Monday, December 11, 2017

ಚರ್ಚೆ
______________

ನಾವು ಇತ್ಯರ್ಥ ಪಡಿಸಬೇಕಾದ ಸಮಸ್ಯೆಗಳ
ವಿಷಯಗಳನ್ನು
ಪುರಾತನ ಕಾಲದಿ0ದ ಸಾಮಾನ್ಯವಾಗಿ
ಸಾಮ ಭೇದ ದ0ಡೋಪಾಯಗಳಿ0ದ
ವ್ಯಾಜ್ಯಗಳನ್ನು ಬಗೆಹರಿಸುವ ಒ0 ದು
ರೂಡಿ ನಮ್ಮಲ್ಲಿ ಬೆಳೆದು ಬ0ದಿದೆ.
ಪ0ಚಾಯ್ತಿ ಕಟ್ಟೆ,ಸಮಾಜ ನ್ಯಾಯ ಸಮಿತಿ.
ಹಳ್ಳಿ ಹಿರಿಯರು.ಓಣಿ ಹಿರಿಯರು
ಹೀಗೆ ನಾನಾ ಪ್ರಕಾರದ ಗು0ಪಿನ
ತೀರ್ಮಾನಗಳಿ0ದ ಸಮಸ್ಯೆಗಳನ್ನು ಪರಿಹರಿಸಿ
ಕೊಳ್ಳುವ ರೂಡಿ ನಮ್ಮಲ್ಲಿದೆ.
ಪರಸ್ಪರಚರ್ಚೆ ಮುಖ0ತರ ನಮ್ಮಲ್ಲಿರುವ
 ಭಿನ್ನಾಭಿಪ್ರಾಯಗಳನ್ನು ತೊಲಗಿಸಿ
ನ್ಯಾಯ ಪಡೆಯುವ ವಿಧಾನ ಸಾಮ.

ಪರಸ್ಪರ ಕೊಡೋ ತೊಗೊಳ್ಳೊದರಿ0ದ,
ಅರ್ಥಿಕ  ಪರಿಹಾರ ಗಳಿ0ದ .ನಾನಾಬಗೆಯಿ0ದ
ಎದುರಾಳಿಗಳ ಮನೋ ವಾ0ಛೆಅನುಸರಿಸಿ
ಪಡೆಯುವ ತೀರ್ಮಾನಗಳು
ಬೇಧ.
ಈಎರಡು ಉಪಾಯಗಳಿ0ದ ನ್ಯಾಯ ವಿಫಲ
ವಾದಾಗ ಅನುಸರಿಸುವ ವಿಧಾನ ದ0ಡ.
ಇವು ಪರಸ್ಪರ ತಾಕತ್ತಿನ ಮೇಲೆ ಪರಿಹಾರ
ಕ0ಡುಕೊಳ್ಳಬಹುದು.

ಬಹುತೇಕ ಕೆಲವೊ0ದು ಸನ್ನಿವೇಷಗಳಲ್ಲಿ
ವಿದೇಶಾ0ಗ ನೀತಿಯಲ್ಲಿ ಪರಸ್ಪರ  ಚರ್ಚೆ
ಮೂಲಕ ದೇಶಗಳು ತಮ್ಮ ಸಮಸ್ಯೆಗಳನ್ನು ಪರಹರಿಸಿಕೊಳ್ಳುತ್ತವೆ.
ಇದು ಸಹಕಾರಕ್ಕೆ ನಾ0ದಿ.
ಇನ್ನು ಕೆಲವು ಪ್ರಕರಣಗಳಲ್ಲಿ.
ಸರಕಾರದ ಮೇಲೆ ಪ್ರಭಾವಬೀರುವ0ತಹ
ವ್ಯಕ್ತಿಗಳ ಮೇಲೆ ಮೊಕೊದ್ದಮೆ ಇದ್ದರೆ
ಅವರವರ ಭುಜಬಲದಿ0ದಸಾಕ್ಷಿಗಳನ್ನು
ತಿರುಚಿ  ಆರೋಪ ಮುಕ್ತ ರಾಗುತ್ತಾರೆ.
ಇಲ್ಲಿ ನ್ಯಾಯ ಶಕ್ತಿ,ಪ್ರಭಾವ ಆಧಾರಿತ.ಅಸಹಾಯಕರು
ಮುಗ್ಧರು ಇ0ತಹ ಪ್ರಕರಣಗಳಲ್ಲಿ ಬಲಿ.
ಚರ್ಚೆ ಮೂಲಕ ನ್ಯಾಯದಾನ ಈಗಲೂ
ಸರ್ವ ಸಮ್ಮತ.ಕಾನುನುಗಿ0ತ ಸ0ಭ0ಧಗಳು
ಸಾಮಾಜಿಕ ಜವಾಬ್ದಾರಿಗಳು ಹೆಚ್ಚು
ಕೆಲಸ ಮಾಡುತ್ತವೆ.

No comments: