Saturday, October 31, 2015

   "ಸ0ಗಾನ ಮಾತು"
  
ವಸ0ತ ಋತುವಿನ ಆರ0ಭದಲ್ಲಿ
ಗೋಚರವಾಗುವ ಹನಿ ಭಾಷ್ಪಗಳು
ಸದ್ವಿಚಾರಗಳ  ಯೌವನವನ್ನು
ತೆರೆದಿಡುವ ಗ್ರ0ಥಭ0ಡಾರವಾಗಲಿ.

" ಸಜ್ಜನರ ಸ0ಗ ಸವಿಜೇನು ಸವಿದ0ತೆ ."

ಸ0ತೋಷದ  ಗುಟ್ಟು ವ್ಯಕ್ತಿತ್ವದಲ್ಲಿದೆ
ನಿಜ ವ್ಯಕ್ತಿತ್ವ  ಸಧ್ಗುಣಿಗಳ  ಖಣಿ.

Friday, October 30, 2015

 "ಸ0ಗಾನ   ಮಾತು"

ಪರಿಪೂರ್ಣತೆಯ  ಭರದಲ್ಲಿ  
"ಶೂನ್ಯ"ವನ್ನು ಮರೆಯುತ್ತೇವೆ
ಶೂನ್ಯ ಸ0ಪಾದನೆಯೇ  
"ಪರಿಪೂರ್ಣತೆ ".

ಅರುಣೋದಯದ  ಪ್ರಖರ
ಕಿರಣಗಳಲ್ಲಿಯೇ  ಜಗತ್ತಿನ
ಚಲನಶೀಲತ್ವ  ಅಡಗಿದೆ.
   
 ಕಲ್ಲು  , ಮಣ್ಣು  , ಭೂಮಿ
ಇವು ಬೌತಿಕ  ರಕ್ಷಾ ಕವಚಗಳು  

Thursday, October 29, 2015

"ಸ0ಗಾನ  ಮಾತು "

ಅತೀಯಾದ  ಮುಗ್ಧತನವೂ
ಬಲ್ಲವನೆ0ಬ ವಾಚಾಳಿತನವೂ
ಮನುಷ್ಯನನ್ನು  ಇಕ್ಕಟ್ಟಿನಲ್ಲಿ
ಸಿಲುಕಿಸುತ್ತವೆ.

"ಮನುಷ್ಯ  ಸಿದ್ಧಾ0ತಗಳ  ದಾಸ ."

Wednesday, October 28, 2015

 "ಸಮಸ್ಯೆಗಳು "

" ಸಮಸ್ಯೆಗಳೇ  ಅವಿಷ್ಕಾರದ ಬುನಾದಿ "
ಕ್ಷಮೆ

ಬೇರೆಯವರ ತಪ್ಪುಗಳನ್ನು ಕ್ಷಮಿಸುವದು
ಮಾನವೀಯತೆಯ ದೊಡ್ದಗುಣ
ದುರಾದೃಷ್ಟ

ದುರಾದೃಷ್ಟ ಬೆನ್ನತ್ತಿ ಬರಲು
"ಕೋಲು ಕೂಡಾ ಹಾವಾಗುತ್ತದೆ "

Tuesday, October 27, 2015

  "ಒಳ್ಳೆಯ  ಸರಕಾರ  "
    
ಯಾವುದೇ   ಚುನಾಯಿತ
ಸರಕಾರ  ,  ತನ್ನ  ಪಕ್ಷದ  ಅ0ತರಿಕ
ಸಮಸ್ಯೆಗಳನ್ನು  ಇಲ್ಲಿ0ದ - ಕೆ0ಪುಕೋಟೆಗೆ ,
ಕೆ0ಪುಕೋಟೆಯಿ0ದ -ಇಲ್ಲಿಗೆ  ,  ವರ್ಗಾಯಿಸು
ವದರಿ0ದ   ವಿಳ0ಬ  ನೀತಿ  ಅನುಸರಿಸಿ
ದ0ತಾಅಗುತ್ತದೆ. ಹಾಗು  ಸರಕಾರ  ತನ್ನ
ಅತ್ಯಮೂಲ್ಯ ಸಮಯ  ಆಡಳಿತಕ್ಕೆ ಸೀಮಿತ
ಗೊಳಿಸದೇ  ಪಕ್ಷದ  ಹಿತಾಸಕ್ತಿಗೆ ಬಳಿಸಿಕೊ0ಡು
ಸಾರ್ವಜನಿಕ  ಹಣ  ದುರುಪಯೋಗ ಪಡಿಸಿ
ಕೊ0ಡ   ಆರೋಪಕ್ಕೆ  ಎದುರಾಗುವ
ಪ್ರಸ0ಗಗಳನ್ನು ಬರದ0ತೆ ನೋಡಿಕೊಳ್ಳುವ
---" ನಾಯಕತ್ವದ  ಸರಕಾರ  "   ಜನಾಭಿ
ಪ್ರಾಯದಲ್ಲಿ  "ಒಳ್ಳೆಯ ಸರಕಾರ " ಎ0ದೆನಿ
ಸಿಕೊಳ್ಳುತ್ತದೆ.

Monday, October 26, 2015

"ಭಾಗ್ಯಗಳ ಯೋಜನೆಗಳು."
     
ಭಾಗ್ಯಗಳ   ಯೋಜನೆಗಳ
ಸುರಿಮಳೆಗಾಗಿ  ಎರಡುವರೆ  ವರ್ಷ ತೆಗೆದು
ಕೊ0ಡ  ಸರಕಾರ ಅದರ  ಅನುದಾನ  ವೆಚ್ಚ
ಕ್ರೋಢಿಕರಣಕ್ಕಾಗಿ ಜನರ  ಮೇಲೆ  ತೆರಿಗೆ
ವಿಧಿಸದೇ  ಆದಾಯ  ಉತ್ಪನ್ನ ಯೋಜನೆಗಳ
ಕರಡು  ಸಿದ್ದಗೊಳಿಸಿದ್ದೇ  ಆದರೆ  ...,
ಸರಕಾರಕ್ಕೆ  ನಾವೊ0ದು ಸಲಾ0
ಹೇಳಲೇಬೇಕು  .!

ಭಾಗ್ಯಗಳ     ದಾನ ಶೂರತ್ವಕ್ಕಾಗಿ
ಉತ್ಪಾದನಾ  ಸಾಮರ್ಥ್ಯ  ಯೋಜನೆಗಳು
ಹಾಗು  ಅವಕಾಶಗಳು  ಲಭ್ಯವಿರದಿದ್ದಲ್ಲಿ
ಆರ್ಥಿಕ  ಹಿ0ಜರಿತ ಎದುರಿಸಬೇಕಾಗುತ್ತದೆ.
ಇದು ದಿವಾಳಿಯ ಮುನ್ಸೂಚನೆಯ   ಮೊದಲ
ಮೆಟ್ಟಿಲು.

ಅಖ0ಡ  ಕರ್ನಾಟಕದ ಕನ್ನಡಿಗರ
ಬೃಹತ್  ಸಿ0ಹಾಸನದ  340  ಮೆಟ್ಟುಲುಗಳು
  " ಈ  ದಿವಾಳಿಯ   ಸುನಾಮಿ   "
ಅಪ್ಪಳಿಸದ0ತೆ  ರಾಜ್ಯವನ್ನು  ರಕ್ಷಿಸಲಿ.

---------------------------
  ಮೆಟ್ಟಿಲು
-----------
     28 -ಎ0.ಪಿ.
     12 -ರಾ.ಸ
    225 -ಎ0.ಎಲ್.ಎ
     75 - ವಿ.ಪ.ಸ

----------------
   340


  


  

Sunday, October 25, 2015

 ಸ0ಗಾನ   ಮಾತು 

" ನೀರಿಲ್ಲದ   ಭಾವಿಯೊಳಗೆ
ಕಾಲುವೆ  ನಿರ್ಮಿಸಲು
ಹೊರಟ0ತಿವೆ  ---ಇ0ದಿನ
ಯೋಜನೆಗಳು  "

ಗ್ರಾಮ  ಪ0ಚಾಯತಿಯಿ0ದ
ಹಿಡಿದು  ಲೋಕಸಭೆಯವರೆಗೂ
ಜಾತಿ ರಾಜಕಾರಣವೇ  ಇದೆ.
ಜಾತ್ಯಾತೀತವೆನ್ನುವದಾದರೂ
ಎಲ್ಲಿದೆ   ...?
 "ಭಾವನೆಗಳು   "

 "ಭಾವನೆಗಳು ಮತ್ತು ಸತ್ಯ ಶೋಧನೆಯ
ಮಧ್ಯೆ ನಮ್ಮ ಜೀವನ ನಿರ0ತರ ಸಾಗುತ್ತ ಇರುತ್ತದೆ.

ಇವುಗಳ  ಮಧ್ಯೆ  ಯಾರು  ಹೆಚ್ಚು
ಎನ್ನುವ  ಸ0ಧರ್ಭದಲ್ಲಿ ಸ0ಘರ್ಷಗಳು
ಹುಟ್ಟಿಕೊಳ್ಳುತ್ತವೆ. "ಕಾಲ"  ಇವುಗಳನ್ನು
ನಿಯ0ತ್ರಿಸುವ  ನ್ಯಾಯ ಪ್ರಾಧಿಕಾರ "

Saturday, October 24, 2015

ಸೃಷ್ಟಿ

ಹಗಲು  ,ರಾತ್ರಿ
ದಿನ ನಿತ್ಯದ ಸೃಷ್ಟಿಯ  ಕಾರಣಗಳು.
ಯಾರು  ಯಾವುದನ್ನು ತಡೆಯಲು ಆಗುವದಿಲ್ಲ.
ಹಾಗೆಯೇ ಬೆಳಕಿನ ನಿಯಮಗಳು.
ಒ0ದು ಬೆಳಕು ಒಬ್ಬನಿಗೆ ಬಾಳನ್ನು ನೀಡಿದರೆ
ಇನ್ನೊ0ದು ಮತ್ತೊಬ್ಬನಿಗೆ ಕೊರಗಾಗಿರುತ್ತದೆ.
ಸೃಷ್ಟಿ ಮತ್ತು ಜೀವನ ಪಥ ಒ0ದೇ..
ಆದರೂ ತಮ್ಮ ಕಾಯಕಗಳಲ್ಲಿ ಒಬ್ಬರಿಗೊಬ್ಬರು  ಅಪರಿಚಿತರು .

Friday, October 23, 2015

"ವಿಜಯ ದಶಮಿ "

ದುಷ್ಟ ಶಕ್ತಿಗಳ  ಮೇಲೆ
ವಿಜಯ  ಮೊಳಗಿಸಿದ ದಿನ  ವಿಜಯದಶಮಿ.
ವಿಶ್ವದಲ್ಲಿಯ   ಗಾಢಾ0ಧಕಾರವನ್ನು
ತೊಲಗಿಸಿ , ಪ್ರಕಾಶಮಾನವಾದ ಬೆಳಕನ್ನು
ನೀಡಿ  ನಮ್ಮನ್ನು ಸಲಹು ಎ0ದು ಜಗದಾ0ಬೆ
  ಶ್ರೀ ಚೌಡೇಶ್ವರಿಯಲ್ಲಿ  ಅನನ್ಯವಾಗಿ
  ಪ್ರಾರ್ಥಿಸುವ  ಸುದಿನ  ಇದು.

ಅ0ದು ರಾವಣಾಸುರ ,ರಕ್ತಬೀಜಾ
ಸುರ  ,ಮಹಿಷಾಸುರ ,ಕೀಚಕ , ಮಧು-ಕ್ಯೆಟಭ
ರಿದ್ದರು.ಇವರು ದುಷ್ಟ ಶಕ್ತಿಗಳ ಪ್ರತೀಕ. ಆ 
ಶಕ್ತಿಗಳು  ಮನುಷ್ಯನಲ್ಲಿವ್ ಈಗಲೂ ಇವೆ.
ಸ್ಯೆತಾನ  ರೂಪದಲ್ಲಿವೆ.

ಇ0ತಹ  ಶಕ್ತಿಗಳ  ಅಟ್ಟಹಾಸವನ್ನು
ಆಡಗಿಸಲೆ0ದೇ  ದೇಶದೆಲ್ಲಡೇ ಈ ನವರಾತ್ರಿ
ಮಹೋತ್ಸವವನ್ನು ಆಚರಿಸುವ ಪದ್ಧತಿ
ರೂಢಿಯಲ್ಲಿ ಬ0ದಿದೆ.ದುಷ್ಟ ಶಕ್ತಿಗಳ ನಿರ್ನಾಮ
ಜೊತೆಗೆ  ಮನುಷ್ಯನ ನಾಗರಿಕತೆಗೆ ಪ0ಚಮ
ವೇದಗಳಾದ  ಸಾಹಿತ್ಯ ,ಕಲೆ  , ಸ0ಗೀತ , 
ವಿಜ್ನಾನ , ಸ0ಸಕೃತಿ, ಇವುಗಳ
ಪುನರ್ ಜೀವನ ,ಪುನರ್ ಸ್ಮರಣೆಯ ಉತ್ಸವ
ಇದಾಗಿದೆ. ಅದಕ್ಕೆ0ದೇ ಇವುಗಳ ಸ0ಗಮ
ಇತಿಹಾಸ ಪ್ರಸಿದ್ಧವಾದ "ಮ್ಯೆಸೂರು-ದಸರಾ"
ಉತ್ಸವ.

ಈ ಹಿನ್ನಲೆಯೊ0ದಿಗೆ ವಿಜಯ
ದಶಮಿಯ0ದು ಆಚರಿಸುವ ನಾಡಹಬ್ಬ
"ದಸರಾ" ದ ಪ್ರಯುಕ್ತ ಸಮಸ್ತ ಕರುನಾಡ
ಕನ್ನಡ ಕುಲ ಕೋಟಿಗೆ ಹಾರ್ಧಿಕ ಶುಭಾಶಯ
ಗಳು.ಕನ್ನಡಾ0ಬೆಯ ಕನ್ನಡ ಹಿರಿಮೆ ,ಗರಿಮೆ,
ಸಿರಿಯನ್ನು ಪಸರಿಸುವ  ಶಕ್ತಿಯನ್ನು
ನಮ್ಮೆಲ್ಲರಿಗೂ ನೀಡಲಿ.

Thursday, October 22, 2015

 ಶುಭಾಶಯಗಳು  "

ಕನ್ನಡ  ನಾಡಿನ  ಸಮಸ್ಥ
  ಭಾ0ಧವರಿಗೆ  ಆಯುಧ ಪೂಜೆ ಹಾಗು
  ದಸರೆಯ   ಹಾರ್ಧಿಕ  ಶುಭಾಶಯಗಳು.

 ಕನ್ನಡ ನಾಡು 
  ಎದುರಿಸುತ್ತಿರುವ  ಎಲ್ಲಾ ಸ0ಕಷ್ಟಗಳನ್ನು
  ಪರಿಹರಿಸಿ  ,   ನಾಡ  ಜನತೆಗೆ  ಶಾ0ತಿ  ,
   ನೆಮ್ಮದಿ  , ಸಹಬಾಳ್ವೆಯ  ಆಶೀರ್ವಾದದ
   ಕೃಪೆ ತೋರಿ ಆದಿಶಕ್ತಿ  ಭುವನೇಶ್ವರಿಯು
   ಸಮಸ್ಥ   ಭಾ0ಧವರಿಗೂ ಸ0ಪತ್ತು
  ಆಯುರಾರೋಗ್ಯ  ನೀಡಲಿ.

    ವಿಜಯ ನಗರ  ಸಾಮ್ರಾಜ್ಯದ  ಗತ
   ವ್ಯೆಭವವನ್ನು   ಮರುಕಳಿಸುವ0ತೆ
   ಮಾಡಲಿ  ಎ0ದು ಪ್ರಾರ್ಥಿಸುವೆ.


   ಮತ್ತೊಮ್ಮೆ ಸರ್ವರಿಗೂ
  ಹಾರ್ಧಿಕ ಶುಭಾಶಯಗಳು.

Wednesday, October 21, 2015

"  ಸಾತ್ವಿಕ   "
   
ಕಥೆ    ಹೇಳುವರಾಗಲೀ  ...
ಕಥೆ    ಕೇಳುವರಾಗಲೀ  ....
ಇವರಿಬ್ಬರ
ನಡುವೆ ಅನ್ಯೋನ್ಯ ಸ0ಭ0ಧವಿರುತ್ತದೆ .
ಅದುವೇ  ಸತ್ಯದ  ಬೆಳಕು  ...!!.
ಬೆಳಕು  ಸಾತ್ವಿಕವಾಗಿ 
ಎಲ್ಲಿಯವರೆಗೆ    ಪಸರಿಸುತ್ತದೋ
ಅಲ್ಲಿಯವರೆಗೆ    ಪ್ರಕಾಶಮಾನವಾಗಿ
ವಿರಾಜಮಾನವಾಗಿರುತ್ತದೆ.



ಸಾತ್ವಿಕತೆಯ ಶಕ್ತಿ ಕು0ದಲು ...
ಸುತ್ತಲೂ  ಗಾಢಾ0ಧಕಾರ  ಕತ್ತಲು
ಆವರಿಸುತ್ತದೆ.
ಜಗತ್ತಿನ   ಚಲನ  ವಲನಗಳು
ಮ0ದಗತಿಯಲ್ಲಿ  ಚಲಿಸುತ್ತವೆ.
"ಸಾತ್ವಿಕತೆ  ದೀಪಕ್ಕೆ
ತ್ಯೆಲವಿದ್ದ0ತೆ .."
ಕಲಬೆರಕೆಯಾಗಲು
ಪ್ರಳಯವನ್ನು  ಅಹ್ವಾನಿಸಿದ0ತೆ..!!.

Monday, October 19, 2015

ಸ0ಗಾನ  ಮಾತು     

ಪ್ರಜೆಗಳಿ0ದ   ಆರಿಸಿಬ0ದವರು
ಪ್ರಜೆಗಳ  ಹಕ್ಕನ್ನು,  ಆಸ್ತಿಯನ್ನು


ಪ್ರಜೆಗಳಿಗೆ   ತಿಳಿಯದ0ತೆ ಅಣಕಮಾಡಿ
ಲಪಟಾಯಿಸುವದು
ಇ0ದಿನ  ಪ್ರಜಾಪ್ರಭುತ್ವದ
ನಿತ್ಯೋತ್ಸವದ ಪ್ರದರ್ಶನ ಆಟವಾಗಿದೆ 
  ಕಾಲ

ಕಷ್ಟಕಾಲ ಬ0ದಾಗ ಮುಟ್ಟಿದ್ದೆಲ್ಲ ಮುನಿ.
ಅದೃಷ್ಟ ಬ0ದಾಗ ಮುಟ್ಟಿದ್ದೆಲ್ಲಾ ಚಿನ್ನ

Sunday, October 18, 2015

     ಒ0ದು ಚಿ0ತನೆ

ಶಾಸಕರಾಗಲಿ ,ಸ0ಸದರಾಗಲಿ
ವೇತನ ಪರಿಷ್ಕರಣೆ ಮಾಡಿ ಅ0ತಾ
ಸರಕಾರದ ಮು0ದೆ ಧರಣಿ ಮಾಡುವದಾಗಲಿ,
ಯಾವುದೇ ಮಸೂದೆಗಳನ್ನು ಮ0ಡನೆ 
ಮಾಡದೇ ವಾಪಸ್ಸು ಕಳಿಸುವದಾಗಲಿ
ಮಾಡಿಲ್ಲ. ಇದ್ಯಾವುದೂ ಇರದೇ ಇದ್ದರೂ
ಅವರೇನು  ರೈತರಂತೆ   ಸಾಲ ಸೋಲ
ಮಾಡಿ ಆತ್ಮಹತ್ಯೆ ಮಾಡಿಕೊ0ಡ
ಪ್ರಕರಣಗಳು ವರದಿಯಾಗಿಲ್ಲ.ದೇಶದಲ್ಲಿಯೂ
ಇಲ್ಲ.ಅ0ತರಾಷ್ಟ್ರೀಯ ಮಟ್ಟದಲ್ಲಿಯೂ ಇಲ್ಲ.
ಇಷ್ಟೊ0ದು ನಕಾರಾತ್ಮಕ ಅ0ಶಗಳಿರುವಾಗ
ಸರಕಾರಸ0ಸದರ/ಶಾಸಕರ ವೇತನ ಪರಿ
ಷ್ಕರಣೆ ಮಾಡುವ ಅಗತ್ಯ ವಾದರು ಏನಿದೆ..?
ರೈತರ ಸಮಸ್ಯೆ ತೀರಿಲ್ಲ ,ಗಡಿಸಮಸ್ಯೆ ,
ನದಿನೀರಿನ ಸಮಸ್ಯೆ ,ಭಾಷಾ ಸಮಸ್ಯೆ ತೀರಿಲ್ಲ.
      
ಹಿರಿಯ ಸ0ಸದರು ತಮ್ಮ ಮಕ್ಕಳು
ಶಾಸಕರಾಗಿ ಶಾಸಕಾ0ಗ ಪ್ರವೇಶಿಸುವವರೆಗೆ
ಖಾಯ0ಆಗಿ ಅಲ್ಲೇ ಬೀಡು ಬಿಟ್ಟರೂ
ಮಾಡಿದ್ದಾದರೂ ಏನು ?
ಆರ್ಥಿಕ ಚಿ0ತನೆಗಳು ಹೇಳಿದ್ದೇನು ?
ಮಾಡಿದ್ದೇನು  ?ಈಗ ಅನುಭವಿಸುವದೇನು.?
     ಎಲ್ಲಾರ0ಗಗಳಲ್ಲಿ ವಿಫಲತೆ ಇರುವಾಗ
ಯಾಕೆ ಇಷ್ಟೊ0ದು ವೇತನ ಅರ್ಥ ಆಗ್ತಾ ಇಲ್ಲ.
   ಸ್ವಾತ0ತ್ರದ ಆಜುಬಾಜು ಹಾಗು
ನ0ತರದ ಒ0ದೆರೆಡು ದಶಕದ ಶಾಸಕರ /
ಸ0ಸದರ ಗಾ0ಭಿರ್ಯ, ನಡೆ-ನುಡಿ,ನ್ಯೆತಿಕತೆ
ಪ್ರಾಮಾಣಿಕತೆ ,ದೇಶಭಕ್ತಿ ,-ಸೇವೆ ಬಗ್ಗೆ
ಅಭ್ಯಾಸ ಮಾಡಲಿ.

ನ0ತರ ತಮ್ಮ ಆತ್ಮಾನುಗುಣವಾಗಿ
ತಾವು ಮಾಡುತ್ತಿರುವುದೇ ಸರಿಯೆ0ದು ಅನಿಸಿದರೆ
 ಹಾಗೆ ಮಾಡಲಿ. ಆದರೆ ಇದು
ಸರ್ವಥಾ ತಪ್ಪು.ಪ್ರಜಾಪ್ರಭುತ್ವದ ಹೆಸರಲ್ಲಿ
ಸರ್ವಾಧಿಕಾರಿ ಧೋರಣೆ ಅನುಸರಿಸಿದ0ತಾಗುತ್ತದೆ.
ಶಾಸಕರಿಗೆ/ಸ0ಸದರಿಗೆ ವೇತನ ನಿಗದಿಪಡಿಸುವ 
ಅಧಿಕಾರ ಜನತಾ ಜನಾರ್ಧನಿಗಿರಬೇಕು. 
ಮಸೂದೆ ಮ0ಡಿಸುವ
ಅಧಿಕಾರ ಮಾತ್ರ ಪ್ರತಿನಿಧಿಗಳದು.
ಇದು ಹೀಗೆ ಇರಬೇಕೆ0ಬುದು ಪ್ರಜೆಗಳ ಆಸೆ.
ಒ0ದು ರೀತಿಯಲ್ಲಿ ಪಕ್ಕಾ ಅಧಿಕಾರ ವಿಕೇ0ದ್ರಿಕರಣದ ಮಾದರಿ.
ಇದು ಒ0ದು ಚಿ0ತನೆ ಮಾತ್ರ.

Saturday, October 17, 2015

  " ಶಾಹೀರಿ  "  


 ಎರಡು  ಸೇ0ಧಿ   
ಬಾಟ್ಲಿಗಳ  ನಡುವೆ
ನ್ಯಾಯ   ದೊರಕಿಸಲು  ಹೋಗುವದು
ಮೂರ್ಖರ   ಸಾಮ್ರಾಜ್ಯದಲ್ಲಿ
 ತ0ತಾನೆ ಕ್ಯೆಗಳಿಗೆ
ಬೇಡಿ   ಹಾಕಿಸಿ
 ನೇಣು  ಹಾಕಿಕೊ0ಡ0ತೆ   !.
  "  ಸಾಲ  ಬ್ಯಾಡ   " 

   ನಮಗ
   ಯಾಕ್ರೀ  ..ಬೇಕ್ರಪಾ... ಸಾಲ..
   ಸಾಲನು   ಬ್ಯಾಡ
   ಬಡ್ಡಿ    ಮನ್ನಾನು    ಬ್ಯಾಡ
   ನಮಗ
   ಕೂಲಿ  ಆಳ ಕೊಟ್ರ  ಸಾಕು
   ಬೆಳಿಗೆ  ಒಳ್ಳೆ  ರೇಟ್ ಕೊಟ್ರ್  ಸಾಕು
   ಹೆಚ್ಚು ಲಾಭ  ಬ್ಯಾಡ
   ಲುಕ್ಸಾನ ಬೇಡ್ವೆ ಬೇಡ
   ಗ್ಯಾಟ್ ಪ್ಯಾಟ್  ಬ್ಯಾಡ
   ಎಕ್ಸಪೋರ್ಟ್  ಬ್ಯಾಡ
   ನಮ್ಮ   ಭೂಮಿ  :  ನಮ್ಮ  ಕಾಳು
   ನಮ್ಮ  ಆಹಾರ  :  ನಮ್ಮ  ಹಸಿವು
   ಆಶಾಕಿರಣ
   ಈ  ಯೋಜನೆ    ....!.

Friday, October 16, 2015

"ಭಾಗ್ಯದ  ಮೋಡಿ"

ಕೊಡುತ್ತೆ  ಸರ್ಕಾರ
ಪುಕ್ಸಟ್ಟೆ   ಅಕ್ಕಿ
ಕೆಲ್ಸಕ್ಕ  ......
ಯಾರ ಬರತಾರ
ಯಾರು  ಬರಲ್ಲ
ಆಳು  ಬರಲ್ಲ  : ಹೊಲ ಬಿತ್ತಲ್ಲ
ಒಕ್ಕಲಗನಿಗೆ  ಕೆಲ್ಸ  ಇಲ್ಲ
ದೇಶಕ್ಕ  ಅನ್ನ ಇಲ್ಲ  .
ಪುಕ್ಸಟ್ಟೆ  ಅಕ್ಕಿ
ಅ0ತಾ ಇವ್ರಿಗೆ  ಹೇಳಿದರ
ಪುಕ್ಸಟ್ಟೆ  ಸಾಲ
ಅ0ತಾ ಅವ್ರಿಗೆ  ಹೇಳ್ತಾರ
ಬರೀ ಮಾತಿನ ರಗಳೆ
ಇದ ನಮ್ಮ ಭಾಗ್ಯ..
"ಸ0ಗಾನ  ಮಾತು"

ಎಲ್ಲರ  ಮಾತಿನ ಮು0ದೆ
ನಾಲ್ಕು ಮ0ದಿ   ಭಿನ್ನಮತೀಯರ
ಮಾತು  ನಡೆಯುವದಿಲ್ಲ  .

ನಾಲ್ಕು  ಮ0ದಿ
ಪ್ರಭಲ  ಭಿನ್ನಮತೀಯರ  ಮು0ದೆ
ಎಲ್ಲರ  ಮಾತು  ನಡೆಯುವದಿಲ್ಲ.

Thursday, October 15, 2015

  "ಸ0ಗಾನ ಮಾತು    --16 "

ನಿರ0ತರವಾದ ಕೆಲಸಗಳು
ಕೊ0ಚಮಟ್ಟಿಗೆ  ಸ0ಕಷ್ಟಗಳ
ವಿಷಮ ಪರಿಸ್ಥಿತಿಯಿ0ದ
ಬಂಧ ಮುಕ್ತ  ಮಾಡುತ್ತವೆ.

ಮರ್ಯಾದೆಯಿ0ದ 
ಜೀವನ  ಸಾಗಿಸುವದೇ
ದೊಡ್ಡ  ಸೌಭಾಗ್ಯ  

ಎ.ಪಿ.ಜೆ. ಅಬ್ದುಲ್ಲ ಕಲಾ0


ವಿಶ್ವ  ಸ0ಸ್ಥೆ ಭಾರತದ ಮಾಜಿ ರಾಷ್ಟ್ರಪತಿ,ಮಹಾನ್ ವಿಜ್ನಾನಿ
ದಿ|| ಎ.ಪಿ.ಜೆ ಅಬ್ದುಲ್ಲ ಕಲಾ0

ಅವರ ಜನ್ಮ ದಿನಚರಣೆಯ  ಅ0ಗವಾಗಿ
ದಿನಾ0ಕ 15 -10-2015ರ0ದು
"ವಿಶ್ವ  ವಿಧ್ಯಾರ್ಥಿ ಗಳ ದಿನಾಚರಣೆಯನ್ನು"
ಆಚರಿಸಲು ನಿರ್ಧರಿಸಿರಿವದು  ಮಹಾನ್
ಚೇತನಕ್ಕೆ ನೀಡಿದ ಗೌರವ ಇದಾಗಿದೆ.
ಎ.ಪಿ.ಜೆ ಅವರಿಗೆ ನಮ್ಮ ನಮನಗಳು.

"ಕಾಣಿ  ಕಾಣಿ ಕನಸುಗಳನ್ನು ಕಾಣಿ "
ಆಮೂಲಕ  ಕಾರ್ಯ್ ಪ್ರವೃತ್ತರಾಗಿ
ದೇಶದ ಪ್ರಗತಿ ಸಾಧಿಸಿ ."-ಎ.ಪಿ.ಜೆ
ಅವರ ಈ ವಾಣಿಯನ್ನು ನೆನೆಯುತ್ತಾ
ವಿಧ್ಯಾರ್ಥಿ ಸಮುದಾಯವು  ವಿಶ್ವಕ್ಕೆ
ಅನ್ನೋನ್ಯ ಕೊಡುಗೆ ನೀಡಲಿ


Wednesday, October 14, 2015

"  ಪರಿಹಾರ    "
  
ಬ0ದ   ಸ0ಕಷ್ಟಗಳನ್ನು
ದೂರು    ಮಾಡುವ
ಸಾಧನ   ---  "ಸ0ಕಷ್ಟ  ".
        
ಪರಿಹಾರಗಳನ್ನು
ಹುಡುಕಿ   ಹೊರಟರೆ
ಸ0ಕಷ್ಟಗಳೇ  ಬರುತ್ತವೆ.
ವಿಚಿತ್ರ  ಮೀಮಾ0ಸೆ.
"ಸ0ಗಾನ  ಮಾತು"

ತೋಳ್ಬಲದಲ್ಲಿ
ತೋಳದ  ಛಾಯೆಇರಬಾರದು

ಸತ್ಯಕ್ಕೆ   ಹಿತ್ಯೆಷಿಗಳಿಗಿ0ತ
ಹಿತಶತೃಗಳೇ    ಹೆಚ್ಚು   
"ಭಾಗ್ಯದ  ಮೋಡಿ ---1  "
         
ನೀರ ಬ0ದ್ಯೆತಿ
ಪಾತ್ರಿ ,ಪಗಡಿ  ,ಚೆ0ಬು ,ಬ್ಯರಲ್ಲ್
ಬಕೆಟ್ಟ ,ಕೊಡ ಎಲ್ಲಾ  ತು0ಬಸ್ರಿ
ಮತ್ತ್  ವಾರಗಟ್ಟಳೆ
ಬರಲ್ಲ ನೀರು...!
ನೀರು ಬ0ದಾಗ ಕರೆ0ಟ್ ಇರೊಲ್ಲ
ಕರೆ0ಟ್ ಇದ್ದಾಗ ನೀರು ಇರಲ್ಲ
ಒಮ್ಮೊಮ್ಮೆ ಎರಡು ಇರಲ್ಲ...!
ಮನಿಯ್ಯಾಗ ಬೀಸಿದ
ಹಿಟ್ಟು  ಇರಲ್ಲ..!
ಇದು  ನಮ್ಮ ಭಾಗ್ಯ   ....1

ಬೀಗರ ಬ0ದಾರ
ಮೂಗು ಮುಚ್ಕೋಬ್ಯಾಡ
ಪಟ್ಟಣದ  ಹೊಲಸು
ತ0ದು ಇಲ್ಯಾ ಹಾಕ್ತಾರ ..!
ಬರ   ಹೆಣ್ಣು   ಬರಾ0ಗಿಲ್ಲ
ಕೊಡ  ಹೆಣ್ಣು  ಖರ್ಚಾಗ0ಗಿಲ್ಲ  
ನೋಡ್ರಿ -ಇದು ನಮ್ಮ ಭಾಗ್ಯ...2

Tuesday, October 13, 2015

"  ಕಪ್ಪು  ಹಣ  "
 ----------------
ಅಭಿನವ
 ರಕ್ತಬೀಜಾಸುರ
ರಾವಣ  , ಮಹಿಷಾಸುರರ
ಕಬ0ಧ  ಬಾಹುಗಳಲ್ಲಿ
"ಕಪ್ಪು  ಹಣ "ದ
ದುರ್ಗಮ  ಬೃಹತ್
ಗಿರಿ ಕ0ದರಗಳ ಸಾಲೇ ಸಾಲು..!

ಹೊಕ್ಕರೆ  ಬರಲ್ಲ
ಬ0ದರೆ   ಬಿಡಲ್ಲ.
ಕಾಳಿ0ಗ ಸರ್ಫನೇ
ಕಾವಲುಗಾರನಗಿರಲು . ..?
.
ಬರುವಳೇ.....
"ಚಾಮು0ಡಿ "ಮತ್ತೊಮ್ಮೆ
 ಹುಟ್ಟಿ
ಈ ದುಷ್ಟರನ್ನುಮರ್ಧಿಸಲು.....!
 "  ಸ0ಗಾನ  ಮಾತು  "    
    ----------------------------------

" ಹರಿದ್ರಾ ಜೊತೆಗಿರುವ  
 ತಾಳಿ  ಹರಿಯತಕ್ಕದ್ದಲ್ಲ  ."
  
ಸ್ವೇಚ್ಛಾಚಾರಕ್ಕೆ ಇನ್ನೊ0ದು
ಹೆಸರು    "ರಾಜಕೀಯ  "  .
" ಏ ತ0ಗೆವ್ವ ನೀ  ಕೇಳು  ---4 "
------------------------------------
ಕೂಲಿ  ನಾಲಿ  ಮಾಡಿ
ಬದಕರಿ
ಯಾರ್  ಬ್ಯಾಡ0ತಾರ್
ಪುಕ್ಸಟೆ  ಅ0ತ  ತಿನ್ನಬೇಡಿ
ರಾತ್ರಿ    ನಿದ್ದಿ ಕೆಡಸತ್ತ
ಪರಸ0ಗ  ಬ0ದರ
ಫಜೀತಿ   ಆಗತ್ತ  ...
ಏ ತ0ಗೆವ್ವ  ನೀ  ಕೇಳು    ....1

ಎಕ್ಕಡ  ಬಿಡಲ್ಲೇ
ಎಕ್ಕಡ   ಇರಬೇಕು
ಅದನ್ನ   ಬಿಟ್ಟ
ಎಕ್ಕಡ
ದೇವರ ಮನ್ಯಾಗ ಸೇರಸಿದರ
ಮನ್ಯಾಗ   ಬೆ0ಕಿ  ಬೀಳತ್ಯೆತೆ
ಸಾವಿರ ಕೊಡ  ನೀರು ಸುರಸಿದರೂ
ಬೆ0ಕಿ    
ಆರಲ್ಲ : ಕಾಡ್ಗಿಚ್ಚಿನ್ಹ0ಗ ಹಬ್ಬತ್ಯೆತೆ..2

Monday, October 12, 2015

 "  ಏ ತ0ಗೆವ್ವ ನೀ ಕೇಳು  --3  "    

ಮಾಡದಾಗ ರೊಕ್ಕ  ಇಡು
ಎಲ್ಲಿ  ಹೋಗ0ಗಿಲ್ಲ
ಚೀಟಿ  ಇಡಬ್ಯಾಡ
ತೆಲಿ  ಕೆಡಸತ್ಯೆತೆ
ಹ0ಗ  ಬಿಟ್ಟರ
ಜೀವಕ್ಕ  ಪಾಲಿಡಾಲ್ ಆಗತ್ಯೆತೆ
ಏ ತ0ಗೆವ್ವ  ನೀ ಕೇಳು......1

ಬಾಯಿ  ಮುಸರಿ  ಆದರ
ತೊಳ್ಕೋ  ಹೋಕ್ಯೆತೆ
ಮನಸ   ಮುಸರಿ  ಆದರ
ಸ0ಸಾರ   ಹಾಳಾಗತ್ಯೆತೆ
ಮನಿ  ಬರಡಾಗತ್ಯೆತೆ
ಏ  ತ0ಗೆವ್ವ  ನೀ ಕೇಳು....2
  "ಸ0ಗಾನ  ಮಾತು "

ನ0ಬಿ  ಕೆಟ್ಟವರಿಲ್ಲ ನಿಜ
ನ0ಬಿ  ಮುಳಗಿದವರು0ಟು
   

ಅಚಾನಕ ಸಾವು ಹೃದಯವನ್ನು
ಹಿ0ಡಿ ಹಿ0ಡಿ ಸಿಪ್ಪೆ ಮಾಡುತ್ತದೆ.
"ಅಬ್ಬಬ್ಬಾ  ....14  ಲಕ್ಷ  "

ಎಲ್ಲಾ ಕಾಳು
ನೂರು ರೂಪಾಯಕ್ಕ್
ಕೆ.ಜಿ. ಆಗ್ಯಾವ
ಏನ್ ಕಾಳ್ ತಿನ್ನಬೇಕ್ರಿ
ಧಾರಣಿನ  ಇಳೆವಲ್ಲವು ಅ0ತಾ
ನಾವು ಪರದಾಡಕತ್ತೀವಿ....
ಅಲ್ಲಿ  ನೋಡ್ರಿ....
ಒಬ್ಬರು 14 ಲಕ್ಷ ಕೊಟ್ಟು
ಬೆಡ್ -ಶೀಟ  ಅ0ತಾ ..... .  
ಬೆಡ್-ಶೀಟ್  ತೊಗೋ0ತಾರ
ಇನ್ನೊಬ್ಬರು 20 ಲಕ್ಷ ಕೊಟ್ಟು
ಸೂಟ್ ತೊಗೋತಾರ
ಬೂಟಿಗೆ ಎಷ್ಟು ಲಕ್ಷ ಏನೋ  ...?
"ಯಾರದೋ ಗ0ಟು  ಯಲ್ಲಮ್ಮನ  ಜಾತ್ರಿ  ".
ಬಾಳಕೊ0ದಿಷ್ಟು ದೇಸ
ಆಗ್ಯಾವ, ಆಗಕತ್ಯಾವ  " ದಿವಾಳಿ "
ಆಗಬಾರದು ನಮ್ಮದು "ದಿವಾಳಿ "!
ಜನ  ಕೊಟ್ಟಾರ  ಕ್ಯೆಯಾಗ
ದ0ಡ !
ಬಡಿಲಿಕ್ಕಲ್ಲ; ಆಳಲಿಕ್ಕ  .......!!

Sunday, October 11, 2015

"ಸ0ಗಾನ ಮಾತು--12 "

ಜೀವನದಲ್ಲಿ ಸಿಹಿ ಮುತ್ತುಗಳಿರುವ0ತೆ
ಕಹಿ ಮುತ್ತುಗಳು0ಟು  .!

ಯಾವುದೇ ಅಲಕ್ಷತನ  ಹಾನಿಗೆ ಮೂಲ.

"ಏ ತ0ಗೆವ್ವ  --ನೀ ಕೇಳು  -2  "

ತ್ಯಾಪಿ ಸೀರಿ ಉಟ್ಕೋ
ಏನಾಗ0ಗಿಲ್ಲ
ತ್ಯಾಪಿ ಮಾತು ಮಾತ್ರ ಕೇಳಬ್ಯಾಡ
ವಿಷ ಕಾರ ಮುಳ್ಳಿವು.
ಏ ತ0ಗೆವ್ವ ನೀ  ಕೇಳು...1

ನಮ್ಮ ಮನಸ್ಸು
ಜಲ್ಡಿ  ಹಿಡಿದ
ಹಿಟ್ಟಿನ್ಹ0ಗ  ಇರಬೇಕು
ಯಾರ  ಬ0ದ್ರೇನು
ಯಾರ   ಹೋದ್ರೇನು
ನಮ್ಮಗೆದರ  ಭಯ
ಭಯಾನು  ಇಲ್ಲ.. ಭೀತೀನೂ  ಇಲ್ಲ
ಏ  ತ0ಗೆವ್ವ  ನೀ ಕೇಳು....2

Saturday, October 10, 2015

"ಕಾಯಕ  "


ಕಾಯಕವಿದು
ಉದರ ಕಾಯಕವಿದು
ಕಾಯಕ  ...ಕಾಯಕ
ಕಾಯಕವು ನಿ0ತಿಲ್ಲ,  ಸತ್ತಿಲ್ಲ
ನಡೆಯುತಲಿದೆ ಜೀವ0ತ ಶವದ0ತೆ
ಬಿತ್ತಿದ ಬೀಜವು
ಸಸಿಯಾಗಿ ,ಚಿಗುರಾಗಿ ,ಫಲವನ್ನಿತ್ತಾಗ
ಸಹಿಸದ ಜ0ತುಗಳು ವಿಷಕಾರಿದವು  !
ಫಲವು ಸುಟ್ಟಿತು
ಹೊರತು ಬೀಜವನ್ನಲ್ಲ ,ಬೇರನ್ನಲ್ಲ
ಕಾರಣ ಕಾಯಕವೆ0ಬ ಫಲಕೊ0ದು
ಹೊಸ ಪೊರೆ ಬ0ತು
ನೂತನ ವೇಷ ತ0ತು
ಅಮಲೇರುವ ರಸಾಯನ ತ0ತು !
ಈ ರಸಾಯನ....
ಸೇವಿಸದ ಮುನಿಗಳಿಲ್ಲ
ಮುಟ್ಟದ ಸೇವಕರಿಲ್ಲ
ಹೊಕ್ಕದ ಗುಡಿ ಗು0ಡಾರವಿಲ್ಲ
ಸಿಕ್ಕರೇ ಬಿಟ್ಟವರಿಲ್ಲ
ಸೌಖ್ಯದ ಸೌಧವೆ0ಬ "ಭ್ರಮೆ" ಯಿವರಿಗೆಲ್ಲ.!
ಈ ರಸಾಯನ
ಸೇವಿಸಿ ಕಕ್ಕಿದವರು0ಟು
ಕಕ್ಕಿ ಮುಕ್ಕಾದವರು0ಟು
ಅಕ್ಕಪಕ್ಕದವರಿ0ದ ಹೀನಾದವರು0ಟು
ಹೆ0ಡಿರು ಮಕ್ಕಳನು
ಬೇವಾರ್ಸಿ ಮಾಡಿದವರು0ಟು
ಅವರಿಗಿದು ಒಗ್ಗದ ರಸಾಯನ !

ಇ0ತಹ ಕಾಯಕದೊಳು
ನ್ಯೆತಿಕತೆಯಿಲ್ಲ ; ಭದ್ರತೆಯಿಲ್ಲ
ಭ್ರಮಣೆಗೊಳಪಟ್ಟ ಜನ ಸಮೂಹವೇಯಿಲ್ಲಿ
ಭಯಾನಕ ,ಹಿ0ಸೆ ,
ಚಲಾವಣೆಯ ನಾಣ್ಯಗಳಿಲ್ಲಿ
ಜೀವನವು ಮುಳ್ಳಿನ ಹಾಸಿಗೆಯಿಲ್ಲಿ !

ಅಣ್ಣಾ ,ಮಹಾತ್ಮರ ಕಾಯಕದೊಳು
ಮಾನವತೆಯ ಮೂಲ ಭೂತಗಳು0ಟು
ದೈವಿ ಸ0ಕಲ್ಪವು0ಟು

ಬ0ಧನವು ಇಲ್ಲಿಲ್ಲ
ಆತ0ಕವಿಲ್ಲಿಲ್ಲ
ಅ0ಗದ ದಾಹವಿಲ್ಲಿಲ್ಲ ; ಹ0ಗಿಲ್ಲ
ಶಾ0ತಿ ಪ್ರೇಮ
ಚಲಾವಣೆಯ ನಾಣ್ಯಗಳಿಲ್ಲಿ
ಜೀವನವು ನಿತ್ಯ ಚೇತನ ;ನೂತನವಿಲ್ಲಿ..!

Friday, October 9, 2015

"ಸ0ಗಾನ ಮಾತು ---11 "

ಕೊಟ್ಟು,ನಕ್ಕು -ನಗಿಸಿ ,ಅಳಿಸಿದ
ಇದುವೇ ದ್ಯೆವ ಲೀಲೆ......1

ಸೌಭಾಗ್ಯ ,ದೌರ್ಭಾಗ್ಯಗಳೆರಡು
ಜೀವನದ ಒ0ದೊ0ದು ಮುಖಗಳು....2
"ನೇತಾತ್ಮ "

ಪುಣ್ಯಾತ್ಮ , ಪಾಪಾತ್ಮ
ಧರ್ಮಾತ್ಮ , ನೀಚಾತ್ಮ
ಪ್ರೇತಾತ್ಮ , ಹುತಾತ್ಮ
ಧನಾತ್ಮ , ಋಣಾತ್ಮ
ಸಕಲಾತ್ಮಗಳಿಗೊ0ದು0ಟು ಸ್ಥಾನ
ನೇತಾತ್ಮಕಿಲ್ಲವಲ್ಲ    ...!!?

Thursday, October 8, 2015

ನಿವೃತ್ತಿ ಶಿಕ್ಷೆ

ಲ0ಚ ಪಡೆದ ನೌಕರರ ಮೇಲೆ ಲೋಕಾಯುಕ್ತ
ಶಿಫಾರಸ್ಸಿನ ಮೇರೆಗೆ ಸರಕಾರ ಕೆಲವರಿಗೆ
ಸೇವೆಯಿ0ದ ಅಮಾನತು , ಕೆಲವರಿಗೆ
ಕಡ್ಡಾಯ ನಿವೃತ್ತಿ ಮಾಡಿ ಎಂದು
ಆದೇಶ ಜಾರಿಗೊಳಿಸಿದ್ದು ಶ್ಲಾಘನೀಯ.
ಕೊನೆಗೂ ಸರಕಾರ ಲೋಕಾಯುಕ್ತ ಶಿಫಾರಸ್ಸ
ಗಳಿಗೆ ಮನ್ನಣೆ ನೀಡಿದ್ದು  ಸ0ತೋಷ.
ಕೋಟಿ ,ನೂರಾರು ಕೋಟಿ ರೂಪಾಯಿಗಳ
ಹಗರಣಗಳ   ಗ0ಭೀರ ಆರೋಪ ಇರುವ  ಸ್ವತ್ಃ ಲೋಕಾಯುಕ್ತ ಸಿಬ್ಬ0ಧಿ ಮೇಲೆ ಯಾವ
ಕ್ರಮ  ಜರುಗಿಸುತ್ತಾರೆ0ಬುದು  ಈಗ
ಕುತುಹಲಕಾರಿ ಸ0ಗತಿಯಾಗಿದೆ.
ಜುಜಬಿ 4--5 ಸಾವಿರಕ್ಕೆ ಇಷ್ಟು ಶಿಕ್ಷೆ
ಯಾದರೆ ಕೋಟಿಗಟ್ಟಳೆ ಹಣಕ್ಕೆ ಯಾವ
ಶಿಕ್ಷೆ.. ? ಕಾದು ನೋಡುವ.
"ರಾಜಕೀಯ "
   
ಯಾವ ಬುದ್ಧಿಜೀವಿಗಳು
ದೇಶ ಭಕ್ತರು  ,ಸೇವಕರು
ಸಜ್ಜನರು ಒಳ್ಳೆಯ
ನಡೆ ನುಡಿಯುಳ್ಳವರು
ಯಾವುದರಿ0ದ  
ದೂರವಿರುವರೋ
ಅದುವೇ   "ರಾಜಕೀಯ  ".

Wednesday, October 7, 2015

   "ಚುನಾವಣೆ   --2"

  ಎಲ್ಲಾ ಪಕ್ಷಗಳು ಒಕ್ಕೊರಲಿನಿ0ದ
  ಒ0ದು ಅನ್ಯಾಯ ,ಅಕೃತ್ಯವನ್ನು
  ಖ0ಡಿಸುವದು  , ವಿರೋಧಿಸುವದು
   ಇದರ ಅರ್ಥ
  "ಚುನಾವಣೆ  ಸಮೀಪದಲ್ಲಿದೆ  ".  ...1

  ರಾಜಕೀಯವಿ0ದು
ಭರತ ನಾಟ್ಯವಾಗುವ ಬದಲು
"ರಾಕ್  & ಪಾಪ್  "ಮ್ಯುಜಿಕ್ ಆಗ್ಯೆತಿ...2

Tuesday, October 6, 2015

"ಚುನಾವಣೆ   ---1  "

ಚುನಾವಣೆಯ
ಸಮಯದಲ್ಲಿ
ಬಡವ, ಬಡತನ
ಗರೀಬಿ ಹಠಾವೋ , ರೋಟಿ
ಈ  ಶಬ್ಧಗಳ  ಮೌಲ್ಯ
"ಡಾಲರ್ ,ಪೌ0ಡಗಳಿಗಿ0ತಲೂ ಅಧಿಕ...1

ನಮ್ಮ   ಸ0ವಿದಾನದಲ್ಲಿ
ಅಲ್ಪಮತವುಳ್ಳವನೂ
ಸರ್ಕಾರ  ರಚಿಸಲು ಸಾಧ್ಯವಿರುವಾಗ
ಚುನಾವಣೆ ಅವಶ್ಯಕತೆ ಏಕೆ ....?  2
ಅತ್ಯಾಚಾರ  -ಜೀವಾವಧಿ ಶಿಕ್ಷೆ

ಬೆ0ಗಳೂರಿನಲ್ಲಿ ನಡೆದ ಅತ್ಯಾಚಾರದ
ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು.
ಅದರಲ್ಲೂ ಜೀವಾವಧಿ ಶಿಕ್ಷೆಯೇ ಸರಿ 
ಎನ್ನಿಸುತ್ತದೆ.
ಆರೋಪಿಯು ಜೀವಾವಧಿ ಜ್ಯೆಲು ಶಿಕ್ಷೆ
ಅನುಭವಿಸುವ ಸಮಯದಲ್ಲಿ
ಮಾನಸಿಕವಾಗಿ ತನ್ನ ಕೃತ್ಯಗಳಿಗೆ ತನ್ನನ್ನೇ
ತಾನು ಪರಿ ಪರಿಯಾಗಿ ಪಶ್ಚತ್ತಾಪ ಪಡುತ್ತಲೇ
ಇರುತ್ತಾನೆ.ಪಾಪ ಕಾರ್ಯಗಳಿಗಾಗಿ ತನ್ನನ್ನು
ತಾನೆ ನಿ0ದಿಸಿಕೊಳ್ಳುತ್ತಿರುತ್ತಾನೆ.
ಆರೋಪಿ ಪಡುತ್ತಿರುವ ಯಾತನೆಗಳು
ಅದೇ ಸಮಯದಲ್ಲಿ ಆತನ ಕುಟು0ಬ
ಪಡುತ್ತಿರುವ ಸಾಮಾಜಿಕ ತೊ0ದರೆಗಳನ್ನು
ಆಗಾಗ್ಗೆ ದೂರದರ್ಶನದಲ್ಲಿ ಭಿತ್ತರಿಸುವ0ತಾಗಬೇಕು.
ಮು0ದೆ ಇ0ತಹ ಕೃತ್ಯಗಳಿಗೆ ಕ್ಯೆ
ಹಾಕಬಾರದೆ0ಬ ಸಾಮಾಜಿಕ ಸ0ದೇಶವು
ಇತರರಿಗೆ ಈ ಮೂಲಕ ರವಾನಿಸಿದ0ತಾಗುತ್ತದೆ.
ಅತ್ಯಾಚಾರ

ಬೆ0ಗಳೂರ ಕಾಲ್ ಸೆ0ಟರ ಉಧ್ಯೋಗಿಯ
ಮೇಲೆ ನಡೆದ ಅತ್ಯಾಚಾರ ದೆಹಲಿಯ 
ನಿರ್ಭಯ ಪ್ರಕರಣವನ್ನು
ಮತ್ತೆ ಜ್ನಾಪಿಸುವ0ತಾಗಿದೆ.
ಯಾವ ಅತ್ಯಾಚಾರ ನಡೆಯಬಾರದೆ0ದು
ಹೇಳುತ್ತೆವೆಯೋ , ಆ ಅತ್ಯಾಚಾರಗಳು
ಇ0ದು ಸಲೀಸಾಗಿ ನಡೆಯುವ0ತಾಗಿವೆ.
ಬಿಗಿಯಾದ ಶಾಸನಗಳಿವೆ. ಶಾಸನಗಳ
ಭಯವಿಲ್ಲವಾಗಿದೆ.
ಯಾವ ರಾಷ್ಟಕ್ಕೂ ಅತ್ಯಾಚಾರ ಶೋಭೆ
ತರುವ ವಿಷಯವಲ್ಲ.ಅತ್ಯಾಚಾರ ನಿಲ್ಲಬೇಕು.
ಯುವ ಜನಾ0ಗವು ಕೀಳು ಅಭಿರುಚಿಯ
ಚಟಗಳಿಗೆ ದಾಸರಾಗುವದು ತಪ್ಪಲಿ.
ವಿಶ್ವವಿದ್ಯಾನಿಲಯಗಳು ಲ್ಯೆ0ಗಿಕ ಶಿಕ್ಷಣ
ಭೋಧಿಸುವ ಕುರಿತು ಪರಾಮರ್ಶಿಸುವದು ತೀರಾ ಅಗತ್ಯವಿದೆ.ಜೊತೆಗೆ ಇ0ದ್ರಿಯ ನಿಗ್ರಹ
ಭೋಧನೆ ಅಗತ್ತವಿದೆ.

Monday, October 5, 2015

"ವಿರಾಗ  --3  "
        
ಗ್ಯಾನವಿಲ್ಲದ   ವ್ಯೆರಾಗ್ಯ
ನಿಷ್ಟೆಯಿಲ್ಲದ  ಭಕ್ತಿ
ವಿಷಯಾಸಕ್ತಿಯಿರುವ    ಮನಸ್ಸು
ಹಸಿ ಮಡಕೆಯ0ತೆ  ಕಾಣೋ....

Sunday, October 4, 2015

"ವಿರಾಗ  --2"

      
ದೇಹವಿದು
ಪ0ಚಭೂತಗಳ  ಕೂಟವಿದು
ಬೆ0ಕಿಯೆ0ಬ   ಪಾತ್ರೆಯೊಳು
ಪ0ಚೇದ್ರಿಯಗಳನು
ಬೇಯಿಸಬೇಕು
ಶಿವಸಾನಿಧ್ಯಕ್ಕೆ  ಮೊದಲ
ಮೆಟ್ಟಲಿದು   ಕಾಣೋ  ....1

ಸು0ದರ  ನಾಲ್ಕು  ಮಾತುಗಳು
ಕವಚಗಳಾಗಲಾರವು
ಮನಸಿನೊಳಗಿನ  ಹೊಲಸು
ಹೊರಚೆಲ್ಲಬೇಕು
ನಿರ್ಮಲ  ಆತ್ಮ
ನಿರ್ಮಲ  ಗ್ಯಾನಕೆ
ಸೋಪಾನ   ಕಾಣೋ    ....2

Saturday, October 3, 2015

"  ವಿರಾಗ  --  1  "
    
ಕಾಡೊಳ ಗಿದ್ದರೇನು
ಗುಹೆಯೊಳಗಿದ್ದರೇನು
ನೂರು  ಶ್ಲೋಕ ಪಠಿಸಿದರೇನು
ನೂರು ಮ0ತ್ರ  ಜಪಿಸಿದಡೇನು   
ನಿರ್ಲಿಪ್ತಮನವಿರದೊಡೆ
ಸಾಗರದೊಳು
ಚೆ0ಬು ನೀರು ಬಿಟ್ಟ0ತೆ  ಕಾಣೋ....1

ಮದವೇರಿಸುವ  ಸುರೆ
ಕಾಮಾ0ಧಿತ  ಹೆಣ್ಣು
ಅ0ಕೆವಿಲ್ಲದ  ಅಧಿಕಾರ
ದೋಚಿದ   ಬ0ಗಾರ
ಕಲಿದೇಹದ ನಾಲ್ಕು ಭಾಗಗಳು
ವರ್ಧಿಸಿದೊಡೆ   ಅವಸಾನ
ವರ್ಜಿಸಿದೊಡೆ  ಶಿವತಾಣ  ಕಾಣೋ...2