" ರಾಷ್ಟ್ರೀಯತೆ "
ಇದು ನಮ್ಮ ದೇಶ.ಇದು ನಮ್ಮ ಭೂಮಿ
ನಾವೆಲ್ಲರೂ ಒ0ದು.ಒ0ದೇ ಮಾತರ0
ಇತ್ಯಾದಿ ಘೋಷಣೆಗಳು ಹೃದಯದ
ಅ0ತರಾಳದಿ0ದ ಬರಬೇಕು.ಕಾಯಾ ,ವಾಚಾ
ಮನಸಾ , ತಲ್ಲೀನರಾಗಿ ನಮ್ಮ ಕರ್ಮಗಳ
ಸಾಧನೆಯನ್ನು ಮಾಡುತ್ತಾ ಹೋದರೆ
ರಾಷ್ಟ್ರನಾಯಕರು ಕ0ಡ ರಾಮರಾಜ್ಯದ ಕನಸು
ನೆನಸಾಗುವದು.
ಸರಕಾರದ ಯೋಜನೆಗಳು ಸರಿಯಾಗಿಯೇ
ಇರುತ್ತವೆ. ಜಾರಿ ಮತ್ತು ವಿತರಣೆಯಲ್ಲಿನ
ಲೋಪಗಳು ದಲ್ಲಾಳಿಗಳಿಗೆ ಮೂಗು ತೂರಿಸಲು
ಅವಕಾಶವಿರುತ್ತವೆ. ಅವ್ಯವಹಾರಗಳ ತಾಯಿ ಬೇರು ಇಲ್ಲಿಯೇಇದೆ.
ನಕಲಿ/ಅನರ್ಹ ಪಡಿತರ ಕಾರ್ಡ/ಅಡುಗೆ ಅನಿಲಕಾರ್ಡ /ಬಿಪಿಎಲ್ ಕಾರ್ಡ
... ಈ ಸಾಲಿನಲ್ಲಿ ಈಗ ಮಾದಿಕ ಪಿ0ಚಣಿ ಕಾರ್ಡ ಸೇರುತ್ತಲಿದೆ.
ನಕಲಿ/ಅನರ್ಹ ವ್ಯವಸ್ಥೆ ಇದೇ ರೀತಿ
ಮು0ದುವರೆದರೆ ಸರಕಾರದ ಟ0ಕಸಾಲೆ
(ಕಾ0ಚಾಣ) ಬರಿದಾಗುವದರಲ್ಲಿ ಆಶ್ಚರ್ಯವಿಲ್ಲ್.
ಅನರ್ಥಗಳಿಗೆ ನಮ್ಮ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ. ಈ ಲೋಪಗಳು
ಉದ್ಭವವಾಗಲು ಕಾರಣರಾದ ನಾವು ,
ಇವುಗಳನ್ನು ನಿರ್ನಾಮ /ಉಚ್ಛಾಟ ಮಾಡಲೂ
ಕಾರಣರಾಗಬೇಕು.
ರಾಷ್ಟ್ರೀಯತೆ ,ರಾಷ್ಟ್ರೀಯ ಜಾಗ್ರತೆ ,
ರಾಷ್ಟ್ರಾಭಿಮಾನ ,ದೇಶಭಕ್ತಿ ,ಧರ್ಮಸಹಿಷ್ಣುತೆ
ಜಾಗೃತವಾಗಬೇಕು.ಇವುಗಳಿಗೆ ಯಾರೊಬ್ಬರ
ಆರ್ಥಿಕ ನೆರವು ಬೇಕಿಲ್ಲ ,ಸಹಾಯಬೇಕಿಲ್ಲ ,
ಪ್ರಭಾವ ಬೇಕಿಲ್ಲ.ಕೇವಲ ನಮ್ಮ ಮನಸ್ಸು
ಇಚ್ಛಾಶಕ್ತಿ ಇವುಗಳ ಕಡೆಗೆ ತನ್ಮಯಗೊಳಿಸಿದರೆ
ಸಾಕು !
ಇದು ನೋಡಲಿಕ್ಕೆ ಹೇಳಲಿಕ್ಕೆ ಸರಳವೆನಿಸಿದರೂ ಆಚರಣೆಯಲ್ಲಿಬಹಳಷ್ಟು
ವಿಘ್ನಗಳು ಬರುತ್ತವೆ.ಜೊತೆಗೆ ಮಿಥ್ಯಾರೋಪ
ಕಿರುಕಳ ಬೆನ್ನಟ್ಟಿ ಬರುತ್ತವೆ ಎಲ್ಲವನ್ನೂ
ಎದುರಿಸಿ ಗಟ್ಟಿಯಾಗಿ ನಿಲ್ಲಬೇಕು.
"ನಕಲಿ " ಬರಬರುತ್ತಾ ಮರೆಯಾಗಿ "ಅಸಲಿ "
ಚ0ದ್ರನ0ತೆ ಪ್ರಕಾಶಿಸುತ್ತದೆ.
ಮೌಲ್ಯಗಳಿಗೆ ಬೆಲೆ ಬರುತ್ತದೆ. ರಾಷ್ಟ್ರಗೌರವ
ಹೆಚ್ಚುತ್ತದೆ.
No comments:
Post a Comment