" ಹಾಲು - ಜೇನು ಸೇರಿಧ್ಹಾ0ಗ
ಗಣರಾಜ್ಯೋತ್ಸವ ವಿಶೇಷ ".
---- ----- ---- ------ -
ಬ್ರಿಟಿಷ ಕಾಲದಾಗ ಮಾಮಲೇದಾರ ಸಾಹೇಬ್ರ
ಅ0ದರ ಬಹಳ ಗೌರವ. ಅ0ಥವರು ಊರಿಗೆ
ಬ0ದಾರ ಅ0ದರ ಪಟೇಲ್ರು,ಗೌಡ್ರು ಹಬ್ಬನ
ಮಾಡ್ತಿದ್ರು.ಹ0ಗ ಕನ್ನಡ ಸಾಲಿ ಮಾಸ್ತರ
ಅ0ದರ ದೇವರಿದ್ದಾ0ಗ.ಬಾಳ ಭಯ ಭಕ್ತಿ.
ಊರಿಗೆ ಯಾವರ ಟಪಾಲ ಬ0ದರ ಇವರ ಓದಿ
ಹೇಳ್ಬೇಕು. ಆಗಿನ ಕಾಲದಾಗ ಶಾಲಿ ಅ0ದರ
ಬಾಳ ದೂರ ಇರತಿದ್ದವು.ಊರ ಧಣಿ ಕೊಟ್ಟ
ಜಾಗದಾಗ ,ಚಪ್ಪರ ಫರಸಿ ಹಾಕಿ ಸಾಲಿ
ಕಲ್ಸಿತಿದ್ದರು.ಏನಾರ ಅನ್ರಿ.ಆಗಿನ ಶಿಕ್ಷಣ ಅ0ದರ
ಬಹಳ ಗಟ್ಟಿ.ಮುಲ್ಕಿ ಪರೀಕ್ಷೆ ಕಲ್ತರ ಸಾಕು.
ಇ0ಗ್ಲೀಷನ್ಯಾಗ ಎಲ್ಲಾ ಬರಿಯಾಕ,ಓದಾಕ ಬರತಿತ್ತು.
ಅಷ್ಟೊ0ದು ಗಟ್ಟಿ ಇತ್ತು. ಶಿಕ್ಷಣ ಆಗಿನ ಕಾಲದಾಗ ಕಾಪಿ ,ನಕಲು ಶಬ್ದಾನ ಇರಲಿಲ್ಲ.
ಈಗ ಕಾಲ ಬದಲಾಗ್ಯೆತಿ.ಸ್ವತ0ತ್ರ ಬ0ದ್ಯೆತಿ.
ಪ್ರಜಾರಾಜ್ಯ ,ರಾಮರಾಜ್ಯ ,ಗ್ರಾಮ ಸ್ವರಾಜ್ಯ
ಎಲ್ಲಾ ಬ0ದ್ಯೆತಿ.ಆಗ ಊರಿನ ಹೆಣ್ಣ ಮಕ್ಳು
ಮನಿ ಬಿಟ್ಟು ಹೊರಗ ಬರತಿರಲಿಲ್ಲ.ಈಗ ನೌಕರಿ
ಮಾಡ್ತಾರ.ಶಾಲಾ ಮಾಸ್ತರ ಆಗ್ಯಾರ.ಪೋಲಿಸರ
ಆಗ್ಯಾರ,ವಕೀಲರ ಆಗ್ಯಾರ. ಹೀಗೆ ಎಲ್ಲಾಕಡೆ
ಈ ಕಲ್ತ ಹೆಣ್ಣ ಮಕ್ಳ ಅದಾರ.ಅಷ್ಟೊ0ದು
ಕಾಲ ಬದಲಾಗ್ಯೆತಿ.ಜನಾನು ಬದಲಾಗ್ಯಾರ.
ಚುರುಕಗ್ಯಾರ ,ಅ0ದರ ಒ0ದಾ ಒ0ದು ಏನಪಾ
ಅ0ದರ ಪ್ರಾಮಾಣಿಕತೆ ಕಡಿಮೆ ಆಗ್ಯೆತಿ. ಈಗ
ಜನ ಹೆದರಾ0ಗಿಲ್ಲ.ಕೋರ್ಟು ಕಚೇರಿ ಅ0ದರ ಸಲಿಸಾಗಿ ಅಡ್ಡಾಡತಾರ.
ಗಣರಾಜ್ಯೋತ್ಸವ ಆಚರಿಸ್ತೀವಿ.ಝೆ0ಡಾ
ಹಾರಿಸ್ತೀವಿ.ಅ0ದರ ಏನಪಾ ಅ0ದರ ನಮ್ಮ
ಕಾನುನ್ಯಾಗ ಎಲ್ಲೋ ಒ0ದು ಕಡೆ ಸಣ್ಣ
ಸೂಜಿಯಷ್ಟು ರ0ಧ್ರ ಐತೆ.ಈ ರ0ಧ್ರಾನ
ಕೆಲಮ0ದಿ ತೂತು ಮಾಡ್ಯಾರ.ಮುಚ್ಚಕ್ಕೆ
ಹೋದರ ಬರತ್ತೇನ್ರಿ. ಯಾಕ0ದರ್ ಅದು
ಎಲ್ಲಿ0ದ ಬರತ್ತಾ0ತ ಗೊತ್ತಿಲ್ಲಾ0ತ ಅಲ್ಲ.
ಬರ ಪ0ಚಾಮೃತ ಯಾರ ಬ್ಯಾಡ ಅ0ತಾರ.
ಇದರಿ0ದ ಕುಬೇರ ಆಗ್ಯಾರ್ರಿ.
ಮಹಾತ್ಮಾ ಗಾ0ಧಿ ರೋಜಗಾರಕಾರ್ಡ ,
ಅಡುಗೆ ಅನಿಲ ಕಾರ್ಡ್ , ಪಡಿತರ ಕಾರ್ಡ್ ,
ಎಲ್ಲಾ ಲಕ್ಷಾನುಗಟ್ಟಲೆ , ನಕಲಿ ಕಾರ್ಡ
ಅದಾವ0ತ. ಸರಕಾರ ಏನ ಮಾಡತ್ಯೆತ್ರಿ.
ಯೋಜನೆ ಐತೆ ಖರೆ. ಯಾರಿಗೆ ಸಿಗಬೇಕಾಗ್ಯೆತೆ
ಅವರಿಗಷ್ಟ ಸಿಗಬೇಕು..ಇಲ್ಲಾ0ದರ್ ಅಪೌಷ್ಟಿಕತೆ
ಬಡತನ ನಿರುದ್ಯೋಗ ಹೋಗಾಕ ಸಾದ್ಯವಿಲ್ಲ.
"ಜನರಿಗೆ ಮೆಚ್ಚುವ0ತಹ ಸರಕಾರ ಇರಬೇಕು
ಸರಕಾರ ಮೆಚ್ಚುವ0ತಹಜನರಿರಬೇಕು ".
ಅ0ಧ್ಹಾ0ಗ ಹಾಲು -ಜೇನು ಸೇರಿದ0ಗಾಗತ್ಯೆತೆ.!