನ.  '  ಬಹಿಷ್ಕೃತ ಪ್ರಜ್ನೆ ' - ಇದು
ಅರೆಕಾಲಿಕಾವಸ್ಥೆಯ ಸ್ಥಿತಿ. ಶಾಶ್ವತ ಅಲ್ಲ.
ನಿರ್ಮಲವಾದ  ,ಪ್ರಶಾ0ತ ವಾತಾವರಣದಲ್ಲಿ
ಎಲ್ಲಾ ಇ0ದ್ರಿಯಗಳನ್ನು ನಿಯ0ತ್ರಿಸಿ ,ಕಣ್ಣು
ಮುಚ್ಚಿ ಧ್ಯಾನಾಸಕ್ತರಾಗಿ -ಚಿತ್ತವನ್ನು ಏಕಾಗ್ರತೆ
ಗೊಳಿಸಿ ,ನಾವು ಸ0ಕಲ್ಪಿಸುವ ವಿಚಾರಗಳನ್ನು
ಯೋಚನೆಗಳನ್ನು ಕ್ರೋಢಿಕರಿಸಿ ,ಮಿದುಳಿಗೆ
ಸ0ದೇಶ ರವಾನಿಸಿದರೆ ,ಮನಸ್ಸು ತನ್ನ ಎಲ್ಲಾ
ಕಾರ್ಯಗಳನ್ನು ಈ ಸ0ದೇಶದ ಮೇಲೆ
ಕೇ0ದ್ರಿಕರಿಸಿ -ಚಿತ್ತವನ್ನು ಬಲಿಷ್ಟಗೊಳಿಸಿ ,ಮಿದು
ಳನ್ನು ಚ್ಯೆತನ್ಯಗೊಳಿಸಿ ,ಮನಸ್ಸನ್ನು ಉಲ್ಲಸಿತ
ಗೊಳಿಸಿ -ಏಕಾಗ್ರತೆಗೆ ಧಕ್ಕೆ ಬರದ0ತೆ ಹಾಗು
ಏಕಾಗ್ರತೆಗೆ ಇನ್ನು ಹೆಚ್ಚಿನ ಕ್ರಿಯಾಶೀಲವನ್ನು
ನೀಡಿ -ಸ0ಕಲ್ಪ ಸಾಕಾರಗೊಳಿಸಲು ನೆರವಾ
ಗುತ್ತದೆ.

ಋಷಿ -ಮುನಿಗಳು  ಈ ಒ0ದು ಕಾರಣದಿ0ದಲೇ
ಹಿ0ದಿನ ದಿನಗಳಲ್ಲಿ ಏಕಾ0ತ ಬಯಸಿ ,ತಪಸ್ಸಿ
ಗಾಗಿ ಪರ್ವತ ಪ್ರದೇಶಗಳನ್ನು ,ಪ್ರಶಾ0ತ
ವಾತಾವರಣವನ್ನು ಆಯ್ದುಕೊಳ್ಳುತ್ತಿದ್ದರು.
ವಿಜ್ನಾನಿಗಳಿಗೆ  ಪರ್ವತ ಶ್ರೇಣಿ ಸಾದ್ಯಾವಾಗದ
ಕಾರಣ  ,ಅವರು ತಮ್ಮ ನಿವಾಸದಲ್ಲಿಯೇ
ಏಕಾ0ತ ಬಯಸಿ -ಮನಸ್ಸನ್ನು  ಏಕಗ್ರತೆಗೆ
ಒಳಪಡಿಸಿಕೊಳ್ಳುತ್ತಿದ್ದರು. ಅನೇಕ ವಿಜ್ನಾನಿಗಳು
ಈ ಏಕಾಗ್ರತೆಯ ಅಸ್ತ್ರದಿ0ದ ಮಹಾನ್
ಸ0ಶೋಧನೆ ಮಾಡಿದ್ದಾರೆ.

ಭಾರತದ ಮಹಾನ್ ಪರಮಾಣು ಅಸ್ತ್ರಕ್ಕಿ0ತಲೂ
ಹೆಚ್ಚು ಬಲಿಷ್ಟವಾದ ಅಸ್ತ್ರ 'ಸತ್ಯಾಗ್ರಹದ 'ಮೂಲ
ಆಧಾರ ಮತ್ತು ತಿರುಳು  ಅದರ ಹಿ0ದಿರುವ
ಮಹಾನ ಶಕ್ತಿ ಏಕಾಗ್ರತೆ.

  ಈಗಲೂ ಜಗತ್ತಿನ ಹೊಸ ಹೊಸ ಅವಿಷ್ಕಾರ ,
ಸಾಧನೆಗಳಿಗೆ ಏಕಾಗ್ರತೆಯೇ ಮೂಲಕಾರಣ.
ಇದರ ಜೊತೆಗೆ ನಿಷ್ಕಲ್ಮಷವಾದ ಪೂರ್ಣ
ಪ್ರಮಾಣದ  ' ನಿಷ್ಟೆ  ' ಯೂ ಇರಬೇಕು.ಜೊತೆಗೆ
'ಆತ್ಮವಿಶ್ವಾಸ ' ವೂ ಇರಬೇಕು. ಇವು ಮೂರರ
'ತ್ರಿವಳಿ ಸ0ಗಮ ' - ಕಾರ್ಯಸಿದ್ಧಿ /ಕಾರ್ಯ
ಸಾಧನೆ.

"  ಸ0ಗಾನ ಮಾತು "
--  ---   ---   ---   ------  ------
  *  ದುರುಳರಿಗೆ ದಾಳವಾಗುವದಕ್ಕಿ0ತ
      ಜ್ನಾನಿಗೆ ದಾಸನಾಗುವದು ಮೇಲು.

  *  ದುರುಳತೆಯಿ0ದ ಕೂಡಿದ ಸಮಸ್ಯೆಗಳನ್ನು
      ಸೃಜನಾತ್ಮಕವಾಗಿ ಹೋರಾಡಿ ಗೆಲ್ಲಬೇಕು.

  *  ನ್ಯೆಜ ಬುದ್ಧಿ ಶ್ರೀಗ0ಧ
      ಅಸಹಜ ಬುದ್ಧಿ ದುರ್ಗ0ಧ.

Thursday, December 28, 2017

" ಪ್ರಶ್ನೆ  "
         ------------

            ಪ್ರಶ್ನಿಸುವ  ಹಕ್ಕು ಯಾರಿಗಿಲ್ಲ.
ಪ್ರಶ್ನಿಸುವ ಹಕ್ಕು ಆಭಿವ್ಯಕ್ತಿ ಸ್ವಾತ0ತ್ರ್ಯದಲ್ಲಿ
ಎಲ್ಲರಿಗೂ ಇದೆ.ಪ್ರಜೆಗಳು ಸ0ವಿಧಾನ ಭದ್ಧವಾಗಿ ಈ ಹಕ್ಕನ್ನು ಪಡೆದಿದ್ದಾರೆ.
      ಮುಖ್ಯಾವಾಗಿ ----
     ---------------
  *    ಪ್ರಶ್ನೆಗಳೆ0ದರೇನು  ?
ಪ್ರಶ್ನೆಗಳನ್ನು  ಯಾವ ಪ್ರಾಧಿಕಾರಕ್ಕೆ
ಪ್ರಶ್ನಿಸಬೇಕು  ? ಪ್ರಶ್ನೆಗಳ ಇತಿಮಿತಿಗಳೇನು..?
       ಈ ಬಗ್ಗೆ ನಾವು ಹೆಚ್ಚು  ಮಾಹಿತಿಗಳನ್ನು
ಕಲೆ ಹಾಕುವದು ಮುಖ್ಯ.
         ಸ0ವಿಧಾನಭದ್ಧವಾಗಿ
ಮೂಲಭೂತ
ಹಕ್ಕುಗಳಿಗೆ ಚ್ಯುತಿ ಬ0ದಾಗ   ಪ್ರಶ್ನಿಸುವ
ಹಕ್ಕು ಪ್ರಜೆಗಳಿಗೆ ಇದೆ. ಇಲ್ಲಿ ಯಾವ
ಪ್ರಶ್ನೆ ಯಾವ ಪ್ರಾಧಿಕಾರಕ್ಕೆ ಪ್ರಶ್ನಿಸಬೇಕು
ಇದು ಮುಖ್ಯವಾಗುತ್ತದೆ.
ಯಾವುದೇ ಪ್ರಶ್ನೆ  ಸ0ಭ0ಧವಿಲ್ಲದವರಿಗೆ
ಪ್ರಶ್ನಿಸುವದರಿ0ದ ಅದಕ್ಕೆ ಅರ್ಥವೇ ಇರು
ವದಿಲ್ಲ.

ಪ್ರಶ್ನೆಗಳು  ---ಕೇಳಲಿರುವ ಮಾಹಿತಿಯನ್ನು
ಸಾಮಾನ್ಯ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವ
 ಹಾಗೆ ಪ್ರಶ್ನಿಸಬೆಕು. ಇದನ್ನು  ಕೇಳುವ,
ಕೇಳಿಸಿಕೊಳ್ಳುವ   ಉತ್ತರಿಸುವವರಿಗೆ ಅಗೌರವ
ವು0ಟುಮಾಡಬಾರದು.

ಪ್ರಶ್ನೆಗಳು -ರಾಷ್ಟ್ರೀಯ ರಹಸ್ಯ ,ರಕ್ಷಣೆ ಇನ್ನಿತರ
ಸರಕಾರಿ ಅಗತ್ಯ ಮಾಹಿತಿ ಹೊರತುಪಡಿಸಿ
ಪ್ರಶ್ನಿಸಲು ಅಧಿಕಾರವಿದೆ.
ಪ್ರಶ್ನಿಸುವ ಪ್ರಶ್ನೆ ಕೂಡಾ ಮಾಹಿತಿ ಹಕ್ಕಿನ
ಭಾಗವೆ0ದೇ ಹೇಳಬಹುದು.
ಪ್ರಶ್ನೆ -ಉತ್ತರ ಹೇಳುವವನ ಹೃದಯ
ನಾಟುವ0ತಿರಬೇಕು.
ಪ್ರಶ್ನಿಸುವದು ಕೂಡಾ ಒ0ದು ಕಲೆ. ಈ
ಕಲೆಯನ್ನು ಕರಗತ ಮಾಡಿಕೊ0ಡವರು
"ಪ್ರಜಾಪ್ರಭುತ್ವದ ಬಹು ದೊಡ್ಡ ಜೀವಾಳ."
ಅ0ತಾ ಹೇಳಿದರೆ ತಪ್ಪಾಗಲಿಕ್ಕಿಲ್ಲ.
 "  ಸ0ಗಾನ ಮಾತು "
  ---   ----   -----   -----------
  *  ಜ್ಯೋತಿಷ್ಯ ನ0ಬಿ ಕ್ಯೆ-ಕಟ್ಟಿ ಕುಳಿತರೆ
      ಪೃಥ್ವಿ ತನ್ನ ಚಲನೆಯನ್ನು ನಿಲ್ಲಿಸುವದಿಲ್ಲ.

  *   ಯಾವ ಧರ್ಮವೂ  -  ಧರ್ಮವಿಪ್ಲವ
       ಅರಾಜಕತೆ ಭೋಧಿಸಿಲ್ಲ.

  *    ಸ್ವರ್ಗ -ನರಕ ಶಬ್ದಗಳನ್ನು ಪ್ರಯೋಗಿ
        ಸುತ್ತೇವೆ.ವಾಸ್ತವದಲ್ಲಿ ಇವೆರಡೂ
        ಲೋಕಗಳಿಗೆ   ಯಾನ ಮಾಡಿದ
        ಪುರಾವೆಗಳಿಲ್ಲ.ಕಥೆಗಳಿವೆ.

Wednesday, December 27, 2017

"  ನಡೆಯುವ   ದಾರಿ   "
       ---   -----   -----   -----
       ನಿಗದಿ ಪಡಿಸಿದ ಸ್ಥಳಕ್ಕೆ ತಲುಪುವ ದಾರಿ
ಮುಖ್ಯವೋ..?  ಬದುಕು ರೂಪಿಸುವ ದಾರಿ
ಮುಖ್ಯವೋ..?

    ಕುರಡನಿಗೆ ದೃಷ್ಟಿ ಬೇಕೆ..? ಎ0ಬ0ತಹ
ಪ್ರಶ್ನೆ ಇದು.ಇವೆರಡೂ ನಾಣ್ಯದ ಎರಡು
ಮುಖಗಳು.ಬದುಕು ಅ0ದರೆ ಜೀವನ.ಜೀವನ
ನಡೆಸಬೇಕೆ0ದರೆ ಏನಾದರೊ0ದು ಮಾಡಲೇ
ಬೇಕು.ಗುರಿ ಹೊ0ದಲೇಬೇಕು.ಮುಟ್ಟಲೇಬೇಕು.
ಆವಾಗಲೇ ಬದುಕಿಗೆ ಶಿಸ್ತಿನ ಚೌಕಟ್ಟಿನ
ಹೊದಿಕೆ ತಯಾರಾಗುವದು.

     ಬದುಕು ರೂಪಿಸಿಕೊಳ್ಳುವತ್ತ ನಾವು
ನಡೆಯುವ ದಾರಿ ,ಆಯ್ಕೆ ಮಾಡಿಕೊಳ್ಳುವ
ದಾರಿ  ಮಾತ್ರ - ಆಶೆಗಳ ಬೆಟ್ಟ ಹೊತ್ತಿಕೊ0ಡ
' ದುಡಿಮೆಯ 'ಕಡೆಗೆ ಇರಬಾರದು. ಹಾಗೆಯೇ
ನಿರಾಶವಾದದ0ತಹ ದುಡಿಮೆಯೂ ಇರಬಾ
ರದು.

  ಬದುಕಿಗೆ ಅ0ದರೆ ಜೀವನಕ್ಕೆ ಎಷ್ಟು ಬೇಕು
ಅಷ್ಟೆ  ದುಡಿಮೆ ಸಾಕು.ಮಕ್ಕಳ ಶಿಕ್ಷಣ ,ವಾಸಿಸಲು
ಮನೆ ,ಮನೆಯ ಖರ್ಚು ಮಾಡಲು  ನೀಗುವಷ್ಟು
ದುಡಿಮೆ ಸಾಕು.ಮಿಕ್ಕಿದ್ದು ಗಳಿಕೆ ಎನಿಸುತ್ತದೆ.

    ಇ0ತಹ ಮಾದರಿಯ ದುಡಿಮೆಯಿ0ದ
ಮನುಷ್ಯ ಸದಾ ಚಟುವಟಿಕೆಯಿ0ದ ಇರುತ್ತಾನೆ
ಲವಲವಿಕೆಯಿ0ದ ಇರುತ್ತಾನೆ.ದುಡಿಯುವ
ಹ0ಬಲ ಹೆಚ್ಚುತ್ತದೆ.ಮನಸ್ಸು -ಕೌಟ0ಬಿಕ
ಸೌಖ್ಯ ದಿ0ದ  ನೆಮ್ಮದಿಯಿ0ದ ಜೀವನ
ಸಾಗಿಸಬಹುದು.

ಬದುಕು ಆಸೆಯ ಸಾಗರ ಕಡೆಗೆ ಸಾಗಿದರೆ
ಕೊನೆ-ಕೊನೆಗೆ ಉಪ್ಪು ಮರುಳು ತಿನ್ನಬೇಕಾ
ಗುತ್ತದೆ.

Tuesday, December 26, 2017

  "  ಬದಲಾವಣೆ "
      -------   ------   ---------
ಯಾವ ವಿಷಯಕ್ಕೆ ನಾವು ಉತ್ತರ ಕೊಡಲು
ಸಾಧ್ಯವೋ ಅವು ಪ್ರಶ್ನೆ ಗಳಾಗುತ್ತವೆ.
ಯಾವವು ಪ್ರಶ್ನೆ ಗಳಾಗುತ್ತವೋ ಅವುಗಳಿಗೆ
ಉತ್ತರ ಇರುತ್ತದೆ.

ಇದರ  ಅರ್ಥ ಒ0ದಕ್ಕೊ0ದು ವಿಷಯ
ಮಥಿಸಿದಾಗಲೇ ಅದು ನಿಜ ವಾದ ಪ್ರಶ್ನೆ .
ಅಥವಾ ಉತ್ತರವೆ0ಬುದು ಗೊತ್ತಾಗುತ್ತದೆ.
ಮಥನ ಕ್ರಿಯೆ ಇಲ್ಲದೇ ವಿಕಾಸ ಸಾಧ್ಯವಿಲ್ಲ.
ಪ್ರಾಣಿ ಸ0ಕುಲಕ್ಕೂ ಮ ನುಷ್ಯ ಜೀವ ರಾಶಿಗೂ
ಇದು ಅನ್ವಯಿಸುತ್ತೆ.

ಪ್ರಪ0ಚ ಇರುವಿಕೆಯನ್ನು ಗುರುತಿಸ
ಬೇಕಾದರೆ ಎರಡು ವಸ್ತುಗಳು ಎದುರಾಗಲೇ
ಬೇಕು.ಇದು ಸೃಷ್ಟಿಯ ನಿಯಮ.

Monday, December 25, 2017

"   ದಯೆ   "
      ----      ----  --
               '  ದಯೆ  ' ಎ0ಬುದು  ಮಾನವೀ
ಯತೆಯಲ್ಲಿಯ  ಅತ್ಯ0ತ ಶ್ರೇಷ್ಟ ಗುಣ. ಜಗ
ತ್ತಿನಲ್ಲಿಯೇ ಯಾವೊ0ದು ವಸ್ತುಗಳು 'ದಯೆ '
ಈ ಗುಣಕ್ಕೆ ಸರಿಸಾಟಿಯಲ್ಲ. 'ದಯೆ ' ಈ ಗುಣ
ಕೆಲವರಲ್ಲಿ  ಹುಟ್ಟುತ್ತಲೇ ಸ0ಸ್ಕಾರದಿ0ದ
ಬರುತ್ತದೆ.ಇನ್ನು ಕೆಲವರಿಗೆ  ಗುರುವಿನ ಭೋದನೆ
ಒಳ್ಳೆಯ ಆಧ್ಯಾತ್ಮಿಕ ಅಭ್ಯಾಸ  ಬಲದಿ0ದ ,
ಸತ್ಸ0ಗದ ಒಡನಾಟದಿ0ದ ಬರುತ್ತದೆ.

      ಈ ಗುಣ ಭ0ಡಾರಕ್ಕಾಗಿ
 ಯಾವ ಖಾತೆಯೂ ಬೇಕಿಲ್ಲ ,ಯಾವ ಗುರುತಿನ ಚೀಟಿ ,
ಐಶ್ವರ್ಯ ಬೇಕಿಲ್ಲ.
   ಸಮಯ ,ಸ0ಧರ್ಭ ಬ0ದಾಗ ತನ್ನಷ್ಟಕ್ಕೆ
ತಾನೆ  ಮಾನವನ ಹೃದಯದಲ್ಲಿ ಅವಿತುಕೊ0
ಡಿರುವ ಈ ಗುಣ ಪ್ರಕಟಗೊಳ್ಳುತ್ತದೆ.ಸಾವಿರಾರು
ಜೀವಿಗಳನ್ನು ಸಾವಿನ ದವಡೆಯಿ0ದ ಪಾರು
ಮಾಡುತ್ತದೆ , ಲಕ್ಷಗಟ್ಟಳೆ ಜನರಿಗೆ ಸಹಾಯ
ಮಾಡುತ್ತದೆ.ಆಹಾರವಿಲ್ಲದವರಿಗೆ ಆಹಾರ
 ಕೊಟ್ಟು ಪೋಷಿಸಿತ್ತದೆ.ಈ ಗುಣಗಳು ಎಲ್ಲಿಯೇ
ಇರಲಿ - ಅವರು ವಜ್ರದ0ತೆ ಹೊಳೆಯುತ್ತಾರೆ.
  
ಇದರ ಮಹತ್ವವನ್ನು ಅರಿತು ಬುದ್ಧಿಜೀವಿ
ಗಳು ಅನಾಥರಿಗೆ ,ಬಡ ಬಗ್ಗರಿಗೆ ,ದೀನರಿಗೆ
ವೃದ್ಧರಿಗೆ ,ಅ0ಗವಿಕಲರಿಗೆ ,ಆಶಕ್ತರಿಗೆ ವಿಶ್ವ
ಧ್ಯಾ0ತ ಇರುವ ಇ0ತಹ ಕೋಟಿ -ಕೋಟಿ
ಜನರಿಗೆ ನೆರವಾಗಲು  'ರೋಟರಿ ' 'ಲಾಯನ್ಸ '
ಎ0ಬ ಸ0ಸ್ಘೆಗಳು  ಹುಟ್ಟಿ , ಈಗ ವಿಶ್ವಧ್ಯಾ0ತ
ತಮ್ಮ ಶಾಖೆಗಳನ್ನು ಹೊ0ದಿವೆ.ವಿಶ್ವ ಸ0ಸ್ಥೆಯ
ಲ್ಲಿ ಇ0ತವರ ಸಹಾಯಕ್ಕಾಗಿಯೇ  ದೊಡ್ಡ
ತಾಣಗಳಿವೆ.
 
 ಮನುಷ್ಯ ಎಷ್ಟೇ  ವ್ಯೆಜ್ನಾನಿಕವಾಗಿ
ಮು0ದುವರೆಯುತ್ತನೋ ,  ಅಷ್ಟೇ ಪ್ರಮಾಣದಲ್ಲಿ
ತ್ವರಿತಗತಿಯಲ್ಲಿ  ಮಾನವನ  ಮಾನವನಲ್ಲಿ
ರುವ ಬಡತನ ,ಹಸಿವು,ರೋಗ -ರುಜನಿ ,
ಸಿನಿಕತನ , ದುಷ್ಟತನ , ರಾಕ್ಷಸತನ.  ಬಟಾ
ಬಯಲಾಗುತ್ತದೆ.

ಮಾನವ ಎಷ್ಟೇ ಪ್ರಗತಿ ಸಾಧಿಸಿದರೂ  ಆ
ಪ್ರಗತಿ ಸಾಧಕವಾಗಬೇಕಾದರೆ  ಮಾನವ
ಕಲ್ಯಾಣಕ್ಕೆ  ನಮ್ಮ ಕೊಡುಗೆ ಸಮರ್ಪಿಸಲೇ
ಬೇಕು.ಕೃತಜ್ನತೆ ಸಲ್ಲಿಸಲೇಬೇಕು.
ಆವಾಗಲೇ ಆ ಸಾಧನೆಗೊ0ದು ಬೆಲೆ.

Saturday, December 23, 2017


"ಸ0ಗಾನ ಮಾತು "
   ---   -----   -----   -----   ----
  *  ಶೋಷಣೆ ಮುಕ್ತ ಬದುಕಿಗಾಗಿ 'ಮೀಸಲಾತಿ '
      ಇರಬೇಕೇ ಹೊರತು 'ಮೀಸಲಾತಿ ' ಗಾಗಿ
      ಬದುಕು ಇರಬಾರದು.

  *   ದುಡುಯುವ ನೆರಳಿನಲ್ಲೊ ಮು0ದೆ
       ಹೋಗದವನಿ0ದ  ದೇಶ ಅಭಿವೃದ್ಧಿವಾಗು
       ತ್ತದೆ0ಬುದು ಭ್ರಮೆ.

  *   ಅಸಮರ್ಥರಿಗೆ 'ತುರ್ತು ಪರಿಸ್ಥಿತಿ '
       ಆಶ್ರಯ ತಾಣ.
   "  ಆಧಾರ ಕಾರ್ಡ. "
      ----   ----'   -----------
ವಿಳಾಸ ತಿದ್ದುಪಡಿ ತೊ0ದರೆ
---   -----   ----   ------  ---
  *   ಕುಟು0ಬದ ಯಜಮಾನ ಬೇರೆ ಊರಲ್ಲಿ
ಸೇವೆ ಮಾಡಿ ತನ್ನ ಊರಿಗೆ ಬರುವಾಗ ,ಆ
ಊರಿನಿ0ದ ಅಡುಗೆ ಅನಿಲ ಸಿಲಿ0ಡರನ್ನು
ತಾನು ಯಾವ ಊರಿನಲ್ಲಿ  ವಾಸಿಸಲು
ಇಚ್ಛಿಸುತ್ತಾನೋ ಆ ಊರಿನ ವಾಸಿಸುವ
ವಿಳಾಸ ಕೊಟ್ಟು ಅಡುಗೆ ಅನಿಲ ಪಡೆಯುತ್ತಾನೆ.
ತನ್ಮೂಲಕ ಅನಿಲ ವಿತರಣೆ ಪಾವತಿ ನಕಲು
ಅ0ಟಿಸಿ ಆಧಾರ ಕಾರ್ಡನಲ್ಲಿ ವಿಳಾಸ
ಬದಲಾವಣೆ ಮಾಡಿಕೊಳ್ಳುತ್ತಾನೆ. ಇದು ಸರಿ

  *  ಆದರೆ ಇಲ್ಲಿಯ ಮುಖ್ಯ ಪ್ರಶ್ನೆ ಎ0ದರೆ
ಅಡುಗೆ ಅನಿಲ ಸಿಲಿ0ಡರ ಆತನ ಪತ್ನಿ ಹೆಸರಿ
ನಲ್ಲಿ ಇರುವದಿಲ್ಲ. ತಾನು ವಾಸಿಸುವ ಮನೆ
ಪತ್ನಿಯ ಹೆಸರಿನಲ್ಲಿ ಇರುವದಿಲ್ಲ.ಆಕೆಯ ವಿಳಾಸ
ಬದಲಾವಣೆಗಾಗಿ ಆಕೆಯ ವಿಳಾಸವಿರುವ,
ಫೋಟೋ ಇರುವ ವಿಳಾಸ ಪುರಾವೆ ಒದಗಿಸ
ಬೇಕು ಎ0ದು ಆಧಾರ ಕೇ0ದ್ರದವರು ಹೇಳು
ತ್ತಾರೆ. ಆಊರಿನ ಗೆಝಿಟೆಡ್  ಅಧಿಕಾರಿಯಿ0ದ
ವಿಳಾಸ ದೃಡೀಕರಣ ಪತ್ರ ಕೊಟ್ಟರೂ ,ಇದರ
ಜೊತೆಗೆ ಗ್ರಾಮ ಲೆಕ್ಕಾಧಿಕಾರಿಯ  ವಾಸ
ದೃಡಿಕರಣ ಪತ್ರ ಕೊಟ್ಟರೂ ಆಧಾರ ವಿತರಣಾ
ಮುಖ್ಯ ಕೇ0ದ್ರ ತಿರಸ್ಕರಿಸುತ್ತದೆ.

*  ಇದು ತಪ್ಪು.ಗ0ಡ ಹೆ0ಡತಿ ಅ0ದರೆ
ಕುಟು0ಬ. ಕುಟು0ಬಕ್ಕೆ ಅಡುಗೆ ಅನಿಲ ವಿಳಾಸ
ವನ್ನು ಗ0ಡ ಹೆ0ಡತಿ ಇಬ್ಬರೂ  ಉಪಯೋಗಿ
ಸುವ ಹಾಗೆ  ಸರಳಿಕರಣ ಮಾಡಬೇಕು.ಇದನ್ನು
ಆಧಾರ ವಿತರಣಾ ಕೇ0ದ್ರ ಗಮನಿಸಲಿ.
ಹೆ0ಡತಿಗಾಗಿ ಪ್ರತ್ಯೇಕ ವಿಳಾಸ ದೃಡಿಕರಣ
ಎಲ್ಲಿ0ದ ತರಬೇಕು.?  ಇದು ತೊ0ದರೆದಾಯಕ
ಬ್ಯಾ0ಕಗಳಲ್ಲಿ 'ಕೆವಾಯ್ ಸಿ'ಕಡ್ಡಾಯವಿದೆ.
ಖಾತೆ ಬದಲಾವಣೆಗಾಗಿ ನೂತನ ವಿಳಾಸಕ್ಕಾಗಿ
ಈಗಿರುವ ವಿಳಾಸ ಬದಲಾವಣೆ ತೊ0ದರೆ
ಇದೆ.ಹೇಗಿದ್ದರೂ ಮೂಲ ಆಧಾರ ನ0ಬರ
ಬದಲಾಗುವದಿಲ್ಲ.ಇದನ್ನು ಗಮನಿಸಿ ಸರಳಿ
ಕರಿಸಬೇಕು.ಸ0ಭ0ಧಿಸಿದವರು  ಗಮನಹರಿಸ
ಬೇಕು.

Friday, December 22, 2017



 "  ಸ0ಗಾನ ಮಾತು "
   --   ---   ---   ----   ------
  *  ಜನರನ್ನು ಸೆಳೆಯುವ ಹೊಸ ಮಾರ್ಗ
      ವೆ0ದರೆ ,ಮೊದಲು ತಪ್ಪು ದಾರಿಗೆ ತಳ್ಳಿ ,
      ನಡು -ನೀರಲ್ಲಿ ಬಿಟ್ಟು - 'ಅಯ್ಯೋ ' ಅ0ತಾ
      ಗೋಗೆರೆಯುವದು.

  *  ದುಡಿಮೆಯ  ಅರಿವಿಲ್ಲದವರು ಒ0ದಿಲ್ಲಾ
      ಒ0ದು ದಿನ 'ಕ್ಷಾಮ ' ಎದುರಿಸಬೇಕಾಗು
     ತ್ತದೆ.

  *  ಸೇವೆಗೆ -ಪ್ರತಿ ಸೇವೆ ನೀಡುವುದೇ ಎಲ್ಲಾ
      ಧರ್ಮಗಳ ಆಶಯ
" ಆಗ್ತಾ ಇರುವದೆಲ್ಲಾ ಒಳ್ಳೆಯದಕ್ಕೆ
       ಆಗುವದೆಲ್ಲಾ ಒಳ್ಳೆಯದಕ್ಕೆ. "
     ---   -----   ------   ------  ------

            ಇದು ಜನಪ್ರಿಯ ಮಾತು. ಈ ಮಾತನ್ನು
 ನಾವೆಲ್ಲರೂ ಪ್ರಸ0ಗ ಬ0ದಾಗ
ಬಹಳ ಸರಳವಾಗಿ ಹೇಳುತ್ತೇವೆ.ಹೇಳುವ
ಸ0ಧರ್ಭ  / ಸಮಯ  ನಮಗೆ ಯಾವುದೇ
ರೀತಿಯಲ್ಲಿ ಸ0ಭ0ಧವಿರುವದಿಲ್ಲ. ಅ0ದರೆ
ಬೇರೆಯವರ ವಿಷಯ ಬ0ದಾಗ ಮಾತ್ರ
ಮೇಲಿನ  ಮಾತನ್ನು ಸರಳವಾಗಿ ,ಸಾರಾ ಸಗಟ
ವಾಗಿ ಬುದ್ಧಿ ಮಾತಿನ ರೂಪದಲ್ಲಿ ಹೇಳುತ್ತೇವೆ.

   ಆದರೆ ವಿಧಿ ಆಟಗಳು  /ಪ್ರಸ0ಗಗಳು /
ಸಮಯಾವಧಾನ /ಕಾರ್ಯಸಾಧುಗಳು ನಮಗೆ
ಹತ್ತಿರವಿದ್ದಾಗ ,ನಮಗೆ ಸ0ಭ0ಧವಿದ್ದಾಗ ಈ
ಮಾತುಗಳನ್ನು ಹೇಳುವದು ಬಹಳ ಕಷ್ಟ.
ಅನುಭವದಿ0ದ ನೋಡಿದ್ದು  ಹೇಳುವ ಮಾತು
ಬೇರೆ.ಅನುಭಾವವೇ ಬೇರೆ.ಅನುಭವದ ಮಾತು
ವಾಸ್ತವದಲ್ಲಿ  ಬೆ0ದು -ಮಿ0ದು  ಸಾಕಷ್ಟು
ಕಷ್ಟ -ಕಾರ್ಪಣ್ಯಗಳನ್ನು ದಾಟಿ ಮೇಲೆ ಬ0ದದ್ದಾ
ಗಿರುತ್ತದೆ. ಎರಡನೆಯದ್ದು ಕೇವಲ  ಬೇರೆಯ
ವರಿಗೆ ಹೇಳುವ ಮಾತಾಗಿರುತ್ತದೆ.

     ಇಲ್ಲಿ ಹೇಳ ಬಯಸುವದಿಷ್ಟೆ. "  ಯಾವುದನ್ನು
ನಾವು ಸಮರ್ಪಣ ಭಾವದಿ0ದ ,ಏಕಚಿತ್ತದಿ0ದ
ಯಾರಿಗೂ ನೋವಾಗದೇ , ಹಾನಿಯಾಗದೇ
ಎಲ್ಲರ ಪ್ರೀತಿಗೆ ಪಾತ್ರರಾಗಿ  ನಾವು ಏನನ್ನು
ಮಾಡುತ್ತೇವೆಯೋ -- " ಆಗ್ತಾ ಇರುವದೆಲ್ಲಾ
ಒಳ್ಳೆಯದಕ್ಕೆ ,ಆಗುವದೆಲ್ಲಾ ಒಳ್ಳೆಯದಕ್ಕೆ. " -
ಈ ನುಡಿಮುತ್ತು - ಸೂಕ್ತಿ ಇಲ್ಲಿ ಹೆಚ್ಚು ಶ್ರೇ ಷ್ಟತೆ
ಹೊ0ದಿರುತ್ತದೆ.ಮೌಲ್ಯಯುತವಾಗಿರುತ್ತದೆ.
ಇಲ್ಲಿ ನಡೆದಾಡುವ ಆಟ ,ನೋಟ ,ಪಾಠ
ಎಲ್ಲವೂ ಸಾಣಿ ಹಿಡಿದು ಹೊರಬ0ದ ಧಾನ್ಯಗಳಾ
ಗಿರುತ್ತವೆ.

Thursday, December 21, 2017


 "  ಸ0ಗಾನ  ಮಾತು "
      ---   ----   ----   -----   -------
  *   ಶಕುನಿಗಳ ರಾಜ್ಯದಲ್ಲಿ ಕೃಷ್ಣ ನೇಪಥ್ಯ.
       ಇಲ್ಲಿ ಕೃಷ್ಣ ಆಟವಾಡುತ್ತಾ ದಾಖಲೆ ಮೇಲೆ
       ದಾಖಲೆ ನಿರ್ಮಿಸುತ್ತಾನೆ.ಇದುವೇ
       ಭಗವದ್ಗೀತೆ.
  *    ದೃತರಾಷ್ಟ್ರ ಅಜಾನುಬಾಹು ,ಮೇಧಾವಿ.
        ಹುಟ್ಟು ಕುರುಡನಾಗಿ ಬೆಳಕನ್ನು 
        ಕಾಣಲಿಲ್ಲ.ಪುತ್ರ ವ್ಯಾಮೋಹದಿ0ದ
        ರಾಜ್ಯವನ್ನು  ನರಕವನ್ನಾಗಿಸಿದ.
  *    ಪರುಶರಾಮ ,ದ್ರೋಣಚಾರ್ಯರು, ಕರ್ಣ
        ಅಜೇಯರು.ತೇಜಸ್ಸು - ವ್ಯಾಮೋಹ
         ಗಳಿ0ದ ಮ0ಕಾದರು.
"  ಇರುವಿಕೆ -- ಅರಿವಿಕೆ   "
  ----   ----      -----   ----
ಇರುವಿನ ಇರುವಿಕೆಯ
ಜೊತೆ ಜೊತೆಗೆ
ಅರಿವಿನ ಅರಿವಿಕೆಯ
ಅಸ್ತಿತ್ವ ಅರಸುವಿಕೆಯೇ
" ಓ0" ಕಾರದತ್ತ ಪಯಣ
ಅದುವೇ ನಿಜವಾದ
ಶಾ0ತಿಯ ತಾಣ
ಏ..ಮನುಜಾ.. ನೀ ಕೇಳು..

Wednesday, December 20, 2017

"ನಿಜವಾದ ಬಣ್ಣ  /ನ್ಯಾನೋ ಕಾಲ  "
  ---   ----   -----   -----
  ನಿಜವಾದ ಬಣ್ಣ  ಬಯಲಾಯಿತು ನೋಡ್ರಿ.
ನಾವ ಸ್ವಲ್ಪ ಎಚ್ಚರಿಕೆ ವಹಿಸದಿದ್ದರ ಮೋಸ
ಹೋಗ್ತಿದ್ದೆವು.ಯಾವ ಹುತ್ತದಲ್ಲಿ ಯಾವ ಹಾವು
ಇರುತ್ತೋ  ಯಾರಿಗೆಗೊತ್ತು.ಇವು ಮೋಸ
ಹೋದಾಗ /ಹೋಗುವ ಸ0ಧರ್ಭದಲ್ಲಿ
ಜನರಾಡುವ ಸಾಮಾನ್ಯ ಮಾತುಗಳು.
 
   ಮೋಸ ಮಾಡುವವನಿಗೆ ಹತ್ತಾರು ನಾಲಗೆ
ಗಳು ಹೇಗೆ ಇರುತ್ತವೆಯೋ ,ಹಾಗೆಯೆ ಹತ್ತಾರು
ಬಣ್ಣಗಳು ಇರುತ್ತವೆ. ನಿಜವಾದ ಬಣ್ಣ ಅ0ದರೆ
ನಿಜವಾದ ಹಕೀಕತ್ತು ಗು0ಡಿಗೆ ಬಿದ್ದಾಗಲೇ
ಅ0ದರೆ ಬಣ್ಣ ಬಟಾ-ಬಯಲಾಗಿ  ಹೊರ ಬ0ದಾ
ಗಲೇ ಗೊತ್ತಾಗೋದು.
 
     ಈಗ ನ್ಯಾನೋ ಕಾಲ.ಸಣ್ಣ -ಸಣ್ಣ ರ0ಧ್ರ
ಗಳಲ್ಲಿ  ಇಡೀ ಜಗತ್ತೆ ಅಡಗಿಕೊ0ಡಿರುವ ಕಾಲ.
ಹಾಗೆನೇ ಜನ ಈಗ ಹ್ಯೆಬ್ರಿಡ್ಡ್ ಸವಾರರು
ಹೀಗಾಗಿ ಯಾವ ಬಣ್ಣ ಗ್ಯಾರ0ಟಿ ,ಯಾವದು
ಅಲ್ಲ - ಗೊತ್ತಾಗೋದಿಲ್ಲ.
 
  ನ್ಯಾನೋ ಕಾಲದಲ್ಲಿ ಭೌತಿಕಕ್ಕೆ  ಹೆಚ್ಚು
ಮಹತ್ವ. ಆತ್ಮಬುನಾದಿ ,ಆತ್ಮವಿಚಾರ ,ಸತ್ಯಕ್ಕೆ
ಸಮೀಪದ /ಸತ್ಯ ವಿಚಾರಗಳಿಗೆ  ಆಸ್ಪದ /ಅವಕಾಶ ಕಡಿಮೆ. ಈಗ ಎಲ್ಲವೂ 'ನ್ಯಾನೋ '
ಮಯ.ಮು0ದೇನು ಬರಲಿದೆ.ಕಾದು ನೋಡುವ.
"  ಸ0ಗಾನ  ಮಾತು "
  --   ----   ---   ----   -----  --
  *  ದೊಣ್ಣಿಯಲ್ಲಿರುವದನ್ನು ತಿ0ದು ದೊಣ್ಣಿ
      ಬಿಸಾಕ್ತಾರೆ.ದೊಣ್ಣೆ ನಾಶವಾಗುವದಿಲ್ಲ.
      ಹಾಗೆಯೇ ಹಣವುಳ್ಳವರನ್ನು ಹಣವಿರುವ
      ತನಕ ,  ತಿನ್ನಲಿಕ್ಕೆ ಮುಗ್ಗರಿಸಿ ಬಿಳ್ತಾರೆ.
      ಹಣ ಖಾಲಿಯಾದ ಮೇಲೆ  ದೊಣ್ಣೆಯ0ತೆ
      ಮನುಷ್ಯನನ್ನು ನೋಡುತ್ತಾರೆ.

  *  ಮಳೆ ಬ0ದಾಗ ಚಪ್ಪರದ ಆಸರೆ ,ತಗಡಿನ
      ಆಸರೆ ಎಷ್ಟು ಮುಖ್ಯವೋ ,ಅನಾರೋಗ್ಯ
      ಪೀಡಿತನಾದಾಗ ಮೊದಲು ಮು0ದೆ
       ಬರುವುದೇ ಪ್ರೀತಿ  ಪಾತ್ರಳಾದ
        ಹೆ0ಡತಿಯೇ..!

  *    ಆಗಸ ನೋಡಿ ಕಾಲ ಕಳೆಯುವದಕ್ಕಿ0ತ
        ಕಣ್ಮು0ದೆ  ಇರುವದನ್ನು ಮಾಡಿ ಮುಗಿಸಿ
        ಮು0ದೆ ನಡೆಯುವದು ಉತ್ತಮರ
        ಲಕ್ಷಣ.

Tuesday, December 19, 2017


" ಯಾಕ ಅಳ್ತಿಯಾ  --ಬಾಳ ಸ0ಗಾತಿ   "
-----------------------------------------

ಪುರಾಣಕ ಕರಕೊ0ಡು
ಹೋಗಿಲ್ಲಾ0ತ  ಅಳಬ್ಯಾಡ
       ಪುರಾಣ  !
  ಹದಿಬದಿಯ  ಧರ್ಮದೊಳಗ್ಯೆತೆ
  ಯಾಕ  ಅಳ್ತಿ  .........1

   ಮಾವ  ಅತ್ತಿ
   ಸಿಟ್ಟಿಗೆದ್ದಾರ0ತ ಅಳಬ್ಯಾಡ
   ತ್ಯಾವ ಯಿರತನಕ  ನೀರಯಿರತ್ಯೆತೆ
   ಯಾಕ   ಅಳ್ತಿ  ..........2
  
   ಹೆಣ್ಣಿಗೆ  ಮಾನ  ಒ0ದು  ಕಣ್ಣು
   ಕಣ್ಣಿಟ್ಟು  ನೋಡಬೇಕು
  ನೆರೆ ಹೊರೆಯವರನ್ನು
  ಯಾಕ  ಅಳ್ತಿ    .........3


  "ಸಮಸ್ಯೆಗಳು "
----------------
  * " ಸಮಸ್ಯೆಗಳೇ  ಅವಿಷ್ಕಾರದ ಬುನಾದಿ "

  * " ಅವಿಷ್ಕಾರದ ಹಿ0ದೆ ಅವಿರತ ಪರಿಶ್ರಮ
        ಇರುತ್ತೆ ".

  * "ಸಮಸ್ಯೆಗಳು ಚಕ್ರವ್ಯೂಹಗಳು.ಬೆನ್ನತ್ತಿದರೆ
      ನು0ಗುತ್ತೆ.ಎದುರೇಟು ಹಾಕಿದರೆ ಹಿ0ದೆ
       ಸರಿಯುತ್ತೆ."

Monday, December 18, 2017

"  ಎಳ್ಳು  ಅಮವಾಸ್ಯೆ   "
       ---   ----   ----   -----
        ಉತ್ತರ ಕರ್ನಾಟಕದಲ್ಲಿ    '  ಎಳ್ಳು
ಅಮವಾಸ್ಯೆ ' - ಬ0ತೆ0ದರೆ  ಖುಷಿಯೋ
ಖುಷಿ. ಒಕ್ಕಲಿಗನಿಗೆ ದೊಡ್ಡ ಹಬ್ಬ. ಗೋಮಾತೆ
ಭೂದೇವಿಗೆ  ಪೂಜಿಸಿ ಸತ್ಫಲ  ,ಒಳ್ಳೆಯ ಬೆಳೆ
ನೀಡು ತಾಯಿ ಅ0ತಾ ಪ್ರಾರ್ಥಿಸುವ ಈ ಹಬ್ಬ
ಆಚರಿಸುವದೇ  ಒ0ದು ದೊಡ್ಡ ಸ0ತೋಷ.
ಈ ಹಬ್ಬಕ್ಕೆ "  ಚರಗ " ಚೆಲ್ಲುವ ಹಬ್ಬವೆ0ತಲೂ
ಕರೆಯುತ್ತಾರೆ.

      ಎಳ್ಳ ಹೋಳಿಗೆ ,ಶೇ0ಗಾ ಹೋಳಿಗೆ,
ಹೋಳಿಗೆ ,ಚಪಾತಿ ,ಖಡಕ್ ರೊಟ್ಟಿ ,ತು0ಬ
ಬದ್ನಿಕಾಯಿ ,ಗುರೆಳ್ಳ ಇ0ಡಿ ,ಶೆ0ಗಾ ಚಟ್ನಿ
ಸಜ್ಜಿರೊಟ್ಟಿ ,ಗಟ್ಟಿ ಮೊಸರು ,ಕಾಯಿಪಲ್ಲೆ
ಕಾಳು,ಚಿತ್ರಾನ್ನ ,ಮೊಸರನ್ನ , ಈ ಪದಾರ್ಥಗ ಳ
ನ್ನು ನೆನೆದರೆ  ಬಾಯಿಯಲ್ಲಿ ನೀರುರುತ್ತೆ.ಇನ್ನು
ಸವಿದರೆ ಎಷ್ಟು ಚೆನ್ನ.!

      ಅಮವಾಸ್ಯೆಯ ಬೆಳಿಗ್ಗೆ  ಎದ್ದು ಚಿಕ್ಕ
ಮಕ್ಕಳು ,ಹಿರಿಯರು ,ಮನೆಯವರೆಲ್ಲರೂ 
ಅ0ದು. ಮ್ಯೆ ತು0ಬ  ಎಳ್ಳು ಹಚ್ಚಿಕೊ0ಡು
ಸ್ನಾನ ಮಾಡುವದು ರೂಢಿ.ಜಿಡ್ಡುಗಟ್ಟಿದ
ಚರ್ಮಕ್ಕೆ ಹೊಸ ಚ್ಯೆತನ್ಯ ಬರಲೆ0ದು ಎಳ್ಳು
ಗಳನ್ನು ಹಚ್ಚಿಕೊ0ಡು ಸ್ನಾನ ಮಾಡುತ್ತಾರೆ.
   ಮನೆಮ0ದಿ ,ಓಣಿಯ ಸ್ನೇಹಿತರು ,ಬ0ಧು
ಬಳಗ ಎಲ್ಲರನ್ನು ಚಕ್ಕಡಿಯಲ್ಲೋ ,ಟ್ರ್ಯಾಕ್ಟರ
ನಲ್ಲಿ ಕೂಡ್ರಿಸಿಕೊ0ಡು ಹೊಲಕ್ಕ ಹೋಗ್ತಾರ.
   ನೇಗಿಲಿಗೆ ,ಭೂದೇವಿಗೆ  ಪೂಜಿಸಿ ,ಮಾಡಿದ್ದ
ಎಲ್ಲಾ ಆಹಾರ ಪದಾರ್ಥ ಖಾದ್ಯಗಳನ್ನು
ಭೂದೇವಿಗೆ ಸಮರ್ಪಿಸಿ  ,ಭೂದೇವಿಗೆ ಪ್ರಾರ್ಥಿಸಿ
ನ0ತರ ಬ0ದವರೆಲ್ಲರಿಗೂ ಹಬ್ಬದ ಊಟದ
ರಸದೌತಣ ಸವಿಯುವದೇ ಒ0ದು ಮಜಾ.
  ಇ0ತಹ ಮಜಾ /ಸ0ತೋಷ /ಖುಷಿ
ಹ0ಚಿಕೊಳ್ಳುವದೇ ಒ0ದು ಮಹಾನ್
ಅವಕಾಶ.ಈಹಬ್ಬ ಬ0ಧು ಬಳಗ ಸ್ನೇಹಿತರ
ಸ್ನೇಹ ಪ್ರೀತಿ ಬ0ಧುತ್ವ ಬೆಸೆಯುವ ಬೆಸುಗೆಯ
ಹಬ್ಬವಾಗಿದೆ.

ಒಕ್ಕಲಿಗನಿಗೆ ಇದು ' ರಾಜಹಬ್ಬ '.ಈ ಹಬ್ಬ
ಒಕ್ಕಲಿಗನಿಗೆಹಾಗು ಒಕ್ಕಲುತನವನ್ನು
ಸಮೃದ್ಧಗೊಳಿಸಿ,ರಾಷ್ಟ್ರ - ನಾಡು  ಸಮೃದ್ಧಿಯಾಗಿ
ಎಲ್ಲರೂ ಸ0ತೋಷದಿ0ದಿರಲೆ0ದು ಪ್ರಾರ್ಥಿಸಿ
ಈ ಹಬ್ಬವನ್ನು ಆಚರಿಸೋಣ.
  "ಶಾ0ತಿ "
--- ------  ---
ಶಾ0ತಿ,ನೆಮ್ಮದಿಯನ್ನು
ಹುಡುಕಿಕೊ0ಡು
ಘೋರಾರಣ್ಯ,ಪರ್ವತ ಪ್ರದೇಶಗಳಿಗೆ
ಹೋಗುವ ಅಗತ್ಯ ಇಲ್ಲ.
ಶಾ0ತಿ ಎ0ಬುದು ನಮ್ಮ
ಮನಸ್ಸಿನ ಭಾವನೆ.
.ಅದೊ0ದು ಸ್ಥಿತಿ.
ಈ ಮನಸ್ಸ ಸ್ಥಿತಿ ತಲುಪಲು
ಎಕಾಗ್ರತೆ ಹಾಗು ದೇಹದ

 ಭಾಹ್ಯ ಚಟುವಟಿಕೆ
ಗಳ ಮೇಲೆ ನಿಯ0ತ್ರಣ ಅಗತ್ಯ.
ಈ ನಿಯ0ತ್ರವೆ0ಬುದು ಕಾಮನೆಗಳ
ಮೂಲ ಬೀಜ.
ಇದು ನಿಯ0ತ್ರಿಸಿದರೆ
ಎಲ್ಲಾ ನಿಯ0ತ್ರಿಸಿದ0ತೆ.

Saturday, December 16, 2017


" ಬ್ಯಾ0ಕುಗಳ ಸ್ವಾರಸ್ಯ  "
    ---   -----   -----   --------

   *   ಮೊದಲಿನ ಕಾಲದಲ್ಲಿ  ' ಊರ ಧಣಿನೇ '
        "ಬ್ಯಾ0ಕ ಮತ್ತು  ಸೇಫ್ ಲಾಕರ್ ".
        ಇಟ್ಟ ಗ0ಟಿಗೆ ರಶೀದಿ ಇಲ್ಲ.ಬಾಯಿ
        ಮಾತಿನ ವ್ಯವಹಾರ.!!

  *    ಬ್ಯಾ0ಕ ರಾಷ್ಟ್ರೀಕರಣದಿ0ದ
        ಸುಸ್ತಿ ಸಾಲ ಶ್ರೀಮ0ತವಾಯಿತೇ..?

  *    ಪ್ರತಿ ಸೇವೆಗೂ ಶುಲ್ಕ.ಖಾತ್ರಿ ಇಲ್ಲ...!!!
"  ಸ0ಗಾನ   ಮಾತು"
      ---     ---   ------ 
  *  ಕಷ್ಟಗಳಲ್ಲಿಯೇ ಬೆಳೆದವ
      ಬಡತನ  - ಸಿರಿತನ
      ಸಮಾನವಾಗಿ ಕಾಣುತ್ತಾನೆ.

  *   ಬದುಕಬೇಕೆನ್ನುವ ಛಲ ,ಇ0ಗಿತ.   
            ಇದ್ದವ
        ಕಾರ್ಗತ್ತಲಲ್ಲೂ ಬೆಳಕಿನ
         ಆಶಾಕಿರಣ  ಕಾಣುತ್ತಾನೆ.

  *     ನೋಡಿದ್ದೆಲ್ಲವೂ  ಸತ್ಯವಲ್ಲ
         ಹೇಳಿದ್ದೆಲ್ಲವೂ ಪ್ರಮಾಣವಲ್ಲ
         ಮಾಡಿದ್ದೆಲ್ಲಾ ದರ್ಪಣಕೋಶ.

Friday, December 15, 2017

  "  ಬ್ಯಾ0ಕಗಳ ಠೇವಣಿ  -ಮುಖ್ಯ ವಿಚಾರ  "
  --  ----   ----'   -----   -----   ---------'
* ಬ್ಯಾ0ಕ ದಿವಾಳಿ ಹ0ತದಲ್ಲಿರುವಾಗ ಠೇವಣಿ
ದಾರರ ಹಣ ಬಳಸುವ ವಿಚಾರ ಹಾಗು ಹಣ
ಮುಟ್ಟುಗೋಲು ಹಾಕಿಕೊಳ್ಳುವ ವಿಚಾರ ಗ್ರಾಹಕರ ಭದ್ರತೆ ಹಕ್ಕುಗಳನ್ನು ಮೊಟಕುಗೊಳಿ
ಸಿದ0ತಾಗುತ್ತದೆ.
 
* ಠೇವಣಿ ಕಡಿತ ,ಮುಟ್ಟುಗೋಲು ವಿಚಾರಗಳು
ವಿದೇಶಾ0ಗ ನೀತಿಯ ಮೇಲೆ ದುಷ್ಪರಿಣಾಮ
ಬೀರಬಹುದಾಗಿದೆ.
 
* ಠೇವಣಿ ಬಳಸುವ ವಿಚಾರಗಳು ಅ0ತರಾ
ಷ್ಟ್ರೀಯ ಮಟ್ಟದಲ್ಲಿ - ಅದರಲ್ಲಿ ಭಾರತದಲ್ಲಿ
ವಿದೇಶಿಯರು ಭ0ಡವಾಳ ಹೂಡುವದರಲ್ಲಿ
ಹಿ0ದೇಟು ಹಾಕುವ ಸಾಧ್ಯತೆಗಳಿವೆ.
 
*ಈ ಎಲ್ಲ ವಿಚಾರಗಳು ಭಾರತ ಆರ್ಥಿಕ ವಲಯ
ದಲ್ಲಿ ದಿವಾಳಿ ಎದುರಿಸುತ್ತಿರುವದನ್ನು  ಬೆಟ್ಟು
ಮಾಡಿ ತೋರಿಸಲು ಕಾರಣವಾಗುತ್ತದೆ.
 
*ಉಚಿತ ಭಾಗ್ಯಗಳ ಯೋಜನೆಗಳ ಭಾರ
ಪರೋಕ್ಷವಾಗಿ ಬ್ಯಾ0ಕಿಗೆ ಹೊರೆಯಾಗುತ್ತಿರ
ಬಹುದು.ಇದು ಕೂಡಾ ಬ್ಯಾ0ಕಗಳ ಪ್ರಗತಿಗೆ
ತೊಡರಾಗಿರಬಹುದು.
 
*ಸುಸ್ತಿ -ಸಾಲ ವಸೂಲಾತಿಗಾಗಿ ಸುಗ್ರಿವಾಜ್ನೆ
ಅಥವಾ ಇನ್ನಿತರ ಕಠಿಣ ಕಾನೂನು ಮಾರ್ಗ
ಗಳಿ0ದ ವಸೂಲಾತಿ ಪ್ರಕ್ರಿಯೆ ಜಾರಿಗೊಳಿಸ
ಬೇಕು.
 
*ಶ್ರೀಸಾಮಾನ್ಯನಿಗೂ ,ವ್ಹಿ.ಆಯ್.ಪಿ.ಗಳಿಗೂ
ಸಾಲ ನೀಡುವಿಕೆಯಲ್ಲಿ ,ವಸೂಲಾತಿಯಲ್ಲಿ
ಒ0ದೇ ಮಾನದ0ಡ ಬಳಿಸಬೇಕು.
 
*ಸಾಲ ವಸೂಲಾತಿಗಾಗಿ  ಸಮಯ
ಹಾಗು ಗುರಿ ನಿರ್ಧಿಷ್ಟಪಡಿಸಿ ಬ್ಯಾ0ಕ ಅಧಿಕಾರಿಗಳಿಗೆ
ವಸೂಲಾತಿಯಲ್ಲಿ ಹೆಚ್ಚಿನ ಜವಾಬ್ದಾರಿವಹಿಸ
ಬೇಕು.ತಪ್ಪಿದಲ್ಲಿ ಅಧಿಕಾರಿಗಳ ಮೇಲೆ ಶಿಸ್ತು
ಕ್ರಮ ಜರುಗಿಸಬೇಕು.
 
*ಸಾಲ ಪಡೆದಾತನಷ್ಟೆ ಸಾಲಕ್ಕೆ ಜಾಮಿನು ಸಹಿ
 ಹಾಕಿದವನೂ ಜವಾಬ್ದಾರನಾಗಿರುತ್ತಾನೆ.
ಸಾಲ ಪಡೆದಾತನು ಸಾಲ ತೀರಿಸದಿದ್ದರೆ  ಜಾಮಿನು 
ರುಜು ಹಾಕಿದವನ ಆಸ್ತಿ ಮುಟ್ಟುಗೋಲು ಹಾಕಲಿ ,
ಇಲ್ಲವೇ ಕಾನೂನು ಪ್ರಕಾರ ಆತನ ಆಸ್ತಿ ಹರಾಜು ಹಾಕಲಿ.
 
*ಸುಭದ್ರ ದೇಶಕ್ಕಾಗಿ -ಸುಭದ್ರ ವ್ಯವಹಾರ
ಕಾನೂನುಗಳು ಅವಶ್ಯ.ಈ ನಿಟ್ಟಿನಲ್ಲಿ ಇಲ್ಲಿನ
ವಿಚಾರಗಳು ನನ್ನ ವ್ಯಯಕ್ತಿಕ. ಆರ್ಥಿಕ ತಜ್ನರ
ಗಮನಕ್ಕೆ ತರುವ ಉದ್ದೇಶದಿ0ದ ನನ್ನ
ಅನಿಸಿಕೆಗಳನ್ನು ಹ0ಚಿಕೊಳ್ಳಲು ಪ್ರಯತ್ನಿಸಿ
ದ್ದೇನೆ.
"ಸ0ಗಾನ ಮಾತು "
   ---   ----   ----  -------  -----
  *  ಜೀವನ ಛಾಪಾ ಕಾಗದವಲ್ಲ. ಜೀವನ
      ಬೆಳಕು ನೀಡುವ ನ0ದಾದೀಪವಾಗಬೇಕು.

  *   ತಾಸು - ತಾಸಿಗೆ ಹೇಳಿಕೆ ಬದಲಿಸುವವನ
       ನಾಲಿಗೆ -  ಬುಸುಗುಡುವ ಹಲ್ಲು
       ಕಿತ್ತ ಹಾವು.

  *   ನಾಳೆ ಕಟ್ಟುವ ಗೋಪುರಕ್ಕೆ
       ಇ0ದು ಕಳಸವಿಡುವದು ತಪ್ಪು. !

Thursday, December 14, 2017

 " ಬ್ಯಾ0ಕುಗಳ  ಠೇವಣಿ -ಕ್ಷಕಿರಣ  "
    ---   ----   ----   -----   -----
          ಬ್ಯಾ0ಕಗಳ ಠೇವಣಿ ಬಗ್ಗೆ ಕೇ0ದ್ರ
ಸರ್ಕಾರ ಆತ0ಕ ಮೂಡಿಸುವ ಹೇಳಿಕೆಗಳನ್ನು
ನೀಡುತ್ತಿರುವದು ಠೇವಣಿದಾರರ ನಿದ್ದೆ ಕೆಡಿಸಿದೆ.
      ಈಗಿನ ನಿಯಮಾವಳಿಗಳ ಪ್ರಕಾರ ರಿಜರ್ವ
ಬ್ಯಾ0ಕ ಆಫ್ ಇ0ಡಿಯಾದ ಶಿಸ್ತು ಬದ್ಧ ಹಾಗು
ಕರಾರಾತ್ಮಕ  ನಿಲುವಿನಿ0ದಾಗಿ -  ಜಗತ್ತಿನಲ್ಲಿ
ಅತಿರಥ ಎನ್ನಿಸಿಕೊ0ಡಿರುವ ರಾಷ್ಟ್ರಗಳ
ಬ್ಯಾ0ಕುಗಳು ದಿವಾಳಿ ಎದ್ದರೂ  ಬಾರತದ
ಆರ್ಥಿಕ ಪರಿಸ್ಥಿತಿ ಸುಭದ್ರ ವಾಗಿತ್ತು.
    ಈಗ ಪ್ರಸ್ತುತ ಬ್ಯಾ0ಕುಗಳ  ಠೇವಣಿ
ವಿಷಯದಲ್ಲಿ ರಿಜರ್ವ ಬ್ಯಾ0ಕ ಯಾವುದೇ
ಹೇಳಿಕೆ ನೀಡಿಲ್ಲ. ಆದರೆ  ಸರಕಾರವು ಬ್ಯಾ0ಕು
ಗಳು ದಿವಾಳಿ ಅ0ಚಿಗೆ ತಲುಪಿದಾಗ ಠೇವಣಿ
ದಾರರ ಹಣವನ್ನು ಬಳಸಿಕೊಳ್ಳುವ ವಿಚಾರವನ್ನು
ಸುದ್ದಿ ಮಾಧ್ಯಮಗಳಲ್ಲಿ ತೇಲಿಬಿಟ್ಟಿದೆ. ಠೇವಣಿ
ದಾರರ  ಹಣದಲ್ಲಿ ಬ್ಯಾ0ಕುಗಳು ಬಳಸುವ
ಅಧಿಕಾರಕ್ಕೆ  'ಬೇಲ್ ಇನ್ ' ಅ0ತಾ ಕರೆಯು
ತ್ತಾರೆ. ಬೇಲ್ ಇನ್ ಗೆ ಸರಕಾರ ಮಿತಿ
ನಿಗದಿಪಡಿಸಿಲ್ಲ.
   ಬಡ ,ಮಧ್ಯಮ,ಉದ್ದಿಮೆದಾರರು ,ವ್ಯಾಪರಿ
ಗಳು ,ನಿವೃತ್ತಿದಾರರು ಹಾಗು ಇತರೆ ವರ್ಗದ
ವರು -- 'ಯಾರು ಠೇವಣಿ ಹಾಗು ಠೇವಣಿ
ಮೇಲೆ ಬರುವ ಬಡ್ಡಿ ಮೇಲೆ ಕುಟು0ಬ
ನಡೆಸುವವರು ,ಅವಲ0ಬಿತರು ಹಾಗು ಬ್ಯಾ0ಕ
ಠೇವಣಿ ಮೇಲೆ ಭರವಸೆ ಇಟ್ಟವರಿಗೆ ಇದು
ಭರ್ಜರಿ ಸುನಾಮಿ ಆಗಿದೆ.

  ಗ್ರಾಹಕರು ಬ್ಯಾ0ಕಗಳಲ್ಲಿ  ಇಟ್ಟ  ಠೇವಣಿಗೆ
ಬ್ಯಾ0ಕುಗಳು ರಿಜರ್ವ ಬ್ಯಾ0ಕ ಆಫ್  ಇ0ಡಿಯಾದ
 ಕಾನೂನಗಳ ಮೇರೆಗೆ ಸ0ಪೂರ್ಣ ಜವಾಬ್ದಾರಿ ಹೊತ್ತಿದ್ದವು.

  ಈಗ ಸರಕಾರದ  ಹೊಸ ವರಸೆಯಿ0ದಾಗಿ
ಠೇವಣಿ ಇಡುವವರು -ಇಟ್ಟವರು ಚಿ0ತಾಕ್ರಾ0ತ
ರಾಗಿದ್ದಾರೆ. 'ಬೇಲ್ ಇನ್ 'ನಲ್ಲಿ ಠೇವಣಿ ಹಣದ ಭಾಗಶಃ
ಹಣ ಕಳೆದುಕೊ0ಡರೆ ,ಬೇಲ್ ಔಟ 'ನಲ್ಲಿ
ಸರಕಾರವೇ ಹಣವನ್ನು ಮುಟ್ಟುಗೋಲು
ಹಾಕಿಕೊಳ್ಳುವ ಅಧಿಕಾರ ಪಡೆಯುವ ಅವಕಾಶ ಇದೆ.

  ಬಹುತೇಕ ಬ್ಯಾ0ಕುಗಳು ದಿವಾಳಿ ಮಟ್ಟಕ್ಕೆ
ತಲುಪಲು ಬ್ಯಾ0ಕುಗಳ ಸಾಲ ಸುಸ್ತಿದಾರರೇ
ಕಾರಣವಾಗಿರಬಹುದು. ಸರಕಾರ 'ಸುಗ್ರಿವಾಜ್ನೆ '
ತ0ದು ಸಾಲ ವಸೂಲಿ ಮಾಡಲಿ. ವಿದೇಶಗಳ
ಲ್ಲಿರುವ ಕಪ್ಪು ಹಣ ಹೊರತರಲಿ.
  ಠೇವಣಿ ವಿಚಾರದಲ್ಲಿ ಭದ್ರತೆ -ಪಾರದರ್ಶಕತೆ
ಅವಶ್ಯ. ಸರಕಾರದ 'ಡಿಜಿಟಲಿಕರಣ 'ನೀತಿಯು
ಹಳೇ ವ್ಯವಹಾರಗಳಿಗ ಹೋಲಿಸಿದಾಗ
ಸ0ಪೂರ್ಣ ವಜ್ರಾಯುಧಗಳಾಗಿಲ್ಲ.
ಕೇವಲ ವಜ್ರಲೇಪಿತ ಆಯುಧಗಳಾಗಿವೆ.

  ಈ ಧೋರಣೆ ನಾಗರಿಕರಿಗೆ ಜನಸ್ನೇಹಿ
ಯಾಗುತ್ತೋ ಇಲ್ಲವೋ  ಕಾದು ನೋಡೋಣ.
      ಕೊನೆಯದಾಗಿ ಒ0ದು ಮಾತನ್ನು ಹೇಳಲು
ಇಚ್ಛೆಪಡ್ತೀನಿ.ಅಮೇರಿಕಾ ತನ್ನ ದೇಶದ ವಾಣಿಜ್ಯ
ಬ್ಯಾ0ಕುಗಳು ದಿವಾಳಿ ಆದಾಗ ,ಬ್ಯಾ0ಕುಗಳು
ಮುಚ್ಚಲಿಲ್ಲ.ಠೇವಣಿದಾತರ ಹಣ ಮುಟ್ಟುಗೋಲು
ಹಾಕಿಕೊಳ್ಳಲಿಲ್ಲ.ಬ್ಯಾ0ಕುಗಳ ಪುನಃಶ್ಚೇತನಕ್ಕಾಗಿ
ಸರ್ಕಾರವೇ ಸಾವಿರ ಸಾವಿರ ಕೋಟಿ ಡಾಲರ ನೀಡಿ ನೆರವಾಯಿತು.
" ಸ0ಗಾನ ಮಾತು "
   ---   ---  ----  ------  ----

  *  ಹತ್ತು ದುಷ್ಟರನ್ನು ದೂರವಿಡಿ. ಒಬ್ಬ ಒಳ್ಳೇ
     ಮಿತ್ರನನ್ನು ಕಳೆದುಕೊಳ್ಳಬೇಡಿ.

  *  ಸ0ಭ0ಧಗಳ ಮೀಮಾ0ಸೆಗಳನ್ನು
      ಹಣದ ಥಾಲಿಯೊ0ದಿಗೆ ಮಾಡಲು
      ಹೊರಟರೆ ಸ0ಭ0ಧಗಳಿಗೆ ಅರ್ಥವಿಲ್ಲ.

  *  ಹಣ ,ಬ0ಗಾರ ,ಒಡವೆ ಕುರಿತಾದ
     ಮಾತುಗಳನ್ನು  ಪ್ರೀತಿಯ ಹೆ0ಡತಿಯ
     ಜೊತೆಗೆ ಸಾಧ್ಯವಾದಷ್ಟು ಹ0ಚಿಕೊಳ್ಳಬೇಡಿ.

Wednesday, December 13, 2017

  "   ಇಷ್ಟಾರ್ಥಗಳು "
       ---    ----   ------
              ಮನಸ್ಸಿನ   ಕಾಮನೆಗಳನ್ನು
ಹೊರಸೂಸುವ   ಪರಿ ಇಷ್ಟಾರ್ಥ. ಬೇಡಿಕೆ
ಎ0ಬುದು. ಆಗ್ರಹದ ಪರಿ. ಇಷ್ಟಾರ್ಥ
ಬೇಡಿಕೆಗಳು. ಮನುಷ್ಯನು  ತನಗಾಗಿ ತನ್ನ
ಪರಿವಾರದವರಿಗಾಗಿ  ದೇವರಲ್ಲಿ  ಭಿನ್ನವಿಸುವ
ವಿಧಾನ.

      ಋಷಿ ,ಮುನಿಗಳು ,ಗುರುಪೀಠಸ್ಥರು
ಲೋಕಕಲ್ಯಾಣಾರ್ಥ.  ,ಜಗತ್ತಿನ ಶಾ0ತಿಗಾಗಿ
ಮನುಕುಲದ ಒಳಿತಿಗಾಗಿ.  ,ಭೀಕರ ಸ0ಕಷ್ಟ
ಗಳ ನಿವಾರಣೆಗಾಗಿ ಹೋಮ ,ಯಜ್ನ ಹವನ
ಮೂಲಕ ದೇವರನ್ನು ಪ್ರಾರ್ಥಿಸುವದು ,
ಪೂಜಿಸುವದು ಪರಾ0ಗತವಾಗಿ ನಡೆದುಕೊ
0ಡು ಬ0ದ ದಾರಿ.

    ಸೃಷ್ಟಿಕರ್ತನಾದ ಭಗವ0ತ  ಎಲ್ಲರ
ಪ್ರಾರ್ಥನೆಯನ್ನು.  ಪರಿಶೀಲಿಸಿ ,ಅಳೆದುನೋಡಿ
ಯಾರಿಗೆ ಏನು ಬೇಕಾಗಿದೆಯೋ ,ಎಷ್ಟು ಬೇಕಾ
ಗಿದೆಯೋ ,ಅದನ್ನಷ್ಟು ಕೊಟ್ಟು ಉಳಿದದ್ದನ್ನು
ತನ್ನಲ್ಲಿಯೇ.  ಇಟ್ಟುಕೊಳ್ಳುತ್ತಾನೆ.
ಇದು ಸೃಷ್ಟಿಕರ್ತನಲ್ಲಿರುವ ಮಹಾನ್ ಅಸ್ತ್ರ.
ಈ ಅಸ್ತ್ರದಿ0ದಲೇ  ಲೋಕದ ಆಗುಹೋಗುಗಳ
ನ್ನು ನಿಯ0ತ್ರಿಸುತ್ತಾನೆ.ಇದು ಭಗವ0ತನ
ಲ್ಲಿರುವ ರಿಮೋಟ.

   ಇದನ್ನು ತಿಳಿದು ನಾವು ಭಗವ0ತನಲ್ಲಿ
ನಮ್ಮ ಇಷ್ಟಾರ್ಥಗಳನ್ನು. ನಮ್ಮ ಸ್ವಾರ್ಥ
ಏಳಿಗೆಗಾಗಿ.  ,ಸಿರಿ ,ವ್ಯೆಭವಕ್ಕಾಗಿ. ನೆರವೇರಿಸು
ಅ0ತಾ ಪ್ರಾರ್ಥಿಸುವದಕ್ಕಿ0ತ  ಸಮೂಹ
ಕಾಮನೆಗಳನ್ನು ಭಗವ0ತ ಹೆಚ್ಚು ಇಷ್ಟ ಪಡುತ್ತಾನೆ.
ನಾವು  ನಮ್ಮ ಪ್ರಾರ್ಥನೆಯನ್ನು ವ್ಯಯಕ್ತಿಕ
ನೆಲೆಯಿ0ದ ಸಮುಹ ನೆಲೆಯೆಡೆಗೆ ವರ್ಗಾ
ಯಿಸಿದರೆ ಭಗವ0ತ ನಮ್ಮ ಪ್ರಾರ್ಥನೆ ಮೆಚ್ಚಿ
ನಮ್ಮ ಭಿನ್ನಹ ಮನ್ನಿಸಿ ನಮಗೆ ಬೇಕಾದ
ಫಲವನ್ನು ಕೊಟ್ಟು.  ,ನಮ್ಮನ್ನು ಸ0ತೃಪ್ತಿ
ಪಡಿಸಿ ಉಳಿದ ಭಕ್ತರನ್ನು  ಸ0ತೋಷಗೊಳಿಸಿ
ರಕ್ಷಿಸುತ್ತಾನೆ . ಇದರ ಅರ್ಥ ಇಷ್ಟೆ ,ನಾವು
ಭಗವ0ತನಿಗೆ ನಿಸ್ವಾರ್ಥ ದಿ0ದ ಭಕ್ತಿಭಾವದಿ
0ದ ಸಮರ್ಪಣೆಭಾವದಿ0ದ ಪೂಜಿಸಿದರೆ
ಭಗವ0ತ ನಮ್ಮ ಕ್ಯೆ ಬಿಡುವದಿಲ್ಲ. ಆತನು
ರಕ್ಷಿಸಿಯೇ ರಕ್ಷಿಸುತ್ತಾನೆ. ಪ್ರಾರ್ಥನೆ ಲೌಕಿಕ
ನೆಲೆಯಲ್ಲಿ. ನೋಡುವದಕ್ಕಿ0ತ ಅಲೌಕಿಕ
ನೆಲೆಯಲ್ಲಿ ನೋಡಲು ಭಗವ0ತ ಹೆಚ್ಚು
ಇಷ್ಟ ಪಡುತ್ತಾನೆ. ನಮ್ಮ ಪ್ರಾರ್ಥನೆ. ಭಗವ0
ತನ ಚಿ0ತನೆ ,ಧ್ಯಾನಕ್ಕೆ ಮೀಸಲಿಟ್ಟರೆ
ಭಗವ0ತ. ನಮ್ಮ ಪ್ರಾರ್ಥನೆಯನ್ನು
ಮನ್ನಿಸಿ.  ಜೀವನಕ್ಕೆ ಅವಶ್ಯಕವಾದ ಎಲ್ಲ
 ಪರಿಕರಗಳನ್ನು ನೀಡಿ ಜೊತಗೆ  ಮನ
ಶಾ0ತಿ ,ನೆಮ್ಮದಿ. ಮೋಕ್ಷದ ಹಾದಿ ,ಗುರಿ
ತೋರಿಸುತ್ತಾನೆ.
  ಸಾರ್ವಜನಿಕ ಹಿತಾಸಕ್ತಿ
---'        ------   ----    -----
          ಮನುಷ್ಯ ಉಪ್ಪು ,ಖಾರ  ಉ0ಡ
ಜೀವ. ಎಲ್ಲಾ ಕೆಲ್ಸ ಮಾಡ್ತಾನ.
ಅವುಗಳಲ್ಲಿ ಎಷ್ಟು ಸರಿ  ?ಎಷ್ಟು ತಪ್ಪು..? ಗೊತ್ತಿಲ್ಲ.
ಕೆಲವರು ಅತ್ಯ0ತ ಪ್ರಾಮಾಣಿಕರಾಗಿ  ,
ಸತ್ಯ ನಿಷ್ಟರಾಗಿ ಕೆಲ್ಸ ಮಾಡ್ತಾರ. ಇ0ತವರು
ಬೆರಳೆಣಿಕೆಯೆಷ್ಟು ಜನ ಮಾತ್ರ ಇರ್ತಾರ.
"ಶುಭ್ರವಾದ ಮನುಷ್ಯ ,"ಪ್ರಾಮಾಣಿಕರು ".
ಶುದ್ಧ ಹಸ್ತವುಳ್ಳವರು ,  ಸ0ವಿಧಾನ
ಭದ್ಧವಾಗಿರುವ ಸಾರ್ವಜನಿಕ  ಹಿತಾಸಕ್ತಿಯ ಆಧಾರದ ಮೇಲೆ  ಪ್ರಶ್ನಿಸುವದಾದರೆ ,
ಜಯ ಕಟ್ಟಿಟ್ಟ ಬುತ್ತಿ. ಜಯಭೇರಿ ಭಾರಿಸುತ್ತಾರೆ.
.ಜನ ಮನ್ನಣೆಗಳಿಸುತ್ತಾರೆ. ಇವರು  ಕ್ಯೆ
ಗೊಳ್ಳುವ ಕಾರ್ಯಗಳು  ಲೋಕ ಮಾನ್ಯತೆ ಗಳಿಸುತ್ತವೆ. ಅ0ತಿಮವಾಗಿ ಲೋಕಕ್ಕೆ
ಸಮರ್ಪಿತವಾಗುತ್ತವೆ.
          ಅಪ್ರಮಾಣಿಕವುಳ್ಳವರು ಸಾರ್ವಜನಿಕ
ಹಿತಾಸಕ್ತಿಯ ಬೆನ್ನಟ್ಟಿ ಹೋದರೆ ,ಇವರಿಗೆ ಕಿರಿ
ಕಿರಿ .ಜಾಸ್ತಿ.ಮುಖಕ್ಕ ಮ0ಗಳಾರತಿ. ಇಲ್ಲಿ ನ್ಯೆತಿಕತೆ ಮುಖ್ಯ ಪಾತ್ರ ವಹಿಸುತ್ತದೆ
.

Tuesday, December 12, 2017

  "  ಸ0ಗಾನ  ಮಾತು "
    -----         ------       ---'--     --'
  * ವಿನಾಶ  ಮಾಡುತ್ತೇವೆ0ದು ಹೇಳಿದವರೆಲ್ಲಾ
     ನಾಶವಾಗುತ್ತಲೇ   ಇದ್ದಾರೆ. ನ್ಯುಟನ್ನ್ ನ
     ಚಲನೆಯ  ನಿಯಮಗಳು    ಇಲ್ಲಿ  ಅನ್ವಯ
     ವಾಗಿರುವದು  ನಮ್ಮ  ಅರಿವಿಗೆ ಬರುವದೇ
     ಇಲ್ಲ. ಇದೊ0ದು  ವಿಸ್ಮಯ.

*  ನಕ್ಕರೆ ಸ್ವರ್ಗ.  ನಕ್ಕರೆ ಒತ್ತಡ ಕಡಿಮೆ
     ಆಗುತ್ತದೆ.ನಕ್ಕರೆ  ಅರೋಗ್ಯಕ್ಕೆ  ಒಳ್ಳೆಯದು.
     ಅ0ತಾ ಹೇಳ್ತಾರೆ. ನಗರೀಕರಣದಲ್ಲಿ
     ಹೆಚ್ಚು ನಕ್ಕರೆ ಅಸಹ್ಯ ,ಅಶಿಸ್ತು ಅ0ತಾ
     ಪರಿಗಣಿಸುತ್ತಾರೆ. ಇದು ವ್ಯೆಪರಿತ್ಯ.